ಬಾಗಲಕೋಟೆ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೆಣೆದಿರುವ ಬಿಜೆಪಿ, ಪ್ರಚಾರಕ್ಕೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಸಮ್ಮತಿಸುವ ಮೂಲಕ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ.ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಬುಧವಾರ ಚುನಾವಣೆ ಉಸ್ತುವಾರಿ ಗಳ ಸಭೆ ನಡೆಸಿ ಸಚಿವರಿಗೂ ಟಾಸ್ಕ್ ಕೊಟ್ಟಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಸ್ತಾರಕರ ಸಭೆ ನಡೆಸಿ ಗೇಮ್ ಪ್ಲ್ಯಾನ್ ಸಿದ್ಧಪಡಿಸಿದ್ದರು. ಏತನ್ಮಧ್ಯೆ ಗುರುವಾರ ಅಖಾಡಕ್ಕೆ ಯತ್ನಾಳ ಎಂಟ್ರಿ ಕೊಡುವ ಮೂಲಕ ಬಿಜೆಪಿ ಮತಗಳಿಕೆ ರಾಜಕೀಯಕ್ಕೆ ಹೊಸ ದಿಕ್ಕು ತೋರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮತಗಳಿಕೆ ಪ್ಲ್ಯಾನ್
ಉಪ ಚುನಾವಣೆ ಭರಾಟೆ ಶುರುವಾಗುತ್ತಿದ್ದಂತೆ ಪ್ರಚಾರಕ್ಕೆ ಯತ್ನಾಳ ಕರೆತರಬೇಕು ಎಂಬ ಬೇಡಿಕೆ ಕಾರ್ಯಕರ್ತರಲ್ಲಿತ್ತು. ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಯತ್ನಾಳ ಕೇಸರಿಯ ಬ್ರ್ಯಾಂಡೆಡ್ ನಾಯಕ. ಸಾವಿರಾರು ಅಭಿಮಾನಿಗಳು ಎರಡೂ ಜಿಲ್ಲೆಯಲ್ಲಿದ್ದಾರೆ. ಪ್ರಬಲ ಹಿಂದುತ್ವ ಪ್ರತಿಪಾದಿಸುವ ಯತ್ನಾಳ ಯುವ ಜನತೆ ಮತ ಸೆಳೆಯಬಲ್ಲರು. ಹೀಗಾಗಿ ಯತ್ನಾಳ ಕರೆತರಬೇಕು ಎಂಬ ಒತ್ತಾಯ ಮುಖಂಡರಲ್ಲೂಇತ್ತು.
ಇತ್ತೀಚೆಗೆ ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ '' ಪ್ರಚಾರಕ್ಕೆ ಯಾರೇ ಬಂದರೂ ಸ್ವಾಗತ'' ಎಂದು ಹೇಳಿ ಯತ್ನಾಳ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಜಿಲ್ಲೆಯ ಸ್ಥಳೀಯ ಮುಖಂಡರಲ್ಲಿ ಈ ಮಾತು ಉತ್ಸಾಹ ಮೂಡಿಸಿತ್ತು. ಪಕ್ಷದ ಹೈಕಮಾಂಡ್ ಅನುಮೋದನೆ ದೊರೆತ ನಂತರವೇ ಯತ್ನಾಳ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ನಾಲ್ಕು ದಿನ ಬಾಗಲಕೋಟೆ ಯಲ್ಲಿ ವಾಸ್ತವ್ಯ ಹೂಡಿದ್ದ ರಾಜ್ಯಾಧ್ಯಕ್ಷ ವಿಜಯೇಂದ್ರ ಬುಧವಾರ ಬೆಂಗಳೂರಿಗೆ ತೆರಳಿದರು. ಇತ್ತ ಯತ್ನಾಳ ಪ್ರಚಾರದ ಅಖಾಡಾಕ್ಕೆ ಧುಮುಕಿದ್ದಾರೆ.
ಘರ್ ವಾಪ್ಸಿ ?
ಕ್ಷೇತ್ರದಲ್ಲಿ ರೋಡ್ ಶೋ
ಬಾಗಲಕೋಟೆ ಯಲ್ಲಿ ಪಂಚಮಸಾಲಿ ಸಮಾಜದ ಸಭೆಯಲ್ಲಿ ಯತ್ನಾಳ ಭಾಗಿಯಾದರು. ಭಗವತಿ, ರಾಂಪೂರ, ಬಾಗಲಕೋಟೆ ನಗರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ರೋಡ್ ಶೋ ನಡೆಸಿದರು.
