Numerology: 2026ರ ಏಪ್ರಿಲ್ 19ರಂದು ಈ ವರ್ಷದ ಅಕ್ಷಯ ತೃತೀಯ ದಿನವನ್ನು ಆಚರಿಸಲಾಗುವುದು. ಹಾಗಾಗಿ ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಈ ದಿನವೂ ನಿಮಗೆ ಹೇಗಿರಲಿದೆ..? ಯಾವ ಸಂಖ್ಯೆಯವರಿಗೆ ಅಪಾರ ಧನ, ಸಂಪತ್ತಿನ ಪ್ರಾಪ್ತಿಯಾಗುವ ಯೋಗ ದೊರಕುವುದು ಎಂದು ಇಲ್ಲಿ ತಿಳಿಯೋಣ.
ಹಾಗಾಗಿ ಈ ಅಕ್ಷಯ ತೃತೀಯ ದಿನದಂದು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡುವುದರೊಂದಿಗೆ ದಾನವನ್ನು ಮಾಡುವುದು ಬಹಳ ಉತ್ತಮ. ಹಾಗೆ ಚಿನ್ನ, ಬೆಳ್ಳಿ, ಆಸ್ತಿ ಇತ್ಯಾದಿಗಳನ್ನು ಖರೀದಿಸುವುದರಿಂದ ಹೆಚ್ಚಿನ ಶುಭಫಲಗಳು ದೊರಕುವುದು ಎಂದು ಹೇಳಲಾಗುತ್ತದೆ. ಹಾಗಾಗಿ ಸಂಖ್ಯಾಶಾಸ್ತ್ರದ ಪ್ರಕಾರ, ಈ ವರ್ಷದ ಅಕ್ಷಯ ತೃತೀಯ ದಿನವು ನಿಮಗೆ ಹೇಗಿರಲಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.ಸಂಖ್ಯೆ 1

ಯಾವುದೇ ತಿಂಗಳ 1, 10, 19 ಮತ್ತು 28ನೇ ದಿನಾಂಕಗಳಂದು ಜನಿಸಿದವರ ಸಂಖ್ಯೆ 1 ಆಗಿರುವುದು. ಹಾಗಾಗಿ ಸಂಖ್ಯೆ 1 ನ್ನು ಹೊಂದಿರುವ ಜನರಿಗೆ ಈ ಅಕ್ಷಯ ತೃತೀಯ ದಿನವು ಸಾಕಷ್ಟು ಲಾಭದಾಯಕವಾಗಿರಲಿದೆ. ಈ ದಿನ ನಿಮಗೆ ಹಠಾತ್ ಧನ ಲಾಭವಾಗುವುದು. ಹಾಗೆ ಧನ, ಸಂಪತ್ತಿನಲ್ಲಿ ಸಾಕಷ್ಟು ಹೆಚ್ಚಳವೂ ಕೂಡ ಆಗಲಿದೆ. ಆದರೆ ಈ ಸಂದರ್ಭದಲ್ಲಿ ನೀವು ಅನಗತ್ಯ ಖರ್ಚುಗಳನ್ನು ಮಾಡದೇ ಇರುವುದು ಉತ್ತಮ. ಇಲ್ಲದಿದ್ದರೆ ಧನ ಹಾನಿ ಉಂಟಾಗುವ ಸಂಭವವಿದೆ.
ಸಂಖ್ಯೆ 2

ನಿಮ್ಮ ಜನ್ಮ ದಿನಾಂಕವು ಯಾವುದೇ ತಿಂಗಳ 2,11, 20 ಮತ್ತು 29 ನೇ ದಿನಾಂಕದಂದು ಆಗಿದ್ದರೆ, ನಿಮ್ಮ ಜನ್ಮ ಸಂಖ್ಯೆ 2 ಆಗಿರುವುದು. ಹಾಗಾಗಿ ಈ ವರ್ಷದ ಅಕ್ಷಯ ತೃತೀಯ ದಿನದಲ್ಲಿ ನಿಮಗೆ ಪ್ರೀತಿಯ ಪ್ರಾಪ್ತಿಯಾಗುವುದು. ಹಾಗೆ ಈ ದಿನ ನೀವು ಹೂಡಿಕೆಗಳನ್ನು ಮಾಡುವುದರಿಂದ ಹೆಚ್ಚಿನ ಶುಭಫಲಗಳ ಪ್ರಾಪ್ತಿಯಾಗಲಿದೆ. ಜೊತೆಗೆ ಚಿನ್ನ, ಬೆಳ್ಳಿ, ಆಸ್ತಿ ಇತ್ಯಾದಿಗಳಲ್ಲಿ ಹೂಡಿಕೆಯನ್ನು ಮಾಡುವುದು ಶುಭವನ್ನುಂಟು ಮಾಡಲಿದೆ.
ಸಂಖ್ಯೆ 3

ಯಾವುದೇ ತಿಂಗಳ 3,12, 21 ಮತ್ತು 30ನೇ ದಿನಾಂಕಗಳಂದು ಜನಿಸಿದವರ ಸಂಖ್ಯೆ 3 ಆಗಿರುವುದು. ಹಾಗಾಗಿ ಈ ವರ್ಷದ ಅಕ್ಷಯ ತೃತೀಯ ದಿನದಂದು ಸಂಖ್ಯೆ 3 ನ್ನು ಹೊಂದಿರುವ ಜನರು ಶ್ರದ್ಧಾ ಭಕ್ತಿಯಿಂದ ಪೂಜೆ, ಸ್ನಾನ, ದಾನ ಇತ್ಯಾದಿಗಳನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗಲಿದೆ. ಹಾಗೆ ಈ ದಿನ ನೀವು ತೀರ್ಥ ಸ್ಥಳಕ್ಕೆ ಪ್ರಯಾಣಿಸುವ ಯೋಗ ದೊರಕಬಹುದು. ಈ ವರ್ಷದ ಅಕ್ಷಯ ತೃತೀಯ ದಿನದಂದು ನೀವು ಯಾರಿಗೂ ಹಣವನ್ನು ಸಾಲವಾಗಿ ನೀಡಬೇಡಿ ಮತ್ತು ಎಲ್ಲಿಯೂ ದೊಡ್ಡ ಹೂಡಿಕೆಯನ್ನು ಮಾಡದೆ ಇರುವುದು ಉತ್ತಮ.
ಸಂಖ್ಯೆ 4

ಯಾವುದೇ ತಿಂಗಳ 4, 13, 22 ಮತ್ತು 31ನೇ ದಿನಾಂಕಗಳಂದು ಜನಿಸಿದವರ ಸಂಖ್ಯೆ 4 ಆಗಿರುವುದು. ಸಂಖ್ಯೆ 4 ನ್ನು ಹೊಂದಿರುವ ಜನರಿಗೆ ಈ ವರ್ಷದ ಅಕ್ಷಯ ತೃತೀಯ ದಿನವು ಧೈರ್ಯ ಮತ್ತು ಸಹನೆಯಿಂದ ಕೂಡಿರುವಂತೆ ಮಾಡುವುದು. ಈ ಅವಧಿಯಲ್ಲಿ ಸಂಖ್ಯೆ 4 ನ್ನು ಹೊಂದಿರುವ ಜನರು ತಮ್ಮ ಮೆಚ್ಚಿನ ದೇವರನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಮತ್ತು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಿ. ಆರ್ಥಿಕ ವಿಚಾರಗಳು, ಆರೋಗ್ಯ, ರಾಜಕೀಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸಂಖ್ಯೆ 4 ನ್ನು ಹೊಂದಿರುವ ಜನರು ಸ್ವಲ್ಪ ಎಚ್ಚರಿಕೆಯಿಂದ ಇರುವುದು ಅಗತ್ಯ. ಈ ದಿನ ಅವಸರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಇರುವುದು ಉತ್ತಮ.
ಸಂಖ್ಯೆ 5

ಯಾವುದೇ ತಿಂಗಳ 5, 14, 23 ನೇ ದಿನಾಂಕದಂದು ಜನಿಸಿದವರ ಸಂಖ್ಯೆ 5 ಆಗಿರುವುದು. ಹಾಗಾಗಿ ಈ ವರ್ಷದ ಅಕ್ಷಯ ತೃತೀಯ ದಿನವೂ ಸಂಖ್ಯೆ 5ನ್ನು ಹೊಂದಿರುವ ಜನರಿಗೆ ಉತ್ತಮ ಫಲಗಳನ್ನು ನೀಡಲಿದೆ. ಈ ದಿನ ನಿಮ್ಮ ಆದಾಯದಲ್ಲಿ ಸಾಕಷ್ಟು ವೃದ್ಧಿಯಾಗುವುದು. ಜೊತೆಗೆ ವ್ಯಾಪಾರ, ವ್ಯವಹಾರವನ್ನು ಮಾಡುವ ಸಂಖ್ಯೆ 5 ನ್ನು ಹೊಂದಿರುವ ಜನರು ಈ ಸಂದರ್ಭದಲ್ಲಿ ಉತ್ತಮ ಲಾಭ ಗಳಿಸಲು ಸಾಧ್ಯವಾಗಲಿದೆ. ಹಾಗಾಗಿ ಈ ಅವಧಿಯಲ್ಲಿ ನಿಮ್ಮ ಮೇಲೆ ನೀವು ನಂಬಿಕೆ ಇಡುವುದು ಉತ್ತಮ. ಹಾಗೆ ಈ ದಿನ ನಿಮಗೆ ಹೆಚ್ಚಿನ ಶುಭ ಫಲಗಳ ಪ್ರಾಪ್ತಿಯಾಗುವುದು. ಇದರೊಂದಿಗೆ ಈ ದಿನ ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದಾಗಿದೆ.
ಸಂಖ್ಯೆ 6

ಯಾವುದೇ ತಿಂಗಳ 6, 15 ಮತ್ತು 24ನೇ ದಿನಾಂಕಗಳಂದು ಜನಿಸಿದವರ ಸಂಖ್ಯೆ 6 ಆಗಿರುವುದು. ಹಾಗಾಗಿ ಈ ವರ್ಷದ ಅಕ್ಷಯ ತೃತೀಯ ದಿನದಂದು ನೀವು ಯಾವುದೇ ರೀತಿಯ ಹೊಸ ಆರಂಭವನ್ನು ಮಾಡಬಹುದಾಗಿದೆ ಅಥವಾ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಇದರಿಂದಾಗಿ ನಿಮಗೆ ಯಶಸ್ಸು ಲಭಿಸುವ ಯೋಗ ಹೆಚ್ಚಾಗುವುದು ಮತ್ತು ಇದರಿಂದ ಬಹಳ ಸಮಯದವರೆಗೆ ನಿಮಗೆ ಲಾಭ ದೊರೆಕಲಿದೆ. ಅಕ್ಷಯ ತೃತೀಯ ದಿನದಂದು ತಾಯಿ, ಸಹೋದರಿ, ಮಗಳು, ಪತ್ನಿ ಅಥವಾ ಇನ್ಯಾವುದೇ ಮಹಿಳಾ ಸ್ನೇಹಿತರ ಸಹಾಯ ನಿಮಗೆ ದೊರಕುವ ಸಂಭವ ಹೆಚ್ಚಾಗಿರುವುದು.
ಸಂಖ್ಯೆ 7

ಯಾವುದೇ ತಿಂಗಳ 7, 16 ಮತ್ತು 25ನೇ ದಿನಾಂಕಗಳಂದು ಜನಿಸಿದವರ ಸಂಖ್ಯೆ 7 ಆಗಿರುವುದು. ಹಾಗಾಗಿ ಈ ವರ್ಷದ ಅಕ್ಷಯ ತೃತೀಯ ದಿನದಂದು ಸಂಖ್ಯೆ 7ನ್ನು ಹೊಂದಿರುವ ಜನರು ಸ್ನಾನ ಮತ್ತು ಧ್ಯಾನವನ್ನು ಮಾಡುವುದು ಒಳಿತು. ಜೊತೆಗೆ ಈ ಅವಧಿಯಲ್ಲಿ ಸ್ವಲ್ಪ ಸಮಯವನ್ನು ಧ್ಯಾನಕ್ಕಾಗಿ ಮೀಸಲಿಡಿ. ಈ ದಿನ ಸಂಖ್ಯೆ 7ನ್ನು ಹೊಂದಿರುವ ಜನರಿಗೆ ಕೋಪ ಮತ್ತು ಒತ್ತಡಗಳಿಂದ ಮುಕ್ತಿ ದೊರಕುವುದು. ಹಾಗೆ ಕುಟುಂಬ ಜೀವನದಲ್ಲಿ ಧೈರ್ಯ ಮತ್ತು ಶಾಂತಿಯಿಂದ ಇರುವುದು ಉತ್ತಮ.
ಸಂಖ್ಯೆ 8

ಯಾವುದೇ ತಿಂಗಳ 8, 17 ಮತ್ತು 24ನೇ ದಿನಾಂಕಗಳಂದು ಜನಿಸಿದವರ ಸಂಖ್ಯೆ 8 ಆಗಿರುವುದು, ಹಾಗಾಗಿ ಈ ಅಕ್ಷಯ ತೃತೀಯ ದಿನದಂದು ನೀವು ಹೆಚ್ಚಿನ ಅದೃಷ್ಟವನ್ನು ಪಡೆದುಕೊಳ್ಳುವಿರಿ, ಈ ಸಂದರ್ಭದಲ್ಲಿ ಸಂಖ್ಯೆ 8 ನ್ನು ಹೊಂದಿರುವ ಜನರು ತಮ್ಮ ಹಳೆಯ ಹೂಡಿಕೆಗಳಿಂದ ದೊಡ್ಡ ಲಾಭವನ್ನು ಗಳಿಸುವ ಸಂಭವವಿದೆ. ಹಾಗೆ ನಿಮ್ಮ ಧನ, ಸಂಪತ್ತಿನಲ್ಲಿ ಸಾಕಷ್ಟು ಹೆಚ್ಚಳವಾಗುವುದು. ಜೊತೆಗೆ ಮನೆಯಲ್ಲಿ ಸಂತೋಷ ನೆಲೆಸಲಿದೆ. ಹಾಗೆ ಸಂಖ್ಯೆ 8 ನ್ನು ಹೊಂದಿರುವ ಜನರ ಜೀವನವು ಸಾಕಷ್ಟು ಸುಖಮಯವಾಗಿರುವುದು.
ಸಂಖ್ಯೆ 9

ಯಾವುದೇ ತಿಂಗಳ 9,18 ಮತ್ತು 27ನೇ ದಿನಾಂಕಗಳಂದು ಜನಿಸಿದವರ ಸಂಖ್ಯೆ 9 ಆಗಿರುವುದು. ಹಾಗಾಗಿ ಈ ವರ್ಷದ ಅಕ್ಷಯ ತೃತೀಯ ದಿನದಂದು ಸಂಖ್ಯೆ 9 ಹೊಂದಿರುವ ಜನರು ಅಪಾರ ಪುಣ್ಯ ಮತ್ತು ಲಾಭವನ್ನು ಗಳಿಸುವ ಸಂಭವವಿದೆ. ಈ ದಿನ ಸಂಖ್ಯೆ 9 ನ್ನು ಹೊಂದಿರುವ ಜನರು ಆಸ್ತಿಯನ್ನು ಖರೀದಿಸುವ ಬಗ್ಗೆ ಯೋಜನೆಯನ್ನು ರೂಪಿಸಬಹುದಾಗಿದೆ. ಆದರೆ ಈ ಅವಧಿಯಲ್ಲಿ ಎಚ್ಚರಿಕೆಯಿಂದ ಇರುವುದು ಅಗತ್ಯ, ಇಲ್ಲದಿದ್ದರೆ ನಿಮ್ಮ ಹಣ ಕಳೆದು ಹೋಗುವ ಅಥವಾ ನಷ್ಟವಾಗುವ ಸಂಭವವಿದೆ. ಜೊತೆಗೆ ಈ ವರ್ಷದ ಅಕ್ಷಯ ತೃತೀಯ ದಿನದಂದು ನಿಮಗೆ ಅಪಾರ ಧನ ಸಂಪತ್ತಿನ ಆಗಮನವೂ ಕೂಡ ಆಗಬಹುದು.

