Dailyhunt Logo
  • Light mode
    Follow system
    Dark mode
    • Play Story
    • App Story
ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕುಖ್ಯಾತಿಗೆ ಒಳಗಾದ ಬಾಲಕ ವೈಭವ್ ಸೂರ್ಯವಂಶಿ!

ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕುಖ್ಯಾತಿಗೆ ಒಳಗಾದ ಬಾಲಕ ವೈಭವ್ ಸೂರ್ಯವಂಶಿ!

Vijay Karnataka 4 months ago

ಲಂಡನ್ : ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಸದ್ಯದ ಬ್ಯಾಟಿಂಗ್ ಸೆನ್ಸೇಸನ್ ವೈಭವ್ ಸೂರ್ಯವಂಶಿ, ಪಾದಾರ್ಪಣೆಯನ್ನು ಮಾಡಿದ್ದಾರೆ. ಅಭಿಷೇಕ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ, ಬರಸಿಡಿಲ ಎರಡು ಸಿಕ್ಸರ್ ಸಿಡಿಸಿದರೂ, ಬೇಗನೇ ಔಟಾಗಿ ನಿರಾಶೆ ಮೂಡಿಸಿದ್ದಾರೆ.

ಜೊತೆಗೆ, ಚೊಚ್ಚಲ ಪಂದ್ಯದಲ್ಲೇ ಕುಖ್ಯಾತಿಗೆ ಒಳಗಾಗಿದ್ದಾರೆ.

ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ, ಬ್ಯಾಟಿಂಗ್ ಆಯ್ದುಕೊಂಡ ಶ್ರೇಯಸ್ ಅಯ್ಯರ್ ಪಡೆ, ಇಪ್ಪತ್ತು ಓವರ್'ನಲ್ಲಿ ಏಳು ವಿಕೆಟ್ ಕಳೆದುಕೊಂಡು 190 ರನ್ ಗಳಿಸುವ ಮೂಲಕ ಉತ್ತಮ ಸ್ಕೋರ್ ಅನ್ನು ಪೇರಿಸಿದೆ. ಇಂಗ್ಲೆಂಡ್ ಸದ್ಯ ಚೇಸ್ ಮಾಡುತ್ತಿದ್ದು, ಸದ್ಯದ ಮಾಹಿತಿಯ ಪ್ರಕಾರ (ರಾತ್ರಿ 9.35) ಮೂರು ವಿಕೆಟ್ ಕಳೆದುಕೊಂಡು, 67 ರನ್ ಗಳಿಸಿದೆ.

ಸ್ಟಂಪ್ ಆಗಿ ಔಟಾದ ಮೊದಲ ಕ್ರಿಕೆಟರ್ ವೈಭವ್ ಸೂರ್ಯವಂಶಿ

ತಮ್ಮ ಎಂದಿನ ಶೈಲಿಯಲ್ಲೇ ಇನ್ನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ, ಹತ್ತು ಬಾಲ್'ನಲ್ಲಿ ಹದಿನಾಲ್ಕು ರನ್ ಬಾರಿಸಿ, ವಿಲ್ ಜ್ಯಾಕ್ಸ್'ಗೆ ವಿಕೆಟ್ ಒಪ್ಪಿಸಿದ್ದಾರೆ. ಅವರ ಹದಿನಾಲ್ಕು ರನ್ನಿನಲ್ಲಿ ಎರಡು ಸಿಕ್ಸರ್ ಇದ್ದವು. ವೈಭವ್, ಜ್ಯಾಕ್ಸ್ ಬೌಲಿಂಗ್'ನಲ್ಲಿ ಜೋಸ್ ಬಟ್ಲರ್ ಅವರಿಂದ ಸ್ಟಂಪ್ ಆಗಿ ಔಟಾದರು. ಆಮೂಲಕ, ಪಾದಾರ್ಪಣೆಯ ಪಂದ್ಯದಲ್ಲಿ ಸ್ಟಂಪ್ ಆಗಿ ಪೆವಲಿಯನ್ ಸೇರಿದ ಮೊದಲ ಕ್ರಿಕೆಟರ್ ಎನ್ನುವ ಕುಖ್ಯಾತಿಗೆ ವೈಭವ್ ಸೂರ್ಯವಂಶಿ ಪಾತ್ರರಾದರು.

ವೈಭವ್ ಸೂರ್ಯವಂಶಿಗೆ ಸ್ಥಾನ ಸಿಗದಿದ್ದಕ್ಕೆ ಹಿರಿಯರ ಆಕ್ಷೇಪ
ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಸ್ಟಂಪ್ ಮೂಲಕ ಔಟಾದ ಮೊದಲ ಬ್ಯಾಟರ್ ವೈಭವ್ ಸೂರ್ಯವಂಶಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ದದ ಮೊದಲ ಟಿ20 ಪಂದ್ಯ, ಮಳೆಯಿಂದ ರದ್ದಾಗಿತ್ತು. ಮೊದಲ ಪಂದ್ಯದಲ್ಲಿ, ವೈಭವ್ ಸೂರ್ಯವಂಶಿಯನ್ನು ಆಡಿಸದೇ ಇದ್ದದ್ದು, ಭಾರೀ ಟೀಕೆಗೆ ಗುರಿಯಾಗಿತ್ತು. ರವಿಶಾಸ್ತ್ರಿ ಆದಿಯಾಗಿ, ಹಲವು ಮಾಜಿ ಕ್ರಿಕೆಟ್ ಆಟಗಾರರು, ಹೆಡ್ ಕೋಚ್ ಗೌತಂ ಗಂಭೀರ್ ನಿರ್ಧಾರವನ್ನು ಪ್ರಶ್ನಿಸಿದ್ದರು. ಈ ಎಲ್ಲಾ ಒತ್ತಡದ ಮಧ್ಯೆ, ಸೂರ್ಯವಂಶಿಗೆ ಅಂತಾರಾಷ್ಟ್ರೀಯ ಪಂದ್ಯ ಪಾದಾರ್ಪಣೆ ಮಾಡಲು ಗಂಭೀರ್ ಅವಕಾಶವನ್ನು ನೀಡಿದ್ದರು.

ಉತ್ತಮ ಆರಂಭದ ನಂತರ, ಉತ್ತಮ ಮೂರನೇ ವಿಕೆಟ್ ಜೊತೆಯಾಟ

ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ, ಮೊದಲ ವಿಕೆಟ್'ಗೆ ಐವತ್ತು ರನ್ನುಗಳ ಜೊತೆಯಾಟವನ್ನು ನೀಡಿದ್ದರು. ಇದಾದ ನಂತರ, ವಿಕೆಟ್ ಕೀಪರ್ ಇಶಾನ್ ಕಿಶನ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ನಡುವೆ, 65 ರನ್ನುಗಳ ಜೊತೆಯಾಟ ಬಂತು. ಭಾರತದ ಪರವಾಗಿ, ಅಭಿಷೇಕ್ ಶರ್ಮಾ 43, ಇಶಾನ್ ಕಿಶನ್ 49, ಶ್ರೇಯಸ್ ಅಯ್ಯರ್ 37, ತಿಲಕ್ ವರ್ಮಾ 24 ರನ್ ಹೊಡೆದರು.

ಐಪಿಎಲ್'ನಲ್ಲಿ ಸಹ ಆಟಗಾರನ ಎಸೆತ ಸಿಕ್ಸ್ ಅಟ್ಟುವ ಮೂಲಕ ಸಿಕ್ಸರ್ ಆರಂಭ

ಮ್ಯಾಂಚೆಸ್ಟರ್'ನಲ್ಲಿ (ಓಲ್ಡ್ ಟ್ರಾಫರ್ಡ್) ನಲ್ಲಿ ಇಂಗ್ಲೆಂಡ್ ವಿರುದ್ದದ ಎರಡನೇ ಟಿ20 ಪಂದ್ಯದಲ್ಲಿ, ಅಂತಾರಾಷ್ಟ್ರೀಯ ಕ್ಯಾಪ್ ಪಡೆಯುವ ಮೂಲಕ, ವೈಭವ್ ಸೂರ್ಯವಂಶಿ, ಭಾರತ ತಂಡವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಆಮೂಲಕ, ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದೀರ್ಘ ಕಾಲದ ದಾಖಲೆಯನ್ನು ಇವರು ಮುರಿದರು. ಐಪಿಎಲ್'ನಲ್ಲಿ, ತಮ್ಮ ಸಹ ಆಟಗಾರ ಜೋಫ್ರಾ ಆರ್ಚರ್ ಅವರ ಎಸೆತವನ್ನು ಸಿಕ್ಸರ್'ಗೆ ಅಟ್ಟುವ ಮೂಲಕ, ಸಿಕ್ಸರ್ ಅಭಿಯಾನವನ್ನು ವೈಭವ್ ಸೂರ್ಯವಂಶಿ ಆರಂಭಿಸಿದರು. ಲೆಂತ್'ಆಗಿ ಬಂದ ಬಾಲ್ ಅನ್ನು ಮಂಡಿಯೂರಿ ವಿಕೆಟ್ ಕೀಪರ್ ತಲೆಯ ಮೇಲೆ ಸಿಕ್ಸರ್ ಅನ್ನು ಸೂರ್ಯವಂಶಿ ಸಿಡಿಸಿದರು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka