ಗುವಹಾಟಿ : ವಿದೇಶಿಯರ ನ್ಯಾಯಾಧೀಕರಣ (Foreigners Tribinual) ವ್ಯಕ್ತಿಯೊಬ್ಬರನ್ನು 'ವಿದೇಶಿಗ' ಎಂದು ತೀರ್ಪನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ಆ ವ್ಯಕ್ತಿ ಗುವಹಾಟಿ ಹೈಕೋರ್ಟ್ ಮೆಟ್ಟಲೇರಿದ್ದರು. ಆದರೆ, ವ್ಯಕ್ತಿಯ ಅರ್ಜಿಯನ್ನು ತಿರಸ್ಕರಿಸುವ ಕೋರ್ಟ್, ಟ್ರಿಬ್ಯೂನಲ್ ಆದೇಶವನ್ನು ಎತ್ತಿ ಹಿಡಿದಿದೆ.
ಆಮೂಲಕ, ಭಾರತೀಯ ಎಂದು ರುಜುವಾತು ಪಡಿಸಲು ಆ ವ್ಯಕ್ತಿ ವಿಫಲನಾಗಿದ್ದಾರೆ.
ತಾನು ಭಾರತೀಯ ಎಂದು ರುಜುವಾತು ಪಡಿಸಲು ಹದಿನೈದು ವಿವಿಧ ದಾಖಲೆಗಳನ್ನು ಆ ವ್ಯಕ್ತಿ ಸಲ್ಲಿಸಿದ್ದರು. ಆದರೆ, ಇದ್ಯಾವ ದಾಖಲೆಯು ನಿಮ್ಮನ್ನು ನೀವು ಭಾರತೀಯ ಎಂದು ರುಜುವಾತು ಪಡಿಸಲು ಒಂದಕ್ಕೊಂದು ಸಿಂಕ್ ಆಗುತ್ತಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ. ಗುವಹಾಟಿ ಹೈಕೋರ್ಟ್ ತೀರ್ಪನ್ನು ಪ್ರತೀ ಭಾರತೀಯ ಗಮನಿಸಬೇಕಾಗಿದೆ.
ಪುರಾವೆಗಳು ಕಾನೂನುಬದ್ದವಾಗಿ ಸ್ವೀಕಾರ್ಹವಲ್ಲ ಎಂದ ಗುವಹಾಟಿ ಕೋರ್ಟ್
ಗುವಹಾಟಿ ಹೈಕೋರ್ಟಿನ ದ್ವಿಸದಸ್ಯ ಪೀಠವು, ಜೂನ್ 30ರ ಮಂಗಳವಾರದಂದು ಈ ತೀರ್ಪನ್ನು ನೀಡಿದೆ. ಅವರು ಸಲ್ಲಿಸಿರುವ ಪುರಾವೆಗಳು ಕಾನೂನುಬದ್ದವಾಗಿ ಸ್ವೀಕಾರ್ಹವಲ್ಲ ಅಥವಾ ಅವರ ಪೌರತ್ವವನ್ನು ರುಜುವಾತು ಪಡಿಸಲು ಅಪೂರ್ಣವಾಗಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಗುವಹಾಟಿ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಈ ಅರ್ಜಿದಾರರು, ಮೌಖಿಕ ಸಾಕ್ಷ್ಯ ಮತ್ತು ಬಲವಾದ ಹದಿನೈದು ದಾಖಲೆಗಳನ್ನು ಗುವಹಾಟಿ ಹೈಕೋರ್ಟ್'ಗೆ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಕಲ್ಯಾಣ್ ರಾಯ್ ಸುರಾನ ಮತ್ತು ಶಮೀಮಾ ಜಹಾನ್ ಅವರಿದ್ದ ಪೀಠ, ಈ ಆದೇಶವನ್ನು ನೀಡಿದೆ.ಹದಿನೈದು ದಾಖಲೆಯನ್ನು ಸಲ್ಲಿಸಿದ್ದ ಅರ್ಜಿದಾರ
ಅರ್ಜಿದಾರರು, ಅವರ ತಂದೆ, ಅಜ್ಜ - ಅಜ್ಜಿಯ ಹೆಸರನ್ನು ಒಳಗೊಂಡಿರುವ 1951ರ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಪ್ರತಿಗಳು, 1966ರಷ್ಟು ಹಳೆಯದಾದ ವಿವಿಧ ಮತದಾರರ ಪಟ್ಟಿಗಳು, 2017ರ ಶಾಲಾ ಪ್ರಮಾಣಪತ್ರ, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ (EPIC) ಸಹಿತ ಹಲವು ದಾಖಲೆಗಳನ್ನು ನೀಡಿದ್ದರು. ತಮ್ಮ ವಂಶಾವಳಿಯ ಜೊತೆಗೆ ತಂದೆಯ ಮೌಕಿಕ ಸಾಕ್ಷಿಯನ್ನೂ ಕೋರ್ಟ್ ಮುಂದಿಟ್ಟಿದ್ದರು. ಆದರೂ, ಅವರ ಅರ್ಜಿಯನ್ನು ಗುವಹಾಟಿ ಹೈಕೋರ್ಟಿನ ದ್ವಿಸದಸ್ಯ ಪೀಠ ಮಾನ್ಯ ಮಾಡಿಲ್ಲ.