ಗಜಕೇಸರಿ ಯೋಗ 2026: ಅಂಗಾರಕ ಸಂಕಷ್ಟ ಚತುರ್ಥಿಯಂದು ಗುರು ಚಂದ್ರ ಸ್ಥಾನದಿಂದಾಗಿ ಗಜಕೇಸರಿ ಯೋಗ ಸೃಷ್ಟಿಯಾಗುವುದು. ಇದು ಕೆಲ ರಾಶಿಯವರ ಅದೃಷ್ಟವನ್ನು ಖುಲಾಯಿಸುವುದು. ಆ ಅದೃಷ್ಟ ರಾಶಿಗಳ ಜಾತಕ ಹೇಗಿದೆ ತಿಳಿಯಿರಿ.
ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ನವಗ್ರಹಗಳು ಆಗಾಗ್ಗೆ ರಾಶಿ ಮತ್ತು ನಕ್ಷತ್ರವನ್ನು ಬದಲಾಯಿಸುತ್ತವೆ.
ಅಂಗಾರಕ ಸಂಕಷ್ಟ ಚತುರ್ಥಿಯಂದು ಸೃಷ್ಟಿಯಾಗುವ ಗಜಕೇಸರಿ ಯೋಗ ಮೇಷ ರಾಶಿಯವರಿಗೆ ಅನಿರೀಕ್ಷಿತ ಫಲಗಳನ್ನು ನೀಡಲಿದೆ. ಮನೆಯಲ್ಲಿ ಸಂತೋಷ, ಆರ್ಥಿಕ ಅಭಿವೃದ್ಧಿ, ಉದ್ಯೋಗ ಪ್ರಗತಿ ಕಾಣಬಹುದು. ಅಲ್ಲದೆ ಆದಾಯದ ಹಲವಾರು ಮೂಲಗಳು ತೆರೆದುಕೊಳ್ಳುವ ಸುವರ್ಣ ಸಮಯ ಇದು. ಹೊಸ ವಾಹನ, ಮನೆ ಖರೀದಿಗೆ ಅವಕಾಶಗಳು ಸಿಗಬಹುದು. ಈ ಯೋಗದಿಂದಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪೂರ್ಣ ಹೃದಯದಿಂದ ಮಾಡಿದ ಪ್ರತಿಯೊಂದು ಯೋಜನೆಯು ಯಶಸ್ವಿಯಾಗುತ್ತವೆ. ಕೆಲಸದಲ್ಲಿ ನಿಮ್ಮ ಒಡಹುಟ್ಟಿದವರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ನೀವು ವೃತ್ತಿಜೀವನದಲ್ಲಿ ಹಿಂದೆಂದೂ ಕಾಣದ ಪ್ರಗತಿಯನ್ನು ನೋಡಬಹುದು. ನಿಮ್ಮ ಮನಸ್ಸಿನಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಧೈರ್ಯ ಬರಲಿದೆ. ಗುರು ದೇವ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲಿದ್ದಾನೆ. ಈ ಸಮಯದಲ್ಲಿ ನೀವು ಬಹಳಷ್ಟು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಹಬ್ಬದ ವಾತಾವರಣದಿಂದಾಗಿ ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ. ಮಾತಿನ ಮೂಲಕ ನೀವು ಅನೇಕ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮ ವೃತ್ತಿಜೀವನದಲ್ಲಿ ಬೆಳವಣಿಗೆಯನ್ನು ನೀವು ಕಾಣಬಹುದು.
ಕಟಕ ರಾಶಿ

ಕಟಕ ರಾಶಿಯ 12ನೇ ಮನೆಯಲ್ಲಿ ಗುರು ಹಾಗೂ 6ನೇ ಮನೆಯಲ್ಲಿ ಧನು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಲಿದೆ. ಇದು ವೃತ್ತಿಜೀವನದಲ್ಲಿ ಪ್ರಗತಿಗೆ ತಂದುಕೊಡುವುದು. ಕೆಲಸ ಮಾಡುವವರಿಗೆ ಬಡ್ತಿ ಪಡೆಯುವ ಅವಕಾಶಗಳು ದೊರೆಯುತ್ತವೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ. ದೀರ್ಘಕಾಲೀನ ಕಠಿಣ ಪರಿಶ್ರಮದ ಪ್ರತಿಫಲವನ್ನು ನೀವು ಪಡೆಯುವಿರಿ. ಮೇ 5ರಿಂದ ಮೇ8ರವರೆಗೆ ಗುರು ನಿಮ್ಮ ಸಂಪತ್ತಿನಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗಿರಲಿದೆ. ಅಲ್ಲದೆ ನಿಮಗೆ ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕೆಲಸಕ್ಕಾಗಿ ಸಾಕಷ್ಟು ಪ್ರಯಾಣಿಸಬೇಕಾಗಬಹುದು. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳಿಂದ ಸ್ನೇಹ ಬೆಳೆಸುವ ಸಾಧ್ಯತೆ ಉಂಟು. ವೃತ್ತಿಜೀವನದಲ್ಲಿ ಪ್ರಗತಿಯನ್ನು ನೀವು ಕಾಣುವಿರಿ. ಆರ್ಥಿಕ ಸ್ಥಿತಿಯಲ್ಲಿ ಬೆಳವಣಿಗೆ ಕಂಡುಬರಲಿದೆ. ಒಟ್ಟಾರೆಯಾಗಿ ಅಂಗಾರಕ ಸಂಕಷ್ಟ ಚತುರ್ಥಿಯಂದು ರೂಪಗೊಳ್ಳುವ ಗಜಕೇಸರಿ ಯೋಗ ಹಾಗೂ ಗುರುವಿನ ಕೃಪೆಯಿಂದ ನೀವು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನೋಡುತ್ತೀರಿ.
ಮಿಥುನ ರಾಶಿ

ಅಂಗಾರಕ ಸಂಕಷ್ಟ ಚತುರ್ಥಿಯಂದು ರೂಪಗೊಳ್ಳುವ ಗಜಕೇಸರಿ ಯೋಗ ಮಿಥುನ ರಾಶಿಯವರ ಭಾಗ್ಯದ ಬಾಗಿಲನ್ನು ತೆರೆಯುವುದು. ಈ ಯೋಗವು ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಅವಕಾಶಗಳು ಸಿಗಬಹುದು. ಕೆಲಸದಲ್ಲಿ ಒತ್ತಡ ಕಡಿಮೆಯಾಗಿ ಮನಸ್ಸಿನ ಶಾಂತಿ ಹೆಚ್ಚಾಗುತ್ತದೆ. ಕುಟುಂಬ ಜೀವನ ಸಮೃದ್ಧವಾಗಿರಲು ಗುರು ಆಶೀರ್ವದಿಸುವುದು. ಅಲ್ಲದೆ ಇದು ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ನೀವು ಜೀವನದಲ್ಲಿ ಅನಿರೀಕ್ಷಿತ ಪ್ರಗತಿಯನ್ನು ಕಾಣುವಿರಿ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಉತ್ತಮವಾಗಿರಲಿದೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಸುಧಾರಿಸುತ್ತದೆ. ಇದು ಆಧ್ಯಾತ್ಮಿಕತೆಯ ಬಗ್ಗೆ ನಿಮ್ಮ ಆಸಕ್ತಿ ಹೆಚ್ಚಿಸಬಹುದು. ವಿದೇಶ ಪ್ರಯಾಣಕ್ಕೆ ನಿಮಗೆ ಅವಕಾಶಗಳು ಸಿಗುತ್ತವೆ. ಅಲ್ಲದೆ ಹೊಸ ಆದಾಯದ ಮೂಲಗಳನ್ನು ಸೃಷ್ಟಿಯಾಗುವ ಪರ್ವಕಾಲ ಇದು. ಈ ವೇಳೆ ದೀರ್ಘಕಾಲದ ಆಸೆಗಳು ಈಡೇರುತ್ತವೆ. ಸ್ನೇಹಿತರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು.
