ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆದುಕೊಂಡಿರುವ ವ್ಯಕ್ತಿ ತನ್ನ ಜೀವನದಲ್ಲಿ ಸಂಪತ್ತು, ಸಮೃದ್ಧಿಯ ಕೊರತೆಯನ್ನು ಎದುರಿಸುವುದಿಲ್ಲ. ಗರುಡ ಪುರಾಣದ ಪ್ರಕಾರ, ನಮ್ಮಲ್ಲಿನ ಈ 5 ಅಭ್ಯಾಸಗಳು ಲಕ್ಷ್ಮಿ ದೇವಿಗೆ ಕೋಪ ಬರುವಂತೆ ಮಾಡುತ್ತದೆ. ನಿಮ್ಮ ಅದೃಷ್ಟವನ್ನು ನಾಶವಾಗುವಂತೆ ಮಾಡುತ್ತದೆ.
ಗರುಡ ಪುರಾಣದ ಪ್ರಕಾರ, ಯಾವ 5 ಅಭ್ಯಾಸಗಳು ಲಕ್ಷ್ಮಿ ದೇವಿಯನ್ನು ಕೋಪಗೊಳಿಸುತ್ತದೆ.? ನಿಮ್ಮಲ್ಲೂ ಈ ಗುಣಗಳಿವೆಯೇ.?
ಸನಾತನ ಧರ್ಮವು ಲಕ್ಷ್ಮಿ ದೇವಿಗೆ ಸಂಪತ್ತು, ಸಮೃದ್ಧಿ ಮತ್ತು ಐಶ್ವರ್ಯದ ದೇವತೆಯ ಸ್ಥಾನವು ನೀಡಿದೆ. ಆಕೆಯ ಆಶೀರ್ವಾದವನ್ನು ಪಡೆದುಕೊಂಡ ವ್ಯಕ್ತಿ ಅಥವಾ ಆಕೆಯನ್ನು ಒಲಿಸಿಕೊಂಡ ವ್ಯಕ್ತಿ ತನ್ನ ಜೀವನದುದ್ದಕ್ಕೂ ಸಂತೋಷ, ಸಮೃದ್ಧಿ ಮತ್ತು ಸಂಪತ್ತಿನಿಂದ ತುಂಬಿರುತ್ತಾನೆ. ಲಕ್ಷ್ಮಿಯು ಧನ, ಸಂಪತ್ತಿನ ಅಧಿದೇವತೆಯಾದ್ದರಿಂದ ಆಕೆಯನ್ನು ಅನೇಕರು ತಮ್ಮ ಮನೆಗಳಲ್ಲಿ ವಾಸವಾಗಿರುವಂತೆ ಬೇಡಿಕೊಳ್ಳುತ್ತಾರೆ. ಲಕ್ಷ್ಮಿ ದೇವಿ ನಮಗೆ ಒಲಿದಾಗ ಹೇಗೆ ಅಷ್ಟೈಶ್ವರ್ಯವನ್ನು ಕರುಣಿಸುತ್ತಾಳೋ, ಹಾಗೇ ನಮ್ಮ ಮೇಲೆ ಅಸಮಾಧಾನಗೊಂಡಾಗ ನಮ್ಮನ್ನು ಅಷ್ಟೇ ದಾರಿದ್ರ್ಯವಂತರನ್ನಾಗಿ, ಬಡವರನ್ನಾಗಿ ಮಾಡುತ್ತಾಳೆ. ನಾವು ಮಾಡುವಂತಹ ಈ ತಪ್ಪುಗಳು ನಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಸಂತೋಷ ಮತ್ತು ಸಮೃದ್ಧಿಯನ್ನು ಹಾಳು ಮಾಡುತ್ತದೆ. ಗರುಡ ಪುರಾಣವು ಲಕ್ಷ್ಮಿ ದೇವಿ ನಾವು ಮಾಡುವ ಯಾವ ಕೆಲಸಗಳಿಂದ ಮನೆಯನ್ನು ತೊರೆಯುತ್ತಾಳೆ ಎಂದು ಹೇಳಿದೆ.ಕೊಳಕು ಬಟ್ಟೆಯನ್ನು ಧರಿಸುವುದು

