Dailyhunt
ಐಪಿಎಲ್ ನಲ್ಲಿ ಇತಿಹಾಸ ನಿರ್ಮಿಸಿದ ವೈಭವ್ ಸೂರ್ಯವಂಶಿ- ಯಶಸ್ವಿ ಜೈಸ್ವಾಲ್; ಸೆಹ್ವಾಗ್- ಗಂಭೀರ್ ದಾಖಲೆ ನುಚ್ಚುನೂರು!

ಐಪಿಎಲ್ ನಲ್ಲಿ ಇತಿಹಾಸ ನಿರ್ಮಿಸಿದ ವೈಭವ್ ಸೂರ್ಯವಂಶಿ- ಯಶಸ್ವಿ ಜೈಸ್ವಾಲ್; ಸೆಹ್ವಾಗ್- ಗಂಭೀರ್ ದಾಖಲೆ ನುಚ್ಚುನೂರು!

Vijay Karnataka 2 weeks ago

ರಾಜಸ್ಥಾನ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅವರು ಅತ್ಯಂತ ವೇಗವಾಗಿ 500 ರನ್ ಗಳ ಜೊತೆಯಾಟವಾಡುವ ಮೂಲಕ ಐಪಿಎಲ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಹಿಂದೆ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಭಾರತೀಯ ಜೋಡಿ ಎಂಬ ದಾಖಲೆ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರ ಹೆಸರಿನಲ್ಲಿ ಇತ್ತು.

ಇದೀಗ ಈ ದಾಖಲೆಯನ್ನು ಜೈಸ್ವಾಲ್ ಮತ್ತು ವೈಭವ್ ಅವರು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಅಹ್ಮದಾಬಾದ್ ನ ಮೋದಿ ಕ್ರೀಡಾಂಗಣಲ್ಲಿ ಏಪ್ರಿಲ್ 4ರ ಶನಿವಾರದಂದು ಇವರಿಬ್ಬರು ಗುಜರಾತ್ ಜೈಂಟ್ಸ್ ವಿರುದ್ಧ ಮೊದಲ ವಿಕೆಟ್ ಗೆ ಕೇವಲ 6.2 ಓವರ್ ಗಳಲ್ಲಿ 70 ರನ್ ಗಳಿಸಿದರು. ಹೀಗಾಗಿ ಸೆಹ್ವಾಗ್- ಗಂಭೀರ್ ಹೆಸರಿನಲ್ಲಿ ಬಹಳ ವರ್ಷಗಳ ಕಾಲ ಅಬಾಧಿತವಾಗಿ ಉಳಿದಿದ್ದ ಅತಿ ಕಡಿಮೆ ಎಸೆತಗಳಲ್ಲಿ 500 ರನ್ ಗಳ ಜೊತಯಾಟದ ದಾಖಲೆ ನುಚ್ಚು ನೂರಾಯಿತು.
(ಸ್ಕೋರ್ ಕಾರ್ಡ್)

ಸೆಹ್ವಾಗ್- ಗಂಭೀರ್ ಹೆಸರಲ್ಲಿದ್ದ ದಾಖಲೆ

ಕಳೆದ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ- ಮತ್ತು ಜೈಸ್ವಾಲ್ ಅವರಿಗೆ ಈ ದಾಖಲೆ ಬರೆಯುವ ಅವಕಾಶ ಇತ್ತು. ಆದರೆ 3 ರನ್ ಗಳ ಅಗತ್ಯವಿದ್ದಾಗ ಈ ಜೋಡಿ ಬೇರ್ಪಟ್ಟಿತ್ತು. ಶನಿವಾರ ಪಂದ್ಯ ಶುರುವಾಗುತ್ತಲೇ 2 ಎಸೆತಗಳಾಗುತ್ತಿದ್ದಂತೆಯೇ ಈ ಮೈಲಿಗಲ್ಲು ದಾಟಿದರು. ಇದೀಗ ಅವರು 248 ಎಸೆತಗಳಿಂದ 500 ರನ್ ಗಳಿಸಿದಂತಾಗಿದೆ. ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರು ಇದೇ ಸಾಧನೆಗೆ 309 ಎಸೆತಗಳನ್ನು ತೆಗೆದುಕೊಂಡಿದ್ದರು.

ಪವರ್ ಪ್ಲೇನ 6 ಓವರ್ ಗಳಲ್ಲಿ 69 ರನ್ ಬಾಚಿದ್ದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ದೊಡ್ಡ ಜೊತೆಯಾಟದ ಉಮೇದಿನಲ್ಲಿದ್ದರು. ಆದರೆ ರಶೀದ್ ಖಾನ್ ಅವರು ಈ ಜೊತೆಯಾಟವನ್ನು ಮುರಿದರು. 18 ಎಸೆತಗಳಿಂದ 5 ಬೌಂಡರಿ ಮತ್ತು 1 ಸಿಕ್ಸರ್ ಗಳನ್ನು ಒಳಗೊಂಡಿದ್ದ 31 ರನ್ ಗಳಿಸಿದ್ದ ಅವರನ್ನು ಬೌಂಡರಿ ಲೈನ್ ಬಳಿ ಗ್ಲೆನ್ ಫಿಲಿಪ್ಸ್ ಗೆ ಕ್ಯಾಚ್ ಕೊಡಿಸಿದರು.


ಆ ಬಳಿಕ ಧ್ರುವ್ ಜ್ಯುರೆಲ್ ಅವರನ್ನು ಸೇರಿಕೊಂಡ ಯಶಸ್ವಿ ಜೈಸ್ವಾಲ್ ಅವರು ಮತ್ತೆ 56 ರನ್ ಗಳ ಜೊತೆಯಾಟವಾಡಿದರು. ಔಟಾಗುವ ಮುಂಚೆ ಯಶಸ್ವಿ ಜೈಸ್ವಾಲ್ ಅವರು 36 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದ 55 ರನ್ ಗಳಿಸಿದರು. ಇದಾದ ಬಳಿಕ ಒಂದೆಡೆಯಿಂದ ವಿಕೆಟ್ ಗಳು ಬೀಳುತ್ತಿದ್ದರೂ ಧ್ರುವ್ ಜ್ಯುರೆಲ್ ಉತ್ತಮ ಆಟ ಪ್ರದರ್ಶಸಿದ್ದರಿಂದ ತಂಡ ಬೃಹತ್ ಮೊತ್ತ ಕಲೆ ಹಾಕುವಂತಾಯಿತು. ಅನಾರೋಗ್ಯದ ನಿಮಿತ್ತ ನಾಯಕ ಶುಭಮನ್ ಗಿಲ್ ಅವರು ಆಡಲು ಸಾಧ್ಯವಾಗದ್ದರಿಂದ ಸ್ಪಿನ್ನರ್ ರಶೀದ್ ಖಾನ್ ಅವರು ಹಂಗಾಮಿ ನಾಯಕರಾಗಿ ಕಾರ್ಯ ನಿರ್ವಹಿಸಿದರು.

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್

ರಿಯಾನ್ ಪರಾಗ್ (ನಾಯಕ), ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲೆವೆನ್

ರಶೀದ್ ಖಾನ್ (ನಾಯಕ), ಕುಮಾರ್ ಕುಶಾಗ್ರಾ, ಬಿ ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅಶೋಕ್ ಶರ್ಮಾ

ಸಂಕ್ಷಿಪ್ತ ಸ್ಕೋರ್

  • ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 210/6, ಯಶಸ್ವಿ ಜೈಸ್ವಾಲ್ 55(36), ವೈಭವ್ ಸೂರ್ಯವಂಶಿ 31(18), ಧ್ರುವ್ ಜ್ಯುರೆಲ್ 75(42), ಕಗಿಸೊ ರಬಾಡಾ 42ಕ್ಕೆ 2, ಅಶೋಕ್ ಶರ್ಮಾ 37ಕ್ಕೆ 1, ರಶೀದ್ ಖಾನ್ 39ಕ್ಕೆ 1.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka