Dailyhunt Logo
  • Light mode
    Follow system
    Dark mode
    • Play Story
    • App Story
Google Trends: ಇರಾನ್‌ ಜೊತೆ ಮಾತುಕತೆ ನಿಲ್ಲಿಸಿದ ಡೊನಾಲ್ಡ್‌ ಟ್ರಂಪ್;‌ ಭಾರತೀಯ ಷೇರು ಮಾರುಕಟ್ಟೆ ತಲ್ಲಣ! ಸೆನ್ಸೆಕ್ಸ್‌, ನಿಫ್ಟಿ ಡೌನ್

Google Trends: ಇರಾನ್‌ ಜೊತೆ ಮಾತುಕತೆ ನಿಲ್ಲಿಸಿದ ಡೊನಾಲ್ಡ್‌ ಟ್ರಂಪ್;‌ ಭಾರತೀಯ ಷೇರು ಮಾರುಕಟ್ಟೆ ತಲ್ಲಣ! ಸೆನ್ಸೆಕ್ಸ್‌, ನಿಫ್ಟಿ ಡೌನ್

Vijay Karnataka 3 months ago

ಮುಂಬೈ: ಅಮೆರಿಕ ಮತ್ತು ಇರಾನ್ ನಡುವಿನ ಹೊಸ ಉದ್ವಿಗ್ನತೆಗಳ ಮಧ್ಯೆ, ಭಾರತೀಯ ಷೇರು ಸೂಚ್ಯಂಕಗಳು ತೀವ್ರವಾಗಿ ಕುಸಿತ ಕಂಡಿವೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 400 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದರೆ, ನಿಫ್ಟಿ 139 ಪಾಯಿಂಟ್‌ಗಳ ಕುಸಿತ ಕಂಡಿತು.ಇರಾನ್‌ ಒಪ್ಪಂದದ ಕಥೆ ಮುಗಿದಿದೆ ಎಂಬ ಡೊನಾಲ್ಡ್‌ ಟ್ರಂಪ್‌ ಹೇಳಿಕೆ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ.

ವಹಿವಾಟಿನ ಅವಧಿಯಲ್ಲೇ ಈ ಹೇಳಿಕೆ ಬಂದಿದ್ದರಿಂದ, ಸೂಚ್ಯಂಕಗಳು ಬಹಳ ವೇಗವಾಗಿ ಕುಸಿಯಲಾರಂಭಿಸಿದವು. ಇಂದಿನ (ಜುಲೈ 8-ಬುಧವಾರ) ವಹಿವಾಟಿನ ಮುಕ್ತಾಯದ ವೇಳೆಗೆ, ಸೆನ್ಸೆಕ್ಸ್ 1,677 ಪಾಯಿಂಟ್‌ಗಳ ಕುಸಿತ ಕಂಡರೆ, ನಿಫ್ಟಿ 516 ಪಾಯಿಂಟ್‌ಗಳ ಕುಸಿತ ಕಂಡಿದೆ.

ಎನ್‌ಎಸ್‌ಇ ನಿಫ್ಟಿ50 ಸೂಚ್ಯಂಕವು 516.65 ಅಂಕಗಳು ಅಥವಾ ಶೇ. 2.12 ರಷ್ಟು ಕುಸಿದು 23,882.05 ಕ್ಕೆ ತಲುಪಿತು. ಬಿಎಸ್‌ಇ ಸೆನ್ಸೆಕ್ಸ್‌ ಸೂಚ್ಯಂಕವು 1,677.12 ಅಂಕಗಳು ಅಥವಾ ಶೇ. 2.15ರಷ್ಟು ಕುಸಿತ ಕಂಡು 76,503.60ಕ್ಕೆ ಸ್ಥಿರಗೊಂಡಿತು. ಬಿಎಸ್‌ಇ ಸೆನ್ಸೆಕ್ಸ್‌ನ ಎಲ್ಲಾ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು, ವಹಿವಾಟು ಆರಂಭವಾದಾಗ ಇದ್ದ 4,80,20,223 ರೂ.ದಿಂದ ವಹಿವಾಟು ಮುಕ್ತಾಯದ ವೇಳೆಗೆ ರೂ. 4,71,78,619 ರೂ.ಗೆ ಇಳಿಕೆಯಾಯಿತು.

ಹಾರ್ಮುಜ್‌ ಜಲಸಂಧಿಯಲ್ಲಿ ತೈಲ ಹಡಗುಗಳ ಮೇಲೆ ಇರಾನ್‌ ದಾಳಿ ಮಾಡುತ್ತಿದ್ದು, ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಭೀಕರ ದಾಳಿ ನಡೆಸಿದೆ. ಇದರ ಪರಿಣಾಮ ಜಾಗತಿಕ ಮಾರುಕಟ್ಟೆ ಮೇಲೂ ಬೀರಿದ್ದು, ಪ್ರಮುಖ ಮಾರುಕಟ್ಟೆಗಳು ಕುಸಿತದ ಹಾದಿ ಹಿಡಿದಿವೆ.


ಅಮೆರಿಕದ ಎಸ್‌ಅಂಡ್‌ಪಿ 500 (S&P 500), ಡೌ ಜೋನ್ಸ್ ಮತ್ತು ನಾಸ್‌ಡಾಕ್ ಸೂಚ್ಯಂಕಗಳು ಕುಸಿತ ಕಂಡಿದ್ದರೆ, ಜಪಾನ್‌ನ ನಿಕೈ ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕಗಳೂ ನಷ್ಟ ಅನುಭವಿಸಿವೆ. ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ ಆರಂಭವಾಗಿರುವುದರಿಂದ, AI
ಮತ್ತು ಸೆಮಿಕಂಡಕ್ಟರ್ ಷೇರುಗಳ ಮೇಲಿನ ಹೂಡಿಕೆಯೂ ಕೆಳಮುಖವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಅಮೆರಿಕ ಮತ್ತು ಇರಾನ್‌ ಹೊಸ ಸಂಘರ್ಷದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಕಂಡಿದೆ. ಇರಾನ್‌ ತೈಲದ ಮೇಲಿನ ನಿರ್ಬಂಧಗಳನ್ನು ಅಮೆರಿಕ ಮರಳಿ ಜಾರಿಗೊಳಿಸಿರುವುದರಿಂದ, ಜಾಗತಿಕ ತೈಲ ಪೂರೈಕೆ ಸರಪಳಿಗೆ ಧಕ್ಕೆಯಾಗುವ ಭೀತಿ ಎದುರಾಗಿದೆ. ಯುಎಸ್ ಕ್ರೂಡ್ ಮತ್ತು ಬ್ರೆಂಟ್ ಕ್ರೂಡ್ ತೈಲ ಬೆಲೆಗಳು ತಕ್ಷಣವೇ ಶೇಕಡಾ 2.7ರಿಂದ 3ರಷ್ಟು ಹೆಚ್ಚಾಗಿದ್ದು, ಬ್ರೆಂಟ್ ತೈಲ ಬೆಲೆ ಬ್ಯಾರೆಲ್‌ಗೆ 76 ಡಾಲರ್‌ ದಾಟಿದೆ.

ಇನ್ನು ತನ್ನ ಅಗತ್ಯದ ಶೇ. 80ರಷ್ಟು ತೈಲವನ್ನು ಆಮದು ಮಾಡಿಕೊಳ್ಳುವ ಭಾರತ, ಸಹಜವಾಗಿ ಇದರ ಬಲಿಪಶುವಾಗಲಿದೆ. ಅಲ್ಲದೇ ಕಚ್ಚಾತೈಲ ಬೆಲೆ ಏರಿಕೆಯಾಗುತ್ತಿದ್ದಂತೇ, ಡಾಲರ್‌ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಕುಸಿತ ಕಾಣಲಿದೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಒಂದೇ ದಿನದಲ್ಲಿ ಬರೋಬ್ಬರಿ 8.4 ಲಕ್ಷ ಕೋಟಿ ರೂ. ಕಳೆದುಕೊಂಡಿರುವುದು, ಭಾರೀ ಆತಂಕಕ್ಕೆ ಕಾರಣವಾಗಿದೆ.

ಗೂಗಲ್‌ ಟ್ರೆಂಡ್ಸ್‌ನಲ್ಲಿ ಮಾರುಕಟ್ಟೆ ಕುಸಿತ:



ಇನ್ನು ಗೂಗಲ್‌ ಟ್ರೆಂಡ್ಸ್‌ನಲ್ಲಿ ಭಾರತೀಯ ಷೇರು ಮಾರುಕಟ್ಟೆ ಕುಸಿತ ಟ್ರೆಂಡಿಂಗ್‌ ಆಗಿದೆ. ಈ ಸುದ್ದಿಯನ್ನು ಗುಜರಾತ್‌ನಲ್ಲಿ ಶೇ. 100ರಷ್ಟು, ಕರ್ನಾಟಕದಲ್ಲಿ ಶೇ. 96ರಷ್ಟು, ದೆಹಲಿಯಲ್ಲಿ ಶೇ. 93ರಷ್ಟು, ಮಹಾರಾಷ್ಟ್ರದಲ್ಲಿ ಶೇ. 78ರಷ್ಟು ಮತ್ತು ಜಾರ್ಖಂಡ್‌ನಲ್ಲಿ ಶೇ. 77ರಷ್ಟು ಜನರು ಸರ್ಚ್‌ ಮಾಡಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka