Dailyhunt Logo
  • Light mode
    Follow system
    Dark mode
    • Play Story
    • App Story
AI ಚಿಪ್ ತಯಾರಿಕಾ ದೈತ್ಯ ಎನ್‌ವಿಡಿಯಾ ಹಿಂದಿಕ್ಕಿ ವಿಶ್ವದ ನಂ.1 ಲಾಭದಾಯಕ ತಂತ್ರಜ್ಞಾನ ಸಂಸ್ಥೆಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್!

AI ಚಿಪ್ ತಯಾರಿಕಾ ದೈತ್ಯ ಎನ್‌ವಿಡಿಯಾ ಹಿಂದಿಕ್ಕಿ ವಿಶ್ವದ ನಂ.1 ಲಾಭದಾಯಕ ತಂತ್ರಜ್ಞಾನ ಸಂಸ್ಥೆಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್!

Vijay Karnataka 1 week ago

ಟೆಕ್ನಾಲಜಿ ಬೆಳೆದಂತೆ ಅದರಲ್ಲೂ ಕ್ಷಿಪ್ರವಾಗಿ ಅಭಿವೃದ್ದಿಯಾಗುತ್ತಿರುವ AI ಟೆಕ್ನಾಲಜಿ ಜಗತ್ತಿನಲ್ಲಿ ಅದರ ಚಿಪ್ ತುಂಬಾನೇ ಮುಖ್ಯ. ಇಂತಹ AI ಚಿಪ್‌ ತಯಾರಕ ಜಾಗತಿಕ ದೈತ್ಯ ಕಂಪನಿ ಎನ್‌ವಿಡಿಯಾ(Nvidia). ಇದು ಕಳೆದ ಹಲವು ವರ್ಷಗಳಿಂದಲೂ ಚಿಪ್‌ ತಯಾರಿಕೆ ಲಾಭ ಗಳಿಕೆಯಲ್ಲಿ ಕಿಂಗ್‌ನಂತಿದ್ದು, ಇದನ್ನು ಯಾರಿದಂಲೂ ಬೀಟ್‌ ಮಾಡಲೂ ಸಾಧ್ಯವೇ ಇಲ್ಲ ಎಂಬ ಆಲೋಚನೆಯಿತ್ತು.

ಆದರೆ, ಇದನ್ನು ಸುಳ್ಳಾಗಿಸಿರುವ ದಕ್ಷಿಣ ಕೊರಿಯಾದ ಟೆಕ್‌ ಸಂಸ್ಥೆ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌(Samsung) ಬರೋಬ್ಬರಿ 89.4 ಟ್ರಿಲಿಯನ್ ವೊನ್ ($58.6 ಬಿಲಿಯನ್) ದಾಖಲೆಯ ತ್ರೈಮಾಸಿಕ ಕಾರ್ಯಾಚರಣಾ ಲಾಭವನ್ನು ವರದಿ ಮಾಡುವ ಮೂಲಕ Nvidia ಹಿಂದಿಕ್ಕಿ ವಿಶ್ವದ ಅತ್ಯಂತ ಲಾಭದಾಯಕ ತಂತ್ರಜ್ಞಾನ ಕಂಪನಿಯಾಗಿ ಹೊರಹೊಮ್ಮಿದೆ.

Nvidia ಹಿಂದಿಕ್ಕಿ ವಿಶ್ವದ ಟಾಪ್‌ ಲಾಭದಾಯಕ ತಂತ್ರಜ್ಞಾನ ಕಂಪನಿಯಾದ ಸ್ಯಾಮ್‌ಸಂಗ್

ಜಾಗತಿಕ ಟೆಕ್‌ ರೇಸ್‌ನಲ್ಲಿ AI ಮೆಮೊರಿ ಚಿಪ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ನಡುವೆ, ಏಪ್ರಿಲ್-ಜೂನ್ ತ್ರೈಮಾಸಿಕದ ಪ್ರಾಥಮಿಕ ಕಾರ್ಯಾಚರಣಾಯಲ್ಲಿ ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ ಸಂಸ್ಥೆ ಸದ್ದಿಲ್ಲದೆ ಭಾರಿ ಲಾಭಗಳಿಕೆ ಮಾಡಿದೆ. ಜು.7ರಂದು ಬಿಡುಗಡೆಯಾದ ವರದಿಯಂತೆ ಸ್ಯಾಮ್‌ಸಂಗ್‌ ಬರೋಬ್ಬರಿ 89.4 ಟ್ರಿಲಿಯನ್ ವೊನ್ ($58.6 ಬಿಲಿಯನ್) ಲಾಭ ಗಳಿಕೆ ಮಾಡಿದ್ದು, ಮಾರುಕಟ್ಟೆ ನಿರೀಕ್ಷೆಯಾದ 84.16 ಟ್ರಿಲಿಯನ್ ವೊನ್‌ ಲಾಭವನ್ನು ಶೇ.6.2ರಷ್ಟು ರಷ್ಟು ಮೀರಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ, ಶೇ.1,810.3ರಷ್ಟು ಹೆಚ್ಚಾಗಿದೆ. ವಿಶೇಷವಾಗಿ ಸ್ಯಾಮ್‌ಸಂಗ್‌ನ ಈ ತ್ರೈಮಾಸಿಕ ಲಾಭವು Nvidia ದ ಹಿಂದಿನ ದಾಖಲೆಯ ಕಾರ್ಯಾಚರಣಾ ಆದಾಯ 53.5 ಬಿಲಿಯನ್ ಡಾಲರ್‌ ಅನ್ನು ಮೀರಿದೆ.

