Dailyhunt Logo
  • Light mode
    Follow system
    Dark mode
    • Play Story
    • App Story
ಚತುರ್ಗ್ರಹಿ ಯೋಗ 2026: ಮೀನ ಸೇರಿ ಈ 5 ರಾಶಿಯವರಿಗೆ ಸಕಲ ಸೌಕರ್ಯ ಸಂಪತ್ತು..!

ಚತುರ್ಗ್ರಹಿ ಯೋಗ 2026: ಮೀನ ಸೇರಿ ಈ 5 ರಾಶಿಯವರಿಗೆ ಸಕಲ ಸೌಕರ್ಯ ಸಂಪತ್ತು..!

Vijay Karnataka 3 months ago

ಆಗಸ್ಟ್ 12ರಂದು 4 ಶಕ್ತಿಶಾಲಿ ಗ್ರಹಗಳು ಕಟಕ ರಾಶಿಯಲ್ಲಿ ಒಟ್ಟಿಗೆ ಸೇರಿ ಚತುರ್ಗ್ರಹಿ ಯೋಗವನ್ನು ಸೃಷ್ಟಿಸುವುದು. ಈ ಯೋಗ ಕೆಲ ರಾಶಿಯವರಿಗೆ ಅಪಾರ ಸಂಪತ್ತು, ಸೌಕರ್ಯಗಳನ್ನು ತಂದುಕೊಡುವುದು. ಆ ಅದೃಷ್ಟ ರಾಶಿಗಳು ಯಾವುವು ಎಂದು ತಿಳಿಯಿರಿ.

​ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹದ ಸಂಚಾರ ಮುಖ್ಯವಾಗಿದೆ.
ಆಗಸ್ಟ್ 12ರಂದು ಕಟಕ ರಾಶಿಯಲ್ಲಿ ನಾಲ್ಕು ಗ್ರಹಗಳು ಸಂಧಿಸುತ್ತವೆ. ಕಟಕ ರಾಶಿಯಲ್ಲಿ ಗುರು, ಬುಧ, ಸೂರ್ಯ ಮತ್ತು ಚಂದ್ರ ಗ್ರಹಗಳು ಒಟ್ಟಿಗೆ ಸೇರಿ ಸಂಚಾರ ಮಾಡುವುದು. ಈ 4 ಗ್ರಹಗಳು ಕಟಕ ರಾಶಿಯಲ್ಲಿ ಒಟ್ಟಿಗೆ ಸೇರಿ ಸಂಚಾರ ಮಾಡುವುದರಿಂದ ಚತುರ್ಗ್ರಹ ಯೋಗವನ್ನು ರೂಪಿಸುತ್ತವೆ. ಜುಲೈ 18, 2026ರಂದು ಸೂರ್ಯ ಕಟಕ ರಾಶಿಗೆ ಸಂಚಾರ ಮಾಡುತ್ತದೆ. ಬುಧ ಕೂಡ ಕಟಕ ರಾಶಿಗೆ ಆಗಸ್ಟ್ 6ರಂದು ಸಾಗುವುದು. ನಂತರ ಆಗಸ್ಟ್ 12 ರಂದು ಚಂದ್ರ ಗ್ರಹವೂ ಕಟಕ ರಾಶಿಗೆ ಸಾಗಲಿದೆ. ಈ ಗ್ರಹಗಳ ಸಂಯೋಗದಿಂದ ಸೃಷ್ಟಿಯಾದ ಚತುರ್ಗ್ರಹ ಯೋಗ ಕೆಲವು ರಾಶಿಗಳಿಗೆ ಅದ್ಭುತ ಪ್ರಯೋಜನಗಳನ್ನು ನೀಡಲಿದೆ. ಹಾಗಾದರೆ ಈ ಸಮಯದಲ್ಲಿ ವೃತ್ತಿಪರ ಜೀವನದಿಂದ ಹಿಡಿದು ವೈಯಕ್ತಿಕ ಜೀವನದವರೆಗೆ ಎಲ್ಲದರಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವ ರಾಶಿಗಳು ಯಾವುವು..? ಚತುರ್ಗ್ರಹ ಯೋಗದಿಂದಾಗಿ ಯಾವ ರಾಶಿಯವರ ಅದೃಷ್ಟ ಖುಲಾಯಿಸಲಿದೆ ಎಂದು ತಿಳಿಯೋಣ.ಮೀನ ರಾಶಿ

ಚತುರ್ಗ್ರಹ ಯೋಗದಿಂದಾಗಿ ಮೀನ ರಾಶಿಯವರ ಆರ್ಥಿಕ ಜೀವನ ಸಾಕಷ್ಟು ಸುಧಾರಿಸುವುದು. ನಿಮಗೆ ಸಾಕಷ್ಟು ಲಾಭ ಸಿಗಲಿದೆ. ವ್ಯವಹಾರದಲ್ಲಿ ಅನಿರೀಕ್ಷಿತ ಏಳಿಗೆ ಸಿಗುವುದು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಇದು ಉತ್ತಮ ಸಮಯವಾಗಿರುತ್ತದೆ. ಶುಕ್ರನಿಂದ ನಿಮಗೆ ಅನೇಕ ಪ್ರಯೋಜನಗಳು ಸಿಗುತ್ತವೆ. ವಿದೇಶದಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಲಾಭ ಉಂಟು. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಇದು ಮನಸ್ಸಿಗೆ ಶಾಂತಿಯನ್ನು ನೀಡುವ ಸಮಯ. ದಾಂಪತ್ಯ ಜೀವನದಲ್ಲಿ ಸಂತೋಷ ಸಿಗಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯುತ ವಾತಾವರಣವನ್ನು ನೀವು ಕಾಣುವಿರಿ. ಕುಟುಂಬದೊಂದಿಗೆ ಪ್ರಯಾಣಿಸಲು ಅವಕಾಶಗಳು ಉಂಟು. ಮದುವೆಯಾಗಲು ಯೋಚಿಸುತ್ತಿರುವವರಿಗೆ ಸಾಕಷ್ಟು ಅವಕಾಶಗಳಿವೆ.


ಮಕರ ರಾಶಿ

ಮಕರ ರಾಶಿಯ ಜನರು ಈ ಚತುರ್ಗ್ರಹ ಯೋಗದಿಂದ ಕೆಲಸದಲ್ಲಿ ಅನೇಕ ಸಾಧನೆಗಳನ್ನು ಸಾಧಿಸುವರು. ನಿಮ್ಮ ಪ್ರಯತ್ನಗಳಿಗೆ ಕೆಲಸದಲ್ಲಿ ಮೆಚ್ಚುಗೆ ದೊರೆಯಲಿದೆ. ನಿಮ್ಮ ಸಹೋದ್ಯೋಗಿಗಳಿಂದ ಪ್ರಶಂಸೆಯನ್ನು ನೀವು ಪಡೆಯುವಿರಿ. ಈ ಅವಧಿಯಲ್ಲಿ ಉದ್ಯಮಿಗಳು ಸಹ ಹೆಚ್ಚಿನ ಲಾಭವನ್ನು ಕಾಣುವರು. ಮಾರ್ಕೆಟಿಂಗ್, ಮಾಧ್ಯಮ ಮತ್ತು ಬರವಣಿಗೆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಅನಿರೀಕ್ಷಿತ ಲಾಭವಿದೆ. ಅಲ್ಲದೆ ಹಣದ ವಿಷಯಗಳ ಮೇಲೆ ಕೇಂದ್ರೀಕರಿಸುವುದು ಒಳ್ಳೆಯದು. ಅದೇ ರೀತಿ ಸಾಮಾಜಿಕ ವಿಷಯಗಳ ಮೇಲೆ ಕೇಂದ್ರೀಕರಿಸುವುದು ಒಳ್ಳೆಯದು. ಸಾಲದ ಸಮಸ್ಯೆಗಳು ಗಮನಾರ್ಹವಾಗಿ ಕಡಿಮೆಯಾಗುವ ಸಾಧ್ಯತೆಯಿದೆ. ವಿದೇಶಕ್ಕೆ ಹೋಗಲು ಬಯಸುವವರಿಗೆ ಅದಕ್ಕಾಗಿ ಅವಕಾಶಗಳು ಸಿಗುತ್ತವೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿಯ ಕ್ಷಣಗಳು ಇರುತ್ತವೆ.


ಧನು ರಾಶಿ

ಧನು ರಾಶಿಯವರಿಗೆ ಚತುರ್ಗ್ರಹ ಯೋಗದಿಂದ ಅದೃಷ್ಟ ಒಲಿದು ಬರುವುದು. ನಿಮ್ಮ ಜೀವನದಲ್ಲಿ ಇದ್ದ ಹಣದ ಸಮಸ್ಯೆಗಳು ಮಾಯವಾಗುತ್ತವೆ. ನಿಮ್ಮ ವೃತ್ತಿಜೀವನದಲ್ಲಿ ಹೆಸರು ಮತ್ತು ಖ್ಯಾತಿಯನ್ನು ಸರಾಗವಾಗಿ ಪಡೆಯುವಿರಿ. ನೀವು ಇತರರ ವಿಶ್ವಾಸವನ್ನು ಬೇಗನೆ ಗಳಿಸುವ ಸಮಯ ಇದು. ಈ ಅವಧಿಯಲ್ಲಿ ವ್ಯವಹಾರದಲ್ಲಿರುವವರು ಅನಿರೀಕ್ಷಿತ ಲಾಭವನ್ನು ಪಡೆಯುವರು. ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಬಯಸಿದ ಉದ್ಯೋಗ ಸಿಗುತ್ತದೆ. ಎಲ್ಲಾ ಆರ್ಥಿಕ ಸಮಸ್ಯೆಗಳು ಗುರು ಕೃಪೆಯಿಂದ ಮಾಯವಾಗುತ್ತವೆ.


ವೃಶ್ಚಿಕ ರಾಶಿ

​ಚತುರ್ಗ್ರಹಿ ಯೋಗದಿಂದ ವೃಶ್ಚಿಕ ರಾಶಿಯವರಿಗೆ ಖ್ಯಾತಿ ಮತ್ತು ಸಂಪತ್ತು ಸಿಗಲಿದೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಕೆಲಸದಲ್ಲಿ ಸಾಧನೆ ಮಾಡುವುದು ಸುಲಭವಾಗುವುದು. ಹಿಂದಿನ ಹೂಡಿಕೆಗಳು ನಿಮಗೆ ಅನಿರೀಕ್ಷಿತ ಲಾಭವನ್ನು ತಂದುಕೊಡುತ್ತವೆ. ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಹೊಸ ಹೂಡಿಕೆಗಳನ್ನು ಮಾಡುವಿರಿ. ಜಂಟಿ ಉದ್ಯಮದಲ್ಲಿರುವವರಿಗೆ ಉತ್ತಮ ಪ್ರಯೋಜನಗಳು ಉಂಟು. ವೈವಾಹಿಕ ಜೀವನ ತುಂಬಾ ಸಂತೋಷದಿಂದ ಕೂಡಿರಲಿದೆ. ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು. ನೆಮ್ಮದಿಯ ಜೀವನ ನಡೆಸಲು ಇದು ತುಂಬಾ ಅನುಕೂಲಕರ ಸಮಯ.


ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಚತುರ್ಗ್ರಹ ಯೋಗ ಬೇಡಿದ ವರವನ್ನು ನೀಡುವುದು. ಈ ಸಮಯದಲ್ಲಿ ನೀವು ಮಾಡುವ ಕಾರ್ಯಗಳು ದುಪ್ಪಟ್ಟು ಲಾಭವನ್ನು ತಂದುಕೊಡುತ್ತವೆ. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು. ಉದ್ಯೋಗ ಸ್ಥಳದಲ್ಲಿ ನೀವು ಮಾಡುವ ಕಾರ್ಯಗಳಿಗೆ ಮೆಚ್ಚುಗೆ ಸಿಗಲಿದೆ. ಆರ್ಥಿಕ ಸಂಕಷ್ಟ ದೂರವಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುವುದು. ನಿಮ್ಮೆಲ್ಲಾ ಕಷ್ಟಗಳು ಮಾಯವಾಗುತ್ತವೆ. ಉದ್ಯೋಗ ಸ್ಥಳದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳು ಉಂಟು. ಒಟ್ಟಾರೆಯಾಗಿ ಕನ್ಯಾ ರಾಶಿಯವರಿಗೆ ಚತುರ್ಗ್ರಹ ಯೋಗ ಸಾಕಷ್ಟು ಶುಭ ಫಲಗಳನ್ನುನ ನೀಡುವುದು.


Dailyhunt
Disclaimer: This content has not been generated, created or edited by Dailyhunt. Publisher: Vijay Karnataka