ಬೆಂಗಳೂರು: ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಜುಲೈ 9 (ಗುರುವಾರ) ಬೆಂಗಳೂರಿನ 40 ಕ್ಕೂ ಅಧಿಕ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ಕರೆಂಟ್ ಕಡಿತವಾಗಲಿದೆ. ಈ ಬಗ್ಗೆ ಬೆಸ್ಕಾಂನಿಂದ ಮಾಹಿತಿ ನೀಡಲಾಗಿದೆ. ಗುರುವಾರ ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 4:00 ಗಂಟೆಯವರೆಗೆ 66/11 ಕೆ.ವಿ ಹೆಣ್ಣೂರು ರೋಡ ಉಪ ಕೇಂದ್ರದಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಹಲವು ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು ಎಲ್ಲೆಲ್ಲಿ?
ಹೆಣ್ಣೂರು ಬಂಡೆ, ಸಮುದ್ರಿಕಾ ಎನ್ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ತು ಜಯಂತಿ ಕಾಲೇಜು, ಕೆ. ನಾರಾಯಣಪುರ, ಬಿಳಿಶಿವಾಳೆ, ಆಶಾ ಟೌನ್‌ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‌ಶಿಪ್, ನಾಗರಗಿರಿ ಟೌನ್‌ಶಿಪ್, ಕೆ. ನಾರಾಯಣಪುರ ಕ್ರಾಸ್, ಬಿ.ಡಿ.ಎಸ್. ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಲೇಔಟ್, ಅಂಜನಪ್ಪ ಲೇಔಟ್, ಸಿ.ಎಸ್.ಐ. ಗೇಟ್, ಬೈರತಿ ಕ್ರಾಸ್, ಬೈರತಿ ಗ್ರಾಮ, ಎವರ್ಗ್ರೀನ್ ಲೇಔಟ್, ಕನಕಶ್ರೀ ಲೇಔಟ್, ಗೆದ್ದಲಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್ಮೆಂಟ್, ಹಿರೇಮಠ ಲೇಔಟ್, ಟ್ರಿನಿಟಿ ಫಾರ್ಚೂನ್, ಮೈ ಕೇರ್ ಶಾಲೆ, ಬಿ.ಎಚ್.ಕೆ. ಇಂಡಸ್ಟ್ರೀಸ್, ಜನಕಿರಾಮ್ ಲೇಔಟ್, ವಡ್ಡರಪಾಳ್ಯ, ಅನುಗ್ರಹ ಲೇಔಟ್, ಕಾವೇರಿ ಲೇಔಟ್, ಆತ್ಮ ವಿದ್ಯಾ ನಗರ, ಕೆ.ಆರ್.ಸಿ., ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಲೇಔಟ್, ಸಂಗಮ್ ಎನ್ಕ್ಲೇವ್, ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಆಂಧ್ರ ಕಾಲೋನಿ, ಮಂಜುನಾಥ ನಗರ, ಹೊರಮಾವು, ಅಗರ ಗ್ರಾಮ, ಪಾತಾಳಮ್ಮ ದೇವಸ್ಥಾನ, ಎ.ಕೆ.ಆರ್. ಶಾಲೆ, ನ್ಯೂ ಮಿಲೇನಿಯಂ ಶಾಲೆ, ಲಕ್ಕಮ್ಮ ಲೇಔಟ್, ಪ್ರಕಾಶ್ ಗಾರ್ಡನ್, ಕ್ರಿಸ್ತು ಜಯಂತಿ ಕಾಲೇಜು ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.ಕುಮಟಾದಲ್ಲಿ ಹೆಸ್ಕಾಂ ವಿದ್ಯುತ್ ವ್ಯತ್ಯಯ
ಹೆಸ್ಕಾಂ ಕುಮಟಾ ಉಪವಿಭಾಗದ 110 ಕೆ.ವಿ. ಕುಮಟಾ ಉಪಕೇಂದ್ರದಲ್ಲಿತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವುದರಿಂದ ಜು.8ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಅವಧಿಯಲ್ಲಿ 33 ಕೆ.ವಿ. ಗೋಕರ್ಣ ಮಾರ್ಗದ ಮಾದನಗೇರಿ, ಗೋಕರ್ಣ, ಬಿಜ್ಜೂರ, ತದಡಿ, ಬಂಕಿಕೊಡ್ಲ, ಗಂಗಾವಳಿ ಹಾಗೂ ಓಂ ಬೀಚ್ ಭಾಗಗಳು, 33 ಕೆ.ವಿ. ಮಿರ್ಜಾನ್ ಮಾರ್ಗದ ಮಿರ್ಜಾನ್, ನಾಗೂರ, ಖಂಡಗಾರ, ಕೋಡ್ಕಣಿ, ಯಲವಳ್ಳಿ ಭಾಗಗಳು ಹಾಗೂ 33 ಕೆ.ವಿ. ಮರಾಕಲ್ ಮಾರ್ಗದ ಸಂತೆಗುಳಿ, ಕಲ್ಲಬ್ಬೆ, ಹೊದಕೆಶಿರೂರ, ಕೂಜಳ್ಳಿ ಮತ್ತು ದಿವಳ್ಳಿ ಭಾಗಗಳಲ್ಲಿವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇದೇ ವೇಳೆ, ಕುಮಟಾ ಉಪ ವಿಭಾಗದ ನಗರ ಶಾಖೆಯ 11 ಕೆ.ವಿ. ಕುಮಟಾ ಟೌನ್ ಮಾರ್ಗದಲ್ಲಿಐಆರ್‌ಬಿ ವತಿಯಿಂದ ವಿದ್ಯುತ್ ಮಾರ್ಗ ಸ್ಥಳಾಂತರ ಕಾಮಗಾರಿ ನಡೆಯಲಿರುವುದರಿಂದ ಜು. 8ರಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಎಪಿಎಂಸಿ, ಹೊನ್ಮಾವ, ಕಂಬಾರಮಕ್ಕಿ ಹಾಗೂ ಬಗ್ಗೋಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಕುಮಟಾ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