ಧನು ರಾಶಿ

ಅಂಗಾರಕ ಸಂಕಷ್ಟ ಚತುರ್ಥಿಯಂದು ಧನು ರಾಶಿಯವರ ಬಾಳು ಬಂಗಾರವಾಗಲಿದೆ. ಈ ದಿನ ನಿಮ್ಮೆಲ್ಲಾ ಕಾರ್ಯಗಳು ದುಪ್ಪಟ್ಟು ಲಾಭ ತಂದುಕೊಡುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಮೇ 5ರಿಂದ ಮೇ8ವರೆಗಿನ ಅವಧಿ ನಿಮಗೆ ತುಂಬಾ ಅನುಕೂಲಕರವಾಗಿದೆ. ಈ ಸಮಯದಲ್ಲಿ ಮಾಡುವ ಶುಭ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳುತ್ತವೆ. ನೀವು ನಡೆಯುವ ಹಾದಿ ಕಲ್ಲುಮುಳ್ಳಿನಿಂದ ವಿಮುಕ್ತವಾಗಿರುವುದು. ಲಾಭದ ಮಾರ್ಗಗಳು ಸುಲಭಗೊಳಿಸಲು ಗುರು ದೇವ ನಿಮಗೆ ಬಲ ನೀಡಲಿದ್ದಾನೆ. ಅಲ್ಲದೆ ಗುರು ನಿಮಗೆ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಮಕ್ಕಳ ಬೆಳವಣಿಗೆಯನ್ನು ನೋಡಿ ನೀವು ಆನಂದಿಸುವಿರಿ. ಪ್ರೇಮ ಜೀವನ ಬಲಗೊಳ್ಳುತ್ತದೆ. ದಂಪತಿಗಳ ನಡುವಿನ ಬಾಂಧವ್ಯ ಹೆಚ್ಚಾಗುವುದು. ಮಕ್ಕಳಿಗಾಗಿ ಕಾಯುತ್ತಿರುವವರಿಗೆ ಮಕ್ಕಳಾಗುವ ಭಾಗ್ಯ ದೊರೆಯುವ ಸಾಧ್ಯತೆಯಿದೆ.
ವೃಶ್ಚಿಕ ರಾಶಿ

ಗಜಕೇಸರಿ ಯೋಗ ವೃಶ್ಚಿಕ ರಾಶಿಯವರ ಬಾಳಲ್ಲಿ ಹೊಸ ಬೆಳಕನ್ನು ತರಲಿದೆ. ಮೇ 5ರಿಂದ ಮೇ8ರ ಅವಧಿಯಲ್ಲಿ ನೀವು ಹಠಾತ್ ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ನಿಮ್ಮ ಬುದ್ಧಿವಂತಿಕೆಯಿಂದ ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ನೀವು ತಾಳ್ಮೆ ಮತ್ತು ತಿಳುವಳಿಕೆಯಿಂದ ವರ್ತಿಸಿದರೆ ಅನಿರೀಕ್ಷಿತ ಫಲಿತಾಂಶಗಳು ಸಿಗುತ್ತವೆ. ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷ ದ್ವಿಗುಣವಾಗಲಿದೆ. ದಂಪತಿಗಳ ನಡುವೆ ಪ್ರೀತಿ ಮತ್ತು ಬಾಂಧವ್ಯ ಹೆಚ್ಚಾಗಲಿದೆ. ಜಂಟಿ ವ್ಯವಹಾರ ಮಾಡುವವರಿಗೆ ಲಾಭ ಸಿಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಮದುವೆಯಾಗದವರಿಗೆ ಬಯಸಿದ ವರ ಸಿಗಬಹುದು. ಗುರು ನಿಮ್ಮ ಶತ್ರುಗಳನ್ನು ಸೋಲಿಸಲು ಸಹಾಯ ಮಾಡುತ್ತದೆ. ನೀವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವಿರಿ. ಕೆಲಸ ಮಾಡುವವರು ಕಚೇರಿಯಲ್ಲಿ ಪ್ರಗತಿಯನ್ನು ಕಾಣುವ ಸಾಧ್ಯತೆ ಉಂಟು. ಆದರೆ ನೀವು ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು.

