Dailyhunt Logo
  • Light mode
    Follow system
    Dark mode
    • Play Story
    • App Story
15ರ ಹರೆಯದ ವೈಭವ್ ಸೂರ್ಯವಂಶಿಗೆ ದುಲೀಪ್ ಟ್ರೋಫಿಯಲ್ಲಿ ನಾಯಕತ್ವ; DRS ತೀರ್ಪು ಸರಿ ಬಂದಾಗ ಬಾಲಕ ಪುಳಕಿತ!

15ರ ಹರೆಯದ ವೈಭವ್ ಸೂರ್ಯವಂಶಿಗೆ ದುಲೀಪ್ ಟ್ರೋಫಿಯಲ್ಲಿ ನಾಯಕತ್ವ; DRS ತೀರ್ಪು ಸರಿ ಬಂದಾಗ ಬಾಲಕ ಪುಳಕಿತ!

Vijay Karnataka 5 days ago

ಬೆಂಗಳೂರು: ಬೌಲಿಂಗ್ ನಲ್ಲಿ ಮಿಂಚಿ 2 ದಿನ ಕಳೆದಿಲ್ಲ, ಅಷ್ಟರಲ್ಲೇ ವೈಭವ್ ಸೂರ್ಯವಂಶಿ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. 15 ವರ್ಷದ ಉದಯೋನ್ಮುಖ ಆಟಗಾರ ಈಗ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ನಾಯಕತ್ವದಲ್ಲೂ ಚಾಕಚಕ್ಯತೆ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.

ಕೇಂದ್ರ ವಲಯ (Central Zone) ವಿರುದ್ಧದ ಪಂದ್ಯದಲ್ಲಿ ಪೂರ್ವ ವಲಯ (East Zone) ತಂಡದ ಹಂಗಾಮಿ ನಾಯಕನಾಗಿ ಕಾರ್ಯನಿರ್ವಹಿಸಿದ ವೈಭವ್ ಪಂದ್ಯದ ವೇಳೆ ತೆಗೆದುಕೊಂಡ ಸೂಕ್ತ ಡಿಆರ್‌ಎಸ್ (DRS) ನಿರ್ಧಾರದಿಂದಾಗಿ ಸುದ್ದಿಯಲ್ಲಿದ್ದಾರೆ.


ಪೂರ್ವ ವಲಯ ತಂಡದ ಖಾಯಂ ನಾಯಕನಾಗಿರುವ ಅನುಭವಿ ಇಶಾನ್ ಕಿಶನ್ ಬೆರಳಿನ ಗಾಯಕ್ಕೆ ತುತ್ತಾದಾಗ ವೈಭವ್ ಸೂರ್ಯವಂಶಿ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡರು. ಸ್ಲಿಪ್ ವಿಭಾಗದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸೂರ್ಯವಂಶಿ, 40ನೇ ಓವರ್‌ನಲ್ಲಿ ವೇಗಿ ಮುಕೇಶ್ ಕುಮಾರ್ ಬೌಲಿಂಗ್‌ನಲ್ಲಿ ಎದುರಾಳಿ ಬ್ಯಾಟರ್ ಆರ್ಯನ್ ಜುಯಲ್ ಬ್ಯಾಟ್‌ಗೆ ಚೆಂಡು ತಗಲಿರುವುದನ್ನು ತಕ್ಷಣವೇ ಗುರುತಿಸಿದರು. ಆನ್‌ಫೀಲ್ಡ್ ಅಂಪೈರ್ ಔಟ್ ನೀಡದಿದ್ದಾಗ, ಸೂರ್ಯವಂಶಿ ತಕ್ಷಣವೇ ರಿವ್ಯೂವ್ (DRS) ಮೊರೆ ಹೋದರು.

