ಬೆಂಗಳೂರು: ಆಗಸ್ಟ್ ತಿಂಗಳಲ್ಲಿ ಗರಿಷ್ಠ ಬೆಲೆ ಏರಿಕೆ ಕಂಡಿದ್ದ ಚಿನ್ನದ ದರ 16397 ರೂಪಾಯಿಯಿಂದ ಮತ್ತೆ 15202 ರೂಪಾಯಿಗೆ ಕುಸಿದಿದೆ. ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಚಿನ್ನ ಖರೀದಿಯನ್ನು ಅನಗತ್ಯವಾಗಿ ಮಾಡಬೇಡಿ ಎಂದು ಮನವಿ ಮಾಡಿರುವುದರಿಂದ ಚಿನ್ನದ ಮೇಲಿನ ಹೂಡಿಕೆಯೂ ದಿಢೀರ್ ಕುಸಿದಿದೆ.
ಗ್ರಾಹಕು ಚಿನ್ನ ಕೊಳ್ಳಲು ಹಿಂದೇಟು ಹಾಕುವ ಸಾಧ್ಯತೆ ಇದೆ. ಆ ಮೂಲಕ ವಿದೇಶಿ ವಿನಿಮಯದಿಂದಾಗುವ ನಷ್ಟ ತಪ್ಪಿಸಲು ದೇಶ ಮುಂದಾಗಿದೆ. ಗುಡ್ ರಿಟರ್ನ್ಸ್ ವರದಿ ಮಾಡಿರುವ ಬೆಲೆ ಪಟ್ಟಿ ಇಲ್ಲಿದೆ.
| ಚಿನ್ನದ ಶುದ್ಧತೆ | 1 ಗ್ರಾಂ ಬೆಲೆ | ಇಂದಿನ ವ್ಯತ್ಯಾಸ (ಗ್ರಾಂ) | 10 ಗ್ರಾಂ ಬೆಲೆ |
| 22 ಕ್ಯಾರೆಟ್ ಚಿನ್ನ | 13935 | -190 | 1,39,350 |
| 24 ಕ್ಯಾರೆಟ್ ಚಿನ್ನ | 15202 | +207 | 1,52,020 |
| 18 ಕ್ಯಾರೆಟ್ ಚಿನ್ನ | 11402 | +155 | 1,14,020 |
ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ಸೆಪ್ಟೆಂಬರ್ 2 2026 ಬುಧವಾರದಂದು 24 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 207 ರೂ ಇಳಿಕೆ ಆಗಿದ್ದು, ಗ್ರಾಂ ಬೆಲೆ ಈಗ 15202 ರೂ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ 2070 ರೂ ಇಳಿಕೆಯಾಗಿದ್ದು 1,52,020 ರೂಪಾಯಿಗೆ ಇಳಿಕೆಯಾಗಿದೆ.22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 190 ರೂ ಇಳಿಕೆಯಾಗಿದೆ. 1 ಗ್ರಾಂ ಬೆಲೆ ಈಗ 13935 ರೂ ಆಗಿದ್ದು 10 ಗ್ರಾಂ ಬೆಲೆ 1900 ರೂ ಇಳಿಕೆಯಾಗಿ, ಈಗ ಬೆಲೆ 1,39,350 ರೂಪಾಯಿ ದಾಖಲಾಗಿದೆ.ಬೆಂಗಳೂರಿನ ಬೆಲೆ ಎಷ್ಟಿದೆ?
ಬೆಂಗಳೂರಲ್ಲಿ ಶುದ್ಧ ಚಿನ್ನದ ಗ್ರಾಂ ಬೆಲೆ 15202 ರೂ ಇದ್ದು, ಬೆಳ್ಳಿ ಬೆಲೆ ಗ್ರಾಂ ಗೆ 245 ರೂ ಇದೆ.ಬೆಳ್ಳಿ ಬೆಲೆ ಇಳಿಕೆ
ಬೆಳ್ಳಿ ಬೆಲೆ ಇಂದು 5 ಸಾವಿರ ಇಳಿಕೆಯಾಗಿದೆ. ಬೆಳ್ಳಿ ಬೆಲೆ ಈಗ ಗ್ರಾಂಗೆ 245 ರೂ ಅಗಿದ್ದು, ಕೆಜಿಗೆ 2,45,000 ರೂ ಇದೆ.ಚಿನ್ನ ಖರೀದಿ ಬೇಡ ಎಂದಿದ್ಯಾಕೆ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಸ್ವದೇಶಿ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕಾಗಿ ಮತ್ತು ಭಾರತವನ್ನು ವಿಶ್ವದ ಮುಂಚೂಣಿ ದೇಶವಾಗಿ ಮಾಡಲು ಜನತೆ ಸ್ವದೇಶಿ ತತ್ವ, 'ವೋಕಲ್ ಫಾರ್ ಲೋಕಲ್' ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಜಾಗತಿಕ ಅನಿಶ್ಚಿತತೆಗಳ ನಡುವೆಯೂ ನಿರೀಕ್ಷೆಗೂ ಮೀರಿ 7.8% ಜಿಡಿಪಿ ಪ್ರಗತಿ ದಾಖಲಿಸಿರುವ ಭಾರತದ ಸಾಧನೆಯ ಬಗ್ಗೆ ಬಿಷ್ಕೇಕ್‌ನಿಂದ ಮಂಗಳವಾರ ಬೆಳಗ್ಗೆ ಇನ್‌ಸ್ಟಾಗ್ರಾಮ್‌ನಲ್ ಲಿವಿಡಿಯೊ ಹಂಚಿಕೊಂಡಿರುವ ಅವರು, ''ಸ್ವದೇಶಿ ಉತ್ಪನ್ನಗಳನ್ನು ಆಯ್ಕೆ ಮಾಡುವ ಮೂಲಕ ದೇಶದ ಆರ್ಥಿಕತೆಗೆ ಮತ್ತಷ್ಟು ಬಲ ತುಂಬಬೇಕು,'' ಎಂದು ಕರೆ ನೀಡಿದ್ದಾರೆ. ಅನಗತ್ಯವಾಗಿ ಚಿನ್ನ ಖರೀದಿ ಮಾಡಬೇಡಿ. ಅತ್ಯಗತ್ಯವಿದ್ದಾಗ ಮಾತ್ರ ಬಂಗಾರ ಖರೀದಿಸಬೇಕು,'' ಎಂದು ಮೋದಿ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಚಿನ್ನದ ಬೆಲೆ ಕುಸಿತವಾಗಿದೆ.
