Dailyhunt Logo
  • Light mode
    Follow system
    Dark mode
    • Play Story
    • App Story
ಅನುಶ್ರೀ ಮದುವೆಗೆ ಒಂದು ವರ್ಷ ತುಂಬಿದೆ, ಕಿನ್ಯಾ ಪ್ರವಾಸ ಕೈಗೊಂಡ ಜೋಡಿ!

ಅನುಶ್ರೀ ಮದುವೆಗೆ ಒಂದು ವರ್ಷ ತುಂಬಿದೆ, ಕಿನ್ಯಾ ಪ್ರವಾಸ ಕೈಗೊಂಡ ಜೋಡಿ!

Vijay Karnataka 2 weeks ago

ನಿರೂಪಕಿ ಅನುಶ್ರೀ ಅವರು ರಿಯಾಲಿಟಿ ಶೋಗಳ ನಿರೂಪಣೆ ಮೂಲಕ ಕನ್ನಡ ಕಿರುತೆರೆಯ ಮನೆ ಮಗಳಾಗಿದ್ದಾರೆ. ಇದುವರೆಗೂ ನೂರಾರು ಕಾರ್ಯಕ್ರಮಗಳನ್ನ ನಿರೂಪಣೆ ಮಾಡಿದ್ದಾರೆ. ಇಂಡಸ್ಟ್ರಿಯಲ್ಲಿ 20 ವರ್ಷ ಪೂರ್ಣಗೋಳಿಸಿ ಮುನಗ್ಗುತ್ತಿದ್ದಾರೆ. ನಿರೂಪಣೆ ಜೊತೆಗೆ ನಟನೆ ಕೂಡ ಪ್ರಯತ್ನಪಟ್ಟರು.

ಆದರೆ, ಬೆಳ್ಳಿತೆರೆ ಅವರ ಕೈಹಿಡಿಯಲಿಲ್ಲ. ಕಿರುತೆರೆ ಅವರ ಕೈಬೀಡಲಿಲ್ಲ. ಅಷ್ಟರ ಮಟ್ಟಿಗೆಅನುಶ್ರೀ ಅವರು ಕಿರುತೆರೆಯ ಸ್ಟಾರ್‌ ಆಂಕರ್‌ ಆಗಿ ಮಿಂಚುತ್ತಿದ್ದಾರೆ.

ವೈಯಕ್ತಿಕ ಜೀವನದಲ್ಲಿ ಅನುಶ್ರೀ ಅವರಿಗೆ ಕೇಳಿ ಬರುತ್ತಿದ್ದ ಮುಖ್ಯವಾದ ಪ್ರಶ್ನೆ ಮದುವೆ. ಮದುವೆ ಯಾವಾಗ? ಹುಡುಗ ಯಾರು ಎಂಬುವುದು ಬಹುತೇಕ ಚರ್ಚೆ ಆಗ್ತಿತ್ತು. ಕೊನೆ ಅನುಶ್ರೀ ಅವರು ಕಳೆದ ವರ್ಷ 2025ರಲ್ಲಿ ರೋಷನ್‌ ರಾಮಮೂರ್ತಿ ಅವರನ್ನ ವಿವಾಹವಾದರು. ಸಿಂಪಲ್‌ ಆಗಿ ಮದುವೆ ಆಗಬೇಕು ಎಂಬ ಅವರ ಕನಸು ನನಸಾಗಿತ್ತು.


ಮದುವೆ ಸ್ಟೋರಿ

ಕುಶಾಲನಗರ ಮೂಲದವರಾದ ರೋಷನ್‌ ರಾಮಮೂರ್ತಿ ಅವರನ್ನ 2025ರ ಆಗಸ್ಟ್‌ 28 ರಂದು ಮದುವೆ ಆದರು ನಿರೂಪಕಿ ಅನುಶ್ರೀ. ಇಬ್ಬರಿಗೂ ಒಂದು ವರ್ಷದ ವಯಸ್ಸಿನ ಅಂತರ ಇದೆ. ಅನುಶ್ರೀ ಅವರಿಗೆ 38 ವರ್ಷ, ರೋಷನ್‌ ಅವರಿಗೆ 37ವರ್ಷ. ಮಂಗಳೂರಿನ ಮಗಳು ಕೊಡಗಿನ ಸೊಸೆಯಾದರು ಅನುಶ್ರೀ. ಇಬ್ಬರೂ ಪರಿಚಯವಾಗಿದ್ದು ಡಾ.ರಾಜಕುಮಾರ್‌ ಅವರ ಮನೆ ಸೊಸೆ ಶ್ರೀದೇವಿ ಬೈರಪ್ಪ ಅವರ ಮೂಲಕ. ರೋಷನ್‌ ಮತ್ತು ಶ್ರೀದೇವಿ ಅವರು ಬಾಲ್ಯ ಸ್ನೇಹಿತರು. ಮೇಲಾಗಿ ಪುನೀತ್‌ ರಾಜ್‌ಕುಮಾರ್‌ ಅವರ ದೊಡ್ಡ ಅಭಿಮಾನಿ ರೋಷನ್‌. ಅನುಶ್ರೀ ಅವರ ಆರಾಧ್ಯ ದೈವಿ ಅಪ್ಪ. ಹೀಗಾಗಿ ಇಬ್ಬರೂ ಕನೆಕ್ಟ್‌ ಆಗೋಕೆ ಅಭಿಮಾನನೇ ಕಾರಣವಾಯ್ತು. ರಾಜ್‌ ಕುಟುಂಬದ ಸಾಕಷ್ಟು ಕೆಲಸ, ಕಾರ್ಯಕ್ರಮಗಳಲ್ಲಿ ರೋಷನ್ ಇರುತ್ತಿದ್ದರು. ಹಾಗೇ ಅನುಶ್ರೀ ಕೂಡ. 5 ವರ್ಷಗಳಿಂದ ಇಬ್ಬರಿಗೂ ಮುಖ ಪರಿಚಯಯಿತ್ತು. ನಂತರ 'ಪುನೀತ ಪರ್ವ ಕಾರ್ಯಕ್ರಮ'ದ ಮೂಲಕ

ಸ್ನೇಹಿತರಾದ ಜೋಡಿ, 3 ವರ್ಷಳ ಕಾಲ ಸ್ನೇಹಿತರಾಗಿದ್ದರು. ಇಬ್ಬರ ನಡುವಿನ ಅಂಡರ್‌ಸ್ಟ್ಯಾಂಡಿಂಗ್‌ ಚೆನ್ನಾಗಿದ್ದಿದ್ದರಿಂದ ನಟ ರಾಜ್‌ ಬಿ ಶೆಟ್ಟಿ ಅವರು ಇಬ್ಬರನ್ನ ಕಾಫಿಗೆ ಕಳುಹಿಸಿ, ಮಾತುಕತೆ ಮಾಡಿಯೇ ಬಿಟ್ಟಿದ್ದರು. ನಂತರ ಜೀ ಕನ್ನಡದ ಪ್ರೋಗ್ರಾಮ್‌ ಪ್ರೋಡ್ಯುಸರ್‌ ಅರುಣ್‌ ಗೌಡ ಅವರು ಅನುಗೆ ಅಣ್ಣನ ಸ್ಥಾನ ತುಂಬಿ, ಮದುವೆ ಮಾಡಿಸಿದ್ದರು.

ಫಸ್ಟ್‌ ಆನಿವರ್ಸರಿ

ಇಂದು ಆಗಸ್ಟ್ 28 ರಂದು ಅನುಶ್ರೀ ಮತ್ತು ರೋಷನ್ ಅವರ ಮೊದಲ ವಿವಾಹ ವಾರ್ಷಿಕೋತ್ಸವ. ಈ ಖುಷಿಯನ್ನ ಸಂಭ್ರಮಿಸೋಕೆ ಆಫ್ರಿಕಾದ ಕೀನ್ಯಾದ ಮಸಾಯಿ ಮಾರಾ ಪ್ರವಾಸ ಮಾಡತ್ತಿದ್ದಾರೆ ಜೋಡಿ.

ಅನುಶ್ರೀ ಪೋಸ್ಟ್

"ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮ, ಕೆಟ್ಟ ದೃಷ್ಟಿಗೆ ಹೇಳೋಣ ನಿರ್ಗಮನ, ಒಳ್ಳೆ ನೆನಪುಗಳಿಗೆ ಆಗಮನ.. ಪ್ರೀತಿಯನ್ನ ಕಿನ್ಯಾದಲ್ಲಿ ಸಂಭ್ರಮಿಸುತ್ತಿದ್ದೇವೆ" ಎಂದು ನಿರೂಪಕಿ ಅನುಶ್ರೀ ಅವರು ಸುಂದರ ಕ್ಷಣಗಳ ಬ್ಯೂಟಿಫುಲ್‌ ವಿಡಿಯೋ ಹಂಚಿಕೊಂಡಿದ್ದಾರೆ.

'ಸರಿಗಮಪ ಲಿಟಲ್‌ ಚಾಂಪ್ಸ್' ಕಾರ್ಯಕ್ರಮ ಮುಕ್ತಾಯವಾಗಿದ್ದು, ಮುಂದೆ 'ಡಿಕೆಡಿ ಸೂಪರ್‌ ಮಾಮ್‌' ಶೋನ ಹೋಸ್ಟ್ ಮಾಡಲಿದ್ದಾರೆ ಅನುಶ್ರೀ. ಈ ಗ್ಯಾಪ್‌ ನಡುವೆ ಪತಿ ರೋಷನ್‌ ಜೊತೆಗೆ ಆಹ್ಲಾದಕರ ಕ್ಷಣಗಳನ್ನ ಕಳೆಯುತ್ತಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka