ರಾಮನ ಪರಮ ಭಕ್ತನಾದ ಹನುಮಂತನ ಜನ್ಮ ದಿನವನ್ನು ಏಪ್ರಿಲ್ 2 ರಂದು ಆಚರಿಸಲಾಗುತ್ತದೆ. ಈ ದಿನವು ಹನುಮಂತನು ಜನಿಸಿದ ದಿನವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಆಂಜನೇಯನು ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಅಂಜನಿಯ ಮಗನಾಗಿ ಜನಿಸಿದ್ದನು. ಆದ್ದರಿಂದ ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯ ದಿನವನ್ನು ಆಂಜನೇಯ ಸ್ವಾಮಿಯ ಜನ್ಮ ದಿನವನ್ನಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಹನುಮಾನ್ ಜಯಂತಿಯ ದಿನದಂದು ಹನುಮಂತನಿಗೆ ಹಾಗೂ ರಾಮನಿಗೆ ಸಮರ್ಪಿತವಾದಂತಹ ದೇವಾಲಯಗಳಲ್ಲಿ ಹನುಮಂತನಿಗೆ ಸಮರ್ಪಿತವಾದ ಮಂತ್ರಗಳನ್ನು, ಭಜನೆಗಳನ್ನು ಹಾಗೂ ಕೀರ್ತನೆಗಳನ್ನು ಆಯೋಜಿಸಲಾಗುತ್ತದೆ. ಹನುಮಂತನ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಜನರು ಈ ದಿನ ಹನುಮಂತನನ್ನು ಪೂಜಿಸುವುದರ ಜೊತೆಗೆ ಉಪವಾಸ ವ್ರತವನ್ನು ಕೂಡ ಆಯೋಜಿಸುತ್ತಾರೆ.
ಹನುಮಂತನ ಆಶೀರ್ವಾದವು ನಮ್ಮಲ್ಲಿ ಧೈರ್ಯ, ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಾಗುವಂತೆ ಮಾಡುತ್ತದೆ. ಈ ದಿನದಂದು ಹನುಮಂತನ ಪೂಜೆಯನ್ನು ಮಾಡುವುದರಿಂದ ಭಕ್ತರ ಸಕಲ ಇಷ್ಟಾರ್ಥಗಳು ಈಡೇರುವುದು. ಹನುಮಾನ್ ಜಯಂತಿಯ ದಿನದಂದು ನೀವು ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ಹಂಚಿಕೊಳ್ಳಲು ಬಯಸಿದರೆ ಈ ಲೇಖನ ನಿಮಗೆ ಸಹಕಾರಿಯಾಗಿದೆ.
2026ರ ಹನುಮಾನ್ ಜಯಂತಿ ಶುಭಾಶಯಗಳು, ಕೋಟ್ಸ್‌ಗಳು:
1. ನಾಡಿನ ಸಮಸ್ತ ಹನುಮಂತನ ಭಕ್ತರಿಗೂ 2026ರ ಹನುಮಾನ್ ಜಯಂತಿಯ ಹಾರ್ದಿಕ ಶುಭಾಶಯಗಳು.!
2. 2026ರ ಹನುಮಾನ್ ಜಯಂತಿಯ ಹಾರ್ದಿಕ ಶುಭಾಶಯಗಳು.!
3. ಸರ್ವರಿಗೂ 2026ರ ಹನುಮಾನ್ ಜಯಂತಿಯ ಶುಭಾಶಯಗಳು.
4. ಹನುಮಂತನ ಭಕ್ತಿ ಮತ್ತು ಶಕ್ತಿ ಸದಾ ನಿಮಗೆ ಮಾರ್ಗದರ್ಶನವಾಗಿರಲಿ.. 2026ರ ಹನುಮಾನ್ ಜಯಂತಿಯ ಶುಭಾಶಯಗಳು.
5. ಮನೋಜವಂ ಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||
ವಾತಾತ್ಮಜಂ ವಾನರ ಯೂಥ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮಿ ||.. 2026ರ ಹನುಮಾನ್ ಜಯಂತಿ ಶುಭಾಶಯಗಳು.
6. ನಿಮಗೂ, ನಿಮ್ಮ ಕುಟುಂಬಕ್ಕೂ 2026ರ ಹನುಮಾನ್ ಜಯಂತಿಯ ಹಾರ್ದಿಕ ಶುಭಾಶಯಗಳು.
7. 2026ರ ಹನುಮಾನ್ ಜಯಂತಿ ಶುಭಾಶಯಗಳು.. ಹನುಮಂತನು ನಿಮ್ಮ ಬಾಳಲ್ಲಿ ಧೈರ್ಯ, ಶಕ್ತಿ, ಭಕ್ತಿಯ ಬೆಳಕನ್ನು ಚೆಲ್ಲಲಿ.
8. ಪವನಪುತ್ರ ಹನುಮಂತನ ಕೃಪೆ ಸದಾ ನಿಮ್ಮ ಮೇಲಿರಲಿ. 2026ರ ಹನುಮಾನ್ ಜಯಂತಿಯ ಹಾರ್ದಿಕ ಶುಭಾಶಯಗಳು.
9. ಹನುಮನ ರಕ್ಷಾ ಕವಚ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ.. 2026ರ ಹನುಮಾನ್ ಜಯಂತಿಯ ಶುಭಾಶಯಗಳು.
10. ಹನುಮಂತನ ಆಶೀರ್ವಾದ ನಿಮ್ಮೆಲ್ಲಾ ಕಷ್ಟಗಳನ್ನು ಮಂಜಿನಂತೆ ಕರಗಿಸಲಿ.. 2026ರ ಹನುಮಾನ್ ಜಯಂತಿ ಶುಭಾಶಯಗಳು.
11. ಹನುಮಂತನು ನಿಮಗೆ ನಿರ್ಭಯತೆ ಮತ್ತು ಅಚಲ ನಂಬಿಕೆಯನ್ನು ದಯಪಾಲಿಸಲಿ.. 2026ರ ಹನುಮಾನ್ ಜಯಂತಿ ಶುಭಾಶಯಗಳು.
12. 2026ರ ಹನುಮಾನ್ ಜಯಂತಿಯ ಹಾರ್ದಿಕ ಶುಭಾಶಯಗಳು.. ಹನುಮಂತನು ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಿ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುವಂತಾಗಲಿ.
13. ಹನುಮ ಜಯಂತಿಯ ಶುಭಾಶಯಗಳು.! ಹನುಮಂತನು ನಿಮ್ಮ ಹೃದಯವನ್ನು ಭಕ್ತಿಯಿಂದ ತುಂಬಿಸಲಿ ಮತ್ತು ನಿಮ್ಮ ಮನಸ್ಸಿನಲ್ಲಿ ಧೈರ್ಯವನ್ನು ತುಂಬಿಸಲಿ.
14. 2026ರ ಹನುಮಾನ್ ಜಯಂತಿಯ ಈ ಪವಿತ್ರ ದಿನದಂದು ಹನುಮಂತನು ನಿಮಗೆ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಅನುಗ್ರಹಿಸಲಿ.
15. 2026ರ ಹನುಮಾನ್ ಜಯಂತಿಯಂದು ನಿಮ್ಮ ಜೀವನವು ದೈವಿಕ ಶಕ್ತಿ ಮತ್ತು ಅಂತ್ಯವಿಲ್ಲದ ಆಶೀರ್ವಾದಗಳಿಂದ ತುಂಬಿರಲಿ.
16. ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ.. 2026ರ ಹನುಮಾನ್ವ ಜಯಂತಿ ಶುಭಾಶಯಗಳು.
17. ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ|
ತನ್ನೋ ಹನುಮತ್ ಪ್ರಚೋದಯಾತ್||.. 2026ರ ಹನುಮಾನ್ ಜಯಂತಿಯ ಹಾರ್ದಿಕ ಶುಭಾಶಯಗಳು.
18. ಹನುಮಂತನ ಆಶೀರ್ವಾದದಿಂದ ನಿಮ್ಮೆಲ್ಲಾ ಕಷ್ಟಗಳಿಗೆ ಪರಿಹಾರ ಸಿಗುವಂತಾಗಲಿ.. 2026ರ ಹನುಮಾನ್ ಜಯಂತಿ ಶುಭಾಶಯಗಳು.
19. 2026ರ ಹನುಮಾನ್ ಜಯಂತಿಯ ದಿನದಂದು ಹನುಮಂತನು ನಿಮ್ಮ ಬಾಳಲ್ಲಿ ಯಶಸ್ಸನ್ನು ತರುವಂತಾಗಲಿ.
20. ಹನುಮಂತನು ನಿಮ್ಮ ಪ್ರತಿಯೊಂದು ಕಾರ್ಯದಲ್ಲೂ ಅಭಿವೃದ್ಧಿ ಸಾಧಿಸುವ ಮಾರ್ಗವನ್ನು ಸೂಚಿಸಲಿ.. 2026ರ ಹನುಮಾನ್ ಜಯಂತಿ ಶುಭಾಶಯಗಳು.
2026ರ ಹನುಮಾನ್ ಜಯಂತಿಯನ್ನು ಚೈತ್ರ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತಿದ್ದು, ಈ ದಿನ ಹನುಮಂತನ ಭಕ್ತರು ವಿಶೇಷ ರೀತಿಯಲ್ಲಿ ಆತನ ಆರಾಧನೆಯನ್ನು ಮಾಡುತ್ತಾರೆ. ಈ ದಿನದಂದು ಜನರು ಹನುಮಂತನ ಆಶೀರ್ವಾದವು ಪ್ರತಿಯೊಬ್ಬರ ಜೀವನದ ಮೇಲೂ ಇರುವಂತೆ ಕೋರುತ್ತಾರೆ. ನೀವು ಈ ಮೇಲಿನ ಶುಭಾಶಯಗಳನ್ನು ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳುವ ಮೂಲಕ ಅವರಿಗೆ ಹನುಮಂತನ ಆಶೀರ್ವಾದವನ್ನು ಆಹ್ವಾನಿಸಬಹುದಾಗಿದೆ. ನಾಡಿನ ಸಮಸ್ತ ಜನತೆಗೂ 2026ರ ಹನುಮಾನ್ ಜಯಂತಿಯ ಹಾರ್ದಿಕ ಶುಭಾಶಯಗಳು.

