ಆಗಸ್ಟ್ ತಿಂಗಳು ಅನೇಕ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುವುದರಿಂದ ಕೆಲ ರಾಶಿಯವರಿಗೆ ಶ್ರೀಮಂತರಾಗುವ ಯೋಗವನ್ನು ನೀಡುವ ಶಕ್ತಿಯನ್ನು ಹೊಂದಿದೆ. ಹಾಗಾದರೆ ಆಗಸ್ಟ್ ತಿಂಗಳು ಯಾವ ರಾಶಿಯವರಿಗೆ ಅನುಕೂಲಗಳನ್ನು ಹೆಚ್ಚಿಸಲಿದೆ ಎಂದು ತಿಳಿಯಿರಿ.
ನಾವು ಜುಲೈ ಅಂತ್ಯದಲ್ಲಿದ್ದೇವೆ.
ಮಿಥುನ ರಾಶಿಯವರಿಗೆ ಆಗಸ್ಟ್ ತಿಂಗಳು ತುಂಬಾ ಅನುಕೂಲಕರ ತಿಂಗಳು ಆಗಿರುತ್ತದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಬೆಂಬಲ ಸಿಗುವುದು. ಕೆಲಸದಲ್ಲಿ ಅತ್ಯುತ್ತಮ ಪ್ರದರ್ಶನದಿಂದಾಗಿ ನೀವು ಪ್ರಗತಿಗೆ ಅವಕಾಶಗಳನ್ನು ಪಡೆಯುತ್ತೀರಿ. ಸ್ವಂತ ಹುದ್ದೆ ಇರುವವರಿಗೆ ಹೆಚ್ಚು ಲಾಭ ಸಿಗಲಿದೆ. ಕಡಿಮೆ ಶ್ರಮದಿಂದ ಹೆಚ್ಚು ಲಾಭವನ್ನು ಈ ಸಮಯದಲ್ಲಿ ನೀವು ನಿರೀಕ್ಷೆ ಮಾಡಬಹುದು. ನೀವು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗಲು ಅವಕಾಶಗಳು ಸಿಗುತ್ತವೆ. ಇದು ನಿಮ್ಮನ್ನು ಸಂತೋಷಪಡಿಸುವ ಸಮಯ. ಈ ತಿಂಗಳು ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ. ಆರ್ಥಿಕವಾಗಿ ನೆಮ್ಮದಿಯನ್ನು ತರುವ ಸಮಯ ಇದಾಗಿದೆ. ಹಿಂದೆ ಮಾಡಿದ ಶ್ರಮದ ಫಲ ಆಗಸ್ಟ್ ತಿಂಗಳಲ್ಲಿ ದುಪ್ಪಟ್ಟಾಗುವುದು. ನಿಮ್ಮೆಲ್ಲಾ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ.
ಕಟಕ ರಾಶಿ

ಕಟಕ ರಾಶಿಯವರಿಗೆ ಆಗಸ್ಟ್ ತಿಂಗಳು ಸಾಕಷ್ಟು ಅನುಕೂಲಕರವಾಗಿದೆ. ಯಾಕೆಂದರೆ ಆಗಸ್ಟ್ ತಿಂಗಳ ಆರಂಭಕ್ಕೂ ಮುನ್ನ ಕಟಕ ರಾಶಿಯ ಲಗ್ನ ಸ್ಥಾನದಲ್ಲಿ ಗುರು ಸ್ಥಾನ ಪಡೆದುಕೊಂಡಿದ್ದಾನೆ. ಇದರ ಜೊತೆಗೆ ಕಾಲ ಕಾಲಕ್ಕೆ ಅನೇಕ ಪ್ರಬಲ ಗ್ರಹಗಳು ಸೇರಿಕೊಂಡು ಶಕ್ತಿಶಾಲಿ ಯೋಗಗಳನ್ನು ರೂಪಿಸುವುದು. ಹೀಗಾಗಿ ಕಟಕ ರಾಶಿಯವರಿಗೆ ತಿಂಗಳು ಪೂರ್ತಿ ಯಾವುದೇ ಸಮಸ್ಯೆಗಳು ಬಾರದು. ಒಂದು ವೇಳೆ ಬಂದರೂ ಅದು ಹೆಚ್ಚು ಸಮಯ ನಿಮ್ಮನ್ನು ಬಾಧಿಸುವುದಿಲ್ಲ. ಅಷ್ಟೇ ಅಲ್ಲ, ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉತ್ತಮ ಉದ್ಯೋಗ ಸಿಗುತ್ತದೆ. ಉದ್ಯೋಗಿಗಳಿಗೆ ತಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಹಕಾರ ಸಿಗುವುದು. ಕೆಲವರಿಗೆ ಬಡ್ತಿ ಸಿಗುವ ಸಾಧ್ಯತೆಗಳು ಉಂಟು. ಉದ್ಯಮಿಗಳಿಗೆ ಉತ್ತಮ ಲಾಭ ತರುವ ಹೊಸ ಒಪ್ಪಂದಗಳು ಸಿಗುತ್ತವೆ. ಒಟ್ಟಾರೆಯಾಗಿ ಆಗಸ್ಟ್ ತಿಂಗಳು ವೃತ್ತಿಪರವಾಗಿ ಪ್ರಗತಿಯ ತಿಂಗಳು ಆಗಿರುತ್ತದೆ.
ಸಿಂಹ ರಾಶಿ

