ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆಯಲ್ಲಿ ಬದಲಾವಣೆಯಿಂದಾಗಿ ಕೆಲವು ರಾಶಿಗಳಿಗೆ ಸೇರಿದ ಜನರು ರಾತ್ರೋರಾತ್ರಿ ತಮ್ಮ ಸಂತೋಷ ನೆಮ್ಮದಿಯನ್ನು ಕಳೆದುಕೊಳ್ಳಬಹುದಾಗಿದೆ. ಇದೇ ಮೇ 11ರಂದು ಕಾಳ ಸರ್ಪಯೋಗದ ನಿರ್ಮಾಣವಾಗಲಿದ್ದು, ಇದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಪ್ರಭಾವಶಾಲಿ ಮತ್ತು ಭಯಾನಕವಾದ ಯೋಗ ಎಂದು ಕರೆಯಲಾಗುತ್ತದೆ.
ಯಾವಾಗ ರಾಹು ಮತ್ತು ಕೇತುವಿನಂತಹ ನೆರಳು ಗ್ರಹಗಳು ಬೇರೆ ಎಲ್ಲಾ ಏಳು ಗ್ರಹಗಳನ್ನು ತಮ್ಮ ನಿಯಂತ್ರಣದಲ್ಲಿರಿಸುವುದೋ, ಆಗ ಈ ಯೋಗದ ನಿರ್ಮಾಣವಾಗುವುದು. ಈ ಬಾರಿ ಸಿಂಹ ರಾಶಿಯಲ್ಲಿ ಚಲಿಸುತ್ತಿರುವ ಕೇತು ಮತ್ತು ಕುಂಭ ರಾಶಿಯಲ್ಲಿ ಚಲಿಸುತ್ತಿರುವ ರಾಹುವಿನ ನಡುವೆ ಎಲ್ಲಾ ಗ್ರಹಗಳು ಒಂದುಗೂಡಲಿದೆ. ಈ ಸ್ಥಿತಿಯು ಮೇ 26ರವರೆಗೆ ಇರುವುದು.
ಕಾಳ ಸರ್ಪಯೋಗವು ಯಾವಾಗಲೂ ಅಶುಭ ಎಂದು ಹೇಳಲಾಗುವುದಿಲ್ಲ. ಆದರೆ ಇದು ಸಂಕಷ್ಟಗಳನ್ನು ಹೆಚ್ಚಿಸುವುದು. ಹಾಗೆ ಯಾವುದೇ ವ್ಯಕ್ತಿಯ ಜಾತಕದಲ್ಲಿ ಈ ಯೋಗವು ಪ್ರಭಾವಶಾಲಿಯಾಗಿದ್ದರೆ, ಆ ವ್ಯಕ್ತಿಯು ಸಾಕಷ್ಟು ಸಂಘರ್ಷಗಳ ನಂತರ ಯಶಸ್ಸನ್ನು ಗಳಿಸುವರು ಎಂದು ಹೇಳಲಾಗುತ್ತದೆ. ಮೇ 11ರಂದು ನಿರ್ಮಾಣಗೊಳ್ಳಲಿರುವ ಈ ಕಾಳ ಸರ್ಪಯೋಗವು ನಾಲ್ಕು ರಾಶಿಗೆ ಸೇರಿದ ಜನರಿಗೆ ಮಾನಸಿಕ ಅಶಾಂತಿ ಹಾಗೂ ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇನ್ನಷ್ಟು ಸವಾಲುಗಳನ್ನು ಎದುರಿಸುವಂತೆ ಮಾಡಬಹುದು. ಹಾಗಾಗಿ ಈ ಕಾಲ ಸರ್ಪಯೋಗದ ನಿರ್ಮಾಣದಿಂದ ಈ ಅವಧಿಯಲ್ಲಿ ಯಾವ ನಾಲ್ಕು ರಾಶಿಗೆ ಸೇರಿದ ಜನರು ಬಹಳ ಎಚ್ಚರಿಕೆಯಿಂದ ಕೆಲವು ಮುನ್ನೆಚ್ಚರಿಕೆ ಕ್ರಮಗಳು ಅಥವಾ ಉಪಾಯಗಳನ್ನು ಅನುಸರಿಸಬೇಕಾಗುತ್ತದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ವೃಷಭ ರಾಶಿ
ವೃಷಭ ರಾಶಿಗೆ ಸೇರಿದ ಜನರು ರಾಹು, ಕೇತುನಿಂದ ನಿರ್ಮಾಣಗೊಳ್ಳಲಿರುವ ಕಾಳ ಸರ್ಪಯೋಗದ ಸಂದರ್ಭದಲ್ಲಿ ತಮ್ಮ ಶತ್ರುಗಳ ವಿರುದ್ಧ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ಅವಧಿಯಲ್ಲಿ ವೃಷಭ ರಾಶಿಗೆ ಸೇರಿದ ಜನರು ತಮ್ಮ ಕೆಲಸದ ಸ್ಥಳದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುವರು. ಹಾಗೆ ತಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮದ ಫಲವನ್ನು ಬೇರೆಯವರು ತೆಗೆದುಕೊಳ್ಳಲು ಪ್ರಯತ್ನಿಸುವ ಸಾಧ್ಯತೆಯೂ ಕೂಡ ಸಾಕಷ್ಟು ಹೆಚ್ಚಾಗಿರುವುದು. ಹಾಗೆ ಈ ಸಂದರ್ಭದಲ್ಲಿ ವೃಷಭ ರಾಶಿಗೆ ಸೇರಿದ ಜನರು ರಾಹು, ಕೇತುವಿನ ಅಶುಭ ಪ್ರಭಾವದಿಂದಾಗಿ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಯಾವುದೇ ರೀತಿ ಅವಸರವನ್ನು ಪಡಬೇಡಿ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಸಾಕಷ್ಟು ಕಾಳಜಿ ವಹಿಸುವುದು ಅಗತ್ಯ.
ಕಟಕ ರಾಶಿ
ಕಟಕ ರಾಶಿಗೆ ಸೇರಿದ ಜನರು ಈ ಅಶುಭ ಯೋಗದಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಂಭವವಿದೆ. ಮೇ 11ರಂದು ಚಂದ್ರನು ಕುಂಭ ರಾಶಿಯನ್ನು ಪ್ರವೇಶಿಸುವುದರಿಂದಾಗಿ ಕಾಳ ಸರ್ಪಯೋಗವು ಸಾಕಷ್ಟು ಸಕ್ರಿಯವಾಗಿರುವುದು. ಹಾಗೆ ಕಟಕ ರಾಶಿಯ ಅಧಿಪತಿಯು ಚಂದ್ರ ದೇವನಾಗಿದ್ದಾನೆ. ಆದ್ದರಿಂದ ಕಟಕ ರಾಶಿಗೆ ಸೇರಿದ ಜನರ ಮೇಲೆ ಈ ಅಶುಭ ಯೋಗದ ನೇರ ಪ್ರಭಾವವನ್ನು ನೋಡಬಹುದು. ಇದರೊಂದಿಗೆ ಈ ಸಂದರ್ಭದಲ್ಲಿ ಕಟಕ ರಾಶಿಗೆ ಸೇರಿದ ಜನರು ಅನಗತ್ಯವಾಗಿ ಹೆದರಿಕೆ ಮತ್ತು ಒತ್ತಡಕ್ಕೆ ಒಳಗಾಗುವ ಸಂಭವವಿದೆ. ಜೊತೆಗೆ ಈ ಅವಧಿಯಲ್ಲಿ ಕಾಲ ಸರ್ಪಯೋಗದ ಶುಭ ಪ್ರಭಾವದಿಂದಾಗಿ ನೀವು ಮನೆಯವರೊಂದಿಗೆ ಯಾವುದೇ ರೀತಿಯ ಜಗಳವಾಡದಂತೆ ಎಚ್ಚರವಹಿಸಿ ಮತ್ತು ನಿಮ್ಮ ಮಾತನ್ನು ನಿಯಂತ್ರಣದಲ್ಲಿರಿಸುವುದು ಬಹಳ ಅಗತ್ಯ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಗೆ ಸೇರಿದ ಜನರು ಈ ಅಶುಭ ಯೋಗದಿಂದಾಗಿ ಅಪಘಾತಕ್ಕೆ ಒಳಗಾಗುವ ಸಂಭವಿದೆ. ಹಾಗಾಗಿ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ವೃಶ್ಚಿಕ ರಾಶಿಗೆ ಸೇರಿದ ಜನರಿಗೆ ಈ ಅವಧಿಯು ಸ್ವಲ್ಪ ಸವಾಲುಗಳನ್ನು ಎದುರಿಸುವಂತೆ ಮಾಡಲಿದೆ. ಈ ಅವಧಿಯಲ್ಲಿ ವೃಶ್ಚಿಕ ರಾಶಿಗೆ ಸೇರಿದ ಜನರು ಬೆಂಕಿ ಮತ್ತು ವಾಹನವನ್ನು ಚಲಾಯಿಸುವ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ. ಜೊತೆಗೆ ಈ ಸಂದರ್ಭದಲ್ಲಿ ವೃಶ್ಚಿಕ ರಾಶಿಗೆ ಸೇರಿದ ಜನರು ಯಾವುದೇ ಅಪರಿಚಿತ ವ್ಯಕ್ತಿಯ ಮೇಲೆ ಹೆಚ್ಚಿನ ನಂಬಿಕೆಯನ್ನು ಇಡಬೇಡಿ, ಇಲ್ಲದಿದ್ದರೆ ದೊಡ್ಡ ಆರ್ಥಿಕ ನಷ್ಟ ಉಂಟಾಗಬಹುದು. ಜೊತೆಗೆ ಈ ಸಂದರ್ಭದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಪ್ಪಿತಪ್ಪಿಯು ನೀವು ಬೇಜವಾಬ್ದಾರಿತನವನ್ನು ಹೊಂದದೆ ಇರುವುದು ಉತ್ತಮ. ಇಲ್ಲದಿದ್ದರೆ ಭಾರಿ ನಷ್ಟವನ್ನು ಎದುರಿಸಬೇಕಾಗಿ ಬರಬಹುದು.
ಕುಂಭ ರಾಶಿ
ಮೇಲೆ ಹೇಳಿರುವ ನಾಲ್ಕು ರಾಶಿಗಳಾದ ವೃಷಭ, ಕಟಕ, ವೃಶ್ಚಿಕ ಮತ್ತು ಕುಂಭ ರಾಶಿಗೆ ಸೇರಿದ ಜನರಲ್ಲಿ ನಿಮ್ಮ ರಾಶಿಯು ಒಂದಾಗಿದ್ದರೆ, ರಾಹು ಕೇತುನಿಂದ ನಿರ್ಮಾಣಗೊಳ್ಳಲಿರುವ ಕಾಳ ಸರ್ಪಯೋಗವು ನಿಮ್ಮ ದುರಾದೃಷ್ಟವನ್ನು ಹೆಚ್ಚಿಸಬಹುದು. ಹಾಗಾಗಿ ಈ ಸಂದರ್ಭದಲ್ಲಿ ನೀವು ಕೆಲವು ಉಪಾಯ ಕ್ರಮಗಳನ್ನು ಅನುಸರಿಸುವುದು ಉತ್ತಮ. ಈ ಅವಧಿಯಲ್ಲಿ ನೀವು ಶಿವನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಮತ್ತು ಪ್ರತಿದಿನ ಓಂ ನಮಃ ಶಿವಾಯವನ್ನು ಪಠಿಸಿ ಮತ್ತು ಶಿವಲಿಂಗದ ಮೇಲೆ ನೀರನ್ನು ಅರ್ಪಿಸಿ. ಜೊತೆಗೆ ಶನಿವಾರದಂದು ನೀಲಿ ಬಟ್ಟೆ, ಕಪ್ಪು ಎಳ್ಳು ಇತ್ಯಾದಿಗಳನ್ನು ದಾನ ಮಾಡಿ. ಹಾಗೆ ಈ ಸಂದರ್ಭದಲ್ಲಿ ತಾಮ್ರ ಅಥವಾ ಬೆಳ್ಳಿಯಿಂದ ತಯಾರಿಸಿದ ಹಾವುಗಳ ಜೋಡಿಯ ಮೂರ್ತಿಯನ್ನು ಹರಿಯುವ ನದಿಯಲ್ಲಿ ಹರಿಯಲು ಬಿಡಿ. ಇದರಿಂದಾಗಿ ನಿಮ್ಮ ದೋಷಗಳು ಕಡಿಮೆಯಾಗುವುದರೊಂದಿಗೆ ನಿಮ್ಮ ಸಂಕಷ್ಟಗಳು ಕೂಡ ದೂರವಾಗಬಹುದು. ಹಾಗೆ ಈ ಸಂದರ್ಭದಲ್ಲಿ ರಾಹು, ಕೇತುವಿನ ಮಂತ್ರಗಳಾದಂತಹ ಓಂ ರಾಂ ರಾಹವೇ ನಮಃ ಮತ್ತು ಓಂ ಕೇಂ ಕೇತವೇ ನಮಃ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಮಾನಸಿಕ ಶಾಂತಿ ದೊರಕುವುದು.

