Dailyhunt Logo
  • Light mode
    Follow system
    Dark mode
    • Play Story
    • App Story
ಭಾಗವತ ಪುರಾಣ: ಪಠಣ ಮತ್ತು ಕೇಳುವಿಕೆಯ ಪ್ರಯೋಜನಗಳು.!

ಭಾಗವತ ಪುರಾಣ: ಪಠಣ ಮತ್ತು ಕೇಳುವಿಕೆಯ ಪ್ರಯೋಜನಗಳು.!

Vijay Karnataka 2 weeks ago

ಭಾಗವತ ಪುರಾಣವು ಹಿಂದೂ ಧರ್ಮಕ್ಕೆ ಸೇರಿದ ಪ್ರಮುಖ ಪುರಾಣಗಳಲ್ಲಿ ಒಂದಾಗಿದೆ. ಭಾಗವತ ಪುರಾಣವನ್ನು ಪಠಿಸುವುದರಿಂದ ಮಾತ್ರವಲ್ಲ ಕೇಳುವುದರಿಂದಲೂ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಭಾಗವತ ಪುರಾಣವನ್ನು ಕೇಳುವುದರಿಂದ ನಮಗೆ ಯಾವೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ.?

ಭಾಗವತ ಪುರಾಣವನ್ನೊಮ್ಮೆ ಕೇಳಿ.


ಹಿಂದೂ ಧರ್ಮದ 18 ಪ್ರಮುಖ ಹಾಗೂ ಜನಪ್ರಿಯ ಪುರಾಣಗಳಲ್ಲಿ ಭಾಗವತ ಪುರಾಣವು ಮುಖ್ಯವಾಗಿದೆ. ಭಾಗವತ ಪುರಾಣವನ್ನು ಶ್ರೀಮದ್ ಭಾಗವತ, ಶ್ರೀಮದ್ ಭಾಗವತ ಮಹಾಪುರಾಣ ಅಥವಾ ಸರಳವಾಗಿ ಭಾಗವತ ಎಂದೂ ಕರೆಯಲಾಗುತ್ತದೆ. ಭಾಗವತ ಪುರಾಣವು ವೈಷ್ಣವ ಧರ್ಮಕ್ಕೆ ಸೇರಿದ ಮುಖ್ಯವಾದ ಹಾಗೂ ಕೇಂದ್ರ ಪಠ್ಯವಾಗಿದೆ. ಭಾಗವತ ಪುರಾಣವನ್ನು ಮಹರ್ಷಿ ವೇದವ್ಯಾಸರು ಸಂಸ್ಕೃತದಲ್ಲಿ ರಚಿಸಿದ ಪಠ್ಯವಾಗಿದೆ. ಇದು ವಿಷ್ಣುವಿನ ಬಗ್ಗೆ ಭಕ್ತಿಯನ್ನು ಉತ್ತೇಜಿಸುತ್ತದೆ. ಅನೇಕ ಸ್ಥಳಗಳಲ್ಲಿ ಭಾಗವತ ಪುರಾಣದ ಕಥೆಗಳನ್ನು ಆಯೋಜಿಸಲಾಗುತ್ತದೆ. ಈ ಒಂದು ಪುರಾಣವು ಹಿಂದೂ ಧರ್ಮದ ಹಲವಾರು ಕಥೆಗಳನ್ನು ಮತ್ತು ವಿಷ್ಣುವಿನ ಎಲ್ಲಾ ಅವತಾರಗಳ ಕಥೆಗಳನ್ನು ಒಳಗೊಂಡಿದೆ. ಭಕ್ತರು ಈ ಕಥೆಗಳನ್ನು ಕೇಳುವ ಮೂಲಕ ಧನ್ಯತೆಯನ್ನು ಅನುಭವಿಸುತ್ತಾರೆ. ಭಾಗವತ ಪುರಾಣವನ್ನು ಕೇಳುವುದರ ಪ್ರಯೋಜನವೇನು ಗೊತ್ತೇ.?ಮಾನಸಿಕ ಶುದ್ಧತೆ ದೊರೆಯುವುದು