ಸಂಕಷ್ಟಕ್ಕೆ ಸಿಲುಕಿದ ಕೇಂದ್ರ ವಲಯ

ಅಲ್ಟ್ರಾಎಡ್ಜ್ ತಂತ್ರಜ್ಞಾನದಲ್ಲಿ ಬ್ಯಾಟ್‌ಗೆ ಚೆಂಡು ಸ್ಪರ್ಶಿಸಿರುವುದು ಸ್ಪಷ್ಟವಾಗಿ ಕಂಡುಬಂದಿದ್ದರಿಂದ ಆನ್‌ಫೀಲ್ಡ್ ಅಂಪೈರ್ ತಮ್ಮ ತೀರ್ಪನ್ನು ಬದಲಾಯಿಸಬೇಕಾಯಿತು. ಇದರೊಂದಿಗೆ 46 ರನ್ ಗಳಿಸಿ ಅಪಾಯಕಾರಿಯಾಗುತ್ತಿದ್ದ ಆರ್ಯನ್ ಜುಯಲ್ ವಿಕೆಟ್ ಪತನಗೊಂಡು,ಕೇಂದ್ರ ವಲಯ ತಂಡ 99 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಲ್ಪಾವಧಿಯ ನಾಯಕತ್ವದಲ್ಲೂ ಕ್ರೀಸಿನಲ್ಲಿ ಜಾಗರೂಕರಾಗಿ ನಿರ್ಧಾರ ಕೈಗೊಂಡ ಸೂರ್ಯವಂಶಿ ಅವರ ನಡೆಗೆ ಕಾಮೆಂಟೇಟರ್‌ಗಳು ಹಾಗೂ ಕ್ರೀಡಾಭಿಮಾನಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಉತ್ತರ ವಲಯದ ವಿರುದ್ಧದ ಪಂದ್ಯದಲ್ಲಿ ಅವರು ಬ್ಯಾಟಿಂಗ್ ನಲ್ಲಿ ವಿಫಲರಾದರೂ ಬೌಲಿಂಗ್ ನಲ್ಲಿ 2 ಗಳಿಸಿ ಮಿಂಚಿದ್ದರು. ಇದೀಗ ಮತ್ತೊಮ್ಮೆ ತಮ್ಮ ನಾಯಕತ್ವದ ಕೌಶಲದಿಂದ ಗಮನ ಸೆಳೆದರು.

ವಿಶೇಷ ಸಾಧನೆ ಹಾಗೂ ಹಿನ್ನೋಟ

  • ಉಪನಾಯಕನ ಜವಾಬ್ದಾರಿ: ಪ್ರಥಮ ದರ್ಜೆ ಮಟ್ಟದ ಟೂರ್ನಿಯಲ್ಲಿ ಪೂರ್ವ ವಲಯ ಉಪನಾಯಕನಾಗಿ ಆಯ್ಕೆಯಾಗಿರುವ ಸೂರ್ಯವಂಶಿ, ಕಿಶನ್ ಮೈದಾನಕ್ಕೆ ಮರಳುವವರೆಗೆ ಸುಮಾರು 20 ಓವರ್‌ಗಳ ಕಾಲ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದರು.
  • ಐಪಿಎಲ್ 2026ರ ಮಿಂಚು: ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ 776 ರನ್ ಬಾರಿಸಿ ಆರೆಂಜ್ ಕ್ಯಾಪ್ ಹಾಗೂ 'MVP' ಪ್ರಶಸ್ತಿ ಪಡೆದಿದ್ದ ವೈಭವ್, T20I ಸರಣಿಯಲ್ಲಿ ಝಿಂಬಾಬ್ವೆ ವಿರುದ್ಧ ಎರಡು ಅರ್ಧಶತಕ ಸಿಡಿಸಿ ಮಿಂಚಿದ್ದರು.
  • ಅದ್ಭುತ ಫಾರ್ಮ್: ಶ್ರೀಲಂಕಾ ಎ ವಿರುದ್ಧದ ಸರಣಿಯ ಫೈನಲ್‌ನಲ್ಲಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಒಟ್ಟು 29 ಎಸೆತಗಳಲ್ಲಿ 94 ರನ್ ಚಚ್ಚಿದ ಹೆಗ್ಗಳಿಕೆ ಇವರದ್ದಾಗಿದೆ.
  • ಅತ್ಯಂತ ಕಿರಿಯ ಆಟಗಾರ: ಐಪಿಎಲ್ ಆಡಿದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ಬರೆದಿರುವ ಅವರು ಟೂರ್ನಿಯಲ್ಲಿ ಶತಕ ಬಾರಿಸಿರುವ ಅತ್ಯಂತ ಕಿರಿಯ ಆಟಗಾರನೂ ಹೌದು. ಅತ್ಯಂತ ವೇಗದ ಶತಕ ಬಾರಿಸಿದ ಭಾರತೀಯನೂ ಹೌದು. ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಅತ್ಯಂತ ಕಿರಿಯ ಭಾರತೀಯ ಆಟಗಾರ ಎಂಬ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka