Dailyhunt Logo
  • Light mode
    Follow system
    Dark mode
    • Play Story
    • App Story
'ಅಮೃತಧಾರೆ' ಧಾರಾವಾಹಿಯ ಸತ್ಯ ಸಂಗತಿಗಳು ನಿಮಗೆ ಗೊತ್ತಾ?

'ಅಮೃತಧಾರೆ' ಧಾರಾವಾಹಿಯ ಸತ್ಯ ಸಂಗತಿಗಳು ನಿಮಗೆ ಗೊತ್ತಾ?

Vijay Karnataka 3 weeks ago

'ಅಮೃತಧಾರೆ' ಧಾರಾವಾಹಿ ಇಂದು(ಜುಲೈ 03) ಸಾವಿರ ಸಂಚಿಕೆ ಪೂರೈಸಿದೆ. ಮೇ 29, 2023ರಲ್ಲಿ ಪ್ರಾರಂಭವಾದ ವಿನೂತನ ಕಥೆಯು ಕನ್ನಡಿಗರ ಮನ ಗೆದ್ದಿದೆ. 'ಗುಪ್ತಗಾಮಿನಿ' ಧಾರಾವಾಹಿ ನಂತರ ರಾಜೇಶ್‌ ನಟರಂಗ ಅವರಿಗೆ ಅಪಾರ ಜನಪ್ರಿಯತೆ ಸಿಕ್ಕಿದ್ದು, ವೀಕ್ಷಕರ ಹೃದಯ ಗೆಲ್ಲುವಲ್ಲಿ ಯಶ ಕಂಡಿದ್ದಾರೆ.

ನಟಿ ಛಾಯಾ ಸಿಂಗ್‌ ಅವರು ಕನ್ನಡ ಪರದೆಯಿಂದ ದೂರ ಉಳಿದಿದ್ದರು. ಹೆಚ್ಚಾಗಿ ಪರಭಾಷೆಯಲ್ಲಿ ಮಿಂಚುತ್ತಿದ್ದರು. ಅವರನ್ನ ಮರಳಿ ಕಿರುತೆರೆಗೆ ತಂದ ಹೆಗ್ಗಳಿಕೆ 'ಅಮೃತಧಾರೆ' ಧಾರಾವಾಹಿ ತಂಡದ್ದು. ಸಾವಿರದ ಸುಸಂದರ್ಭದಲ್ಲಿ ಒಂದಿಷ್ಟು ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ.


ನಿರ್ಮಾಣ ಮತ್ತು ನಿರ್ದೇಶನ

'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾ ಖ್ಯಾತಿಯ ನಿರ್ಮಾಪಕ ಮಹೇಶ್‌ ರಾವ್‌ ಅವರು 'ಅಮೃತಧಾರೆ' ಧಾರಾವಾಹಿಗೆ ಬಂಡವಾಳ ಹಾಕಿದ್ದಾರೆ. ಖ್ಯಾತ ನಿರ್ದೇಶಕರಾದ ಗುರುಪ್ರಸಾದ್ ಮುಡೇನಹಳ್ಳಿ ಅವರು ಆಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಇವರು ಜನಪ್ರಿಯ ಧಾರಾವಾಹಿ 'ರಂಗೋಲಿ'ಯಲ್ಲಿ ಕೆಲಸ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

ಕಥೆ

ಗುಜರಾತಿ ಭಾ‍ಷೆಯಲ್ಲಿ ಮೂಡಿಬಂದಿದ್ದ 'ಪಟ್‌ರಾಣಿ' ಧಾರಾವಾಹಿಯ ಕಥೆಯನ್ನ ಖ್ಯಾತ ಹಿಂದಿ ನಿರ್ಮಾಪಕಿ ಏಕ್ತಾ ಕಪೂರ್‌ ಅವರು ತಮ್ಮ 'ಬಾಲಾಜಿ ಟೆಲಿಫಿಲಂಸ್‌' ನಿರ್ಮಾಣ ಸಂಸ್ಥೆಗೆ ತೆಗೆದುಕೊಂಡರು. ಈ ಮೂಲ ಕಥೆಯಲ್ಲಿ ಮಾರ್ಪಾಟು ಮಾಡಿದರು. 2011ರಲ್ಲಿ 'ಬಡೇ ಅಚ್ಚೆ ಲಗ್ತೆ ಹೇ' ಟೈಟಲ್‌ನೊಂದಿಗೆ ಹಿಂದಿ ಭಾಷೆಗೆ ಸೀರಿಯಲ್‌ ಕ್ರಿಯೇಟ್‌ ಮಾಡಿದರು. ನಂತರ ಈ ಕಥೆಯನ್ನ 'ಅಮೃತಧಾರೆ' ಧಾರಾವಾಹಿಗೆ ಅಳವಡಿಸಲಾಯಿತು. ಕನ್ನಡದ ಸೊಗಡಿಗೆ ತಕ್ಕಂತೆ ಕಥೆ ಬದಲಾವಣೆ ಪಡೆಯಿತು.

ಛಾಯಾ-ರಾಜೇಶ್‌ ಅಣ್ಣಾತಂಗಿ ಬಂಧ!

ಒಂದು ಬಾರಿ ಸಹೋದರತ್ವದ ಪಾತ್ರ ಬರಬಹುದು. ಮತ್ತೊಂದು ಬಾರಿಗೆ ಅದೇ ಕಲಾವಿದರು ಗಂಡ-ಹೆಂಡತಿಯಾಗಿ ನಟಿಸುವ ಅವಕಾಶ ಸಿಗಬಹುದು. ಈ ಹಿಂದೆ ಡಾ.ರಾಜ್‌ಕುಮಾರ್‌ ಅವರಿಗೆ ಅದೇಷ್ಟೋ ಸಿನಿಮಾಗಳಲ್ಲಿ ಹಿರಿಯನಟಿ ಲೀಲಾವತಿ ಅವರು ತಾಯಿಯಾಗಿ, ಸಹೋದರಿಯಾಗಿ, ಪ್ರೇಯಸಿ ಪಾತ್ರ ಹೀಗೆ ಇಬ್ಬರ ಕಾಂಬಿನೇಷನ್‌ನಲ್ಲಿ ವಿಭಿನ್ನ ಪಾತ್ರಗಳ ನಿರ್ವಹಣೆ ನೋಡಿದ್ದೀವಿ. ಅದೇ ರೀತಿ ರಾಜೇಶ್‌ ನಟರಂಗ ಮತ್ತು ಛಾಯಾ ಸಿಂಗ್‌ ಅವರು ತೆರೆಹಿಂದೆ ಅಣ್ಣಾ-ತಂಗಿ. ತೆರೆಮೇಲೆ ಅಪರೂಪದ ಒಲವಿನ ಪ್ರೇಮ ಹಕ್ಕಿಗಳು.

'ಅಮೃತಧಾರೆ' ಧಾರಾವಾಹಿ ಶೂಟಿಂಗ್‌ ಸೆಟ್‌ಗೆ ಮೊದಲ ದಿನ ಕಾಲಿಟ್ಟ ಛಾಯಾ ಸಿಂಗ್ ಅವರು ರಾಜೇಶ್‌ ನಟರಂಗ ಅವರನ್ನ ನೋಡುತ್ತಿದ್ದಂತೆ, 'ಅಣ್ಣಾ' ಅಂತ ಓಡಿ ಮಾತ್ನಾಡಿಸುವುದಕ್ಕೆ ಹೋದರಂತೆ. ಆಗ ರಾಜೇಶ್‌ ನಟರಂಗ ಅವರು ಮಾತನ್ನ ಅರ್ಧಕ್ಕೆ ತಡೆದು…"ನೋಡಮ್ಮ ನಾವು ಇಲ್ಲಿ ಗಂಡ-ಹೆಂಡತಿಯಾಗಿ ನಟಿಸುತ್ತಿದ್ದೀವಿ. ಸೆಟ್‌ನಲ್ಲಿ ಮಾತ್ರ ಅಣ್ಣಾ ಅಂತ ಕರೀಯ ಬೇಡಮ್ಮ.ರೋಮ್ಯಾಂಟಿಕ್‌ ದೃಶ್ಯಗಳನ್ನ ಮಾಡುವುದಕ್ಕೆ ಕಷ್ಟ ಆಗುತ್ತೆ ಅಂತ ಹೇಳಿದ್ದರಂತೆ."ಈ ಬಗ್ಗೆ ಸ್ವತಃ ರಾಜೇಶ್‌ ನಟರಂಗ ಅವರು ಹಲವು ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗೆ 'ಜೋಡಿ ನಂ-1' ಕಾರ್ಯಕ್ರಮದಲ್ಲೂ ಈ ವಿಚಾರ ಹೇಳಿ ನಕ್ಕಿದ್ದರು.

ಅಂದ್ಹಾಗೆ, ದಶಕದ ಹಿಂದೆ 'ಈ ಟಿವಿ'(ಈಗಿನ ಕಲರ್ಸ್ ಕನ್ನಡ) ಕನ್ನಡ ವಾಹಿನಿಯ ಧಾರಾವಾಹಿವೊಂದರಲ್ಲಿ ರಾಜೇಶ್‌ ನಟರಂಗ ಮತ್ತು ಛಾಯಾ ಸಿಂಗ್‌ ಅವರು ಅಣ್ಣಾ-ತಂಗಿಯಾಗಿ ನಟಿಸಿದ್ದರು. ಅದೇ ಭಾವನೆ ಇವತ್ತಿಗೂ ಇಬ್ಬರ ನಡುವೆ ಹಾಗೇ ಇದೆ.

ಮಿಂಚು-ಆಕಾಶ್

ಗೌತಮ್‌ ಭೂಮಿಕಾ ದಂಪತಿಯ ಮಕ್ಕಳ ಪಾತ್ರ ಮಿಂಚು ಮತ್ತು ಆಕಾಶ್‌. ಮಿಂಚು ಪಾತ್ರಕ್ಕೆ ಬಣ್ಣ ಹಚ್ಚಿರುವುದು ಬಾಲನಟಿ ನೈನಿಕಾ ಮಹೇಶ್ ರಾವ್. ಇವರು ನಿರ್ಮಾಪಕ ಮಹೇಶ್‌ ರಾವ್‌ ಅವರ ಮಗಳು. ಆಕಾಶ್‌ ಪಾತ್ರ ನಿರ್ವಹಿಸುತ್ತಿರುವ ಪೋರ ದುಷ್ಯಂತ್‌. ಇದೇ ಧಾರಾವಾಹಿಯಲ್ಲಿ ಗೌತಮ್‌ ಗೆಳೆಯ ಆನಂದ್‌ ಪಾತ್ರಕ್ಕೆ ಬಣ್ಣ ಹಚ್ಚಿರುವ ಸಿಲ್ಲಿಲಲ್ಲಿ ಆನಂದ್‌ ಅವರ ಪುತ್ರ.

'ಅಮೃತಧಾರೆ' ಧಾರಾವಾಹಿಯ ಸಾವಿರ ಸಂಚಿಕೆಗೆ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಪಾತ್ರಗಳನ್ನ ಸಂಭ್ರಮಿಸುತ್ತಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka