Dailyhunt Logo
  • Light mode
    Follow system
    Dark mode
    • Play Story
    • App Story
ಬಾಗಲಕೋಟೆ 196 ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ ನಿಗದಿ; ಒಟ್ಟು 3206 ಜನಪ್ರತಿನಿಧಿಗಳು; ಶೀಘ್ರ ಹಳ್ಳಿ ಫೈಟ್‌ ರಂಗು

ಬಾಗಲಕೋಟೆ 196 ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ ನಿಗದಿ; ಒಟ್ಟು 3206 ಜನಪ್ರತಿನಿಧಿಗಳು; ಶೀಘ್ರ ಹಳ್ಳಿ ಫೈಟ್‌ ರಂಗು

Vijay Karnataka 2 weeks ago

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ 196 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ಬಳಿಕ ನಾನಾ ಗ್ರಾಮ ಪಂಚಾಯಿತಿಗಳ ಸದಸ್ಯರ ಸಂಖ್ಯೆಯನ್ನು ನಿಗದಿಗೊಳಿಸಿ ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ ಕರಡು ವರದಿ ಪ್ರಕಟಿಸಿದ್ದು, ಜಿಲ್ಲೆಗೆ 3,206 ಸದಸ್ಯರ ಸಂಖ್ಯೆ ನಿಗದಿಗೊಳಿಸಿದೆ.

ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ಆಯೋಗ ಜಿಲ್ಲೆಯಲ್ಲಿರುವ ಗ್ರಾಪಂಗಳ ಜನಸಂಖ್ಯೆಗೆ ಅನುಗುಣವಾಗಿ ಸದಸ್ಯರನ್ನು ನಿಗದಿಪಡಿಸಿದೆ. ಕರಡು ವರದಿಯಲ್ಲೇನಾದರೂ ಆಕ್ಷೇಪಣೆಗಳಿದ್ದರೆ ಮೇ 2 ರೊಳಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕರಡು ವರದಿಯಲ್ಲಿಪ್ರಕಟಗೊಂಡ ಸದಸ್ಯರ ಸಂಖ್ಯೆಗಳೇ ಬಹುತೇಕ ಅಂತಿಮಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ತೇರದಾಳದಲ್ಲಿ91, ಜಮಖಂಡಿಯಲ್ಲಿ 518

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಸದಸ್ಯರ ಸಂಖ್ಯೆ ಗಮನಿಸಿದರೆ ತೇರದಾಳ ತಾಲೂಕಿನಲ್ಲಿ5 ಗ್ರಾಪಂಗಳಿದ್ದು 91 ಸದಸ್ಯರನ್ನು ಹೊಂದಿದೆ. ಇದು ಅತಿ ಕಡಿಮೆ ಸದಸ್ಯರನ್ನು ಹೊಂದಿದ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾದರೆ, ಜಮಖಂಡಿ ತಾಲೂಕಿನ 27 ಗ್ರಾಪಂಗಳಿಂದ 518 ಸದಸ್ಯರ ಸಂಖ್ಯೆ ಇದ್ದು, ಇದು ಅತಿ ಹೆಚ್ಚು ಸದಸ್ಯರನ್ನು ಹೊಂದಿದ ತಾಲೂಕು ಆಗಲಿದೆ.

ಶೀಘ್ರ ಹಳ್ಳಿ ಫೈಟ್‌ ರಂಗೇರುವ ಸಾಧ್ಯತೆ

ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ ತಯಾರಿಸಿರುವ ಗ್ರಾಪಂ ಸದಸ್ಯರ ಸಂಖ್ಯೆ ನಿಗದಿಪಡಿಸುವ ಕರಡು ವರದಿ ಪ್ರಕಟಿಸಿರುವ ಬೆನ್ನಲ್ಲೇ ಶೀಘ್ರ ಹಳ್ಳಿ ಫೈಟ್‌ ರಂಗೇರುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದಿನ ಸದಸ್ಯರ ಅವಧಿ ಪೂರ್ಣಗೊಂಡು ಹಲವೆಡೆ ಆಡಳಿತಾಧಿಕಾರಿಗಳ ಆಡಳಿತ ನಡೆಯುತ್ತಿದೆ. ಸರಕಾರ ಜಿಪಂ, ತಾಪಂಗಳ ಜತೆಗೆ ಗ್ರಾಪಂಗಳಿಗೂ ಚುನಾವಣೆ ನಡೆಸಲಿದೆ ಎಂಬ ಮಾತು ಬಲವಾಗಿದ್ದು, ಜಿಲ್ಲೆಯ ರಾಜಕೀಯದ ಪ್ರಥಮ ಮೆಟ್ಟಿಲು ಹತ್ತಲು ಆಕಾಂಕ್ಷಿಗಳು ಹಾಗೂ ರಾಜಕೀಯ ಪಕ್ಷಗಳು ಚುನಾವಣೆಗೆ ಸಜ್ಜಾಗಿರುವಂತೆ ತೋರುತ್ತಿದೆ.

ನೀಲಾನಗರ ಹೊಸ ಗ್ರಾಪಂ

ಬಾಗಲಕೋಟೆ ತಾಲೂಕಿನ ನೀಲಾನಗರಕ್ಕೆ ಮತ್ತೆ ಗ್ರಾಪಂ ಸ್ಥಾನಮಾನ ಸಿಕ್ಕಿದೆ. ಈ ಹಿಂದೆ ಶಿರೂರು ಪಟ್ಟಣ ಪಂಚಾಯಿತಿಗೆ ಸೇರ್ಪಡೆಗೊಳಿಸಿ ನೀಲಾನಗರ ಗ್ರಾಪಂ ಸ್ಥಾನ ರದ್ದುಗೊಳಿಸಲಾಗಿತ್ತು. ಗ್ರಾಮಸ್ಥರ ಭಾರಿ ವಿರೋಧದಿಂದಾಗಿ ಹೊಸದಾಗಿ ನೀಲಾನಗರ ಗ್ರಾಪಂ ರಚನೆ ಆಗಿದೆ. ಜಿಲ್ಲೆಯಲ್ಲಿ196 ಗ್ರಾಪಂಗಳ ಸಂಖ್ಯೆ ಇದ್ದು, ಕಳೆದ ಅವಧಿಯಲ್ಲಿ3,202 ಗ್ರಾಪಂ ಸದಸ್ಯ ಸ್ಥಾನಗಳಿದ್ದವು. 4 ಸ್ಥಾನ ಹೆಚ್ಚಾಗಿದ್ದು, ಇದೀಗ 3,206ಕ್ಕೆ ತಲುಪಿದೆ.

ಬಾಗಲಕೋಟೆ ಜಿಲ್ಲೆಯ ತಾಲೂಕುವಾರು ಗ್ರಾಪಂ ಮತ್ತು ಸದಸ್ಯರ ಸಂಖ್ಯೆ

ತಾಲೂಕುಗ್ರಾಮ ಪಂಚಾಯತ್‌ಗಳ ಸಂಖ್ಯೆಸದಸ್ಯರ ಸಂಖ್ಯೆ
ಬಾಗಲಕೋಟೆ29416
ಹುನಗುಂದ19266
ಇಳಕಲ್‌16275
ಬಾದಾಮಿ30483
ಗುಳೇದಗುಡ್ಡ12156
ಜಮಖಂಡಿ27518
ಬೀಳಗಿ24375
ರಬಕವಿ-ಬನಹಟ್ಟಿ11212
ತೇರದಾಳ591
ಮುಧೋಳ23414
ಒಟ್ಟು1963,206

Dailyhunt
Disclaimer: This content has not been generated, created or edited by Dailyhunt. Publisher: Vijay Karnataka