Sunday, 20 Sep, 7.13 pm ವಾರ್ತಾಭಾರತಿ

ಕರಾವಳಿ
ಯಕ್ಷ ಮದ್ದಲೆವಾದಕ ನಲ್ಲೂರು ಜನಾರ್ದನ ಆಚಾರ್ಯ ನಿಧನ

ಉಡುಪಿ, ಸೆ.20: ಹಿರಿಯ ಯಕ್ಷಗಾನ ಮದ್ದಲೆವಾದಕ ನಲ್ಲೂರು ಜನಾರ್ದನ ಆಚಾರ್ಯ (75) ರವಿವಾರ ಸೆ.20ರಂದು ಶೃಂಗೇರಿ ಸಮೀಪದ ನಲ್ಲೂರಿ ಸ್ವಗೃಹದಲ್ಲಿ ನಿಧನಹೊಂದಿದರು.

ಪ್ರಸಿದ್ಧ ಭಾಗವತರಾಗಿದ್ದ ಮರಿಯಪ್ಪ ಆಚಾರ್ ಇವರ ಸಹೋದರರಾಗಿರುವ ಜನಾರ್ದನ ಆಚಾರ್ಯರು ಐದು ದಶಕಗಳಿಗೂ ಮೀರಿದ ಸುದೀರ್ಘ ವೃತ್ತಿ ಬದುಕಿನಲ್ಲಿ ಶಿವರಾಜಪುರ, ಶೃಂಗೇರಿ, ಕಿಗ್ಗ, ಹಾಲಾಡಿ, ಬಗ್ವಾಡಿ, ಗೋಳಿಗರಡಿ, ಮುಲ್ಕಿ, ಮಡಾಮಕ್ಕಿ, ಮೇಗರವಳ್ಳಿ, ಮಂದಾರ್ತಿ, ಗುತ್ಯಮ್ಮ, ಪೆರ್ಡೂರು, ಕಮಲಶಿಲೆ, ಮಾರಣಕಟ್ಟೆ ಮೇಳಗಳಲ್ಲಿ ಕಲಾಸೇವೆಮಾಡಿದ್ದಾರೆ.

ಸಂಪ್ರದಾಯಬದ್ಧ ಪೆಟ್ಟುಗಳಿಂದ ಕರ್ಣಾನಂದಕರ ನಾದ ಹೊಮ್ಮಿಸುವಲ್ಲಿ ನಿಷ್ಣಾತರಾಗಿದ್ದ ಇವರು, ಭಾಗವತರ ಹಾಡುಗಾರಿಕೆಗೆ ಪೂರಕವಾಗಿ ವೇಷಧಾರಿ ಗಳ ಕುಣಿತಕ್ಕೆ ಪ್ರೇರಕವಾಗಿ ಮದ್ದಳೆ ನುಡಿಸುವ ಕೌಶಲ ಕರಗತ ಮಾಡಿಕೊಂಡಿದ್ದರು.

ಸಂಪ್ರದಾಯಬದ್ಧ ಪೆಟ್ಟುಗಳಿಂದ ಕರ್ಣಾನಂದಕರ ನಾದ ಹೊಮ್ಮಿಸುವಲ್ಲಿ ನಿಷ್ಣಾತರಾಗಿದ್ದ ಇವರು, ಾಗವತರಹಾಡುಗಾರಿಕೆಗೆಪೂರಕವಾಗಿವೇಷಾರಿ ಗಳ ಕುಣಿತಕ್ಕೆ ಪ್ರೇರಕವಾಗಿ ಮದ್ದಳೆ ನುಡಿಸುವ ಕೌಶಲ ಕರಗತ ಮಾಡಿಕೊಂಡಿ ದ್ದರು. ಯಕ್ಷಗಾನ ಅಕಾಡೆಮಿ ನೀಡುವ 2019-20ನೇ ಸಾಲಿನ 'ಯಕ್ಷಸಿರಿ' ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಉಡುಪಿಯ ಯಕ್ಷಗಾನ ಕಲಾರಂಗ, ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ ಅಂಬಲಪಾಡಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗ ಉಡುಪಿ ಇದರ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Varthabharathi
Top