ಭಾಗವತ ಪುರಾಣವನ್ನು ಒಂದೆರೆಡು ದಿನಗಳ ಕಾಲ ಪಠಿಸಿದರೆ ಅಥವಾ ಕೇಳಿದರೆ ನಿಮಗೆ ಅದರ ಪ್ರಯೋಜನವು ತಿಳಿಯದು. ನೀವು ಭಾಗವತ ಪುರಾಣವನ್ನು ನಿರಂತರವಾಗಿ 7 ದಿನಗಳ ಕಾಲ ಕೇಳುವುದರಿಂದ ಮಾನಸಿಕ ಶುದ್ದತೆಯನ್ನು ಮತ್ತು ಶುಚಿತ್ವವನ್ನು ಪಡೆದುಕೊಳ್ಳುತ್ತೀರಿ. ಭಾಗವತ ಪುರಾಣವನ್ನು 7 ದಿನಗಳ ಕಾಲ ಕೇಳುವುದರಿಂದ ಮೆದುಳು, ಮನಸ್ಸು ಮತ್ತು ಹೃದಯ ಶುದ್ಧವಾಗುವುದು ಎನ್ನುವ ನಂಬಿಕೆಯಿದೆ. PC:pexel


ಹಿಂದೂ ಧರ್ಮದ ಬಗ್ಗೆ ಮಾಹಿತಿ

​ಭಾಗವತ ಪುರಾಣದಲ್ಲಿನ ಕಥೆಯನ್ನು ಕೇಳುವುದರಿಂದ ಹಿಂದೂ ಧರ್ಮದ ಆಚಾರ ವಿಚಾರಗಳ ಬಗ್ಗೆ ಜ್ಞಾನ ಮೂಡುತ್ತದೆ. ಹಿಂದೂ ಧರ್ಮದಲ್ಲಿ ಆಚರಿಸುವಂತಹ ಆಚರಣೆಗಳು, ಪಾಲಿಸುವಂತಹ ನಿಯಮಗಳು, ತತ್ವಶಾಸ್ತ್ರ, ಬ್ರಹ್ಮಾಂಡದ ಸೃಷ್ಟಿ, ಜನನ ಮರಣ ಮತ್ತು ಪುನರ್ಜನ್ಮ, ಸಪ್ತಲೋಕಗಳ ಪರಿಚಯ, ಆತ್ಮದ ಸಂಚಾರ, ಪರಮಾತ್ಮ, ಕಾಲದ ನಿಯಂತ್ರಣ, ಹಿಂದೂ ಧರ್ಮದ ಇತಿಹಾಸ, ಭವಿಷ್ಯದ ಬಗ್ಗೆ ಸಂಕ್ಷಿಪ್ತ ತಿಳುವಳಿಕೆಯನ್ನು ನೀಡುತ್ತದೆ. ಹಿಂದೂ ಧರ್ಮದಲ್ಲಿನ ಪ್ರತಿಯೊಂದು ಆಚರಣೆ, ಸಂಸ್ಕೃತಿಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಭಾಗವತ ಪುರಾಣವನ್ನು ಕೇಳಬೇಕು.PC: pexel


ಈ ದೋಷಗಳಿಂದ ಮುಕ್ತಿ

ಭಾಗವತ ಕಥೆಯನ್ನು ಕೇಳುವುದರಿಂದ ಜೀವನದಿಂದ ಹತಾಶೆ ಮತ್ತು ನಕಾರಾತ್ಮಕತೆಯ ಭಾವನೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಯಶಸ್ಸಿಗೆ ಅಗತ್ಯವಾದ ಸಕಾರಾತ್ಮಕತೆ ಮತ್ತು ಉತ್ಸಾಹವನ್ನು ತುಂಬುತ್ತದೆ. ಭಾಗವತ ಪುರಾಣವನ್ನು ವಿಮೋಚನೆಯ ಪಠ್ಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಪೂರ್ವಜರ ಶಾಂತಿಗಾಗಿ ಇದನ್ನು ಪಠಿಸುವುದು ಉತ್ತಮ. ಇದರಿಂದ, ಎಲ್ಲಾ ರೀತಿಯ ಗ್ರಹ ದೋಷಗಳು, ಮಂಗಳ ದೋಷ, ಪಿತೃ ದೋಷ, ಶನಿ ದೋಷ, ರಾಹು ದೋಷ ಮತ್ತು ಎಲ್ಲಾ ರೀತಿಯ ದೋಷಗಳು ನಿವಾರಣೆಯಾಗುವುದು.PC: pexel


ದುಃಖ, ಮಾನಸಿಕ ಒತ್ತಡ ನಿವಾರಣೆಯಾಗುವುದು

ಭಾಗವತ ಪುರಾಣದಲ್ಲಿನ ಕಥೆಗಳನ್ನು ಕೇಳುವುದರಿಂದ ಮಾನಸಿಕ ಮತ್ತು ದೈಹಿಕ ದುಃಖಗಳು ಕಡಿಮೆಯಾಗುವುದು. ಒತ್ತಡದಿಂದ ಮುಕ್ತಿ ದೊರೆಯುವುದು. ಜೀವನದುದ್ದಕ್ಕೂ ಸಂತೋಷ ಮತ್ತು ಶಾಂತಿ ಎಂಬುದು ದೊರೆಯುವುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುವುದು. ಕೌಟುಂಬಿಕ ಅಶಾಂತಿಯನ್ನು ನಿವಾರಣೆ ಮಾಡಿ, ಹಣಕಾಸಿನ ಸಮೃದ್ಧಿಯನ್ನು ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಸಹಕರಿಸುವುದು. ಕುಟುಂಬದ ಸದಸ್ಯರೊಂದಿಗೆ ಕುಳಿತು ಭಾಗವತ ಪುರಾಣವನ್ನು ಕೇಳುವುದರಿಂದ ಎಲ್ಲಾ ಸದಸ್ಯರ ಯೋಗಕ್ಷೇಮ ವೃದ್ಧಿಯಾಗುವುದು.PC: pexel


ಆಸೆಗಳು ಈಡೇರುವುದು

ಭಾಗವತ ಪುರಾಣವು ವ್ಯಕ್ತಿಯ ಆಸೆಗಳನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾವ ವ್ಯಕ್ತಿ ಭಾಗವತ ಪುರಾಣವನ್ನು ಭಕ್ತಿಯಿಂದ ಕೇಳುತ್ತಾನೆ ಅಂತಹ ವ್ಯಕ್ತಿಯ ಆಸೆಗಳು ಶೀಘ್ರದಲ್ಲೇ ಈಡೇರುವುದು. ಇದನ್ನು ಕೇಳುವ ಮೂಲಕ ಎಲ್ಲಾ ಜೀವಿಗಳ ಕಲ್ಯಾಣ ಸಾಧ್ಯವಾಗುವುದು. ನೀವು ಯಾವುದೇ ಒಂದು ನಿರ್ದಿಷ್ಟವಾದ ಆಸೆಯನ್ನು ಇಟ್ಟುಕೊಂಡಿದ್ದು, ಆ ಆಸೆಯನ್ನು ಪೂರೈಸಿಕೊಳ್ಳುವ ಮನಸ್ಸಿನಲ್ಲಿದ್ದರೆ ಅಂತಹ ಪರಿಸ್ಥಿತಿಯಲ್ಲಿ ನೀವು ನಿರಂತರವಾಗಿ 7 ದಿನಗಳ ಭಾಗವತ ಪುರಾಣವನ್ನು ಕೇಳಬೇಕು.PC: pexel


ಪಾಪಗಳನ್ನು ಕಳೆಯುವುದು

ಭಾಗವತ ಪುರಾಣವನ್ನು ನೀವು ಕೇಳುವುದರಿಂದ ಜನ್ಮ ಜನ್ಮಗಳ ಪಾಪಗಳನ್ನು ಕಳೆಯುವುದು. ಪಾಪ - ಕರ್ಮಗಳಿಂದ ನಮ್ಮನ್ನು ಮುಕ್ತಗೊಳಿಸುವುದು ಮತ್ತು ಮೋಕ್ಷವನ್ನು ಕರುಣಿಸುವುದು ಎನ್ನುವ ನಂಬಿಕೆಯಿದೆ. ಇದು ಎಲ್ಲಾ ಜೀವಿಗಳಲ್ಲಿ ಲೌಕಿಕ ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುವುದು. ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸುವ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಾಗುವಂತೆ ಮಾಡುವುದು.
PC: pexel


Dailyhunt
Disclaimer: This content has not been generated, created or edited by Dailyhunt. Publisher: Vijay Karnataka