Dailyhunt Logo
  • Light mode
    Follow system
    Dark mode
    • Play Story
    • App Story
ದೇವರು ಮನೆಯಲ್ಲಿ ನೆಲೆಸಬೇಕಾದರೆ ಪೂಜೆಯನ್ನು ಹೀಗೆ ಮಾಡಿ.!

ದೇವರು ಮನೆಯಲ್ಲಿ ನೆಲೆಸಬೇಕಾದರೆ ಪೂಜೆಯನ್ನು ಹೀಗೆ ಮಾಡಿ.!

Vijay Karnataka 11 months ago

ದೇವರ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ, ಮನೆಯಲ್ಲಿ ದೇವರ ವಾಸಸ್ಥಾನವಾಗಲೆಂದು ನಾವು ಪ್ರತಿನಿತ್ಯವೂ ದೇವರ ಪೂಜೆಯನ್ನು ಮಾಡುತ್ತೇವೆ. ದೇವರು ಮತ್ತು ದೇವತೆಗಳು ನಿಮ್ಮ ಮನೆಯಲ್ಲಿ ನೆಲೆಸಬೇಕಾದರೆ ನಾವು ಪೂಜೆಯನ್ನು ಹೇಗೆ ಮಾಡಬೇಕು ಗೊತ್ತಾ.? ಯಾವ ರೀತಿ ಪೂಜೆ ಮಾಡಿದರೆ ದೇವರು, ದೇವತೆಗಳು ನೆಲೆಸುತ್ತಾರೆ.?

ದೇವರ ಪೂಜೆಯನ್ನು ಮಾಡುವುದು ಕೇವಲ ಒಂದು ಆಚರಣೆಯಲ್ಲ, ಬದಲಾಗಿ ಅದು ಪೂಜೆ ಮಾಡುತ್ತಿರುವ ವ್ಯಕ್ತಿಯ ಆತ್ಮ ಮತ್ತು ದೈವಿಕತೆಯ ನಡುವಿನ ಸಂವಹನವಾಗಿದೆ. ನಾವು ಸರಿಯಾದ ವಿಧಿ - ವಿಧಾನಗಳ ಮೂಲಕ ಅಥವಾ ಶಾಸ್ತ್ರೋಕ್ತವಾಗಿ ಪೂಜೆಯನ್ನು ಮಾಡುವ ಮೂಲಕ ಮಾನಸಿಕ ಶಾಂತಿಯನ್ನು ಪಡೆದುಕೊಳ್ಳಬಹುದು. ಅದೃಷ್ಟವಂತರಾಗಬಹುದು. ಮೊದಲು ನಾವು ಪೂಜೆಯಲ್ಲಿ ಶುದ್ಧತೆ ಮತ್ತು ಭಕ್ತಿಯನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಪೂಜೆಯನ್ನು ಮಾಡುವುದರಿಂದ ದೇವರ ಆಶೀರ್ವಾದ ನಿಮ್ಮ ಮೇಲಿರುವುದು.ಮನಸ್ಸು ಹೀಗಿರಲಿ

ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ನಿಮ್ಮ ಮನಸ್ಸು ಸಂಪೂರ್ಣವಾಗಿ ಪೂಜೆಯ ಮೇಲೆ ಹಾಗೂ ದೇವರ ಮೇಲೆ ಮಾತ್ರ ಕೇಂದ್ರೀಕೃತವಾಗಿರಬೇಕು. ಪೂಜೆ ಮಾಡುವಾಗ ಇತರರೊಂದಿಗೆ ಮಾತನಾಡುವುದು, ಮೊಬೈಲ್‌ ಫೋನ್‌ಗಳನ್ನು ಬಳಸುವುದು, ಟಿವಿ ನೋಡುವುದು ಅಥವಾ ಇನ್ನಿತರ ಕೆಲಸಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಿರಬಾರದು. PC: unsplash


ದೀಪ, ಧೂಪಗಳನ್ನು ಹಚ್ಚಿಡುವ ವಿಧಾನ

ದೇವರಿಗೆ ದೀಪ, ಧೂಪವನ್ನು ಹಚ್ಚಿಡುವಾಗ ಯಾವ ದಿಕ್ಕಿನಲ್ಲಿ ಹಚ್ಚಿಡಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಂಡಿರಬೇಕು. ದೇವರಿಗೆ ದೀಪ ಮತ್ತು ಧೂಪವನ್ನು ಹಚ್ಚಿಡುವಂತಹ ಸಂದರ್ಭದಲ್ಲಿ, ಯಾವಾಗಲೂ ದೇವರ ಫೋಟೋ ಅಥವಾ ವಿಗ್ರಹದ ಬಲಭಾಗದಲ್ಲಿ ಹಚ್ಚಿಡಬೇಕು. ಈ ಭಾಗದಲ್ಲಿ ದೀಪ, ಧೂಪವನ್ನು ಹಚ್ಚಿಡುವುದು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ದೀಪ, ದೀಪಕ್ಕೆ ಬಳಸುವ ಎಣ್ಣೆ, ಬತ್ತಿ ಎಲ್ಲವೂ ಸ್ವಚ್ಛ ಮತ್ತು ಶುದ್ಧವಾಗಿರಬೇಕು.PC: unsplash


