Dailyhunt Logo
  • Light mode
    Follow system
    Dark mode
    • Play Story
    • App Story
ಎಸ್‌ಸಿಒ ಗ್ರೂಪ್‌ ಫೋಟೋದಿಂದ ನರೇಂದ್ರ ಮೋದಿ ಔಟ್; ಶೆಹಬಾಜ್‌ ಷರೀಫ್‌ ಸುತ್ತ ಜಾಗತಿಕ ನಾಯಕರು! ಪಾಕ್‌ PMO ಜೋಕರ್ಸ್

ಎಸ್‌ಸಿಒ ಗ್ರೂಪ್‌ ಫೋಟೋದಿಂದ ನರೇಂದ್ರ ಮೋದಿ ಔಟ್; ಶೆಹಬಾಜ್‌ ಷರೀಫ್‌ ಸುತ್ತ ಜಾಗತಿಕ ನಾಯಕರು! ಪಾಕ್‌ PMO ಜೋಕರ್ಸ್

Vijay Karnataka 2 weeks ago

ಸ್ಲಾಮಾಬಾದ್‌: ಪಾಕಿಸ್ತಾನ ಒಂದು ಸ್ಟೇಟ್‌ ಅಲ್ಲ, ಅದು ಸ್ಟೇಟ್‌ ಆಫ್‌ ಮೈಂಡ್‌ ಅನ್ನೋ ಮಾತೊಂದಿದೆ. ಆದರೆ ಅಲ್ಲಿನ ಸರ್ಕಾರ ತನಗೆ ಮೆದುಳೂ ಇಲ್ಲ ಎಂಬುದನ್ನು ಸಾಬೀತು ಮಾಡಿದೆ. ಕಿರ್ಗಿಸ್ತಾನ್‌ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ)ದ ಶೃಂಗಸಭೆಯಲ್ಲಿ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೊರತ ಮನ್ನಣೆ, ಪಾಕಿಸ್ತಾನ ಸರ್ಕಾರದ ಹೊಟ್ಟೆಯುರಿಗೆ ಕಾರಣವಾಗಿದೆ.

ಇದೇ ಕಾರಣಕ್ಕೆ, ಎಸ್‌ಸಿಒ ಶೃಂಗಸಭೆಯ ವೇದಿಕೆ ಮೇಲೆ ಕ್ಲಿಕ್ಕಿಸಿದ ಜಾಗತಿಕ ನಾಯಕರ ಗ್ರೂಪ್‌ ಫೋಟೋಗೆ, ಪಾಕಿಸ್ತಾನ ಪ್ರಧಾನಿ ಕಚೇರಿ ಕತ್ತರಿ ಹಾಕಿದೆ. ಈ ಗ್ರೂಪ್‌ ಫೋಟೋದಿಂದ ಭಾರತದ ಪ್ರಧಾನಿ ಅವರನ್ನು ಹೊರಹಾಕಿರುವ ಪಾಕ್‌ ಪಿಎಂಒ, ಕೇವಲ ಶೆಹಬಾಜ್‌ ಷರೀಫ್‌ ಅವರು ಇತರ ಜಾಗತಿಕ ನಾಯಕರೊಂದಿಗೆ ನಿಂತ ಫೋಟೋವನ್ನು ತನ್ನ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಹಂಚಿಕೊಂಡಿದೆ.

ಪಾಕ್‌ ಪಿಎಂಒ ಹಂಚಿಕೊಂಡ ಫೋಟೋದಲ್ಲಿ ಪ್ರಧಾನಿ ಶೆಹಬಾಜ್‌ ಷರೀಫ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸೇರಿದಂತೆ ಇತರ ಜಾಗತಿಕ ನಾಯಕರ ಫೋಟೋ ಮಾತ್ರವಿದ್ದು, ಮತ್ತೊಂದು ಬದಿಯಲ್ಲಿ ನಿಂತಿದ್ದ ಪ್ರಧಾನಿ ಮೋದಿ ಅವರ ಫೋಟೋ ಇಲ್ಲವಾಗಿದೆ. ಪಾಕಿಸ್ತಾನದ ಈ ಕ್ರಮ ಜಾಗತಿಕ ಮಟ್ಟದಲಿ ಅಪಹಾಸ್ಯಕ್ಕೆ ಗುರಿಯಾಗಿದೆ.

ಷರೀಫ್‌ ಮಿಂಚಿಂಗ್‌:

ಬಿಷ್ಕೆಕ್‌ ಎಸ್‌ಸಿಒ ಶೃಂಗಸಭೆಯಲ್ಲಿ ಪುಟಿನ್‌ ಮಾತನಾಡಿಸಲು ಷರೀಫ್‌ ವಿಫಲ ಪ್ರಯತ್ನ ಮಾಡಿದ್ದನ್ನು ಇಡೀ ಜಗತ್ತು ನೋಡಿದೆ. ಗ್ರೂಪ್‌ ಫೋಟೋ ಬಳಿಕ ಶೆಹಬಾಜ್‌ ಷರೀಫ್‌ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಬೆನ್ನಟ್ಟಿ ಮಾತನಾಡಿಸಲು ಪ್ರಯತ್ನಿಸಿದರ. ಆದರೆ ಪುಟಿನ್‌ ಕೇವಲ ಸೌಜನ್ಯಕ್ಕೆ ಮಾತನಾಡಿಸಿ ಮುಂದೆ ತೆರಳಿದರು.

ಈ ಮುಜುಗರದಿಂದ ಪಾಕ್‌ ಜನತೆಯ ಗಮನವನ್ನು ಬೇರೆಡೆ ಸೆಳೆಯಲು, ಅಲ್ಲಿನ ಪ್ರಧಾನಿ ಕಚೇರಿ ಎಸ್‌ಸಿಒ ಶೃಂಗಸಭೆಯ ಗ್ರೂಪ್‌ ಫೋಟೋವನ್ನೇ ಎಡಿಟ್‌ ಮಾಡಿದೆ. ತನ್ನ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿರುವ ಫೋಟೋದಲ್ಲಿ, ಪಾಕಿಸ್ತಾನ ಪ್ರಧಾನಿ ಶೆರಹಬಾಜ್‌ ಷರೀಫ್‌ ಮಧ್ಯಭಾಗದಲ್ಲಿ ನಿಂತಿದ್ದು, ಇತರ ಜಾಗತಿಕ ನಾಯಕರು ಅವರ ಸುತ್ತ ನಿಂತಿದ್ದಾರೆ.

ಖುದ್ದು ಶೆಹಬಾಜ್‌ ಷರೀಫ್‌ ಹಂಚಿಕೊಂಡಿರುವ ಈ ಫೋಟೋದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಕಿರ್ಗಿಸ್ತಾನ್‌ ಅಧ್ಯಕ್ಷ ಸದಿರ್ ಜಪಾರೋವ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ತಜಾಕಿಸ್ತಾನ ಅಧ್ಯಕ್ಷ ಎಮೊಮಾಲಿ ರಹಮೋನ್, ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್ ಮತ್ತು ಕಿರ್ಗಿಜ್ ಕರ್ನಲ್ ಉಲಾರ್ಬೆಕ್ ಝಾರ್ಲಿಕೋವಿಚ್ ಶಾರ್ಶೀವ್ ಮಾತ್ರ ಕಾಣಿಸುತ್ತಿದ್ದಾರೆ.

ಕಿರ್ಗಿಜಿಸ್ತಾನ್‌ನ ಬಿಷ್ಕೆಕ್‌ನಲ್ಲಿ ನಡೆದ 26ನೇ SCO ಶೃಂಗಸಭೆಯ ಅಧಿವೇಶನವೊಂದರ ಆರಂಭಕ್ಕೂ ಮುನ್ನ ಈ ಫೋಟೋವನ್ನು ತೆಗೆಯಲಾಗಿತ್ತು. ಇದರಲ್ಲಿ ಎಸ್‌ಸಿಒ ಸದಸ್ಯ ರಾಷ್ಟ್ರಗಳ ಎಲ್ಲಾ ನಾಯಕರು ಒಟ್ಟಿಗೆ ನಿಂತಿದ್ದರು. ಆದರೆ ಪಾಕಿಸ್ತಾನ ಮಾತ್ರ ಪ್ರಧಾನಿ ಮೋದಿ ಮತ್ತು ಇತರ ಜಾಗತಿಕ ನಾಯಕರ ಫೋಟೋ ಎಡಿಟ್‌ ಮಾಡಿ, ಕೇವಲ ತನ್ನ ನಾಯಕನನ್ನು ವಿಜೃಂಭಿಸುವ ವಿಫಲ ಪ್ರಯತ್ನ ಮಾಡಿದೆ.

ಮೂಲ ಚಿತ್ರ ಹಂಚಿಕೊಂಡ ಮೋದಿ:

ಆದರೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಸ್‌ಸಿಒ ಶೃಂಗಸಭೆ ಗ್ರೂಪ್‌ ಫೋಟೋದ ಮೂಲ ಚಿತ್ರವನ್ನು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ವಾಸ್ತವದಲ್ಲಿ ಶೆಹಬಾಜ್‌ ಷರೀಫ್ ಅವರು ಬಲದಿಂದ ನಾಲ್ಕನೇ ಸ್ಥಾನದಲ್ಲಿ ನಿಂತಿದ್ದು, ಇತರ ಐವರು ವಿಶ್ವ ನಾಯಕರನ್ನು ಚಿತ್ರದಿಂದ ಕತ್ತರಿಸಿರುವುದನ್ನು, ಪ್ರಧಾನಿ ಮೋದಿ ಹಂಚಿಕೊಂಡ ಮೂಲ ಚಿತ್ರದಿಂದ ಸಾಬೀತಾಗಿದೆ.

ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಕುರಿತು ಸಂವಾದ ಮತ್ತು ಸಹಕಾರವನ್ನು ಉತ್ತೇಜಿಸುವ ಉದ್ದೇಶದಿಂದ, 26ನೇ ಎಸ್‌ಸಿಒ ನಾಯಕರ ಶೃಂಗಸಭೆಯು, 10 ಸದಸ್ಯ ರಾಷ್ಟ್ರಗಳು, 15 ಪಾಲುದಾರ ದೇಶಗಳು ಮತ್ತು ಇಬ್ಬರು ವೀಕ್ಷಕ ದೇಶಗಳನ್ನು ಒಂದೆಡೆ ಸೇರಿಸಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka