ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. 'ರಾಮಾಯಣ: ಪಾರ್ಟ್ 1' ಚಿತ್ರದ ಅದ್ಧೂರಿ ನಿರ್ಮಾಣ, ದೃಶ್ಯ ವೈಭವ, ರಣಬೀರ್ ಕಪೂರ್ ಅವರ ರಾಮನ ಪಾತ್ರ, ಯಶ್ ಅವರ ರಾವಣನ ಅವತಾರ ಎಲ್ಲವೂ ಮೆಚ್ಚುಗೆ ಪಡೆದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೇ ಸಾಯಿ ಪಲ್ಲವಿ ಅಭಿನಯಿಸಿರುವ ಸೀತೆ ಪಾತ್ರ.!
ಇದೇ ಕಾರಣಕ್ಕೆ ಸಾಯಿ ಪಲ್ಲವಿ ಗೂಗಲ್ ಟ್ರೆಂಡ್ಸ್ ಪಟ್ಟಿಯಲ್ಲಿ ಟಾಪ್‌ನಲ್ಲಿದ್ದಾರೆ.
ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಟ್ ಆಗ್ತಿಲ್ಲ!
ಜುಲೈ 30ರಂದು ಬಿಡುಗಡೆಯಾದ 'ರಾಮಾಯಣ: ಪಾರ್ಟ್ 1' ಟ್ರೈಲರ್‌ನಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು. ಟ್ರೈಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾಯಿ ಪಲ್ಲವಿ ಅವರ ಲುಕ್ ಕುರಿತು ಅಭಿಪ್ರಾಯಗಳು ಹೊರಬಂದವು.
ನೆಟ್ಟಿಗರ ವ್ಯಂಗ್ಯ
ಇದಕ್ಕೆ ಹಲವರು ತಿರುಗೇಟು ಸಹ ನೀಡಿದ್ದಾರೆ. "ಶೂರ್ಪನಖಿ ಮತ್ತು ಸೀತೆಯನ್ನು ಹೋಲಿಸುವುದೇ ತಪ್ಪು" ಎಂಬುದು ಅನೇಕರ ವಾದ. ಸಾಯಿ ಪಲ್ಲವಿ ಪರವಾಗಿ ಪ್ರತಿಕ್ರಿಯಿಸಿದ ಅನೇಕರು, ''ರಾಮಾಯಣದಲ್ಲಿ ಶೂರ್ಪನಖಿ ರೂಪ ಬದಲಿಸಬಲ್ಲ ರಾಕ್ಷಸಿಯಾಗಿದ್ದು, ಆಕೆಯ ಸೌಂದರ್ಯವನ್ನು ಸೀತೆಯೊಂದಿಗೆ ಹೋಲಿಸುವುದೇ ಅಸಂಗತ'' ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಕೆಲವರು ಟ್ರೈಲರ್‌ನಲ್ಲಿನ ಸಾಯಿ ಪಲ್ಲವಿ ಅವರ ಫೋಟೋ ಹಂಚಿಕೊಂಡು, "ತಾಯಿ ಸೀತೆಯ ಪಾತ್ರಕ್ಕೆ ಅವರು ಅತ್ಯಂತ ಸೂಕ್ತವಾಗಿ ಕಾಣಿಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
ಸೀತೆಯ ಸೌಂದರ್ಯಕ್ಕಿಂತ ವ್ಯಕ್ತಿತ್ವ ಮುಖ್ಯ
ಸೀತೆಯ ಪಾತ್ರಕ್ಕೆ ಬೇಕಾದ ಸೌಂದರ್ಯ ಇಲ್ಲ!
ಇದರಿಂದ ಸೀತೆಯ ಸೌಂದರ್ಯವನ್ನು ಆಧುನಿಕ ಮಾನದಂಡಗಳಿಂದ ಅಳೆಯಬೇಕೇ? ಎಂಬ ಗಂಭೀರ ಪ್ರಶ್ನೆಯೂ ಉದ್ಭವಿಸಿದೆ. "ಇದು ಸಾಯಿ ಪಲ್ಲವಿ ಸೌಂದರ್ಯದ ಕುರಿತ ವಿಚಾರವಲ್ಲ. ಆದರೆ ಶಾಸ್ತ್ರಗಳಲ್ಲಿ ವರ್ಣಿಸಿರುವ ತಾಯಿ ಸೀತೆಯ ದಿವ್ಯ ಸೌಂದರ್ಯಕ್ಕೆ ಅವರು ಹೊಂದಿಕೆಯಾಗುವುದಿಲ್ಲ ಎನ್ನುವುದು ಕೆಲವರ ಅಭಿಪ್ರಾಯ" ಎಂಬ ಟ್ವೀಟ್‌ಗಳೂ ಇವೆ.
ಟ್ರೈಲರ್‌ನಲ್ಲಿ ಸಾಯಿ ಪಲ್ಲವಿ ಹೇಗೆ ಕಾಣಿಸಿಕೊಂಡಿದ್ದಾರೆ?
ಟ್ರೈಲರ್‌ನ ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಒಂದು ದೃಶ್ಯದಲ್ಲಿ ಸೀತೆ ಆಯುಧ ಹಿಡಿದಿರುವುದನ್ನು ತೋರಿಸಲಾಗಿದೆ. ಇದರಿಂದ ಈ ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಹೊಸ ಆಯಾಮ ನೀಡುವ ಪ್ರಯತ್ನ ನಡೆದಿದೆಯೇ ಎಂಬ ಕುತೂಹಲ ಮೂಡಿದೆ. ಇದರ ಜೊತೆಗೆ, ಸಾಯಿ ಪಲ್ಲವಿ ಅವರ ಹಿಂದಿ ಸಂಭಾಷಣೆಗಳ ಉಚ್ಚಾರಣೆಯೂ ಮೆಚ್ಚುಗೆ ಪಡೆದಿದ್ದು, ಹಿಂದಿಯಲ್ಲಿ ಅವರು ಸಹಜವಾಗಿ ಅಭಿನಯಿಸಿರುವುದಾಗಿ ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಗೂಗಲ್ ಟ್ರೆಂಡ್ಸ್‌ನಲ್ಲಿ ಸಾಯಿ ಪಲ್ಲವಿ

ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿರುವ ಟ್ರೈಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಅಭಿಪ್ರಾಯಗಳ ಮಹಾಪೂರವೇ ಹರಿದುಬಂದಿದೆ. ಕೆಲವರಿಗೆ ಪೌರಾಣಿಕ ಸೌಂದರ್ಯದ ಕಲ್ಪನೆ ಮುಖ್ಯವಾಗಿದ್ದರೆ, ಹಲವರಿಗೆ ಪಾತ್ರದ ಆತ್ಮವನ್ನು ಜೀವಂತಗೊಳಿಸುವ ಅಭಿನಯವೇ ಮುಖ್ಯವಾಗಿದೆ. ಅಂದ್ಹಾಗೆ, 'ರಾಮಾಯಣ: ಭಾಗ 1' ಸಿನಿಮಾ ಈ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ರಿಲೀಸ್ ಆಗಲಿದೆ.

