Dailyhunt Logo
  • Light mode
    Follow system
    Dark mode
    • Play Story
    • App Story
'ಅಮ್ಮನಿಗೆ ಹಾಯ್ ಹೇಳು': ಸಾವನ್ನಪ್ಪಿದ ಮುದ್ದಿನ ನಾಯಿ ಬಗ್ಗೆ ಕಿಶನ್ ಬಿಲಗಲಿ ಭಾವುಕ ಪೋಸ್ಟ್!

'ಅಮ್ಮನಿಗೆ ಹಾಯ್ ಹೇಳು': ಸಾವನ್ನಪ್ಪಿದ ಮುದ್ದಿನ ನಾಯಿ ಬಗ್ಗೆ ಕಿಶನ್ ಬಿಲಗಲಿ ಭಾವುಕ ಪೋಸ್ಟ್!

Vijay Karnataka 2 days ago

'ಬಿಗ್ ಬಾಸ್ ಕನ್ನಡ 7' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ನಟ ಕಿಶನ್ ಬಿಲಗಲಿ. 'ತಕಧಿಮಿತಾ' ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಸ್ಪರ್ಧಿಸಿದ್ದ ಕಿಶನ್ ಬಿಲಗಲಿ 'ನಿನಗಾಗಿ' ಸೀರಿಯಲ್‌ನಲ್ಲಿ ಅಭಿನಯಿಸಿದ್ದರು. ವಿಭಿನ್ನ ಕಾನ್ಸೆಪ್ಟ್‌ಗಳ ಮೂಲಕ ಡ್ಯಾನ್ಸ್ ವಿಡಿಯೋಗಳನ್ನ ಹೊರತರುವ ಕಿಶನ್ ಬಿಲಗಲಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್.

ಸದಾ ಲವಲವಿಕೆಯಿಂದಿರುವ ಕಿಶನ್ ಬಿಲಗಲಿ ಇದೀಗ ದುಃಖದಲ್ಲಿದ್ದಾರೆ. ಪ್ರೀತಿಯ ಶ್ವಾನವನ್ನ ಕಳೆದುಕೊಂಡ ದುಃಖದಲ್ಲಿದ್ದಾರೆ ಕಿಶನ್ ಬಿಲಗಲಿ.

ಚಿಕ್ಕಮಗಳೂರು ಮೂಲದ ಕಿಶನ್ ಬಿಲಗಲಿ ತಮ್ಮದೇ ಫಾರ್ಮ್ ಹೌಸ್ ಹೊಂದಿದ್ದಾರೆ. ಫಾರ್ಮ್ ಹೌಸ್‌ನಲ್ಲಿ ಶ್ವಾನಗಳನ್ನ ಕಿಶನ್ ಬಿಲಗಲಿ ಮುದ್ದಾಗಿ ಸಾಕಿದ್ದಾರೆ. ಕಿಶನ್ ಬಿಲಗಲಿ ಅವರ ಪ್ರೀತಿಯ ಶ್ವಾನ ಬಂಗೇರಾ ಸಾವನ್ನಪ್ಪಿದೆ. ಬಂಗೇರಾನ ಕಳೆದುಕೊಂಡ ನೋವಿನಲ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಕಿಶನ್ ಬಿಲಗಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಕಿಶನ್ ಬಿಲಗಲಿ ಭಾವುಕ ಪೋಸ್ಟ್

''RIP ಕಂದಮ್ಮ... ಅಮ್ಮನಿಗೆ ನನ್ನ ಪರವಾಗಿ ಹಾಯ್ ಹೇಳು. ನಿನ್ನ ಜೊತೆ ಕಳೆದ ಎಲ್ಲಾ ಸುಂದರ ನೆನಪುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಮುಂದೆ ಸಾಗುತ್ತೇನೆ. ಸುಲಭವಾಗಿ ಸೋಲೊಪ್ಪಿಕೊಳ್ಳಬಾರದು ಎಂದು ನೀನೇ ಕಲಿಸಿದ್ದೆ. ನಿನ್ನವರನ್ನು ಹೃದಯಪೂರ್ವಕವಾಗಿ ಪ್ರೀತಿಸುತ್ತಿದ್ದೆ. ಸ್ನೇಹ ಎಂದರೇನು ಎಂಬುದನ್ನು ನಿನ್ನ ಬದುಕಿನ ಮೂಲಕ ತೋರಿಸಿದ್ದೆ. ಕಣ್ಣಿನ ದೃಷ್ಟಿ ಕಳೆದುಕೊಂಡ ನಂತರವೂ ನಿನ್ನ ನಗು, ನಿನ್ನ ಸಕಾರಾತ್ಮಕತೆ ಸುತ್ತಮುತ್ತಲಿನ ಎಲ್ಲರ ಬದುಕನ್ನು ಬೆಳಗಿಸುತ್ತಿತ್ತು. ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ, ಬಂಗೇರಾ... ಮತ್ತೆ ಭೇಟಿಯಾಗುವವರೆಗೆ…'' ಎಂದು ಕಿಶನ್ ಬಿಲಗಲಿ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಕಿಶನ್ ಬಿಲಗಲಿ ಕುಟುಂಬ

ಚಿಕ್ಕಮಗಳೂರಿನ ಕಿಶನ್ ಬಿಲಗಲಿಗೆ ತಂದೆ ಅಶೋಕ್‌ ಫ್ರೆಂಡ್‌ ತರಹ. ಬೋರ್ಡಿಂಗ್‌ ಸ್ಕೂಲ್‌ನಲ್ಲಿ ಓದಿದ ಕಿಶನ್ ಬಿಲಗಲಿಗೆ ತಾಯಿ ಇಲ್ಲ. 2013ರಲ್ಲಿ ತಾಯಿ ಸುಮಾ ವಿಧಿವಶರಾದರು. ತಮ್ಮ ನೃತ್ಯಕ್ಕೆ ತಾಯಿಯೇ ಸ್ಫೂರ್ತಿ ಎಂದು ಕಿಶನ್ ಬಿಲಗಲಿ ಹಲವು ಬಾರಿ ಹೇಳಿಕೊಂಡಿದ್ದಾರೆ. ಆಗಾಗ ತಾಯಿಯನ್ನ ಮಿಸ್ ಮಾಡಿಕೊಳ್ಳುತ್ತಿರುತ್ತಾರೆ ಕಿಶನ್ ಬಿಲಗಲಿ. ಇದೀಗ ಮುದ್ದಿನ ಶ್ವಾನವನ್ನೂ ಕಳೆದುಕೊಂಡು ಕಿಶನ್ ನೊಂದುಕೊಂಡಿದ್ದಾರೆ. ಅಂದ್ಹಾಗೆ ಕಿಶನ್‌ ಬಿಲಗಲಿಗೆ ರೋಹಿತ್ ಬಿಲಗಲಿ ಮತ್ತು ಪ್ರತೀಕ್ ಬಿಲಗಲಿ ಎಂಬ ಇಬ್ಬರು ಸಹೋದರರಿದ್ದಾರೆ.

'ಡ್ಯಾನ್ಸ್ ದಿವಾನೆ' ಶೋನಲ್ಲೂ ಸ್ಪರ್ಧಿಸಿದ್ದ ಕಿಶನ್!

ಹಿಂದಿಯ ಜನಪ್ರಿಯ 'ಡ್ಯಾನ್ಸ್ ದಿವಾನೆ' ರಿಯಾಲಿಟಿ ಶೋನಲ್ಲೂ ಕಿಶನ್ ಸ್ಪರ್ಧಿಸಿದ್ದರು. ಇದೇ ಶೋನಲ್ಲಿ ತೀರ್ಪುಗಾರ್ತಿ ಮಾಧುರಿ ದೀಕ್ಷಿತ್ ಅವರಿಂದ ಕಿಶನ್ ಬಿಲಗಲಿ ಹಾಡಿ ಹೊಗಳಿಸಿಕೊಂಡಿದ್ದರು. ಬಾಲಿವುಡ್‌ನ ಶ್ರದ್ಧಾ ಕಪೂರ್, ಮೌನಿ ರಾಯ್ ಜೊತೆ ಡ್ಯಾನ್ಸ್ ಮಾಡಿರುವ ಹೆಮ್ಮೆ ಕಿಶನ್ ಬಿಲಗಲಿ ಅವರದ್ದು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka