Dailyhunt Logo
  • Light mode
    Follow system
    Dark mode
    • Play Story
    • App Story
ಧನ ಯೋಗ 2026: ವೃಶ್ಚಿಕ ಸೇರಿ ಈ 5 ರಾಶಿಯವರಿಗೆ ಸಂಪತ್ತು ಸಕಲ ಸೌಲಭ್ಯ ಪ್ರಾಪ್ತಿ...!

ಧನ ಯೋಗ 2026: ವೃಶ್ಚಿಕ ಸೇರಿ ಈ 5 ರಾಶಿಯವರಿಗೆ ಸಂಪತ್ತು ಸಕಲ ಸೌಲಭ್ಯ ಪ್ರಾಪ್ತಿ...!

Vijay Karnataka 1 week ago

ನ ಯೋಗ 2026: ಮಿಥುನ ರಾಶಿಯಲ್ಲಿ ಪ್ರಬಲ ಗ್ರಹಗಳ ಸಂಯೋಗದಿಂದಾಗಿ ಧನ ಯೋಗ ಸೃಷ್ಟಿಯಾಗುವುದು. ಈ ಯೋಗ ಕೆಲವು ರಾಶಿಯವರಿಗೆ ಶ್ರೀಮಂತರಾಗುವ ಯೋಗವನ್ನು ನೀಡುವುದು. ಆ ಶುಭ ರಾಶಿಗಳ ಬಗ್ಗೆ ತಿಳಿಯಿರಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ.
ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡಲು ಪ್ರತಿಯೊಂದು ಗ್ರಹಕ್ಕೂ ನಿರ್ದಿಷ್ಟವಾದ ಅವಧಿ ಇದೆ. ಈ ವೇಳೆ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸೇರಿ ಸಂಚಾರ ಮಾಡುವುದರಿಂದ ಶುಭ ಹಾಗೂ ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಅಂದಹಾಗೆ ಮೇ 15ರಂದು ಶುಕ್ರ ಗ್ರಹ ಮಿಥುನ ರಾಶಿಗೆ ಸಂಚಾರ ಮಾಡುವುದು. ಈಗಾಗಲೇ ಬೃಹಸ್ಪತಿ ಗುರು ಮಿಥುನ ರಾಶಿಯಲ್ಲಿ ಸಾಗುತ್ತಿದೆ. ಮೇ 18ರಂದು ಚಂದ್ರ ಕೂಡ ಮಿಥುನ ರಾಶಿಗೆ ಸ್ಥಾನ ಬದಲಾವಣೆ ಮಾಡುವುದು. ಇದರಿಂದಾಗಿ ಮಿಥುನ ರಾಶಿಯಲ್ಲಿ ಧನ ಯೋಗ ರೂಪಗೊಳ್ಳಲಿದೆ. ಇದು ಜ್ಯೋತಿಷ್ಯದಲ್ಲಿ ಅತ್ಯಂತ ಶುಭ ಯೋಗಗಳಲ್ಲಿ ಒಂದಾಗಿದೆ. ಈ ಯೋಗ ಜಾತಕದಲ್ಲಿ ಬಲವಾದ ಸ್ಥಾನದಲ್ಲಿ ರೂಪಗೊಂಡರೆ ಅಂತಹ ರಾಶಿಯವರ ಸಂಪತ್ತು, ಸೌಕರ್ಯ, ಸೌಲಭ್ಯಗಳು ವೃದ್ಧಿಯಾಗುತ್ತವೆ. ಆರ್ಥಿಕ ಸ್ಥಿತಿ ಸಾಕಷ್ಟು ಬಲವಾಗಿರುವುದನ್ನು ಕಾಣಬಹುದು. ಹಾಗಾದರೆ ಮೇ 18ರಂದು ರೂಪಗೊಳ್ಳುವ ಧನ ಯೋಗ ಯಾವ ರಾಶಿಯವರ ಭವಿಷ್ಯವನ್ನು ಬದಲಾಯಿಸಲಿದೆ ಎಂದು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.. ಕಟಕ ರಾಶಿ

ಕಟಕ ರಾಶಿಯ ಜಾತಕದ 12ನೇ ಮನೆಯಲ್ಲಿ ಧನ ಯೋಗ ಶುಭ ಫಲಗಳನ್ನು ನೀಡುವುದು. ಈ ಸಮಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿಮ್ಮ ವೃತ್ತಿಜೀವನದಲ್ಲಿ ಇದ್ದ ಅಡೆತಡೆಗಳು ದೂರವಾಗುತ್ತವೆ. ಭವಿಷ್ಯದ ಬಗ್ಗೆ ನೀವು ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಇದು ಮನಸ್ಸಿನ ಶಾಂತಿಯ ಸಮಯ. ಗುರುವಿನ ದೃಷ್ಟಿಯಿಂದ ನಿಮ್ಮ ಕನಸುಗಳು ನನಸಾಗುತ್ತವೆ ಮತ್ತು ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಕುಟುಂಬದಲ್ಲಿ ಶುಭ ಕಾರ್ಯಗಳಲ್ಲಿ ಉತ್ಸಾಹ ಹೆಚ್ಚಾಗುತ್ತದೆ. ನೀವು ಕೆಲಸದಲ್ಲಿ ಬಡ್ತಿ ಪಡೆಯುತ್ತೀರಿ. ನಿಮ್ಮ ಕನಸುಗಳು ನನಸಾಗುವ ಪರ್ವಕಾಲವಿದು. ಗುರುವಿನ ಪ್ರಯಾಣ ಮತ್ತು ದೃಷ್ಟಿ ಅನುಕೂಲಕರವಾಗಿರುವುದರಿಂದ ಹಣವು ಅನೇಕ ಮೂಲಗಳಿಂದ ಹರಿದು ಬರುತ್ತದೆ. ನಿಮ್ಮ ವ್ಯಕ್ತಿತ್ವ ಕೌಶಲ್ಯಗಳಲ್ಲಿ ಸುಧಾರಣೆಯನ್ನು ನೀವು ಕಾಣುವಿರಿ. ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯ. ಗುರುವಿನ ನೋಟದಿಂದ ಸ್ಪರ್ಶಿಸಲ್ಪಟ್ಟ ನೀವು ಪ್ರತಿಯೊಂದು ಹೆಜ್ಜೆಯಲ್ಲೂ ಯಶಸ್ಸನ್ನು ಸಾಧಿಸುವಿರಿ.


ಸಿಂಹ ರಾಶಿ

ಸಿಂಹ ರಾಶಿಯ 11ನೇ ಮನೆಯಲ್ಲಿ ಧನ ಯೋಗ ರೂಪಗೊಳ್ಳಲಿದೆ. ಈ ಯೋಗ ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಶುಕ್ರನಿಂದ ಈ ಸಮಯದಲ್ಲಿ ಅದ್ಭುತ ಫಲಗಳನ್ನು ನೀವು ಪಡೆಯುವಿರಿ. ಪ್ರತಿಯೊಂದು ಕಾರ್ಯದಲ್ಲೂ ನಿಮಗೆ ಶುಕ್ರ ದೇವನ ಅನುಗ್ರಹ ಇರಲಿದೆ. ಸಿಂಹ ರಾಶಿಯವರು ಭಾರಿ ಆರ್ಥಿಕ ಪ್ರತಿಫಲಗಳನ್ನು ಪಡೆಯುವ ಸಾಧ್ಯತೆ ಇದೆ. ಅಲ್ಲದೆ ನೀವು ಗುರು ಕೃಪೆಯಿಂದ ವಿವಿಧ ಸಮಸ್ಯೆಗಳಿಂದ ಬೇಗನೆ ಚೇತರಿಸಿಕೊಳ್ಳಬಹುದು. ಈ ವೇಳೆ ಉದ್ಯಮಿಗಳು ನಿರೀಕ್ಷೆಗಿಂತ ಉತ್ತಮ ಲಾಭಗಳನ್ನು ಪಡೆಯುವ ಲಕ್ಷಣಗಳೂ ಗೋಚರಿಸುತ್ತಿವೆ. ಹಿಂದಿನ ಹೂಡಿಕೆಗಳು ಉತ್ತಮ ಫಲಿತಾಂಶಗಳನ್ನು ನೀಡಬಹುದು. ಅಲ್ಲದೆ ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗುವ ಲಕ್ಷಣಗಳನ್ನು ಗ್ರಹಗಳ ಸ್ಥಾನ ಸೂಚಿಸುತ್ತಿವೆ. ಕೆಲಸದಲ್ಲಿರುವವರಿಗೆ ಬಡ್ತಿ ಹಾಗೂ ಸಂಬಳ ಹೆಚ್ಚಳ ಸಿಗುವ ಪರ್ವಕಾಲ. ನಿಮ್ಮ ಯಶಸ್ಸು ಮತ್ತು ಆರ್ಥಿಕ ಸ್ಥಿತಿಯಿಂದಾಗಿ ಸಮಾಜದಲ್ಲಿ ನಿಮ್ಮ ಗೌರವ ಹಾಗೂ ಕೀರ್ತಿ ದ್ವಿಗುಣವಾಗುವುದು. ಬಾಕಿ ಉಳಿದಿರುವ ಕೆಲಸಗಳನ್ನು ಯಾವುದೇ ಅಡೆತಡೆ ಇಲ್ಲದೆ ನೀವು ಸರಿಯಾಗಿ ಪೂರ್ಣಗೊಳಿಸುವಿರಿ. ಆರೋಗ್ಯ ನಿರೀಕ್ಷೆಗಿಂತ ಉತ್ತಮವಾಗಿರುವುದು.


ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ 8ನೇ ಮನೆಯಲ್ಲಿ ಧನ ಯೋಗ ರೂಪಗೊಳ್ಳುವುದು. ಇದರಿಂದಾಗಿ ನಿಮ್ಮ ಸರಿಯಾದ ಪ್ರಯತ್ನಗಳಿಂದ ಸುಲಭವಾಗಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ನಿಮ್ಮ ಮೇಲಧಿಕಾರಿಗಳಿಂದ ಬೆಂಬಲವನ್ನು ನೀವು ನಿರೀಕ್ಷಿಸಬಹುದು. ನಿಮ್ಮ ಕಠಿಣ ಪರಿಶ್ರಮವನ್ನು ನಿಮ್ಮ ಮೇಲಧಿಕಾರಿಗಳು ಗುರುತಿಸುತ್ತಾರೆ. ಹಿಂದಿನ ಕೆಲಸವು ಈಗ ಉತ್ತಮ ಫಲಿತಾಂಶಗಳನ್ನು ನೀಡುವುದು. ಈ ಅವಧಿಯಲ್ಲಿ ಅನೇಕ ಪ್ರವಾಸಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಕುಟುಂಬ ಸದಸ್ಯರೊಂದಿಗೆ ಸಂತೋಷದ ಸಮಯವನ್ನು ಆನಂದಿಸುವ ಅವಕಾಶ ಸಿಗುವುದು. ಉದ್ಯೋಗಾಕಾಂಕ್ಷಿಗಳು ಹೊಸ ಅವಕಾಶಗಳನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದಿಲ್ಲ. ವಿವಿಧ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಉತ್ಸಾಹಭರಿತರಾಗಿರುತ್ತೀರಿ.


