ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಶಿ ಬದಲಾವಣೆಯು ಒಂದು ಖಗೋಳ ಘಟನೆ ಮಾತ್ರವಲ್ಲದೆ ಇದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೆ ಬಲವಾದ ಪ್ರಭಾವವನ್ನು ಬೀರುವುದು. 2026 ರ ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಬುದ್ಧಿಯನ್ನು ಪ್ರತಿನಿಧಿಸುವ ಗ್ರಹವಾದ ಬುಧನು ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಬುಧನ ಈ ಚಲನೆಯಿಂದಾಗಿ ಶುಕ್ರ ಹಾಗೂ ಬುಧ ಗ್ರಹಗಳ ನಡುವೆ ದ್ವಿದ್ವಾದಶ ಯೋಗದ ನಿರ್ಮಾಣವು ಶೀಘ್ರದಲ್ಲಿಯೇ ಆಗಲಿದೆ. ಯಾವಾಗ ಶುಕ್ರ ಗ್ರಹವು ಮೇಷ ರಾಶಿಯಲ್ಲಿ ಚಲಿಸುವುದೋ ಮತ್ತು ಬುಧನು ಮೀನ ರಾಶಿಯಲ್ಲಿ ತಮ್ಮ ಸಂಚಾರವನ್ನು ಮಾಡುವುದೋ, ಈ ವಿಶೇಷ ಯೋಗದ ನಿರ್ಮಾಣವಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಯೋಗವು ಕೆಲವು ರಾಶಿಗೆ ಸೇರಿದ ಜನರ ಧನ, ಸಂಪತ್ತನ್ನು ಹೆಚ್ಚಿಸಲು ಉತ್ತಮ ಮಾರ್ಗಗಳನ್ನು ಪಡೆಯುವಂತೆ ಮಾಡಲಿದೆ ಮತ್ತು ಜೀವನಕ್ಕೆ ಸಂಬಂಧಿಸಿದಂತೆ ಅಪಾರ ಯಶಸ್ಸನ್ನು ಗಳಿಸಲು ಸಹಾಯ ಮಾಡುವುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದ್ವಿದ್ವಾದಶ ಯೋಗವನ್ನು ಬಹಳ ಶುಭ ಎಂದು ಕರೆಯಲಾಗುವುದು. ಏಕೆಂದರೆ 12ನೇ ಮನೆಯು ಖರ್ಚು ಮತ್ತು ಹಾನಿಯೊಂದಿಗೆ ಸಂಬಂಧವನ್ನು ಹೊಂದಿರುವುದು. ಹಾಗೆ ಎರಡನೇ ಮನೆಯು ಹಣ ಮತ್ತು ಸಂಗ್ರಹವನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಗ್ರಹಗಳ ಪ್ರಕೃತಿಗೆ ಅನುಗುಣವಾಗಿ ಅದರ ಪರಿಣಾಮಗಳು ಬದಲಾಯಿಸುತ್ತದೆ. ಯಾವಾಗ ಶುಭ ಗ್ರಹಗಳಾದಂತಹ ಗುರು, ಶುಕ್ರ ಮತ್ತು ಬುಧ ಗ್ರಹಗಳಿಂದ ಈ ಯೋಗವು ನಿರ್ಮಾಣಗೊಳ್ಳುವುದೋ, ಆಗ ಕೆಲವು ರಾಶಿಯವರಿಗೆ ಸೇರಿದ ಜನರ ಅನಗತ್ಯ ಖರ್ಚುಗಳು ಕಡಿಮೆಯಾಗುವುದರೊಂದಿಗೆ ಹೂಡಿಕೆಯನ್ನು ಮಾಡಲು ವ್ಯಕ್ತಿಗೆ ಸಂಘರ್ಷದ ನಂತರ ಯಶಸ್ಸನ್ನು ನೀಡಲಿದೆ. ಹಾಗೆ ಯಾವಾಗ ಪಾಪಿ ಗ್ರಹಗಳಾದಂತಹ ಶನಿ, ಮಂಗಳ ಮತ್ತು ರಾಹು ಗ್ರಹಗಳು ಈ ಸ್ಥಿತಿಯಲ್ಲಿ ಚಲಿಸುವುದೋ, ಇದು ಹಠಾತ್ ಧನ ಹಾನಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಅಥವಾ ಕುಟುಂಬದಲ್ಲಿ ಜಗಳಕ್ಕೆ ಕಾರಣವಾಗಬಹುದು. ಹಾಗಾಗಿ ಈ ದ್ವಿದ್ವಾದಶ ಯೋಗದ ನಿರ್ಮಾಣದಿಂದ ಯಾವ ಮೂರು ರಾಶಿಗೆ ಸೇರಿದ ಜನರ ಅದೃಷ್ಟದ ಸಮಯ ಪ್ರಾರಂಭವಾಗುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆಯವರೆಗೂ ಓದಿ.
ವೃಷಭ ರಾಶಿ: ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಬಲಗೊಳ್ಳುವುದು.
ವೃಷಭ ರಾಶಿಗೆ ಸೇರಿದ ಜನರಿಗೆ ಶುಕ್ರ, ಬುಧನಿಂದಾಗಿ ನಿರ್ಮಾಣಗೊಳ್ಳಲಿರುವ ದ್ವಿದ್ವಾದಶ ಯೋಗವು ವರದಾನಕ್ಕಿಂತ ಕಡಿಮೆ ಇರುವುದಿಲ್ಲ. ಈ ಸಂದರ್ಭದಲ್ಲಿ ಬುಧನು ವೃಷಭ ರಾಶಿಯ ಲಾಭದ ಮನೆಯಲ್ಲಿ ಚಲಿಸುವನು. ಇದರಿಂದಾಗಿ ವೃಷಭ ರಾಶಿಗೆ ಸೇರಿದ ಜನರ ಆದಾಯವನ್ನು ಹೆಚ್ಚಿಸಲು ಹೊಸ ಹೊಸ ಮಾರ್ಗಗಳನ್ನು ಪಡೆಯುವ ಅವಕಾಶವು ಈ ಅವಧಿಯಲ್ಲಿ ದೊರಕುವುದು. ಹಾಗೆ ಕೆಲಸವನ್ನು ಮಾಡುವ ವೃಷಭ ರಾಶಿಗೆ ಸೇರಿದ ಜನರಿಗೆ ಈ ಅವಧಿಯಲ್ಲಿ ಬಡ್ತಿ ಅಥವಾ ಹೊಸ ಜವಾಬ್ದಾರಿ ಲಭಿಸುವ ಸಂಭವ ಹೆಚ್ಚಾಗಿರಲಿದೆ.ಈ ಶುಭ ದ್ವಿದ್ವಾದಶ ಯೋಗದಿಂದಾಗಿ ವೃಷಭ ರಾಶಿಗೆ ಸೇರಿದ ಜನರು ತಮ್ಮ ಕಳೆದು ಹೋದ ಹಣವನ್ನು ವಾಪಸ್ಸು ಪಡೆಯುವ ಸಾಧ್ಯತೆಯೂ ಕೂಡ ಹೆಚ್ಚಾಗಿರುವುದು. ಈ ಸಂದರ್ಭದಲ್ಲಿ ವೃಷಭ ರಾಶಿಗೆ ಸೇರಿದ ಜನರು ಹೆಚ್ಚಿನ ಲಾಭವನ್ನು ಪಡೆಯುವ ಯೋಗ ನಿರ್ಮಾಣಗೊಳ್ಳಬಹುದು. ಶುಕ್ರ ದೇವನ ಪ್ರಭಾವದಿಂದಾಗಿ ವೃಷಭ ರಾಶಿಗೆ ಸೇರಿದ ಜನರ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗುವುದು. ಇದರಿಂದಾಗಿ ನಿಮ್ಮ ಸುಖ, ಸಮೃದ್ಧಿಯನ್ನು ಹೆಚ್ಚಿಸುವಂತಹ ವಸ್ತುಗಳಿಗಾಗಿ ಹಣವನ್ನು ಖರ್ಚು ಮಾಡುವ ಸಂಭವ ಹೆಚ್ಚಾಗಿರುವುದು.

ಮಿಥುನ ರಾಶಿ: ಪದವಿ ಮತ್ತು ಪ್ರತಿಷ್ಠಿಯಲ್ಲಿ ವೃದ್ದಿಯಾಗಲಿದೆ.
ಮಿಥುನ ರಾಶಿಗೆ ಸೇರಿದ ಜನರಿಗೆ ಶುಕ್ರ, ಬುಧನಿಂದ ನಿರ್ಮಾಣಗೊಳ್ಳಲಿರುವ ದ್ವಿದ್ವಾದಶ ಯೋಗವು ನಿಮ್ಮ ಅದೃಷ್ಟವನ್ನೇ ಬದಲಾಯಿಸುವ ಸಂಭವವು ಈ ಸಂದರ್ಭದಲ್ಲಿ ಹೆಚ್ಚಾಗಿರುವುದು. ಹಾಗೆ ಮಿಥುನ ರಾಶಿಯ ಅಧಿಪತಿಯಾದ ಗ್ರಹಗಳ ರಾಜಕುಮಾರನಾದ ಬುಧ ಈ ಸಂಚಾರದಿಂದಾಗಿ ನೀವು ಸಾಕಷ್ಟು ಹೊಸ ಉತ್ಸಾಹವನ್ನು ಹೊಂದುವಿರಿ. ಹಾಗೆ ಕಲೆ, ಲೇಖನ ಮತ್ತು ಮಾಧ್ಯಮಕ್ಕೆ ಸಂಬಂಧಿಸಿದಂತಹ ಮಿಥುನ ರಾಶಿಗೆ ಸೇರಿದ ಜನರು ಈ ಸಂದರ್ಭದಲ್ಲಿ ತಮ್ಮ ಪ್ರತಿಭೆಯನ್ನು ಸುಧಾರಿಸಲು ಉತ್ತಮ ಅವಕಾಶಗಳನ್ನು ಪಡೆಯುವ ಸಂಭವವಿದೆ.ಈ ಅವಧಿಯಲ್ಲಿ ಮಿಥುನ ರಾಶಿಗೆ ಸೇರಿದ ಜನರಿಗೆ ಹಠಾತ್ ಧನ ಪ್ರಾಪ್ತಿಯಾಗುವ ಯೋಗ ನಿರ್ಮಾಣಗೊಳ್ಳುವುದು. ಇದರಿಂದಾಗಿ ನಿಮ್ಮ ಹಳೆಯ ಆರ್ಥಿಕ ಸಂಕಷ್ಟಗಳು ದೂರವಾಗಲಿದೆ. ಹಾಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಶುಕ್ರ, ಬುಧ ಗ್ರಹಗಳ ಶುಭ ಪ್ರಭಾವದಿಂದ ಈ ಅವಧಿಯು ನಿಮಗೆ ಸಾಕಷ್ಟು ನೆಮ್ಮದಿಯನ್ನು ಹೊಂದುವಂತೆ ಮಾಡಲಿದೆ. ಈ ಸಂದರ್ಭದಲ್ಲಿ ಮಿಥುನ ರಾಶಿಗೆ ಸೇರಿದ ಜನರು ಸಾಕಷ್ಟು ಉತ್ಸಾಹ ಹೊಂದುವುದನ್ನು ನೋಡಬಹುದಾಗಿದೆ.

ಮೀನ ರಾಶಿ: ಪಿತ್ರಾರ್ಜಿತ ಸಂಪತ್ತು ಮತ್ತು ಹೂಡಿಕೆಗಳಿಂದ ಲಾಭವಾಗುವುದು.
ಮೀನ ರಾಶಿಗೆ ಸೇರಿದ ಜನರಿಗೆ ಶುಕ್ರ ಬುಧ ಗ್ರಹಗಳ ಸಂಯೋಗದಿಂದ ನಿರ್ಮಾಣಗೊಳ್ಳುವ ದ್ವಿದ್ವಾದಶ ಯೋಗದ ಈ ಸಮಯವು ಹೂಡಿಕೆ ಮತ್ತು ಕುಟುಂಬದ ವಿಚಾರಗಳನ್ನುಂಟು ಮಾಡಲು ಅತ್ಯಂತ ಶುಭವಾದ ಸಮಯವಾಗಿರಲಿದೆ. ಈ ಸಂದರ್ಭದಲ್ಲಿ ಮೀನ ರಾಶಿಗೆ ಸೇರಿದ ಜನರು ಪಿತ್ರಾರ್ಜಿತ ಸಂಪತ್ತಿಗೆ ಸಂಬಂಧಿಸಿದಂತೆ ದೊಡ್ಡ ಲಾಭವನ್ನು ಪಡೆಯುವ ಸಂಭವವಿದೆ. ಆಸ್ತಿ, ಭೂಮಿಗೆ ಸಂಬಂಧಿಸಿದ ವಿಚಾರಗಳಲ್ಲಿ ತೀರ್ಪು ನಿಮ್ಮ ಪರವಾಗಿ ಬರುವ ಸಾಧ್ಯತೆಯೂ ಕೂಡ ಬಹಳಷ್ಟು ಹೆಚ್ಚಾಗಿರುವುದು.ಕೆಲಸದ ಸ್ಥಳದಲ್ಲಿ ದ್ವಿದ್ವಾದಶ ಯೋಗದ ಶುಭ ಪ್ರಭಾವದಿಂದಾಗಿ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ಹೊಗಳುವ ಸಂಭವ ಹೆಚ್ಚಾಗಿರುವುದು. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸ ಸಾಕಷ್ಟು ಹೆಚ್ಚಾಗುವುದು. ಹಾಗೆ ಷೇರು ಮಾರುಕಟ್ಟೆ ಅಥವಾ ಲಾಟರಿಗೆ ಸಂಬಂಧಿಸಿದ ಜನರಿಗೆ ಈ ಅವಧಿಯಲ್ಲಿ ನೀವೊಂದು ಕೊಂಡದಕ್ಕಿಂತ ಹೆಚ್ಚಿನ ಲಾಭ ದೊರೆಯುವುದು. ಹಾಗೆ ಮೀನ ರಾಶಿಗೆ ಸೇರಿದ ಜನರು ಮಾಧುರ್ಯ ಭರಿತವಾದ ಮಾತುಗಳು ಸಾಮಾಜಿಕ ಮತ್ತು ಕುಟುಂಬ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ಈ ಸಂದರ್ಭದಲ್ಲಿ ಸಾಧ್ಯವಾಗಬಹುದು.
ಮೇಲೆ ಹೇಳಿರುವ ಮೂರು ರಾಶಿಗಳಾದ ವೃಷಭ, ಮಿಥುನ ಮತ್ತು ಮೀನ ರಾಶಿಗೆ ಸೇರಿದ ಜನರಲ್ಲಿ ನಿಮ್ಮ ರಾಶಿಯು ಒಂದಾಗಿದ್ದರೆ, ಇದೇ ಏಪ್ರಿಲ್ 11ರಂದು ನಿರ್ಮಾಣಗೊಳ್ಳಲಿರುವ ದ್ವಿದ್ವಾದಶ ಯೋಗದಿಂದಾಗಿ ನಿಮ್ಮ ಅದೃಷ್ಟದಲ್ಲಿ ಹೆಚ್ಚಳವನ್ನು ಹೊಂದುವುದರೊಂದಿಗೆ ನಿಮ್ಮ ಶುಭದಿನಗಳ ಪ್ರಾರಂಭವನ್ನು ಈ ಸಂದರ್ಭದಲ್ಲಿ ಹೊಂದುವುದರಿಂದ ನಿಮ್ಮ ಬದುಕು ಬಂಗಾರವಾಗುವ ಸಾಧ್ಯತೆ ಹೆಚ್ಚಾಗಿರುವುದು.

