Dailyhunt
ಊಟ ಮಾಡಿದ ನಂತರ ನಿದ್ರೆಗೆ ಜಾರವುದು ಸಾಮಾನ್ಯವೆ? ವೈದ್ಯರು ಹೇಳುವುದೇನು?

ಊಟ ಮಾಡಿದ ನಂತರ ನಿದ್ರೆಗೆ ಜಾರವುದು ಸಾಮಾನ್ಯವೆ? ವೈದ್ಯರು ಹೇಳುವುದೇನು?

ಟ ಮಾಡಿದ ನಂತರ ನಿದ್ರೆಗೆ ಜಾರವುದು ಸಾಮಾನ್ಯವೆ? ವೈದ್ಯರು ಹೇಳುವುದೇನು?

ಊಟ ಮಾಡಿದ ನಂತರ ನಿದ್ರೆಗೆ ಜಾರುವುದು ಸಾಮಾನ್ಯ. ಹೀಗೆ ನಿದ್ರೆಯ ಕಾರಣದಿಂದ ಜನರು ಮಧ್ಯಾಹ್ನದ ನಂತರ ಕೆಲಸದ ಕಡೆಗೆ ಗಮನಹರಿಸಲು ಕಷ್ಟಪಡುತ್ತಾರೆ. ಬಹುತೇಕರು ಕಾಫಿ ಕುಡಿದು ನಿದ್ರೆಯನ್ನು ಹೋಗಲಾಡಿಸುತ್ತಾರೆ.

ಆದರೆ ಇಂತಹ ಆಯಾಸ ಆಗಾಗ್ಗ ಸಂಭವಿಸಿದರೆ ಭಾರವಾದ ಊಟಕ್ಕಿಂತ ಹೆಚ್ಚಿನ ಕಾರಣ ಹಿಂದಿರಬಹುದು!

ಭಾರತದ ಪ್ರಸಿದ್ಧ ಮಧುಮೇಹಿ ವೈದ್ಯರಾದ ಡಾ ವಿ ಮೋಹನ್ ಅವರ ಪ್ರಕಾರ ಮಧ್ಯಾಹ್ನದ ಆಯಾಸವು ದೇಹವು ಆಹಾರವನ್ನು ಹೇಗೆ ಜೀರ್ಣಗೊಳಿಸುತ್ತದೆ, ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ.

"ಊಟದ ನಂತರ ಸಣ್ಣ ವಿಶ್ರಾಂತಿ ಪಡೆಯುವುದು ಸಾಮಾನ್ಯ. ಆದರೆ ಊಟದ ನಂತರ ನೀವು ತುಂಬಾ ನಿದ್ರಿಸಿದರೆ, ದಣಿದರೆ ಅಥವಾ ಕೆಲಸದತ್ತ ಗಮನ ಹರಿಸಲು ಸಾಧ್ಯವೇ ಇಲ್ಲದಾದರೆ ಅದನ್ನು ನಿರ್ಲಕ್ಷಿಸಬಾರದು. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸರಿಯಾಗಿ ನಿಯಂತ್ರಿಸಲಾಗಿಲ್ಲ ಎಂಬುದಕ್ಕೆ ಆರಂಭಿಕ ಸಂಕೇತವಾಗಿರಬಹುದು.

ಊಟದ ನಂತರ ನಿದ್ರೆ ಬರುವುದೇಕೆ?

ನಿದ್ರೆಯ ಭಾವನೆಗೆ ನೈಸರ್ಗಿಕವಾದ ಕಾರಣವೂ ಇದೆ. ಊಟದ ನಂತರ ದೇಹವು ಜೀರ್ಣಕ್ರಿಯೆಗೆ ಸಹಾಯ ಮಾಡಲು ಹೊಟ್ಟೆ ಮತ್ತು ಕರುಳಿಗೆ ಹೆಚ್ಚಿನ ರಕ್ತವನ್ನು ಕಳುಹಿಸುತ್ತದೆ. ಇದರರ್ಥ ಸ್ವಲ್ಪ ಸಮಯದವರೆಗೆ ಸ್ವಲ್ಪ ಕಡಿಮೆ ರಕ್ತವು ಮೆದುಳನ್ನು ತಲುಪಬಹುದು. ಇದು ಸ್ವಲ್ಪ ಗೊರಕೆ ಬರಲೂ ಕಾರಣವಾಗಬಹುದು.