ಮಂತ್ರಗಳನ್ನು ಪಠಿಸಿ

ಮಂತ್ರಗಳ ಪ್ರಯೋಜನವನ್ನು ಪಡೆದುಕೊಳ್ಳಲು ಬಯಸಿದರೆ ಮೊದಲು ಅದನ್ನು ನಾವು ಸರಿಯಾದ ಉಚ್ಛಾರಣೆಯೊಂದಿಗೆ ಪಠಿಸಬೇಕು. ತಪ್ಪು ತಪ್ಪಾದ ಉಚ್ಛಾರಣೆಯಿಂದ ಮಂತ್ರವನ್ನು ಅಥವಾ ಸ್ತೋತ್ರವನ್ನು ಪಠಿಸಬಾರದು. ತಪ್ಪಾದ ಉಚ್ಛಾರಣೆಯಿಂದ ಮಂತ್ರವನ್ನು ಪಠಿಸುವುದರಿಂದ ಅದು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಂತ್ರವನ್ನು ಪಠಿಸುವಾಗ ಮೌನವಾಗಿ, ಶಾಂತವಾದ ಮನಸ್ಸಿನಿಂದ ಪಠಿಸಬೇಕು.

PC: unsplash


ಇಂತಹ ವಸ್ತುಗಳನ್ನೇ ಬಳಸಿ

ದೇವರನ್ನು ನಾವು ಪೂಜಿಸುವಂತಹ ಸಂದರ್ಭದಲ್ಲಿ ಶುದ್ಧವಾದ ಹಾಗೂ ಸ್ವಚ್ಛವಾದ ವಸ್ತುಗಳನ್ನೇ ಬಳಸಬೇಕು. ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ಶುದ್ಧವಾದ ನೀರು, ತಾಜಾ ಹೂವು ಹಾಗೂ ಹಣ್ಣುಗಳು, ಪರಿಮಳಯುಕ್ತ ಹೂವುಗಳು ಹಾಗೂ ಇನ್ನಿತರ ಶುದ್ಧವಾದ ವಸ್ತುಗಳನ್ನೇ ಬಳಸಬೇಕು. ಹಳೆಯ ಅಥವಾ ಹಾಳಾದ ಹೂವುಗಳನ್ನು, ಒಣಗಿದ ಹೂವುಗಳನ್ನು ಅಥವಾ ಕೊಳಕು ಪಾತ್ರೆಗಳನ್ನು ಬಳಸಬಾರದು. PC: pixabay


ದೇವರಿಗೆ ಕೃತಜ್ಞತೆ ಸಲ್ಲಿಸಿ

ದೇವರ ಪೂಜೆಯನ್ನು ಮಾಡಿದರೆ ಸಾಲದು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವುದು ಕೂಡ ತುಂಬಾನೇ ಮುಖ್ಯವಾಗಿರುತ್ತದೆ. ಈ ಕಾರಣಕ್ಕಾಗಿ ನೀವು ದೇವರ ಬಳಿ ಕೇಳುವುದಕ್ಕಿಂತ ಹೆಚ್ಚಾಗಿ ಕೃತಜ್ಞತೆಯನ್ನು ಸಲ್ಲಿಸಬೇಕು. ದೇವರ ಪೂಜೆಯನ್ನು ಮಾಡುವುದರ ಜೊತೆಗೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವುದು ತುಂಬಾನೇ ಮುಖ್ಯವಾಗಿರುತ್ತದೆ.


ಇದರ ಬಗ್ಗೆ ಕಾಳಜಿಯಿರಲಿ

ದೇವರ ಪೂಜೆಯನ್ನು ಮಾಡುವ ಸಮಯದಲ್ಲಿ ನಾವು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾದ ವಿಚಾರವೇನೆಂದರೆ ಶುಚಿತ್ವವನ್ನು ಕಾಪಾಡಿಕೊಳ್ಳುವುದಾಗಿದೆ. ಪೂಜೆ ಮಾಡುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೊಳಕು ಅಥವಾ ಶುದ್ಧತೆಯಿರದ ಸ್ಥಳದಲ್ಲಿ ನಾವು ದೇವರ ಪೂಜೆಯನ್ನು ಮಾಡಬಾರದು. ಪೂಜೆಯನ್ನು ಪ್ರಾರಂಭಿಸುವ ಮೊದಲು ನಾವು ಪೂಜೆ ಮಾಡುವ ಸ್ಥಳವನ್ನು, ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು.


Dailyhunt
Disclaimer: This content has not been generated, created or edited by Dailyhunt. Publisher: Vijay Karnataka