ಬೆಂಗಳೂರು, ಸೆ.19: ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡುವ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗಾಗಿ ರಾಜ್ಯದ ಅರ್ಹ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಘವು ಪ್ರತಿವರ್ಷ ಅತ್ಯುತ್ತಮ ಗ್ರಾಮಾಂತರ ವರದಿಗೆ ಜಿ.ನಾರಾಯಣಸ್ವಾಮಿ ಪ್ರಶಸ್ತಿಯನ್ನು, ಅತ್ಯುತ್ತಮ ಮಾನವೀಯ ವರದಿಗೆ ಪಟೇಲ್ ಬೈರಹನುಮಯ್ಯ ಪ್ರಶಸ್ತಿ, ಅಪರಾಧ ವರದಿಗೆ ಗಿರಿಧರ್ ಪ್ರಶಸ್ತಿ, ಸ್ಕೂಪ್ ವರದಿಗೆ ಜಿ.ಎಸ್.
ಪ್ರಶಸ್ತಿಗೆ ಕಳುಹಿಸಿಕೊಡುವ ಸುದ್ದಿ-ಲೇಖನಗಳು ಜನವರಿ 1, 2019 ರಿಂದ ಡಿಸೆಂಬರ್ 31, 2019ರೊಳಗೆ ಪ್ರಕಟಗೊಂಡಿರಬೇಕು. ಯಾವ ಪ್ರಶಸ್ತಿಗೆ ಎಂದು ಮುಖಪುಟದಲ್ಲಿ ಬರೆದಿರಬೇಕು. ಅನುವಾದ ಮಾಡಿದಂತಹವುಗಳಿಗೆ ಅವಕಾಶವಿರುವುದಿಲ್ಲ. ಸಂಘದ ಪದಾಧಿಕಾರಿಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಾರದು. ಸಂಘದ ಸದಸ್ಯತ್ವದ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು. ಸುದ್ದಿ-ವರದಿಗಳನ್ನು ದೃಢೀಕರಿಸಿ ಮೂರು ಪ್ರತಿಗಳಲ್ಲಿ ಸಲ್ಲಿಸಬೇಕು. ವಿದ್ಯುನ್ಮಾನ ಮಾಧ್ಯಮದವರು ವಿಡಿಯೋ ಕ್ಲಿಪಿಂಗ್‍ಗಳನ್ನು ಸಿಡಿ ರೂಪದಲ್ಲಿ, ಅದರ ಸ್ಕ್ರಿಪ್ಟ್‍ಗಳನ್ನು ಸಂಪಾದಕರಿಂದ ದೃಢೀಕರಿಸಿ ಸಲ್ಲಿಸಬೇಕಾಗಿರುತ್ತದೆ. ಲೇಖನಗಳ ಜೊತೆಯಲ್ಲಿ ಸ್ವ ಪರಿಚಯ ಮತ್ತು ಭಾವಚಿತ್ರವನ್ನು ಕಳುಹಿಸಿಕೊಡಬೇಕಾಗಿರುತ್ತದೆ ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.
