'ಭಾಗ್ಯದ ಲಕ್ಷ್ಮಿ ಬಾರಮ್ಮ' ಹಾಡು ಸಾಕ್ಷಾತ್ ಲಕ್ಷ್ಮೀ ದೇವಿಯನ್ನು ಆಹ್ವಾನಿಸುವ ಭಕ್ತಿಗೀತೆಯಾಗಿದೆ. ವಿಶೇಷವಾಗಿ ಪ್ರತೀ ಶುಕ್ರವಾರ ಪೂಜೆಯ ವೇಳೆ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಲು ಮತ್ತು ಆಕೆಯ ಆಶೀರ್ವಾದವನ್ನು ಕೋರಲು ಈ ಹಾಡನ್ನು ಹಾಡಲಾಗುವುದು.
ಇದು ಮನೆಯಲ್ಲಿ ಐಶ್ವರ್ಯ, ಸಂಪತ್ತು, ಆಂತರಿಕ ಶಾಂತಿ ಹಾಗೂ ನೆಮ್ಮದಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ. ಈ ಹಾಡನ್ನು ತಪ್ಪಾಗದಂತೆ ಹಾಡಲು ಇಲ್ಲಿದೆ ಲಿರಿಕ್ಸ್...
ಭಕ್ತಿಗೀತೆ: ಭಾಗ್ಯದ ಲಕ್ಷ್ಮಿ ಬಾರಮ್ಮ
ಕೀರ್ತನಕಾರರು : ಪುರಂದರದಾಸರು
ರಾಗ : ಮಧ್ಯಮಾವತಿ
ತಾಳ : ಆದಿ
Bhagyada Lakshmi Baramma Lyrics In Kannada
ಪಲ್ಲವಿ
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌ-ಭಾಗ್ಯದಾ ಲಕ್ಷ್ಮೀ ಬಾರಮ್ಮಾ ॥
ಚರಣಂ 1
ಹೆಜ್ಜೆಯೆ ಮೇಲೇ ಹೆಜ್ಜೆಯ ನಿಕ್ಕುತ
ಗೆಜ್ಜೆ ಕಾಲ್ಗಳಾ ಧ್ವನಿಯ ತೋರುತ (ಮಾಡುತ)
ಸಜ್ಜನ ಸಾಧೂ ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ ॥
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌ-ಭಾಗ್ಯದಾ ಲಕ್ಷ್ಮೀ ಬಾರಮ್ಮಾ ॥
ಚರಣಂ 2
ಕನಕಾವೃಷ್ಟಿಯ ಕರೆಯುತ ಬಾರೇ
ಮನಕಾಮನೆಯಾ ಸಿದ್ಧಿಯ ತೋರೆ ।
ದಿನಕರಕೋಟೀ ತೇಜದಿ ಹೊಳೆಯುವ
ಜನಕರಾಯನಾ ಕುಮಾರಿ ಬೇಗ ॥
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌ-ಭಾಗ್ಯದಾ ಲಕ್ಷ್ಮೀ ಬಾರಮ್ಮಾ ॥
ಚರಣಂ 3
ಅತ್ತಿತ್ತಗಳದೆ ಭಕ್ತರ ಮನೆಯಲಿ
ನಿತ್ಯ ಮಹೋತ್ಸವ ನಿತ್ಯ ಸುಮಂಗಲ ।
ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ ॥
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌ-ಭಾಗ್ಯದಾ ಲಕ್ಷ್ಮೀ ಬಾರಮ್ಮಾ ॥
ಚರಣಂ 4
ಸಂಖ್ಯೇ ಇಲ್ಲದ ಭಾಗ್ಯವ ಕೊಟ್ಟು
ಕಂಕಣ ಕೈಯಾ ತಿರುವುತ ಬಾರೆ ।
ಕುಂಕುಮಾಂಕಿತೆ ಪಂಕಜ ಲೋಚನೆ
ವೇಂಕಟ ರಮಣನ ಬಿಂಕದರಾಣೀ ॥
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌ-ಭಾಗ್ಯದಾ ಲಕ್ಷ್ಮೀ ಬಾರಮ್ಮಾ ॥
ಚರಣಂ 5
ಸಕ್ಕೆರೆ ತುಪ್ಪದ ಕಾಲುವೆಹರಿಸಿ
ಶುಕ್ರವಾರದಾ ಪೂಜೆಯ ವೇಳೆಗೆ ।
ಅಕ್ಕೆರೆಯುಳ್ಳ ಅಳಗಿರಿ ರಂಗನ
ಚೊಕ್ಕ ಪುರಂದರ ವಿಠ್ಠಲನ ರಾಣೀ ॥
ಭಾಗ್ಯದಾ ಲಕ್ಷ್ಮೀ ಬಾರಮ್ಮಾ
ನಮ್ಮಮ್ಮ ನೀ ಸೌ-ಭಾಗ್ಯದಾ ಲಕ್ಷ್ಮೀ ಬಾರಮ್ಮಾ ॥
ಇವುಗಳನ್ನೂ ಓದಿ: ಮಾನಸಿಕ ನೆಮ್ಮದಿಗಾಗಿ ಶ್ರೀ ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿ|
ಐಶ್ವರ್ಯವಂತರಾಗಲು ಐಶ್ವರ್ಯ ಲಕ್ಷ್ಮಿ ಅಷ್ಟೋತ್ತರ ಶತ ನಾಮಾವಳಿ|
ಸರ್ವ ಸಿದ್ಧಿಗಾಗಿ ಇಂದಿರಾ ಅಷ್ಟೋತ್ತರ ಶತನಾಮ ಸ್ತೋತ್ರ|
ಲಕ್ಷ್ಮಿ ನಾರಾಯಣರ ಕೃಪೆಗಾಗಿ ಶ್ರೀ ಲಕ್ಷ್ಮೀ ಹೃದಯ ಸ್ತೋತ್ರ|