ನ್ಯಾ. ಕಲ್ಯಾಣ್ ರಾಯ್ ಮತ್ತು ನ್ಯಾ.ಶಮೀಮಾ ಅವರ ದ್ವಿಸದಸ್ಯ ಪೀಠ
ನ್ಯಾ. ಕಲ್ಯಾಣ್ ರಾಯ್ ಮತ್ತು ನ್ಯಾ.ಶಮೀಮಾ ಅವರ ಪೀಠವು, ಅರ್ಜಿದಾರರು ಸಲ್ಲಿಸಿರುವ ಯಾವುದೇ ದಾಖಲೆಗಳು, ಅವರು ಹೇಳಿಕೊಳ್ಳುತ್ತಿರುವ ವಂಶಾವಳಿಯೊಂದಿಗೆ (Family Tree) ಸರಿಯಾಗಿ ತಾಳೆಯಾಗುತ್ತಿಲ್ಲ. ಅರ್ಜಿದಾರರು ವಿದೇಶಿಯರ ಕಾಯ್ದೆ 1946ರ ಸೆಕ್ಷನ್ 9ರ ಅಡಿಯಲ್ಲಿ ತಾನು, ವಿದೇಶಿಗನಲ್ಲ, ಭಾರತೀಯ ನಾಗರಿಕ ಎಂದು ನಿರೂಪಿಸುವಲ್ಲಿ ವಿಫಲರಾಗೊದ್ದಾರೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಶಾಲಾ ಮಾಹಿತಿಯು ತಾಳೆಯಾಗುತ್ತಿಲ್ಲ, ವಯಸ್ಸಿನ ವಿಚಾರದಲ್ಲೂ ದಾಖಲೆಗಳು ಒಂದೊಂದರಲ್ಲಿ ಒಂದೊಂದು ಇದೆ ಎಂದು ಹೈಕೋರ್ಟ್ ಹೇಳಿದೆ. ಪಾಸ್'ಪೋರ್ಟ್ ಪ್ರಯಾಣಕ್ಕೆ, ಪ್ಯಾನ್ ಕಾರ್ಡ್ ಆರ್ಥಿಕ ವಹಿವಾಟಿಗೆ, ಆಧಾರ್ ಕಾರ್ಡ್ ಇತರ ಉದ್ದೇಶಕ್ಕೆ ಮಾತ್ರ. ಇದು ಭಾರತೀಯರು ರುಜುವಾತು ಪಡಿಸುವ ದಾಖಲೆಯಲ್ಲ ಎನ್ನುವ ವಿಚಾರ, ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.ಭಾರತೀಯ ಎಂದು ಸಾಬೀತು ಪಡಿಸಲು ಅರ್ಜಿದಾರರು ಕೋರ್ಟಿಗೆ ಸಲ್ಲಿಸಿದ್ದ ಪ್ರಮುಖ ದಾಖಲೆಗಳೇನು?
- 1. ತಂದೆ, ಅಜ್ಜ - ಅಜ್ಜಿಯ ಹೆಸರಿರುವ 1951ರ NRCಯ ಗಣಕೀಕೃತ ಪ್ರತಿ.
- 2. ಕುಟುಂಬದ ಸದಸ್ಯರ ಹೆಸರುಗಳನ್ನು ಒಳಗೊಂಡಿರುವ 1966 - 2017ರ ವರೆಗಿನ ಮತದಾರರ ಪಟ್ಟಿಗಳ ಪ್ರಮಾಣೀಕೃತ ಪ್ರತಿ.
- 3. ಆಧಾರ್ ಕಾರ್ಡ್.
- 4. ಪ್ಯಾನ್ ಕಾರ್ಡ್.
- 5. ಹಾಲೀ ವೋಟರ್ ಐಡಿ.
- 6. 1973ರಲ್ಲಿ ತಮ್ಮ ಅಜ್ಜ ತೆಗೆದುಕೊಂಡಿದ್ದ ಮೂಲ ಜಮೀನಿನ ಖರೀದಿ ಪತ್ರ.
- 7. ಪ್ರೌಢಶಾಲೆಯ 2017ರ ಶಾಲಾ ಪ್ರಮಾಣಪತ್ರ.
- 8. ಬಾಡಿಗೆ ಮನೆಯ ಕರಾರುಪತ್ರ.
- 9. ದಿನಗೂಲಿ ಕೆಲಸ ಮಾಡುತ್ತಿರುವ ಕಡೆಯಿಂದ ದೃಢೀಕರಣ.
- 10. ಅರ್ಜಿದಾರರು ಮತ್ತು ಅವರ ತಂದೆಯ ಮೌಕಿಕ ಸಾಕ್ಷ್ಯ.
- 11. ರೇಷನ್ ಕಾರ್ಡ್.
- 12. ಬರ್ತ್ ಸರ್ಟಿಫಿಕೇಟ್.