ಈ ಕಾರಣದಿಂದ ಭಾರೀ ಊಟದ ನಂತರ ತಕ್ಷಣವೇ ಶ್ರಮದಾಯಕ ಚಟುವಟಿಕೆ ತಪ್ಪಿಸಲು ವೈದ್ಯರು ಸಲಹೆ ನೀಡುತ್ತಾರೆ. ಹೃದಯದ ಕಾಯಿಲೆ ಇರುವ ಜನರಲ್ಲಿ ರಕ್ತದ ಹರಿವಿನ ಬದಲಾವಣೆ ಕೆಲವೊಮ್ಮೆ ಎದೆನೋವನ್ನು ಇನ್ನಷ್ಟು ಹದಗೆಡಿಸಬಹುದು.

ಸಕ್ಕರೆ ಆಹಾರಗಳ ಅತಿಯಾದ ಸೇವನೆ

ಊಟದ ನಂತರ ಆಯಾಸವಾಗಲು ಅತಿ ಮುಖ್ಯ ಕಾರಣವೆಂದರೆ ಅತಿಯಾಗಿ ಆಹಾರ ಸೇವಿಸುವುದು. ದೊಡ್ಡ ಪ್ರಮಾಣದಲ್ಲಿ ಸಂಸ್ಕರಿತ ಕಾರ್ಬೋಹೈಡ್ರೇಟ್ಗಳು ಹೆಚ್ಚಿರುವ ಬಿಳಿಅಕ್ಕಿಯ ಅನ್ನ, ಸಿಹಿಗಳು ಮತ್ತು ಒಣ ಆಹಾರಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣ ಬೇಗನೇ ಏರುವಂತೆ ಮಾಡುತ್ತದೆ. ನಂತರ ದೇಹ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಇನ್ಸುಲಿನ್ ಬಿಡುಗಡೆ ಮಾಡುತ್ತದೆ. ಇದು ಶಕ್ತಿಯಲ್ಲಿ ಹಠಾತ್ ಕುಸಿತಕ್ಕೆ ಕಾರಣವಾಗಬಹುದು. ಹೀಗೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಏರಿಕೆ ಅಥವಾ ಇಳಿಕೆಯು ಭಾರವಾದ, ದುರ್ಬಲ ಅಥವಾ ನಿದ್ರೆಯ ಅನುಭವ ಕೊಡುತ್ತದೆ. ಹೀಗೆ ಪ್ರತಿ ಮಧ್ಯಾಹ್ನದ ಊಟದ ನಂತರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಳಿತವಾಗುವುದು ಆಯಾಸಕ್ಕೆ ಕಾರಣವಾಗುತ್ತದೆ.

ಜೀವನಶೈಲಿ ಬದಲಾವಣೆಯಿಂದ ದಣಿವು ನಿವಾರಣೆ

ಊಟದ ನಂತರ ಆಯಾಸ ತಡೆಗಟ್ಟಲು ಜೀವನಶೈಲಿಯ ಸರಳ ಬದಲಾವಣೆಗಳಿಗೆ ಸಹಾಯ ಮಾಡುತ್ತವೆ. ಊಟದಲ್ಲಿ ಹೆಚ್ಚಿನ ಪ್ರೊಟೀನ್ ಮತ್ತು ತರಕಾರಿಗಳನ್ನು ಒಳಗೊಂಡಂತೆ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸುವುದು, ಸಕ್ಕರೆ ಅಥವಾ ಸಂಸ್ಕರಿತ ಆಹಾರ ಕಡಿಮೆ ಮಾಡುವುದು ರಕ್ತದಲ್ಲಿನ ಸಕ್ಕರೆ ಸ್ಥಿರವಾಗಿಡಲು ಸಹಾಯವಾಗುತ್ತದೆ.

ಊಟದ ನಂತರ ಸ್ವಲ್ಪ ನಡಿಗೆಯು ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಕ್ರಿಯವಾಗಿರುವುದು, ಚೆನ್ನಾಗಿ ನಿದ್ರಿಸುವುದು ಮತ್ತು ಆರೋಗ್ಯಕರ ತೂಕ ಕಾಪಾಡುವುದು ಶಕ್ತಿಯ ಮಟ್ಟವನ್ನು ಸ್ಥಿರವಾಗಿಸುತ್ತದೆ.

ಕೃಪೆ: indiatoday.in

Dailyhunt
Disclaimer: This content has not been generated, created or edited by Dailyhunt. Publisher: Varthabharathi