Dailyhunt Logo
  • Light mode
    Follow system
    Dark mode
    • Play Story
    • App Story
ಗಜಕೇಸರಿ ಯೋಗ 2026: ಮಕರ ಸೇರಿ ಈ 5 ರಾಶಿಯವರಿಗಿದೆ ಶ್ರೀಮಂತಿಕೆ ಬಯಸಿದ ಭಾಗ್ಯ..!

ಗಜಕೇಸರಿ ಯೋಗ 2026: ಮಕರ ಸೇರಿ ಈ 5 ರಾಶಿಯವರಿಗಿದೆ ಶ್ರೀಮಂತಿಕೆ ಬಯಸಿದ ಭಾಗ್ಯ..!

Vijay Karnataka 1 month ago

ಗುರು ಗ್ರಹ ಜುಲೈ 14ರಂದು ಚಂದ್ರನೊಂದಿಗೆ ಸಂಯೋಗವಾಗಲಿದೆ. ಇದರಿಂದ ಗಜಕೇಸರಿ ಯೋಗ ರೂಪಗೊಳ್ಳುವುದು. ಕೆಲ ರಾಶಿಯವರಿಗೆ ಶ್ರೀಮಂತರಾಗುವ ಅವಕಾಶಗಳನ್ನು ನೀಡಲಿದೆ. ಹಾಗಾದರೆ ಯಾವ ರಾಶಿಯವರಿಗೆ ಗುರು ಕೃಪೆ ಇರಲಿದೆ ಎಂದು ತಿಳಿಯಿರಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳು ಕಾಲಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತವೆ.
ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ಪರಿಣಾಮ ಬೀರುವುದು. ಆ ರೀತಿಯಲ್ಲಿ ಗುರುವನ್ನು ದೇವರುಗಳ ಗುರು ಎಂದು ಪರಿಗಣಿಸಲಾಗುತ್ತದೆ. ಈ ಗುರು ಇತ್ತೀಚೆಗೆ ತನ್ನ ಸರ್ವೋಚ್ಚ ರಾಶಿಯಾದ ಕರ್ಕ ರಾಶಿಯನ್ನು ಪ್ರವೇಶಿಸಿದನು. ಇದೀಗ ಗುರುವಿನೊಂದಿಗೆ ಜುಲೈ 14ರಂದು ಚಂದ್ರ ಕೂಡ ಸೇರಿ ಸಂಚಾರ ಮಾಡುವುದು. ಇದು ಜುಲೈ 16ರವರೆಗೆ ಈ ಶುಭ ಯೋಗ ಇರಲಿದೆ. ಗುರು ಹಾಗೂ ಚಂದ್ರನ ಈ ಸಂಚಾರದ ಪ್ರಭಾವ ಮೇಷ ರಾಶಿಯಿಂದ ಮೀನ ರಾಶಿಯವರೆಗಿನ 12 ರಾಶಿಗಳ ಜೀವನದ ಮೇಲೆ ಕಂಡುಬರುವುದು. ವಿಶೇಷವಾಗಿ 5 ರಾಶಿಗಳು ಗುರುವಿನ ಈ ಸಂಚಾರದಿಂದಾಗಿ ಅದೃಷ್ಟವನ್ನು ಪಡೆಯುತ್ತವೆ. ಹಾಗಾದರೆ ಈಗ ಗುರುವಿನ ಸಂಚಾರದಿಂದಾಗಿ ಯಾವ ರಾಶಿಯವರ ಅದೃಷ್ಟ ಖುಲಾಯಿಸುವುದು ಎಂದು ತಿಳಿಯೋಣ.ಮೇಷ ರಾಶಿ

ಮೇಷ ರಾಶಿಯವರ ಬಾಳು ಬಂಗಾರವಾಗುವುದು. ಜುಲೈ 14ರಿಂದ ಆಗಸ್ಟ್ 12ರವರೆಗೆ ನೀವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ನೀವು ಯಶಸ್ಸನ್ನು ಕಾಣುವಿರಿ. ಗುರುವಿನ ಸಂಚಾರದಿಂದಾಗಿ ಮೇಷ ರಾಶಿಯವರ ಬಹುಕಾಲದ ಆಸೆಗಳು ಈಡೇರುತ್ತವೆ. ನೀವು ಐಷಾರಾಮಿ ಜೀವನವನ್ನು ನಡೆಸಲು ಸಾಧ್ಯವಾಗುವುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುವ ಲಕ್ಷಣಗಳು ಇವೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಕೆಲಸ ಮಾಡುವವರ ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯುವುದು. ಕೆಲವರಿಗೆ ಬಡ್ತಿ, ಸಂಬಳ ಹೆಚ್ಚಳ ಇತ್ಯಾದಿ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು.


ಮಿಥುನ ರಾಶಿ

ಮಿಥುನ ರಾಶಿಯವರಿಗೆ ಸಾಕಷ್ಟು ಶುಭ ಫಲಗಳು ಪ್ರಾಪ್ತಿಯಾಗಲಿವೆ. ಗುರುವಿನ ಸಂಚಾರದಿಂದಾಗಿ ಮಿಥುನ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಹಠಾತ್ ಆರ್ಥಿಕ ಲಾಭದ ಸಾಧ್ಯತೆಗಳೂ ಉಂಟು. ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ, ಅವುಗಳಿಂದ ಅನಿರೀಕ್ಷಿತ ಲಾಭ ಪಡೆಯುವ ಸಾಧ್ಯತೆಗಳು ಇವೆ. ಈ ಅವಧಿ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ. ವಿದೇಶಕ್ಕೆ ಹೋಗಲು ಬಯಸುವವರ ಆಸೆಗಳು ಈಡೇರುವ ಸಮಯ ಇದು. ಗುರುವಿನ ಕೃಪೆಯಿಂದ ನೀವು ಉತ್ತಮ ಸಾಧನೆಗಳನ್ನು ಸಾಧಿಸುವಿರಿ. ಹಿಂದೆ ಮಾಡಿದ ಸಾಲಗಳು ತೀರುತ್ತವೆ. ಆರ್ಥಿಕ ಜೀವನ ನೆಮ್ಮದಿಯಿಂದ ಕೂಡಿರಲಿದೆ. ಹೂಡಿಕೆ ಮೂಲಕ ದುಪ್ಪಟ್ಟು ಲಾಭವನ್ನು ನೀವು ಪಡೆಯುವಿರಿ. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆಯನ್ನು ಕಾಣುವುದು. ಕಷ್ಟಗಳು ನಿವಾರಣೆಯಾಗಿ ಜೀವನದಲ್ಲಿ ನೆಮ್ಮದಿ ನೆಲೆಸಲಿದೆ.


ಮೀನ ರಾಶಿ

ಮೀನ ರಾಶಿಯವರಿಗೆ ಗುರುವಿನ ಸಂಚಾರದಿಂದಾಗಿ ಅನಿರೀಕ್ಷಿತ ಫಲಿತಾಂಶಗಳು ದೊರೆಯುತ್ತವೆ. ಆರ್ಥಿಕ ಸ್ಥಿತಿಯಲ್ಲಿ ನೀವು ಪ್ರಗತಿಯನ್ನು ಕಾಣುವಿರಿ. ಹಣದ ಹರಿವು ಹೆಚ್ಚಾಗಲಿದೆ. ದೀರ್ಘಕಾಲದಿಂದ ಸಿಲುಕಿಕೊಂಡಿದ್ದ ಹಣ ನಿಮ್ಮ ಕೈ ಸೇರುವುದು. ಈ ಅವಧಿಯಲ್ಲಿ ನೀವು ಹೊಸ ಹೂಡಿಕೆಗಳನ್ನು ಮಾಡಿದರೆ, ನಿಮಗೆ ಎರಡು ಪಟ್ಟು ಲಾಭವಾಗುವುದು. ಗುರುವಿನ ಕೃಪೆಯಿಂದ ಸೌಲಭ್ಯಗಳು ಮತ್ತು ಐಷಾರಾಮಿ ಜೀವನ ನಿಮ್ಮದಾಗಲಿದೆ. ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ನೀವು ಕಾಣುವಿರಿ. ಉದ್ಯಮಿಗಳು ಅನಿರೀಕ್ಷಿತ ಲಾಭವನ್ನು ನಿರೀಕ್ಷಿಸಬಹುದು. ಹಿಂದೆ ಮಾಡಿದ ಸಾಲಗಳು ತೀರುತ್ತವೆ. ಆರ್ಥಿಕ ಜೀವನ ನೆಮ್ಮದಿಯಿಂದ ಕೂಡಿರಲಿದೆ. ಶ್ರಮಕ್ಕೆ ತಕ್ಕ ಲಾಭವನ್ನು ನೀವು ಪಡೆಯಬಹುದು. ಕೃಷಿ, ಉದ್ಯಮ, ವ್ಯವಹಾರ, ವ್ಯಾಪಾರ ಮಾಡುವವರಿಗೆ ಈ ಸಮಯದಲ್ಲಿ ಸಾಕಷ್ಟು ಲಾಭವಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚಿ ದುಪ್ಪಟ್ಟು ಹಣ ಹಾಗೂ ಸ್ಥಾನವನ್ನು ನೀಡಬಹುದು.


ವೃಷಭ ರಾಶಿ

ವೃಷಭ ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಜುಲೈ 14ರಿಂದ ಜುಲೈ 16ರವರೆಗೆ ಆರ್ಥಿಕ ಜೀವನದಲ್ಲಿ ಬರೀ ಲಾಭವನ್ನೇ ನೀವು ಕಾಣುವಿರಿ. ನಿಮ್ಮ ಶ್ರಮ ಹಾಗೂ ಆದೃಷ್ಟ ನಿಮ್ಮ ಕೈ ಹಿಡಿಯಲಿದೆ. ಗುರುವಿನ ಸಂಚಾರದಿಂದಾಗಿ ಏಕಕಾಲದಲ್ಲಿ ಹಲವು ರೀತಿಯ ಶುಭ ಸುದ್ದಿಗಳು ಬರಬಹುದು. ಸಮಾಜದಲ್ಲಿ ಗೌರವ ಮತ್ತು ಕೀರ್ತಿ ದ್ವಿಗುಣವಾಗುವ ಸಮಯ ಇದು. ಆರ್ಥಿಕ ಲಾಭ ದೊರೆಯುವ ಸಾಧ್ಯತೆಗಳು ಇವೆ. ಹೊಸ ಯೋಜನೆಗಳೊಂದಿಗೆ ವ್ಯವಹಾರದಲ್ಲಿ ಪ್ರಗತಿಯನ್ನು ನೀವು ಕಾಣುವಿರಿ. ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಮದುವೆಯಾಗದವರಿಗೆ ಮತ್ತು ಮದುವೆಯಾಗುತ್ತಿರುವವರಿಗೆ ಬಯಸಿದ ಸಂಗಾತಿ ಸಿಗುವರು. ನಿಮ್ಮೆಲ್ಲಾ ಆಸೆಗಳು ಈಡೇರುವ ಸಮಯ ಇದಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು. ನೆಮ್ಮದಿಯ ಜೀವನವನ್ನು ನೀವು ನಡೆಸುವಿರಿ.


ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಗುರುವಿನ ವಿಶೇಷ ಅನುಗ್ರಹ ಇರಲಿದೆ. ಈ ಸಮಯದಲ್ಲಿ ಗುರು ಕಟಕ ರಾಶಿಯಲ್ಲಿ ಸಾಗುವುದರಿಂದ ಅನಿರೀಕ್ಷಿತ ಫಲಗಳನ್ನು ನೀಡಬಹುದು. ಆರ್ಥಿಕ ಜೀವನ ನೆಮ್ಮದಿಯಿಂದ ಕೂಡಿರಲಿದೆ. ಹಿಂದೆ ಮಾಡಿದ ಸಾಲಗಳನ್ನು ಈ ಸಮಯದಲ್ಲಿ ನೀವು ತೀರಿಸುವಿರಿ. ಆರ್ಥಿಕ ಸ್ಥಿತಿ ಬಲಗೊಳ್ಳುತ್ತಾ ಸಾಗುವುದು. ಕುಟುಂಬ ಜೀವನ ನೆಮ್ಮದಿಯಿಂದ ಕೂಡಿರುವುದು. ದೀರ್ಘಕಾಲದಿಂದ ನಿಂತುಹೋಗಿದ್ದ ಶುಭ ಕಾರ್ಯಗಳು ಮತ್ತೆ ಶುರುವಾಗುವುದು. ಮದುವೆಯಾಗುವ ನಿರೀಕ್ಷೆಯಲ್ಲಿ ಇರುವವರಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ಬಯಸಿದ ಬಾಳ ಸಂಗಾತಿ ನಿಮ್ಮ ಕೈ ಹಿಡಿಯಲಿದ್ದಾರೆ. ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುವುದು.


Dailyhunt
Disclaimer: This content has not been generated, created or edited by Dailyhunt. Publisher: Vijay Karnataka