ಗರುಡ ಪುರಾಣದ ಪ್ರಕಾರ, ಯಾವುದೇ ಒಬ್ಬ ವ್ಯಕ್ತಿ ಕೊಳಕಾದ, ಹರಿದ ಅಥವಾ ಹಳೆಯ ಬಟ್ಟೆಯನ್ನು ಧರಿಸಿದರೆ ಲಕ್ಷ್ಮಿ ದೇವಿಯು ಅಂತಹ ವ್ಯಕ್ತಿಯನ್ನು ಎಂದಿಗೂ ಆಶೀರ್ವದಿಸುವುದಿಲ್ಲ. ಆಕೆ ಅವರ ನಡವಳಿಕೆಯಿಂದ ಸಂತೋಷಪಡುವುದಿಲ್ಲ. ಅದೇ ನಾವು ಸ್ವಚ್ಛವಾದ ಹಾಗೂ ಪರಿಮಳಯುಕ್ತವಾದ ಬಟ್ಟೆಯನ್ನು ಧರಿಸುವುದರಿಂದ ನಮ್ಮ ಗೌರವ ಹೆಚ್ಚಾಗುವುದಲ್ಲದೆ, ಜೀವನಕ್ಕೆ ಸಕಾರಾತ್ಮಕ ಶಕ್ತಿಯು ದೊರೆಯುತ್ತದೆ. ಕೊಳಕು ಬಟ್ಟೆಯನ್ನು ಧರಿಸುವುದರಿಂದ ಇತರರ ಮನಸ್ಸಿನಲ್ಲಿ ನಮ್ಮ ಬಗ್ಗೆ ನಕಾರಾತ್ಮಕ ಆಲೋಚನೆಗಳು ಮೂಡುತ್ತದೆ. ಇದು ನಮ್ಮ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಅಡ್ಡಿಯಾಗುವುದು. ಆದ್ದರಿಂದ ಪ್ರತಿದಿನ ಸ್ನಾನವನ್ನು ಮಾಡಿ, ಸ್ವಚ್ಛವಾದ ಬಟ್ಟೆಯನ್ನು ಧರಿಸಿ. PC: pexel
ಅಗತ್ಯಕ್ಕಿಂತ ಹೆಚ್ಚು ತಿನ್ನುವುದು

ಯಾವುದೇ ಒಬ್ಬ ವ್ಯಕ್ತಿಯು ತನಗೆ ಹಸಿವಾಗುವುದಕ್ಕಿಂತ ಹೆಚ್ಚು ಆಹಾರವನ್ನು ತಿನ್ನುವುದರಿಂದ ಸೋಮಾರಿತನದ ದಾಸನಾಗುತ್ತಾನೆ. ಇದು ದೇಹವನ್ನು ಮಾತ್ರವಲ್ಲ. ಮನಸ್ಸನ್ನು ಕೂಡ ಸೋಮಾರಿತನಕ್ಕೆ ತಳ್ಳುತ್ತದೆ. ಅತಿಯಾಗಿ ಆಹಾರವನ್ನು ತಿನ್ನುವುದರಿಂದ ವ್ಯಕ್ತಿಯು ಕೆಲಸ ಮಾಡುವ ಮನಸ್ಥಿತಿಯನ್ನು, ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಅತಿಯಾಗಿ ತಿಂದು, ಸೋಮಾರಿತನವನ್ನು ಮೈಗೂಡಿಸಿಕೊಳ್ಳುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವು ನಿಮ್ಮಿಂದ ದೂರಾಗುವುದು. ಶಿಸ್ತುಬದ್ಧ, ಕಠಿಣ ಪರಿಶ್ರಮ ಮತ್ತು ಕ್ರಿಯಾಶೀಲರಾಗಿರುವವರಿಗೆ ಮಾತ್ರ ಲಕ್ಷ್ಮಿ ದೇವಿಯು ಸಂತೋಷಪಡುತ್ತಾಳೆ.PC: pexel
ಹಲ್ಲುಗಳನ್ನು ಸ್ವಚ್ಛವಾಗಿಡಿ

ಯಾವ ವ್ಯಕ್ತಿಯ ಹಲ್ಲುಗಳು ಸ್ವಚ್ಛವಾಗಿ, ಶುದ್ಧವಾಗಿರುತ್ತದೆಯೋ ಅಂತವರು ಲಕ್ಷ್ಮಿ ದೇವಿಯ ಮೆಚ್ಚುಗೆಯನ್ನು ಪಡೆದುಕೊಂಡಿರುತ್ತಾರೆ. ನಿಯಮಿತವಾಗಿ ಹಲ್ಲುಗಳನ್ನು ಉಜ್ಜದ, ಅಶುದ್ಧ ಹಲ್ಲುಗಳನ್ನು ಹೊಂದಿರುವ ವ್ಯಕ್ತಿಯು ಎಂದಿಗೂ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಂಡಿರುವುದಿಲ್ಲ. ಕೊಳಕು ಹಲ್ಲುಗಳು ಆರೋಗ್ಯಕ್ಕೆ ಹಾನಿಕಾರಕವಲ್ಲದೇ ಇರಬಹುದು. ಆದರೆ ಸೋಮಾರಿತನ ಮತ್ತು ಅಜಾಗರೂಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಜನರು ತಮ್ಮ ಕೆಲಸದಲ್ಲಿ ನಿರ್ಲಕ್ಷ್ಯವನ್ನು ಹೊಂದಿರುತ್ತಾರೆ. ಆದ್ದರಿಂದ, ಆರೋಗ್ಯ ಮತ್ತು ಅದೃಷ್ಟ ಎರಡನ್ನೂ ಖಚಿತಪಡಿಸಿಕೊಳ್ಳಲು ಪ್ರತಿದಿನ ನಿಮ್ಮ ಹಲ್ಲುಗಳನ್ನು ಉಜ್ಜುವುದು ಅವಶ್ಯಕವಾಗಿದೆ.PC: pexel
ಕೆಟ್ಟ ಮಾತುಗಳನ್ನು ಆಡುವುದು

ಲಕ್ಷ್ಮಿ ದೇವಿಯು ನಮ್ಮಲ್ಲಿ ಶುದ್ಧವಾದ ಮಾತುಗಳನ್ನು ಇಷ್ಟಪಡುತ್ತಾಳೆ. ಕೆಟ್ಟ, ಕಟುವಾದ ಅಥವಾ ಅವಮಾನಕರ ಪದಗಳನ್ನು ಅವಳು ಇಷ್ಟಪಡುವುದಿಲ್ಲ. ಅಂತಹ ಮಾತುಗಳನ್ನಾಡುವ ವ್ಯಕ್ತಿಯು ಲಕ್ಷ್ಮಿ ದೇವಿಯ ಅನುಗ್ರಹದಿಂದ ದೂರ ಉಳಿದಿರುತ್ತಾನೆ. ನಾವು ಸಾಧ್ಯವಾದಷ್ಟು ಸಿಹಿಯಾದ ಅಥವಾ ಮಧುರವಾದ ಮಾತುಗಳನ್ನು ಮಾತನಾಡಬೇಕು. ಸಭ್ಯಸ್ಥ ಸ್ವಭಾವವನ್ನು ಹೊಂದಿರಬೇಕು. ಇದು ಲಕ್ಷ್ಮಿ ದೇವಿಯ ಮೆಚ್ಚುಗೆಯನ್ನು ಪಡೆದುಕೊಳ್ಳಲು ಸಹಾಯ ಮಾಡುವ ಗುಣವಾಗಿದೆ. ಇತರರೊಂದಿಗೆ ಪ್ರೀತಿ ಮತ್ತು ಕರುಣೆಯಿಂದ ಮಾತನಾಡುವ ವ್ಯಕ್ತಿಯ ಜೀವನದಲ್ಲಿ ಅದೃಷ್ಟ ಸ್ವಯಂಚಾಲಿತವಾಗಿ ಪ್ರವೇಶಿಸುತ್ತದೆ. ಆದ್ದರಿಂದ, ಮಾತಿನಲ್ಲಿ ಸೌಮ್ಯತೆ ಮತ್ತು ನಡವಳಿಕೆಯಲ್ಲಿ ದಯೆಯನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ.PC: pexel
ಸೂರ್ಯಾಸ್ತದ ಸಮಯದಲ್ಲಿ ಮಲಗುವುದು

ವಾಸ್ತು ಮತ್ತು ಧಾರ್ಮಿಕ ಗ್ರಂಥಗಳ ಪ್ರಕಾರ, ಸೂರ್ಯಾಸ್ತದ ಸಮಯದಲ್ಲಿ ಮಲಗುವುದು ಬಹಳ ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಪ್ರಾರ್ಥನೆ, ಧ್ಯಾನ ಅಥವಾ ಲಘು ವ್ಯಾಯಾಮ ಮಾಡುವುದು ಸೂಕ್ತವಾಗಿದೆ. ಸೂರ್ಯಾಸ್ತದ ಸಮಯದಲ್ಲಿ ಮಲಗುವುದು ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಈ ಸಮಯದಲ್ಲಿ ಸೋಮಾರಿತನವನ್ನು ತಪ್ಪಿಸಿ ಮತ್ತು ಧಾರ್ಮಿಕ ಅಥವಾ ಸಕಾರಾತ್ಮಕ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.PC: pexel