ಕನ್ಯಾ ರಾಶಿ

ಕನ್ಯಾ ರಾಶಿಯ ಜಾತಕದ 10ನೇ ಮನೆಯಲ್ಲಿ ಧನ ಯೋಗ ಸೃಷ್ಟಿಯಾಗುವುದು. ಇದರಿಂದಾಗಿ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ವಿವಿಧ ರೀತಿಯ ಪ್ರಯೋಜನಗಳು ಸಿಗುತ್ತವೆ. ನಿಮ್ಮ ಕಠಿಣ ಪರಿಶ್ರಮ ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುವುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಹಠಾತ್ ಏರಿಕೆಯನ್ನು ನೀವು ಕಾಣುವಿರಿ. ಕಚೇರಿಯ ವಾತಾವರಣ ಅನುಕೂಲಕರವಾಗಿರುತ್ತದೆ. ಇದರಿಂದ ನೀವು ಭವಿಷ್ಯಕ್ಕಾಗಿ ಕೆಲವು ಉಪಯುಕ್ತ ಯೋಜನೆಗಳನ್ನು ಮಾಡುವಿರಿ. ಅವಿವಾಹಿತರಿಗೆ ಪ್ರೀತಿಯ ಕರೆಗಳು ಹುಡುಕಿಕೊಂಡು ಬರಬಹುದು. ಆರ್ಥಿಕ ಸ್ಥಿತಿಯ ಜೊತೆಗೆ ಈ ಅವಧಿಯಲ್ಲಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ. ಜೊತೆಗೆ ನಿಮ್ಮ ಆರೋಗ್ಯ ಕೂಡ ಈ ಸಮಯದಲ್ಲಿ ಸಾಕಷ್ಟು ಸುಧಾರಣೆ ಕಾಣುವುದು. ಹಿಂದೆ ಮಾಡಿದ ಸಾಲಗಳನ್ನು ಈ ಸಮಯದಲ್ಲಿ ನೀವು ತೀರಿಸುವಿರಿ. ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳು ದೂರವಾಗುತ್ತವೆ.


ಮೇಷ ರಾಶಿ

ಮೇಷ ರಾಶಿಯ ಮೂರನೇ ಮನೆಯಲ್ಲಿ ಧನ ಯೋಗ ರೂಪಗೊಳ್ಳುವುದು. ಈ ಯೋಗ ಮೇಷ ರಾಶಿಯವರ ಭವಿಷ್ಯವನ್ನು ಬದಲಾಯಿಸಲಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಜೀವನ ಸಾಕಷ್ಟು ಸುಧಾರಣೆ ಕಾಣುವುದು. ಆದಾಯದ ಹಲವಾರು ಮಾರ್ಗಗಳು ತೆರೆದುಕೊಳ್ಳುತ್ತವೆ. ಹೂಡಿಕೆ ಹಾಗೂ ಬಡ್ಡಿ ವ್ಯವಹಾರ ಮಾಡುವವರಿಗೆ ಇದು ಅದೃಷ್ಟದ ಪರ್ವಕಾಲ. ವ್ಯವಹಾರ, ವ್ಯಾಪಾರ ಹಾಗೂ ಉದ್ಯಮ ಮಾಡುವವರಿಗೆ ಹಣದ ಹರಿವು ದ್ವಿಗುಣವಾಗುವುದು. ಮೇಷ ರಾಶಿಯವರ ಮೇಲೆ ಈ ಸಮಯದಲ್ಲಿ ಗುರುಬಲ ಇರುವುದರಿಂದ ಹಣಕಾಸಿನ ಸಮಸ್ಯೆಗಳು ಮಾಯವಾಗುವುದು. ಅಲ್ಲದೆ ಕುಟುಂಬದಲ್ಲಿ ಸಂತೋಷದ ಗಾಳಿ ಬೀಸಲಿದೆ. ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ನಿಮ್ಮದಾಗುವುದು. ಶುಭ ಕಾರ್ಯಗಳಿಗೆ ಈ ಸಮಯದಲ್ಲಿ ಯಾವುದೇ ವಿಘ್ನಗಳು ಬಾರದು. ಇನ್ನೂ ಮದುವೆ ನಿರೀಕ್ಷೆಯಲ್ಲಿ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಹಿಂದೆ ಮಾಡಿದ ಸಾಲಗಳನ್ನು ತೀರಿಸಲು ಕುಟುಂಬಸ್ಥರ ಸಹಕಾರ ಇರುವುದು. ವಿದೇಶಕ್ಕೆ ಪ್ರಯಾಣ ಮಾಡುವ ಯೋಗವನ್ನು ನೀವು ಪಡೆಯಬಹುದು.


Dailyhunt
Disclaimer: This content has not been generated, created or edited by Dailyhunt. Publisher: Vijay Karnataka