Dailyhunt
ʻಬಡವ ರಾಸ್ಕಲ್‌ʼ ಬಳಗದಿಂದ ಮತ್ತೊಂದು ಸಿನಿಮಾ: ‌ʻಮದರ್‌ ಪ್ರಾಮಿಸ್‌ʼ ಎಂದ ಡಾಲಿ ಧನಂಜಯ್!

ʻಬಡವ ರಾಸ್ಕಲ್‌ʼ ಬಳಗದಿಂದ ಮತ್ತೊಂದು ಸಿನಿಮಾ: ‌ʻಮದರ್‌ ಪ್ರಾಮಿಸ್‌ʼ ಎಂದ ಡಾಲಿ ಧನಂಜಯ್!

Vijay Karnataka 1 week ago

ಟ ಡಾಲಿ ಧನಂಜಯ್ ಹಾಗೂ ಗೆಳೆಯರು ಸೇರಿ ಮಾಡಿರುವ ಸಿನಿಮಾ 'ಮದರ್‌ ಪ್ರಾಮಿಸ್'. ತಮ್ಮದೇ ಸ್ನೇಹಿತರ ಬಳಗವೆಲ್ಲಾ ಸೇರಿಸಿಕೊಂಡು ಸಿನಿಮಾ ಮಾಡಿದ್ದು, ಡಾಲಿ ಗೆಳೆಯ ಪೂರ್ಣ ಮೈಸೂರು ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, ʻಡಾಲಿ ಪಿಕ್ಚರ್ಸ್ʼ ಸಹಯೋಗದೊಂದಿಗೆ ಡಾಲಿ ಧನಂಜಯ್ ಗೆಳೆಯ ಹರ್ಷ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ಡಾಲಿ ಧನಂಜಯ್‌ ‌ಹೊಸ ಸಿನಿಮಾ ಟೈಟಲ್‌ ಅನೌನ್ಸ್!

ಕೆಲ ದಿನಗಳ ಹಿಂದಷ್ಟೇ ಸಿನಿಮಾದ ಇಂಟ್ರೆಸ್ಟಿಂಗ್‌ ಪೋಸ್ಟರ್ ರಿಲೀಸ್ ಮಾಡಿದ್ದರು. ಆದರೆ, ಪೋಸ್ಟರ್‌ನಲ್ಲಿ ಯಾರ ಮುಖವನ್ನೂ ತೋರಿಸಿರಲಿಲ್ಲ. ಬದಲಿಗೆ, ನಟರೆಲ್ಲ ಕ್ಯಾಮೆರಾಗೆ ಹಿಮ್ಮುಖವಾಗಿ ನಿಂತಿದ್ದರು. ಸಿನಿಮಾದ ಹೆಸರನ್ನು ಸಹ ಬೇರೆ ಬೇರೆ ಭಾಷೆಗಳಲ್ಲಿ ನೀಡಲಾಗಿತ್ತು. ಜೊತೆಗೆ ಸಿನಿಮಾದ ಹೆಸರು ʻಗೆಸ್ ಮಾಡಿʼ ಎಂಬ ಸವಾಲನ್ನು ಸಹ ಚಿತ್ರತಂಡ ಪ್ರೇಕ್ಷಕರಿಗೆ ನೀಡಿತ್ತು. ಈಗ ಸಿನಿಮಾದಲ್ಲಿ ಅಭಿನಯ ಮಾಡಿರುವ ಪ್ರಮುಖ ಪಾತ್ರಧಾರಿಗಳ ಮುಖಗಳನ್ನ ರಿವೀಲ್ ಮಾಡುವುದರ ಜೊತೆಗೆ ಸಿನಿಮಾ ಟೈಟಲ್‌ ಕೂಡ ಅನೌನ್ಸ್‌ ಮಾಡಿದ್ದಾರೆ.

36 ಮುಖ್ಯ ಕಲಾವಿದರನ್ನು ಪರಿಚಯಿಸಿರುವ ಚಿತ್ರತಂಡ!

ʻಮದರ್‌ ಪ್ರಾಮಿಸ್‌ʼ ಎಂಬ ಎಮೋಷನಲ್‌ ಈ ಟೈಟಲ್‌ ಇಟ್ಕೊಂಡು ಎಮೋಷನಲ್‌, ಕಾಮಿಡಿ ಹಾಗೂ ಥ್ರಿಲ್ ಇರೋ ಕಥೆಯನ್ನ ತೆರೆ ಮೇಲೆ ತರ್ತಿದ್ದಾರೆ ನಿರ್ದೇಶಕ ಪೂರ್ಣ. ಸಿನಿಮಾದಲ್ಲಿ ಡಾಲಿ ಧನಂಜಯ ಸೇರಿದಂತೆ ನಟ ನಾಗಭೂಷಣ್‌, ಹಿರಿಯ ನಟಿ ವಿನಯಾ ಪ್ರಸಾದ್‌, ಗೀತಾ, ಗುರುದತ್‌ ಇನ್ನೂ ಅನೇಕರು ಅಭಿನಯ ಮಾಡಿದ್ದಾರೆ. ಫಸ್ಟ್‌ ಲುಕ್‌ ಪೋಸ್ಟರ್‌ನಲ್ಲಿಯೇ ಬರೋಬ್ಬರಿ 36 ಮುಖ್ಯ ಕಲಾವಿದರನ್ನು ಪರಿಚಯಿಸಿರುವ ಚಿತ್ರತಂಡ ಒಂದೂಳ್ಳೆ ಉತ್ತಮ ಕಂಟೆಂಟ್‌ ಜೂತೆಗೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಎಂಟ್ರಿ!

ಇನ್ನೂ ಈ ಸಿನಿಮಾ ಮೂಲಕ ಡಾಲಿ ಧನಂಜಯ್ ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಪೂರ್ಣ ವಹಿಸಿಕೊಂಡಿದ್ದರೆ, 'ಡೇರ್‌ ಡೆವಿಲ್‌ ಮುಸ್ತಾಫ' ಚಿತ್ರ ನಿರ್ದೇಶಕ ಶಶಾಂಕ್‌ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದಾರೆ. ರಾಹುಲ್‌ ರಾಯ್‌ ಕ್ಯಾಮೆರಾ, ನವನೀತ್‌ ಶ್ಯಾಮ್‌ ಸಂಗೀತಾ ನಿರ್ದೇಶನ ಈ ಚಿತ್ರಕ್ಕಿದೆ. ಇದರ ಜೊತೆಗೆ ಡಾಲಿ ಧನಂಜಯ್‌ ಬೇರೆ ಸಿನಿಮಾಗಳಲ್ಲಿಯೂ ಬ್ಯುಸಿ ಆಗಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka