ಕಟಕ ರಾಶಿಯಲ್ಲಿ ನಾಲ್ಕು ಶಕ್ತಿಶಾಲಿ ಗ್ರಹಗಳು ಒಟ್ಟಿಗೆ ಸೇರಿ ಆಗಸ್ಟ್ 12ರಂದು ಚತುರ್ಗ್ರಹಿ ಯೋಗವನ್ನು ರೂಪಿಸುವುದು. ಈ ಯೋಗ ಕೆಲ ರಾಶಿಯವರ ಕೆಲಸದ ಒತ್ತಡ ಕಡಿಮೆ ಮಾಡಿ ಆದಾಯದ ಮಾರ್ಗಗಳನ್ನು ವೃದ್ಧಿಸಲಿದೆ. ಯಾವ ರಾಶಿಯವರಿಗೆ ಇದು ಅನುಕೂಲಕರ ಸಮಯ ಎಂದು ತಿಳಿಯಿರಿ.

ಮೇಷ ರಾಶಿಯ ನಾಲ್ಕನೇ ಮನೆಯಲ್ಲಿ ತುರ್ಗ್ರಹ ಯೋಗ ರೂಪಗೊಳ್ಳುವುದು. ಇದು ನಿಮ್ಮೆಲ್ಲಾ ಕನಸನ್ನು ನನಸಾಗಲಿದೆ. ಆಗಸ್ಟ್ 12ರಿಂದ ನಿಮ್ಮ ಆರ್ಥಿಕ ಜೀವನದಲ್ಲಿ ಬಲ ತುಂಬಲಿದ್ದಾನೆ ಬುಧ ದೇವ. ನಿಮ್ಮ ಅದೃಷ್ಟವ ಖುಲಾಯಿಸುವುದು. ದೀರ್ಘಕಾಲದಿಂದ ಬಾಕಿ ಇರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ಮೇಷ ರಾಶಿಯವರ ಬುದ್ಧಿವಂತಿಕೆ ಮತ್ತು ತಿಳುವಳಿಕೆ ದ್ವಿಗುಣವಾಗಲಿದೆ. ಸಂಪೂರ್ಣ ಗಮನ ನಿಮ್ಮ ಗುರಿಗಳನ್ನು ಸಾಧಿಸುವತ್ತ ಇರುವುದು. ನೀವು ಬಹುನಿರೀಕ್ಷಿತ ಪ್ರಯಾಣಕ್ಕೆ ಹೋಗಬಹುದು. ವಿದೇಶ ಪ್ರಯಾಣದ ಲಕ್ಷಣಗಳು ಇವೆ. ಕೆಲಸದಲ್ಲಿರುವವರಿಗೆ ಬಡ್ತಿ ಸಿಗಬಹುದು. ಅಲ್ಲದೆ ಮನೆಗಳಲ್ಲಿ ಶುಭ ಘಟನೆಗಳು ನಡೆಯುವ ಸಾಧ್ಯತೆಯಿದೆ.
ಕುಂಭ ರಾಶಿ

ಕುಂಭ ರಾಶಿಯವರ ಬಾಳು ಬಂಗಾರವಾಗುವ ಸಮಯ ಇದು. ಹಿಂದೆ ಮಾಡಿದ ಸಾಲಗಳನ್ನು ನೀವು ತೀರಿಸುವಿರಿ. ಆರ್ಥಿಕ ಸ್ಥಿತಿ ಸಾಕಷ್ಟು ಬದಲಾಗುವುದು. ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಅವಕಾಶಗಳನ್ನು ಸಿಗುತ್ತವೆ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ನೀವು ಪಡೆಯುವಿರಿ. ಈ ಅವಧಿಯಲ್ಲಿ ಅನೇಕ ಶುಭ ಸುದ್ದಿಗಳನ್ನು ಪಡೆಯುವ ಸಾಧ್ಯತೆಗಳು ಉಂಟು. ಹೊಸ ಆದಾಯದ ಮೂಲಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಅಲ್ಲದೆ ಅದೃಷ್ಟ ನಿಮ್ಮ ಪ್ರತಿಯೊಂದು ಕಾರ್ಯದಲ್ಲೂ ನಿಮ್ಮನ್ನು ಹಿಂಬಾಲಿಸುವುದು. ಉದ್ಯಮಿಗಳಿಗೆ ಉತ್ತಮ ಲಾಭ ದೊರೆಯುವ ಲಕ್ಷಣಗಳು ಇವೆ. ಹೂಡಿಕೆಗಳು ಉತ್ತಮ ಲಾಭವನ್ನು ನೀಡುತ್ತವೆ. ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯಲು ಅವಕಾಶಗಳಿವೆ. ದೈಹಿಕ ಆರೋಗ್ಯವೂ ಸುಧಾರಿಸುವುದು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಇರುತ್ತದೆ.
ಸಿಂಹ ರಾಶಿ

ಸಿಂಹ ರಾಶಿಯವರಿಗೆ ಆಗಸ್ಟ್ 12ರಿಂದ ಅದ್ಭುತ ಗಳಿಗೆ ಶುರುವಾಗಲಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಹಠಾತ್ ಬದಲಾಗುವುದು. ನೀವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಲಾಭವನ್ನು ನೀವು ಗಳಿಸುವಿರಿ. ನಿಮ್ಮ ಖ್ಯಾತಿ ಹಾಗೂ ವ್ಯಕ್ತಿತ್ವ ಸೂರ್ಯನಂತೆ ಹೊಳೆಯಲಿದೆ. ಅದೃಷ್ಟ ನಿಮ್ಮ ಪರವಾಗಿರುವುದರಿಂದ ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀವು ಪಡೆಯುವಿರಿ. ನೀವು ಬಹಳ ದಿನಗಳಿಂದ ನಿಮ್ಮ ಕೆಲಸವನ್ನು ಬದಲಾಯಿಸಲು ಯೋಜಿಸುತ್ತಿದ್ದರೆ, ನೀವು ಆ ದಿಕ್ಕಿನಲ್ಲಿ ಯಶಸ್ಸನ್ನು ಪಡೆಯಬಹುದು. ಅಲ್ಲದೆ ಸಿಂಹ ರಾಶಿಯವರಿಗೆ ಬಡ್ತಿ ಮತ್ತು ಸಂಬಳ ಹೆಚ್ಚಳವಾಗುವ ಸಾಧ್ಯತೆಯಿದೆ. ನಿಮ್ಮ ದೀರ್ಘಕಾಲದ ಆಸೆಗಳು ಈಡೇರುತ್ತವೆ, ಅವಿವಾಹಿತರು ಸೂಕ್ತ ಸಂಗಾತಿಯನ್ನು ಈ ಸಮಯದಲ್ಲಿ ನಿರೀಕ್ಷಿಸಬಹುದು. ವಿವಾಹಿತರು ಜೀವನದಲ್ಲಿ ಸಂತೋಷದಿಂದ ಇರುತ್ತಾರೆ.
ವೃಷಭ ರಾಶಿ

ಆಗಸ್ಟ್ 12 ವೃಷಭ ರಾಶಿಯವರ ಬಾಳಲ್ಲಿ ಹೊಸ ಬೆಳಕು ಮೂಡುವುದು. ಈ ಸಮಯದಲ್ಲಿ ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗಿ ನೆಮ್ಮದಿಯ ಜೀವನವನ್ನು ನೀವು ನಡೆಸುವಿರಿ. ಆರ್ಥಿಕವಾಗಿ ಇದು ಸುವರ್ಣಕಾಲ. ನೆಮ್ಮದಿ ಜೀವನವನ್ನು ನೀವು ನಡೆಸುವಿರಿ. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು. ಆದಾಯದ ಮೂಲಗಳು ವೃದ್ಧಿಯಾಗುತ್ತವೆ. ಈ ಅವಧಿಯಲ್ಲಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ವಿಯಾಗುವಿರಿ. ಉದ್ಯಮಿಗಳು ಕೆಲಸದಲ್ಲಿ ಪ್ರಗತಿಯನ್ನು ಕಾಣುತ್ತಾರೆ. ಲಾಭ ಗಳಿಸಲು ಸುವರ್ಣ ಅವಕಾಶಗಳನ್ನು ನೀವು ಪಡೆಯುವಿರಿ. ಹಣವನ್ನು ಗಳಿಸುವ ಮತ್ತು ಅದನ್ನು ಚೆನ್ನಾಗಿ ಉಳಿಸುವ ಅವಕಾಶಗಳು ಸಿಗುತ್ತವೆ. ಉದ್ಯೋಗದಲ್ಲಿರುವವರು ಬಯಸಿದ ಕೆಲಸ ಅಥವಾ ವರ್ಗಾವಣೆಯನ್ನು ಪಡೆಯಬಹುದು. ಉದ್ಯಮಿಗಳು ಆರ್ಥಿಕ ಲಾಭವನ್ನು ಪಡೆಯಲಿ ಸಾಕಷ್ಟು ಶುಭ ಸಮಯ ಇದಾಗಿರುತ್ತದೆ. ನಿಮ್ಮ ವ್ಯವಹಾರ ಚಟುವಟಿಕೆಗಳನ್ನು ವಿಸ್ತರಿಸುವ ಬಗ್ಗೆ ಯೋಚಿಸಬಹುದು. ನಿಮ್ಮ ಎಲ್ಲಾ ಪ್ರಯತ್ನಗಳು ಅದ್ಭುತ ಫಲಿತಾಂಶಗಳನ್ನು ನೀಡುತ್ತವೆ.
ಮಿಥುನ ರಾಶಿ

ಮಿಥುನ ರಾಶಿಯವರ ಬಾಳು ಬಂಗಾರವಾಗಲಿದೆ. ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಉತ್ತಮ ಮತ್ತು ಅತ್ಯುತ್ತಮ ಫಲಿತಾಂಶಗಳನ್ನು ನೀವು ಪಡೆಯುವಿರಿ. ಈ ಯೋಗದ ಅವಧಿಯಲ್ಲಿ ಬಾಕಿ ಇರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಹಣ ಎಲ್ಲೋ ಸಿಲುಕಿಕೊಂಡಿದ್ದರೆ ಈ ಅವಧಿಯಲ್ಲಿ ಅದು ನಿಮಗೆ ಲಭ್ಯವಾಗುತ್ತದೆ. ಸಮಾಜದಲ್ಲಿ ಗೌನಿಮ್ಮ ಖ್ಯಾತಿ ಮತ್ತು ಗೌರವ ಹೆಚ್ಚಾಗುವ ಸಮಯ. ಅಲ್ಲದೆ ಕೆಲಸದಲ್ಲಿ ಬಡ್ತಿ ಮತ್ತು ಸಂಬಳ ಹೆಚ್ಚಳವನ್ನು ಪಡೆಯುವ ಸಾಧ್ಯತೆಯಿದೆ. ಕೆಲಸ ಮಾಡುವವರು ತಮ್ಮ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಕಾಣುವರು. ನೀವು ನಿಮ್ಮ ಕುಟುಂಬ ಮತ್ತು ಜೀವನ ಸಂಗಾತಿಯೊಂದಿಗೆ ಸಾಕಷ್ಟು ಸಮಯ ಕಳೆಯಲು ಅವಕಾಶಗಳನ್ನು ಪಡೆಯುವಿರಿ. ಬಾಕಿ ಇರುವ ಕೆಲಸವನ್ನು ಪುನರಾರಂಭಿಸಿ ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಅದೃಷ್ಟದ ಬೆಂಬಲದೊಂದಿಗೆ ಹೂಡಿಕೆಗಳ ಮೂಲಕ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ಪ್ರೇಮ ಜೀವನ ಸಂತೋಷವಾಗಿರುತ್ತದೆ.

