ಗುರುವಿನಿಂದ ಅಪರೂಪದ ಯೋಗ 2026: ಕಟಕ ರಾಶಿಯಲ್ಲಿ ಗುರು ಮಂಗಳ ಸಂಯೋಗದಿಂದ ಅಪರೂಪದ ಯೋಗ ರೂಪಗೊಳ್ಳಲಿದೆ. ಈ ಸಮಯದಲ್ಲಿ ಯಾವ ರಾಶಿಯವರಿಗೆ ಬೃಹಸ್ಪತಿ ಗುರು ಸಂಪತ್ತು, ಸಂತೋಷ ಹೊತ್ತು ತರಲಿದ್ದಾನೆ ಎಂದು ತಿಳಿಯಿರಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೃಹಸ್ಪತಿ ಗುರು ಹಾಗೂ ಗ್ರಹಗಳ ಸೇನಾಪತಿ ಮಂಗಳ ಸ್ನೇಹ ಗ್ರಹಗಳು ಎಂದು ಪರಿಗಣಿಸಲಾಗುತ್ತದೆ.
ಕಟಕ ರಾಶಿಯವರಿಗೆ ಇನ್ನೊಂದುವರೆ ತಿಂಗಳಲ್ಲಿ ಅದೃಷ್ಟದ ದಿನಗಳು ಶುರುವಾಗಲಿವೆ. ಯಾಕೆಂದರೆ ಕಟಕ ರಾಶಿಯ ಲಗ್ನ ಸ್ಥಾನದಲ್ಲಿ ಗುರು ಹಾಗೂ ಮಂಗಳ ಒಟ್ಟಿಗೆ ಸೇರಿ ಸಂಚಾರ ಮಾಡುವುದು ಅಪರೂಪ ಮತ್ತು ತುಂಬಾ ಪರಿಣಾಮಕಾರಿಯಾಗಿರುತ್ತದೆ. ಈ ಸಮಯದಲ್ಲಿ ಕಟಕ ರಾಶಿಯವರಿಗೆ ತುಂಬಾ ಧೈರ್ಯ ಇರಲಿದೆ. ಉತ್ತಮ ಆರೋಗ್ಯ ಕೂಡ ಸಿಗುವುದು. ಅಲ್ಲದೆ ಪ್ರತೊಯೊಂದು ಕಾರ್ಯದಲ್ಲೂ ಆತ್ಮವಿಶ್ವಾಸ ಹೆಚ್ಚಾಗಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಉತ್ತಮ ಯಶಸ್ಸು ಸಿಗುತ್ತದೆ. ದೀರ್ಘಕಾಲದ ಸಮಸ್ಯೆಗಳು ಕೊನೆಗೊಳ್ಳುವ ಸಮಯ ಇದು. ಅಲ್ಲದೆ ನೀವು ಹಣದ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ನಿಮ್ಮ ವೃತ್ತಿಜೀವನದಲ್ಲಿ ಅತ್ಯುತ್ತಮ ಫಲಿತಾಂಶಗಳು ಸಿಗುತ್ತವೆ. ಮಂಗಳನ ಕೃಪೆಯಿಂದ ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯುವುದು. ಕೆಲವು ಜನರಿಗೆ ಬಡ್ತಿ ಸಿಗುವ ಸಾಧ್ಯತೆಗಳು ಇವೆ. ಈ ಅವಧಿಯು ವಿದ್ಯಾರ್ಥಿಗಳಿಗೆ ಸಹ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶ್ರಮಕ್ಕೆ ತಕ್ಕಂತೆ ಫಲಿತಾಂಶ ಪಡೆಯುತ್ತಾರೆ. ಇದರೊಂದಿಗೆ ಷೇರು ಮಾರುಕಟ್ಟೆಯಿಂದ ಆರ್ಥಿಕ ಲಾಭವಾಗುವುದು. ಉದ್ಯಮಿಗಳಿಗೆ ಉತ್ತಮ ಲಾಭವಿದೆ. ಆರೋಗ್ಯ ಕೂಡ ನಿಮ್ಮ ಪರವಾಗಿರಲಿದೆ.
ಮೇಷ ರಾಶಿ

ಮೇಷ ರಾಶಿಯವರಿಗೆ ಇನ್ನೊಂದುವರೆ ತಿಂಗಳಲ್ಲಿ ಭಾಗ್ಯದ ಬಾಗಿಲು ತೆರೆಯಲಿದೆ. ಯಾಕೆಂದರೆ ಮೇಷ ರಾಶಿಯ ನಾಲ್ಕನೇ ಮನೆಯಲ್ಲಿ ಗುರು ಸೂರ್ಯ ಒಂದಾಗಲಿದ್ದಾರೆ. ಜ್ಯೋತಿಷ್ಯದಲ್ಲಿ ನಾಲ್ಕನೇ ಮನೆಯನ್ನು ಸುಖಸ್ಥಾನವೆಂದು ಕರೆಯಲಾಗುತ್ತದೆ. ನಿಮ್ಮ ಜಾತಕದ 4ನೇ ಮನೆಯಲ್ಲಿ ಗುರು ಹಾಗೂ ಮಂಗಳ ಒಟ್ಟಿಗೆ ಸೇರುವುದು ಭರ್ಜರಿ ಲಾಭವನ್ನು ತರಲಿದೆ. ನಿಮ್ಮ ಆರ್ಥಿಕ ಸಂಕಷ್ಟಗಳು ಕೊನೆಗೊಳ್ಳುವ ಸಮಯ ಇದು. ಈ ಸಮಯದಲ್ಲಿ ನೀವು ಮಾಡಿದ ಪ್ರತಿಯೊಂದು ಕಾರ್ಯಗಳಿಂದ ಲಾಭ ಸಿಗಲಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯನ್ನು ನೀವು ಕಾಣುವಿರಿ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವುದರೊಂದಿಗೆ ಮದುವೆಯಂತಹ ಶುಭ ಕಾರ್ಯಗಳು ನಡೆಯಲಿವೆ. ಇದರಿಂದ ಮನೆಯ ವಾತಾವರಣ ಬದಲಾಗುವುದು. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆ ಕಾಣಲಿದೆ.
ಮಿಥುನ ರಾಶಿ

ಮಿಥುನ ರಾಶಿಯವರಿಗೆ ಇನ್ನೊಂದುವರೆ ತಿಂಗಳಲ್ಲಿ ಹಣ, ಅದೃಷ್ಟ ಹಿಂಬಾಲಿಸುವ ಸಮಯ ಬರಲಿದೆ. ಮಂಗಳ ದೇವನ ನಿಮಗೆ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ನೀಡಿದರೆ, ಗುರು ಶ್ರಮಿಕರ ಹೆಗಲಾಗಿ ನಿಲ್ಲಲಿದ್ದಾನೆ. ಈ ಸಮಯದಲ್ಲಿ ಬಡವರ ಬಾಳು ಬಂಗಾರವಾಗುವುದು. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು. ಹಿಂದೆ ಮಾಡದ ಸಾಲಗಳು ತೀರುತ್ತವೆ. ನೀವಂದುಕೊಂಡಿದ್ದನ್ನು ನೀವು ಸಾಧಿಸುವಿರಿ. ನಿಮ್ಮ ವಿರುದ್ಧ ಮಾತನಾಡಿದವರು ನಿಮ್ಮೊಂದಿಗೆ ಸ್ನೇಹ ಬೆಳೆಸಲು ಇಚ್ಚಿಸುತ್ತಾರೆ. ಈ ಸಮಯದಲ್ಲಿ ಸ್ವಂತ ಹುದ್ದೆ ಆರಂಭಿಸಲು ಯೋಚಿಸುತ್ತಿರುವವರಿಗೆ ಅತ್ಯುತ್ತಮ ದಿನಗಳು ಶುರುವಾಗಲಿವೆ. ನೀವು ಮಾಡುವ ಕಾರ್ಯದಲ್ಲಿ ಲಾಭವಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸರ್ಕಾರಿ ಹುದ್ದೆಗಾಗಿ ಪ್ರಯತ್ನಿಸುತ್ತಿರುವವರಿಗೆ ಅವಕಾಶಗಳು ಹುಡುಕಿಕೊಂಡು ಬರಲಿವೆ.
ಧನು ರಾಶಿ

ಧನು ರಾಶಿಯವರ ಆರ್ಥಿಕ ಸಂಕಷ್ಟಗಳಿಗೆ ಮುಕ್ತಿ ಸಿಗುವ ಸಮಯ ಇದು. ಗುರುವಿನ ಅನುಗ್ರಹದಿಂದ ಧನು ರಾಶಿಯವರ ಬಾಳಲ್ಲಿ ಹೊಸ ಬದಲಾವಣೆಗಳಾಗಲಿವೆ. ಈ ಸಮಯದಲ್ಲಿ ನೀವು ಅಪಾರ ಪ್ರಯೋಜನಗಳನ್ನು ಪಡೆಯುವಿರಿ. ನೀವು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುವ ಸಮಯ ಇದು. ಇಲ್ಲಿಯವರೆಗೆ ಮದುವೆಯಲ್ಲಿ ಎದುರಿಸಿದ ಅಡೆತಡೆಗಳು ದೂರವಾಗುತ್ತವೆ. ಮದುವೆಯಾಗದವರಿಗೆ ಬಯಸಿದ ಸಂಗಾತಿ ಕೈಹಿಡಿಯುವರು. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಪ್ರಗತಿಗೆ ಅವಕಾಶಗಳು ತೆರೆದುಕೊಳ್ಳುವ ಸಮಯ ಇದು. ಆರ್ಥಿಕ ಪರಿಸ್ಥಿತಿ ಬಲಗೊಳ್ಳುವತ್ತ ಸಾಗುವುದು. ಹೊಸ ಆದಾಯದ ಮೂಲಗಳು ಲಭ್ಯವಾಗುತ್ತವೆ. ನೀವು ಬಹಳಷ್ಟು ಹಣವನ್ನು ಉಳಿಸುವ ಅವಕಾಶವನ್ನು ನೀವು ಪಡೆಯುತ್ತೀರಿ. ಸಮಾಜದಲ್ಲಿ ಗೌರವ ಮತ್ತು ಕೀರ್ತಿ ಹೆಚ್ಚಾಗುತ್ತದೆ. ಒಟ್ಟಾರೆಯಾಗಿ ನಿಮ್ಮ ಜೀವನದಲ್ಲಿನ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯುತ್ತೀರಿ.
ತುಲಾ ರಾಶಿ

ತುಲಾ ರಾಶಿಯವರಿಗೆ ಇನ್ನೊಂದುವರೆ ತಿಂಗಳಲ್ಲಿ ಜೀವನದಲ್ಲಿ ಬಯಸಿದ್ದೆಲ್ಲವೂ ಪ್ರಾಪ್ತಿಯಾಗುವ ಸಮಯ ಬರಲಿದೆ. ಯಾಕೆಂದರೆ ಸೆಪ್ಟೆಂಬರ್ 19ರಂದು ನಿಮ್ಮ ಜಾತಕ 10ನೇ ಮನೆ ಅಂದರೆ ಕರ್ಮಸ್ಥಾನದಲ್ಲಿ ಗುರು ಹಾಗೂ ಸೂರ್ಯ ಒಂದಾಗಲಿದ್ದಾರೆ. ಇದರಿಂದಾಗಿ ತುಲಾ ರಾಶಿಯವರಿಗೆ ಅತ್ಯುತ್ತಮ ಫಲಿತಾಂಶಗಳು ದೊರೆಯುತ್ತವೆ. ಅನಿರೀಕ್ಷಿತ ಆರ್ಥಿಕ ಲಾಭಗಳು ಸಿಗುವ ಸಾಧ್ಯತೆಗಳು ಉಂಟು. ಶ್ರಮಿಕ ವ್ಯಾಪಾರಿಗಳಿಗೆ ಹಣ ಹರಿದು ಬರುವುದು. ಅನಿರೀಕ್ಷಿತ ಸ್ಥಳಗಳಿಂದ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ನೀವು ಶ್ರಮಪಟ್ಟ ಹಣವನ್ನು ನೀವು ಪಡೆಯುವಿರಿ. ಕುಟುಂಬ, ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಸಂಬಂಧಗಳು ಬಲಗೊಳ್ಳುತ್ತವೆ. ನಿಮ್ಮ ಕಠಿಣ ಪರಿಶ್ರಮದ ಫಲ ನಿಮ್ಮನ್ನು ಹುಡುಕಿಕೊಂಡು ಬರುವುದು. ಅಲ್ಲದೆ ಕೆಲಸ ಮಾಡುವವರಿಗೆ ಹಾಗೂ ಉದ್ಯೋಗ ಹುಡುಕುತ್ತಿರುವವರಿಗೆ ಉದ್ಯೋಗ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸಮಾಜದಲ್ಲಿ ನಿಮ್ಮ ಗೌರವ ದ್ವಿಗುಣವಾಗುವುದು. ನೀವು ವಿದೇಶಕ್ಕೆ ಹೋಗಲು ಬಯಸಿದರೆ, ನಿಮಗೆ ಅವಕಾಶಗಳು ಸಿಗಲಿವೆ.

