`ಇಂಗ್ಲಿಷ್ ಕ್ರಿಕೆಟ್‌ನಲ್ಲಿ ಸ್ಟೀಫನ್ ಫ್ಲೆಮಿಂಗ್ ಅವರು ಎದುರಿಸಬಹುದಾದ ಒಂದು ಸಮಸ್ಯೆಯೆಂದರೆ, ಅವರ ನಾಯಕನಾಗಲು ನಮ್ಮಲ್ಲಿ ಎಂ.ಎಸ್. ಧೋನಿ ಇಲ್ಲ'- ಇದು ಬ್ರೆಂಡನ್ ಮೆಕಲಂ ಅವರ ಬದಲಿಗೆ ಇಂಗ್ಲೆಂಡ್ ಟೆಸ್ಟ್ ತಂಡದ ಪ್ರಧಾನ ಕೋಚ್ ಆಗಿ ನಿಯುಕ್ತಿಗೊಂಡಿರುವ ಸ್ಪೀಫನ್ ಫ್ಲೆಂಮಿಂಗ್ ಬಗ್ಗೆ ಮಾಜಿ ನಾಯಕ ಮೈಕಲ್ ವಾನ್ ಅವರ ಎಚ್ಚರಿಕೆಯಿಂದ ಕೂಡಿರುವ ಸಲಹೆ.
ಇದೇ ವೇಳೆ ಫ್ಲೆಮಿಂಗ್ ಅವರು ಪಾಕಿಸ್ತಾನ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ಅಲಭ್ಯರಾಗಿರುವ ಕುರಿತು ಸಹ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಟೀಫನ್ ಫ್ಲೆಮಿಂಗ್ ಅವರು ಐಪಿಎಲ್ ನ ಅತ್ಯಂತ ಯಶಸ್ವಿ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಧಾನ ಕೋಚ್ ಆಗಿ ಅದ್ಭುತ ಯಶಸ್ಸು ಕಂಡಿದ್ದರು. ಎಂ.ಎಸ್. ಧೋನಿ ಅವರ ನಾಯಕತ್ವದಲ್ಲಿ ಕಳೆದ 17 ವರ್ಷಗಳಲ್ಲಿ ಅವರು ಐದು ಐಪಿಎಲ್ ಟ್ರೋಫಿಗಳು ಮತ್ತು ಎರಡು ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಗೆದ್ದಿರುವುದರಲ್ಲಿ ಫ್ಲೆಮಿಂಗ್ ಅವರ ಪಾತ್ರ ಮಹತ್ವದ್ದಾಗಿದೆ ಇದೀಗ ಮತ್ತೆ ನಾಯಕತ್ವ ವಹಿಸಿರುವ ಹಿರಿಯ ನಾಯಕ ಜೋ ರೂಟ್ ಅವರು ಎಂ.ಎಸ್. ಧೋನಿಯಲ್ಲ ಎಂದು ಪರೋಕ್ಷವಾಗಿ ಹೇಳಿಕುವ ವಾನ್ ಇಂಗ್ಲೆಂಡ್ ತಂಡದ ವ್ಯವಸ್ಥೆಯಲ್ಲಿ ಫ್ಲೆಮಿಂಗ್ ಅವರಿಗೆ ದೊಡ್ಡ ಸವಾಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಂಗ್ಲೆಂಷ್ ಕ್ರಿಕೆಟ್ ಯಾವತ್ತೂ ಸವಾಲು
ಈ ಬಗ್ಗೆ 'ಟೆಲಿಗ್ರಾಫ್' ಪತ್ರಿಕೆಯ ತಮ್ಮ ಅಂಕಣದಲ್ಲಿ ಬರೆದಿರುವ ಅವರು, ಫ್ಲೆಮಿಂಗ್ ಅತ್ಯಂತ ಗೌರವಾನ್ವಿತ ವ್ಯಕ್ತಿ, ಉತ್ತಮ ಮ್ಯಾನೇಜರ್ ಮತ್ತು ತಂತ್ರಜ್ಞ ಎಂದು ಹೆಸರುವಾಸಿಯಾಗಿದ್ದಾರೆ. ನಾನು ಅವರನ್ನು ಐಪಿಎಲ್‌ನಲ್ಲಿ ನೋಡಿದ್ದೇನೆ. ಆದರೆ ಇಂಗ್ಲಿಷ್ ಕ್ರಿಕೆಟ್‌ನಲ್ಲಿ ಅವರು ಎದುರಿಸಬಹುದಾದ ಒಂದು ಸಮಸ್ಯೆಯೆಂದರೆ, ಅವರ ನಾಯಕನಾಗಲು ನಮ್ಮಲ್ಲಿ ಎಂ.ಎಸ್. ಧೋನಿ ಇಲ್ಲ ಎಂದು ಮಾರ್ಮಿಕವಾಗಿ ಬರೆದಿದ್ದಾರೆ."ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಧೋನಿಯೇ ಇಡೀ ತಂಡವನ್ನು ಮುನ್ನಡೆಸುತ್ತಿದ್ದರು ಮತ್ತು ಫ್ಲೆಮಿಂಗ್ ಅವರ ಬೆಂಬಲಕ್ಕೆ ಉತ್ತಮ ಸಹಾಯಕ ಕೋಚ್‌ಗಳಿದ್ದರು. ಎರಿಕ್ ಸಿಮನ್ಸ್ ಅವರ ಬಳಿ ಅದ್ಭುತ ಬೌಲಿಂಗ್ ಕೋಚ್ ಆಗಿದ್ದರು, ಅವರು ಬಿಳಿ ಚೆಂಡನ್ನು ಸ್ವಿಂಗ್ ಮಾಡಿಸುವುದರಲ್ಲಿ ನಿಪುಣರಾಗಿದ್ದರು. ಅವರ ತಂಡವು ಕೇವಲ ಅತಿಯಾದ ವೇಗಕ್ಕಿಂತ ಬೌಲಿಂಗ್ ಕೌಶಲ್ಯದ ಮೇಲೆ ನಿರ್ಮಾಣವಾಗಿತ್ತು. ಕೇವಲ ವೇಗದ ಬೌಲಿಂಗ್‌ಗಿಂತ ಕೌಶಲ್ಯಪೂರ್ಣ ಬೌಲಿಂಗ್ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳಲಿದೆ ಎಂಬುದರ ಮುನ್ಸೂಚನೆ ಇದಾಗಿದೆಯೇ ಎಂದು ನಾನು ಯೋಚಿಸುತ್ತಿದ್ದೇನೆ" ಎಂದು ವಾನ್ ಅಭಿಪ್ರಾಯಪಟ್ಟಿದ್ರದೆ.
ಇದೇವೇಳೆ ಆಗಸ್ಟ್ 19 ರಿಂದ ಹೆಡಿಂಗ್ಲೆಯಲ್ಲಿ ಪ್ರಾರಂಭವಾಗಲಿರುವ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಹೊಸ ಟೆಸ್ಟ್ ಕೋಚ್ ಸ್ಟೀಫನ್ ಫ್ಲೆಮಿಂಗ್ ತಂಡವನ್ನು ಕೂಡಿಕೊಳ್ಳುತ್ತಿಲ್ಲ ಎಂಬುದಕ್ಕೆ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಕ್ ಪ್ರವಾಸಕ್ಕೆ ಫ್ಲೆಮಿಂಗ್ ಬೇಕಿತ್ತು
"ಸ್ಟೀಫನ್ ಫ್ಲೆಮಿಂಗ್ ಅವರನ್ನು ಇಂಗ್ಲೆಂಡ್‌ನ ಟೆಸ್ಟ್ ಕೋಚ್ ಆಗಿ ನೇಮಿಸಿರುವುದು ಒಳ್ಳೆಯ ನಿರ್ಧಾರ, ಆದರೆ ಡಿಸೆಂಬರ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಪೂರ್ಣ ಪ್ರಮಾಣದಲ್ಲಿ ಅಧಿಕಾರ ವಹಿಸಿಕೊಳ್ಳುವ ಬದಲು, ಅವರು ಪಾಕಿಸ್ತಾನ ಸರಣಿಯ ಆರಂಭದಿಂದಲೇ ತಂಡದ ಜೊತೆ ಇರಬೇಕಿತ್ತು" ಎಂದು ವಾನ್ 'ಟೆಲಿಗ್ರಾಫ್' ಪತ್ರಿಕೆಯ ತಮ್ಮ ಅಂಕಣದಲ್ಲಿ ಬರೆದಿದ್ದಾರೆ."ಇದು ಸಣ್ಣ ಸಣ್ಣ ವಿಚಾರಗಳನ್ನು ಗಮನಿಸುವುದು ಮತ್ತು ಎಡ್ಜ್‌ಬಾಸ್ಟನ್‌ನಂತಹ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸುವ ಅನುಭವವನ್ನು ಪಡೆಯುವುದಕ್ಕೆ ಸಂಬಂಧಿಸಿದ್ದಾಗಿದೆ. ಎಡ್ಜ್‌ಬಾಸ್ಟನ್ ಆಯಶನ್ ಟೆಸ್ಟ್‌ಗೆ ಆತಿಥ್ಯ ವಹಿಸುತ್ತದೆ. ಇಂಗ್ಲಿಷ್ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿರುವ ಜನರನ್ನು ತಿಳಿದುಕೊಳ್ಳುವುದು ಮತ್ತು ಅವರಿಗೆ ನೆರವಾಗಬಲ್ಲ ಕೌಂಟಿ ಕೋಚ್‌ಗಳನ್ನು ಭೇಟಿಯಾಗುವ ಮೂಲಕ ನಮ್ಮ ಆಟದ ಬಗ್ಗೆ ಮಾಹಿತಿ ಕಲೆಹಾಕುವುದಾಗಿದೆ. ಇವು ಬ್ರೆಂಡನ್ ಮೆಕಲಂ ಅವರ ಅವಧಿಯಲ್ಲಿ ಇಂಗ್ಲೆಂಡ್ ಕೈಬಿಟ್ಟ ಸಣ್ಣ ಸಣ್ಣ 'ಒಂದು ಶೇಕಡಾ' ವಿವರಗಳಾಗಿದ್ದು, ಪ್ರಮುಖ ಟ್ರೋಫಿಗಳನ್ನು ಗೆಲ್ಲಲು ಇವು ಅತ್ಯಗತ್ಯವಾಗಿವೆ.
"ಇದು ಇಂಗ್ಲೆಂಡ್ ಕೋಚ್ ಹುದ್ದೆಯು ತನ್ನ ಆಕರ್ಷಣೆಯನ್ನು ಕೊಂಚ ಕಳೆದುಕೊಂಡಿದೆ ಎಂಬುದನ್ನೂ ಸೂಚಿಸುತ್ತದೆ. ಏಕೆಂದರೆ ಅವರು ತಕ್ಷಣವೇ ಕೆಲಸ ಪ್ರಾರಂಭಿಸಬೇಕು ಎಂದು ಭಾವಿಸಿಲ್ಲ. ಜೊತೆಗೆ, ಇಂಗ್ಲೆಂಡ್ ತಮ್ಮ ಸ್ವಂತ ಷರತ್ತುಗಳ ಬದಲು ಅಭ್ಯರ್ಥಿಯ ಷರತ್ತುಗಳಿಗೆ ಒಪ್ಪಿಕೊಂಡು ನೇಮಕ ಮಾಡಿಕೊಳ್ಳಲು ಸಿದ್ಧವಾಗಿದೆ ಎಂಬುದು ಅವರ ಕೊಂಚ ಹತಾಶೆಯನ್ನು ತೋರಿಸುತ್ತದೆ" ಎಂದು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಟೆಸ್ಟ್ ಸರಣಿಯಲ್ಲಿ ಪರಾಭವ ಅನುಭವಿಸಿದ ಬಳಿಕ ಬೆನ್ ಸ್ಟೋಕ್ಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರು. ಇನ್ನುತಂಡದ ಪ್ರಧಾನ ಕೋಚ್ ಆಗಿದ್ದ ಬ್ರೆಂಡನ್ ಮೆಕಲಂ ಅವರನ್ನು ಟೆಸ್ಟ್ ಕೋಚ್ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಆ ಬಳಿಕದ ಬೆಳವಣಿಗೆಯಲ್ಲಿ ನ್ಯೂಜಿಲೆಂಡ್ ನವರೇ ಆದ ಸ್ಟೀಫನ್ ಫ್ಲೆಮಿಂಗ್ ಅವರನ್ನು ಆ ಹುದ್ದೆಗೆ ನೇಮಿಸಲಾಗಿದೆ. ಆದರೆ, ಮೆಕಲಂ ಇಂಗ್ಲೆಂಡ್ ತಂಡದ ವೈಟ್-ಬಾಲ್ (ಸೀಮಿತ ಓವರ್‌ಗಳ) ಕೋಚ್ ಆಗಿ ಮುಂದುವರಿಯಲಿದ್ದಾರೆ.