ಈ ಮೂಲಕ ಈ ಸಂಸ್ಥೆಯ ಆದಾಯ ಸಾರ್ವಕಾಲಿಕ ಗರಿಷ್ಠವಾಗಿರುವ 171 ಟ್ರಿಲಿಯನ್ ವೊನ್(ದ.ಕೊರಿಯಾದ ಕರೆನ್ಸಿ) ತಲುಪಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಇದರ ಆದಾಯವು ವರ್ಷದಿಂದ ವರ್ಷಕ್ಕೆ 129.3% ರಷ್ಟು ಏರಿಕೆಯಾಗಿದೆ. ಇನ್ನು, ಈ 2ನೇ ತ್ರೈಮಾಸಿಕ ಕಾರ್ಯಚರಣೆಯ ಲಾಭವೂ ಅಧಿಕವಾಗಿ ಹೆಚ್ಚಳವಾಗಿದ್ದು, 1ನೇ ತ್ರೈಮಾಸಿಕದಲ್ಲಿ ಸ್ಥಾಪಿಸಲಾಗಿದ್ದ 57.2 ಟ್ರಿಲಿಯನ್ ವೊನ್‌ಗಳ ದಾಖಲೆಗಿಂತ ಶೇ.56ರಷ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ಈ 2ನೇ ತ್ರೈಮಾಸಿಕದ ಲಾಭಗಳು ಸ್ಯಾಮ್‌ಸಂಗ್‌ ಸಂಸ್ಥೆ 2023, 2024 ಹಾಗೂ 2025ರ ಎರಡನೇ ತ್ರೈಮಾಸಿಕದಲ್ಲಿ ಗಳಿಸಿದ ಲಾಭದ ಒಟ್ಟು ಮೊತ್ತಕ್ಕಿಂತ ಹೆಚ್ಚಾಗಿದೆ.

ಸ್ಯಾಮ್‌ಸಂಗ್‌ಗೆ ಲಾಭವಾದ AI ಮೊಮೊರಿ ಚಿಪ್‌ ಬೇಡಿಕೆ

ಇದು ಸದ್ಯ ಚಿಪ್‌ ಇಂಡಸ್ಟ್ರಿಯ ದೈತ್ಯ Nvidia ಸಂಸ್ಥೆಯನ್ನು ಸ್ಯಾಮ್‌ಸಂಗ್‌ ಆದೇಗೆ ಹಿಂದಿಕ್ಕಲು ಸಾಧ್ಯವಾಯಿತು ಎಂಬ ಪ್ರಶ್ನೆ ಹಲವರಲ್ಲಿ ಮೂಡುವಂತೆ ಮಾಡಿದ್ದು, ಇದಕ್ಕೆ ಸ್ಪಷ್ಟ ಉತ್ತರ ಇರುವುದು AI ಮೊಮೊರಿ ಚಿಪ್‌ಗಳಲ್ಲೇ. ಇತ್ತೀಚೆಗೆ AI ಚಿಪ್‌ಗಳ ಬೇಡಿಕೆ ಟೆಕ್‌ ಮಾರುಕಟ್ಟೆಯಲ್ಲಿ ತೀವ್ರವಾಗಿ ಹೆಚ್ಚಳವಾಗಿದೆ. ಅದರಲ್ಲೂ AI ಸರ್ವರ್‌ಗಳು ಮತ್ತು ಡೇಟಾ ಸೆಂಟರ್‌ಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಹೈ-ಬ್ಯಾಂಡ್‌ವಿಡ್ತ್ ಮೆಮೊರಿ (HBM), ಸರ್ವರ್ DRAM ಮತ್ತು NAND ಚಿಪ್‌ಗಳ ಬೇಡಿಕೆ ಹೆಚ್ಚಳದಿಂದ ಇದರ ಬೆಲೆ ಏರಿಕೆಯಾಗುವಂತೆ ಮಾಡಿದ್ದು, ಇದಕ್ಕೆ ತಕ್ಕಂತೆ ನಡೆಸಿದ ಕಾರ್ಯಚರಣೆಯೇ ಸ್ಯಾಮ್‌ಸಂಗ್‌ನ ಈ ಸಕ್ಸಸ್‌ಗೆ ಕಾರಣವಾಗಿದೆ.

100 ಟ್ರಿಲಿಯನ್‌ಗಿಂತ ಹೆಚ್ಚಿದೆ ಸ್ಯಾಮ್‌ಸಂಗ್‌ ಅಸಲಿ ಲಾಭ?

ಇನ್ನೂ ಹೇಳಬೇಕಾದರೆ, ಸ್ಯಾಮ್‌ಸಂಗ್‌ ಸಂಸ್ಥೆಯ ಈ ತ್ರೈಮಾಸಿಕದ ಲಾಭ ವಾಸ್ತವಾಗಿ ಬರೋಬ್ಬರಿ 100 ಟ್ರಿಲಿಯನ್‌ ವೊನ್‌ಗಿಂತ ಹೆಚ್ಚಾಗಿರಬಹದು ಎಂದು ಅಂದಾಜಿಸಲಾಗುತ್ತಿದೆ. ಇದಕ್ಕೆ ಕಾರಣ ಸ್ಯಾಮ್‌ಸಂಗ್‌ ಸಂಸ್ಥೆಯು ವಿಶೇಷ ಉದ್ಯೋಗಿ ಬೋನಸ್‌ಗಳನ್ನು ನೀಡುತ್ತೇವೆ ಎಂಬದಾಗಿ ತನ್ನ ಕಾರ್ಮಿಕ ಸಂಘದೊಂದಿಗೆ ನಿಬಂಧನೆಗಳನ್ನು ಮಾಡಿಕೊಂಡಿದ್ದು, ಇದರ ಪ್ರಕಾರ ಸಂಸ್ಥೆಯ ಸುಮಾರು 15ರಿಂದ 19 ಟ್ರಿಲಿಯನ್‌ ಮೊತ್ತ ಇದಕ್ಕೆ ಬಳಸಲಾಗುತ್ತದೆ ಎಂದು ವರದಿಯಾಗಿದೆ.

ಹೀಗೆ ವರ್ಷದ ಮೊದಲಾರ್ಧದಲ್ಲಿ ಸ್ಯಾಮ್‌ಸಂಗ್‌ ಕಾರ್ಯಚರಣೆಯ ಲಾಭಗಳಿಕೆ ಈಗಾಗಲೇ 150 ಟ್ರಿಲಿಯನ್‌ ಹತ್ತಿರಕ್ಕೆ ಸಮೀಪಿಸುತ್ತಿದ್ದು, ಇದರ ವೇಗ ಇಷ್ಟು ಬೇಗ ಇಳಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ಕಂಪನಿಯ ಕಾರ್ಯಚರಣೆ ಇದೇ ರೀತಿ ಮುಂದುವರೆದರೆ, ಈ ವರ್ಷದ ಪೂರ್ಣ ಲಾಭದಲ್ಲಿ ಸ್ಯಾಮ್‌ಸಂಗ್‌ 350 ಟ್ರಿಲಿಯನ್ ವೋನ್‌ಗಳಿಗಿಂತ ಹೆಚ್ಚು ದಾಖಲು ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ.

ಈ ಕುರಿತು ಸಾಂಗ್‌ಸಂಗಿನ್ ಸೆಕ್ಯುರಿಟೀಸ್‌ನ ವಿಶ್ಲೇಷಕ ಜಂಗ್ ಮಿನ್-ಗ್ಯು ಅವರ ಪ್ರಕಾರ, "ಮೆಮೊರಿ ಚಿಪ್‌ಗಳ ಬೆಲೆ ಹೆಚ್ಚಳವು ಸೆಟ್ ಗ್ರಾಹಕರ ಮೇಲೆ ವೆಚ್ಚದ ಒತ್ತಡವನ್ನು ಹೆಚ್ಚಿಸುತ್ತಿದೆ, ಆದರೆ ಡೇಟಾ ಸೆಂಟರ್ ಕ್ಲೈಂಟ್‌ಗಳಿಂದ ಬೇಡಿಕೆ ಬಲವಾಗಿ ಉಳಿದಿದೆ ಮತ್ತು ದೊಡ್ಡ ಪ್ರಮಾಣದ ಖರೀದಿಗಳು ಮುಂದುವರಿಯುವ ನಿರೀಕ್ಷೆಯಿದೆ" ಎಂದು ತಿಳಿಸಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka