Dailyhunt Logo
  • Light mode
    Follow system
    Dark mode
    • Play Story
    • App Story
ಅಣ್ಣ ಯಶ್‌ಗೆ ರಾಖಿ ಕಟ್ಟಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದ ತಂಗಿ ನಂದಿನಿ: ವೈರಲ್‌ ಆಯ್ತು ಫೋಟೋಸ್..

ಅಣ್ಣ ಯಶ್‌ಗೆ ರಾಖಿ ಕಟ್ಟಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದ ತಂಗಿ ನಂದಿನಿ: ವೈರಲ್‌ ಆಯ್ತು ಫೋಟೋಸ್..

Vijay Karnataka 2 weeks ago

ರಾಕಿಂಗ್ ಸ್ಟಾರ್ ಯಶ್ ಅಭಿನಯದ ʻಟಾಕ್ಸಿಕ್' ಸಿನಿಮಾ ವಿಶ್ವದಾದ್ಯಂತ ರಿಲೀಸ್‌ ಆಗಿ ಉತ್ತಮ ಗಳಿಕೆ ಕಾಣ್ತಿದೆ. ಈ ಸಂಭ್ರಮದ ಗೆಲುವಿನ ವಾತಾವರಣದ ನಡುವೆ ಯಶ್‌ ತಮ್ಮ ಪ್ರೀತಿಯ ತಂಗಿ ನಂದಿನಿ ಅವರಿಂದ ರಕ್ಷಾ ಬಂಧನದ ಹಬ್ಬದ ಕಾಣಿಕೆ ಸ್ವೀಕರಿಸಿದ್ದಾರೆ.

ಹೌದು..

ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಮಟ್ಟದ ಯಶಸ್ಸು ಹಾಗೂ ಸ್ಟಾರ್‌ಡಮ್‌ ಸಿಕ್ಕರೂ, ಯಶ್‌ ಅವರಿಗೆ ತಮ್ಮ ಕುಟುಂಬವೇ ಮೊದಲ ಆದ್ಯತೆ. ಅದರಲ್ಲೂ, ತಂಗಿ ನಂದಿನಿ ಎಂದರೆ ಯಶ್‌ಗೆ ಎಲ್ಲಿಲ್ಲದ ಪ್ರೀತಿ. ಯಶ್‌ ಎಷ್ಟೇ ಬ್ಯುಸಿಯಾಗಿದ್ದರೂ, ಪ್ರತಿ ವರ್ಷವೂ ತಂಗಿ ನಂದಿನಿ ಅಣ್ಣನಿಗೆ ರಾಖಿ ಕಟ್ಟುವುದನ್ನ ಮಾತ್ರ ಎಂದಿಗೂ ಮಿಸ್‌ ಮಾಡುವುದಿಲ್ಲ.

ಅಂತೆಯೇ ಈ ವರ್ಷವೂ ಅಣ್ಣ ಯಶ್‌ ಮನೆಗೆ ತೆರೆಳಿ ನಂದಿನಿ ರಾಖಿ ಕಟ್ಟಿದ್ದಾರೆ. ಅಣ್ಣನಿಗೆ ಸಿಹಿ ತಿನ್ನಿಸಿ, ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದು, ಯಶ್‌ ಕೂಡ ಪ್ರೀತಿಯಿಂದ ತಂಗಿಯನ್ನ ಹಾರೈಸಿದ್ದಾರೆ.


ಅಂದಹಾಗೆ, ಇತ್ತೀಚೆಗೆ ʻಆಪ್‌ ಕಿ ಅದಾಲತ್‌ʼ ಶೋನಲ್ಲಿ ತಮ್ಮ ತಂಗಿ ನಂದಿನಿ ಬಗ್ಗೆ ಯಶ್‌ ಆಡಿದ ಮಾತುಗಳು ಸಖತ್‌ ವೈರಲ್‌ ಆಗಿದ್ದವು. "ಇಡೀ ಪ್ರಪಂಚದಲ್ಲೇ ನನಗೆ ತಂಗಿ ನಂದಿನಿ ಅತ್ಯಂತ ಫೇವರಿಟ್‌ ವ್ಯಕ್ತಿ" ಎಂದು ಹೇಳಿಕೊಂಡಿದ್ದರು. ಈ ವಿಡಿಯೋ ಸಖತ್‌ ವೈರಲ್‌ ಆಗಿತ್ತು. ಇನ್ನೂ ʻಕೆಜಿಎಫ್‌ʼ ಸರಣಿಯ ಬ್ಲಾಕ್‌ಬಸ್ಟರ್‌ ಹಿಟ್‌ ಸಮಯದಲ್ಲೂ ಯಶ್‌ ತಮ್ಮ ತಂಗಿಯೊಂದಿಗೆ ರಕ್ಷಾ ಬಂಧನವನ್ನ ಆಚರಿಸಿದ್ದರು. ಈಗ ಅದೇ ರೀತಿ ಈ ಬಾರಿಯೂ ʻಟಾಕ್ಸಿಕ್‌ʼ ಸಿನಿಮಾದ ಹೈಪ್‌ ನಡುವೆಯ, ವಾಡಿಕೆಯಂತೆ ಅಣ್ಣನ ನಿವಾಸಕ್ಕೆ ತೆರಳಿದ ನಂದಿನಿ, ರಾಖಿ ಕಟ್ಟಿದ್ದಾರೆ.


ಅಣ್ಣನ ಜೊತೆಗಿನ ಫೋಟೋಗಳನ್ನ ಶೇರ್‌ ಮಾಡಿಕೊಂಡು, "ಕೆಲವು ಸಂಬಂಧಗಳು ಕೇವಲ ರಕ್ತಸಂಬಂಧದಿಂದ ಮಾತ್ರ ರೂಪುಗೊಳ್ಳುವುದಿಲ್ಲ. ಅವು ಜೀವಮಾನದ ನೆನಪುಗಳು, ಪ್ರೀತಿ, ಪರಸ್ಪರ ತಿಳುವಳಿಕೆ ಮತ್ತು ಎಲ್ಲಾ ಸಂದರ್ಭಗಳಲ್ಲೂ ಪರಸ್ಪರ ಬೆಂಬಲವಾಗಿ ನಿಲ್ಲುವ ಮೂಲಕ ಗಟ್ಟಿಗೊಳ್ಳುತ್ತವೆ. ನಮ್ಮ ಈ ಬಾಂಧವ್ಯ ನನ್ನ ಜೀವನದ ಅತ್ಯಮೂಲ್ಯ ಸಂಬಂಧಗಳಲ್ಲಿ ಒಂದಾಗಿದೆ. ಯಾವುದೇ ಅಂತರ, ಭಿನ್ನಾಭಿಪ್ರಾಯಗಳು ಅಥವಾ ಸಂದರ್ಭಗಳು ನಮ್ಮ ನಡುವಿನ ಈ ಬಾಂಧವ್ಯವನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ. ನಿನ್ನನ್ನು ಅಪಾರವಾಗಿ ಪ್ರೀತಿಸುವ ಮತ್ತು ಯಾವಾಗಲೂ ನಿನಗೆ ಬೆಂಬಲವಾಗಿ ನಿಲ್ಲುವ ಸಹೋದರಿ ನಿನಗೆ ಸದಾ ಇರುತ್ತಾಳೆ. ರಕ್ಷಾ ಬಂಧನದ ಶುಭಾಶಯಗಳು, ಅಣ್ಣಾ.. ಎಂದೆಂದಿಗೂ ನಿನ್ನ ಸಹೋದರಿ, ಸದಾ ನಿನ್ನೊಂದಿಗೆ" ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ ನಂದಿನಿ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka