Dailyhunt
Google Trends : US Iran war ಕುತೂಹಲಕಾರಿ ಘಟ್ಟ - ಕಾರ್ಯಾಚರಣೆ ಅನುಮತಿಗಿದ್ದ 60 ದಿನದ ಗಡುವು ಅಂತ್ಯ; ಸಂದಿಗ್ಧ ಸ್ಥಿತಿಯಲ್ಲಿ ಟ್ರಂಪ್‌

Google Trends : US Iran war ಕುತೂಹಲಕಾರಿ ಘಟ್ಟ - ಕಾರ್ಯಾಚರಣೆ ಅನುಮತಿಗಿದ್ದ 60 ದಿನದ ಗಡುವು ಅಂತ್ಯ; ಸಂದಿಗ್ಧ ಸ್ಥಿತಿಯಲ್ಲಿ ಟ್ರಂಪ್‌

Vijay Karnataka 2 weeks ago

ವಾಷಿಂಗ್ಟನ್‌: ಅಮೆರಿಕ ಮತ್ತು ಇರಾನ್‌ ನಡುವಿನ ಮಿಲಿಟರಿ ಸಂಘರ್ಷ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕ ಸಂಸತ್ತಿನ (ಕಾಂಗ್ರೆಸ್‌) ಪೂರ್ವಾನುಮತಿ ಇಲ್ಲದೆ ಆರಂಭಿಸಿದ ಸೇನಾ ಕಾರ್ಯಾಚರಣೆ ವಿಚಾರದಲ್ಲಿ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಇದ್ದ 60 ದಿನಗಳ ಗಡುವು ಶುಕ್ರವಾರ (ಮೇ 1) ಅಂತ್ಯಗೊಳ್ಳಲಿದೆ.

1973ರ 'ಯುದ್ಧ ಅಧಿಕಾರ ನಿರ್ಣಯ'ದ ಪ್ರಕಾರ ಅಧ್ಯಕ್ಷರು ತುರ್ತು ಸಂದರ್ಭದಲ್ಲಿ'ಕಾಂಗ್ರೆಸ್‌' ಪೂರ್ವಾನುಮತಿಯಿಲ್ಲದೆ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳಬಹುದು. ಆದರೆ, ಅಂತಹ ಕಾರ್ಯಾಚರಣೆಯ ಬಗ್ಗೆ 48 ಗಂಟೆಗಳ ಒಳಗಾಗಿ ಕಾಂಗ್ರೆಸ್‌ಗೆ ವರದಿ ಸಲ್ಲಿಸಬೇಕು. ಅಲ್ಲದೆ, ಕಾರ್ಯಾಚರಣೆ ಆರಂಭವಾದ 60 ದಿನಗಳ ಒಳಗಾಗಿ ಕಾಂಗ್ರೆಸ್‌ನಿಂದ ಅಧಿಕೃತ ಅನುಮೋದನೆ ಪಡೆಯಬೇಕು. ಒಂದು ವೇಳೆ ಕಾಂಗ್ರೆಸ್‌ ಅನುಮೋದನೆ ನೀಡದಿದ್ದರೆ, ಅಧ್ಯಕ್ಷರು ಅಮೆರಿಕದ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳಬೇಕಾಗುತ್ತದೆ. ಅಲ್ಲದೆ, 60 ದಿನಗಳ ಬಳಿಕ ಕಾರ್ಯಾಚರಣೆ ವಿಚಾರದಲ್ಲಿ ಅಧ್ಯಕ್ಷರು ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರ ಕಳೆದುಕೊಳ್ಳಲಿದ್ದಾರೆ.

ಇಸ್ರೇಲ್‌ ಮತ್ತು ಅಮೆರಿಕ ಜಂಟಿಯಾಗಿ ಇರಾನ್‌ ಮೇಲೆ ಫೆಬ್ರವರಿ 28 ರಂದು ಜಂಟಿಯಾಗಿ ದಾಳಿ ನಡೆಸಿದ್ದವು. ಇರಾನ್‌ನ ಪರಮಾಣು ಸ್ಥಾವರಗಳು, ಮಿಲಿಟರಿ ನೆಲೆಗಳು ಮತ್ತು ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿತ್ತು. 'ಯುದ್ಧ ಅಧಿಕಾರ ನಿರ್ಣಯ'ದ ಪ್ರಕಾರ, ದಾಳಿ ಆರಂಭಿಸಿದ 48 ಗಂಟೆಯ ಒಳಗಾಗಿ ಮಾ.2ರಂದು ಇರಾನ್‌ ವಿರುದ್ಧದ ಮಿಲಿಟರಿ ಕ್ರಮದ ಬಗ್ಗೆ ಟ್ರಂಪ್‌ ಸರಕಾರ ಅಮೆರಿಕ ಕಾಂಗ್ರೆಸ್‌ಗೆ ಮಾಹಿತಿ ನೀಡಿತ್ತು.

ಗೂಗಲ್‌ನಲ್ಲಿ ಟ್ರೆಂಡ್‌



ಗೂಗಲ್‌ನಲ್ಲಿ ಯುಎಸ್‌ ಇರಾನ್ ಯುದ್ಧಯು ಟ್ರೆಂಡಿಂಗ್‌ನಲ್ಲಿದೆ. ಈ ಬಗ್ಗೆ ಸಾಕಷ್ಟು ಮಂದಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಕರ್ನಾಟಕದಲ್ಲಿ ಶೇ 100 ರಷ್ಟು, ದೆಹಲಿಯಲ್ಲಿ ಶೇ 95 ರಷ್ಟು, ಗೋವಾದಲ್ಲಿ ಶೇ 87 ರಷ್ಟು, ತೆಲಂಗಾಣ ಶೇ 78, ಚಂಢೀಗಡದಲ್ಲಿ ಶೇ 78 ರಷ್ಟು ಮಂದಿ ಹುಡುಕಾಟ ನಡೆಸಿದ್ದಾರೆ.

ಅಮೆರಿಕ ನೌಕಾ ದಿಗ್ಬಂಧನ ಮುಂದುವರಿದಿದೆ

ಈ ಹಿನ್ನೆಲೆಯಲ್ಲಿ ಅತ್ತ ಯುದ್ಧವನ್ನು ಅಂತ್ಯಗೊಳಿಸಲಾಗದೆ, ಇತ್ತ ಮುಂದುವರಿಸಲೂ ಸಾಧ್ಯವಾಗದೆ ಅತಂತ್ರಕ್ಕೆ ಸಿಲುಕಿರುವ ಟ್ರಂಪ್‌ ಮುಂದಿನ ನಡೆ ಕುತೂಹಲ ಮೂಡಿಸಿದೆ. ಪ್ರಸ್ತುತ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಜಾರಿಯಲ್ಲಿದ್ದರೂ, ಇರಾನ್‌ ವಿರುದ್ಧ ಅಮೆರಿಕ ನೌಕಾ ದಿಗ್ಬಂಧನ ಮುಂದುವರಿದಿದೆ. ಜತೆಗೆ, ಅಮೆರಿಕ ಪಡೆಗಳು ಕೊಲ್ಲಿದೇಶಗಳ ವಾಯುನೆಲೆಗಳಲ್ಲೇ ಬೀಡು ಬಿಟ್ಟಿವೆ. ಮತ್ತೊಂದೆಡೆ ಅಮೆರಿಕದ ಷರತ್ತುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಇರಾನ್‌ ಸಂಧಾನ ಮಾತುಕತೆಗೆ ಬರಲು ನಿರಾಕರಿಸಿದೆ.

ಒತ್ತಡದಲ್ಲಿ ಟ್ರಂಪ್

ಪೆಂಟಗಾನ್‌ ಮೂಲಗಳ ಪ್ರಕಾರ, ಯುದ್ಧದಿಂದಾಗಿ ಅಮೆರಿಕ ಈಗಾಗಲೇ 25 ಶತಕೋಟಿ ಡಾಲರ್‌ (ಸುಮಾರು 2.3 ಲಕ್ಷ ಕೋಟಿ ರೂ.) ವೆಚ್ಚ ಮಾಡಿದೆ. ಜತೆಗೆ ಗಗನಕ್ಕೇರುತ್ತಿರುವ ಕಚ್ಚಾತೈಲ ದರದಿಂದಾಗಿ ಟ್ರಂಪ್‌ ಆಡಳಿತದ ಮೇಲೆ ಬಿಕ್ಕಟ್ಟು ಅಂತ್ಯಗೊಳಿಸುವ ಒತ್ತಡ ಹೆಚ್ಚಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka