ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್ ಅವರಿಗೆ ಡ್ಯಾನ್ಸ್ ಅಂದ್ರೆ ಪಂಚಪ್ರಾಣ ಅನ್ನೋದು ಕರುನಾಡಿಗೆ ಗೊತ್ತಿರುವ ವಿಚಾರ. ಅವರ ಮೈ-ಮನ ಖುಷಿಯಾಗಿಡುವ ಫೇವರಿಟ್ ಕಲೆ ನೃತ್ಯ. ಅದರಲ್ಲೂ ಡ್ಯಾನ್ಸ್ ಆರಾಧಕರನ್ನ ಕಂಡ್ರೆ ಮತ್ತಷ್ಟು ಮಗದಷ್ಟು ಒಲವು, ಪ್ರೀತಿ. ಈ ಬಾರಿ ಡಿಕೆಡಿಯಲ್ಲಿ ಶಿವಣ್ಣ ಅವರು ಬಹಳ ಹಚ್ಚಿಕೊಂಡ ಸ್ಪರ್ಧಿ, ಪ್ರತಿಭಾವಂತ ಬಾಲಕ ಪ್ರೀತಮ್.
ಇವರ ಬಾಂಡಿಂಗ್ ಯಾವ ರೀತಿ ಇತ್ತು ಅಂದ್ರೆ ಥೇಟ್ ಪಕ್ಕದ್ಮನೆ ತಾತ ಮೊಮ್ಮಗನನ್ನ ಕಣ್ತುಂಬಿಕೊಂಡಷ್ಟೇ ಖುಷಿ ಆಗ್ತಿತ್ತು. ಶಿವಣ್ಣ ಅವರ ಧರ್ಮಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ಅಷ್ಟೇ.. ಮಗುವನ್ನ ಬಹಳ ಹಚ್ಕೊಂಡಿದ್ದಾರೆ. ಡಿಕೆಡಿ ಲವ್ ಸ್ಟೋರಿ ಅಂದ್ರೆ ಈ ಮೂವರ ನಿಷ್ಕಲ್ಮಶ ಪ್ರೀತಿ.
ಗ್ರ್ಯಾಂಡ್ ಫಿನಾಲೆಯಲ್ಲಿ ಏನು ನಡೆಯಿತು?
ಶಿವ ಮೆಚ್ಚಿದ ಪ್ರೀತಮ್
ಯಾವ ಜನ್ಮದ ಪುಣ್ಯವೋ!
ಇದನ್ನೆಲ್ಲಾ ನೋಡಿದ ಅಭಿಮಾನಿಗಳು ಇದು ಖಂಡಿತ ಯಾವುದೋ ಜನ್ಮದ ಋಣ. ಕೋಟ್ಯಾಂತರ ಜನರ ಆರಾಧ್ಯ ತಾರೆ ಶಿವಣ್ಣನ ಜೊತೆಗೆ ಈ ಮಗು ಇಂತಹ ಅವಿನಾಭಾವ ಸಂಬಂಧ ಹೊಂದಿರಬೇಕು ಅಂದರೆ ಭಾಗ್ಯವೋ ಭಾಗ್ಯ ಎನ್ನುತ್ತಿದ್ದಾರೆ.