ಸಿಂಹ ರಾಶಿಯವರಿಗೆ ಆಗಸ್ಟ್ ತಿಂಗಳು ಪ್ರಗತಿಯ ತಿಂಗಳಾಗಿರುತ್ತದೆ. ನೀವು ಮಾಡುವ ಯಾವುದೇ ಕೆಲಸದಲ್ಲಿ ಅನಿರೀಕ್ಷಿತ ಯಶಸ್ಸನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವರು. ನೀವು ಕಠಿಣ ಪರಿಶ್ರಮದ ಫಲವನ್ನು ಪಡೆಯಲು ಅವಕಾಶಗಳು ಸಿಗುತ್ತವೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗುವ ಸಮಯ ಇದು. ಮನೆಯ ವಾತಾವರಣ ಉತ್ಸಾಹದಿಂದ ಕೂಡಿರಲಿದೆ. ಈ ತಿಂಗಳು ಆರ್ಥಿಕವಾಗಿ ಉತ್ತಮವಾಗಿರುವ ಗಳಿಗೆ. ನೆಮ್ಮದಿಯ ದಿನಗಳು ಮಾಯವಾಗುತ್ತವೆ. ಆರ್ಥಿಕ ಸ್ಥಿತಿ ಎಂದಿಗಿಂತ ಕೊಂಚ ಸುಧಾರಣೆ ಕಾಣುವುದು. ಅಲ್ಲದೆ ದೀರ್ಘಕಾಲದಿಂದ ನಿಂತು ಹೋಗಿದ್ದ ಶುಭ ಕಾರ್ಯಗಳು ಮತ್ತೆ ಶುರುವಾಗಲಿವೆ. ಅವಿವಾಹಿತರ ಬಾಳಿಗೆ ಬಯಸಿದ ಸಂಗಾತಿಯ ಆಗಮನವಾಗುವುದು. ಇನ್ನೂ ನವ ಜೋಡಿಗಳಿಗೆ ಸಂತಾನ ಭಾಗ್ಯವೂ ಇದೆ.
ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಆಗಸ್ಟ್ ತಿಂಗಳು ಬಹಳ ಅದ್ಭುತವಾದ ತಿಂಗಳು. ಸ್ವಂತ ಹುದ್ದೆ, ವ್ಯವಹಾರ, ವ್ಯಾಪಾರ ಹಾಗೂ ಉದ್ಯಮದಲ್ಲಿ ಇರುವವರಿಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. ವಿವಾಹಿತರ ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶಗಳು ಸಿಗುತ್ತವೆ. ಕೆಲಸದಲ್ಲಿ ಕಡಿಮೆ ಒತ್ತಡ ಹೆಚ್ಚು ಲಾಭವಿರುತ್ತದೆ. ಮಾನಸಿಕ ಶಾಂತಿ ಸಿಗುವುದು. ಪ್ರೇಮ ಜೀವನ ಸಿಹಿಯಾಗಿರುತ್ತದೆ. ವೃತ್ತಿಜೀವನವು ಉತ್ತಮವಾಗಿರುತ್ತದೆ. ಉದ್ಯಮಿಗಳಿಗೆ ಹಠಾತ್ ಲಾಭ ಸಿಗುವುದರಿಂದ ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು. ಜೊತೆಗೆ ಪ್ರಗತಿಯ ಬಾಗಿಲುಗಳು ತೆರೆದುಕೊಳ್ಳುತ್ತವೆ. ಆದಾಯದ ಮೂಲಗಳು ವೃದ್ಧಿಯಾಗುವ ಸಮಯ ಇದಾಗಿದೆ.
ಕುಂಭ ರಾಶಿ

ಕುಂಭ ರಾಶಿಯವರಿಗೆ ಆಗಸ್ಟ್ ತಿಂಗಳು ಉತ್ತಮ ತಿಂಗಳು. ಹೂಡಿಕೆ, ಹೊಸ ಉದ್ಯಮದಿಂದ ಹೆಚ್ಚು ಲಾಭವನ್ನು ನಿರೀಕ್ಷೆ ಮಾಡಬಹುದು. ನಿಮ್ಮ ನೂತನ ಯೋಜನೆಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಕೆಲಸದಲ್ಲಿ ನಿಮ್ಮ ಸಂಗಾತಿಯಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ವಿವಾಹಿತ ದಂಪತಿಗಳ ನಡುವಿನ ಸಂಬಂಧಗಳು ಬಲಗೊಳ್ಳುತ್ತವೆ. ನಿಮ್ಮ ಕುಟುಂಬದೊಂದಿಗೆ ದೀರ್ಘ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳು ಹೆಚ್ಚು. ಈ ತಿಂಗಳು ಕೆಲಸ ಮಾಡುವವರಿಗೆ ಅದೃಷ್ಟ ಒಲಿದು ಬರುವುದು. ನಗದು ಹರಿವು ಹೆಚ್ಚಾಗುವುದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಕ್ರಮೇಣ ಕಡಿಮೆಯಾಗಲಿವೆ.

