Dailyhunt Logo
  • Light mode
    Follow system
    Dark mode
    • Play Story
    • App Story
IPL 2026- ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಮಾ.1ರಂದು DC ಹಾಗೂ RR ತಂಡಗಳ ಮುಖಾಮುಖಿ: ಹೈವೋಲ್ಟೇಜ್‌ ಪಂದ್ಯ ನಿರೀಕ್ಷೆ

IPL 2026- ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಮಾ.1ರಂದು DC ಹಾಗೂ RR ತಂಡಗಳ ಮುಖಾಮುಖಿ: ಹೈವೋಲ್ಟೇಜ್‌ ಪಂದ್ಯ ನಿರೀಕ್ಷೆ

Vijay Karnataka 2 weeks ago

ಜೈಪುರ: ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಐಪಿಎಲ್‌ 43ನೇ ಪಂದ್ಯದಲ್ಲಿ ಶುಕ್ರವಾರ ಪ್ರಬಲ ರಾಜಸ್ಥಾನ ರಾಯಲ್ಸ್‌ ತಂಡದ ಕಠಿಣ ಸವಾಲು ಎದುರಿಸಲಿದೆ.

​​ತಂಡಗಳ ನಡುವೆ ಪ್ಲೇ ಆಫ್‌ ಲೆಕ್ಕಾಚಾರ ತೀವ್ರಗೊಂಡಿರುವ ಕಾರಣ ಉಳಿದ ಪಂದ್ಯಗಳಲ್ಲಿ ಗೆಲುವಿನ ಲಯಕ್ಕೆ ಮರಳಲು ಎಲ್ಲ ತಂಡಗಳು ಹಾತೊರೆಯುತ್ತಿವೆ.

ಆದರೆ ಆಡಿದ ಕೊನೆಯ ಆರು ಪಂದ್ಯಗಳಲ್ಲಿ ಐದರಲ್ಲಿ ಸೋತು ಕೇವಲ ಒಂದರಲ್ಲಿ ಗೆದ್ದಿರುವ ಡೆಲ್ಲಿ, ಅಗ್ರ ನಾಲ್ಕು ಸ್ಥಾನಗಳಿಗೆ ಬಡ್ತಿ ಪಡೆಯಬೇಕಾದರೆ, ಗೆಲುವಿನ ಲಯಕ್ಕೆ ಮರಳುವುದು ಅನಿವಾರ್ಯವಾಗಿದೆ.

​​ಹಾಲಿ ಋುತುವಿನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲಗೊಂಡಿರುವ ಅಕ್ಷರ್‌ ಪಟೇಲ್‌ ಮತ್ತು ತಂಡ, ತನ್ನ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಹೀನಾಯ ಸೋಲು ಕಂಡಿದೆ. ಇದು ತಂಡದಲ್ಲಿ ಆತ್ಮಸ್ಥೈರ್ಯವನ್ನು ಕುಗ್ಗಿಸಿದೆ. ಸಂಪೂರ್ಣ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಡೆಲ್ಲಿ, ಟೂರ್ನಿಯ ಇತಿಹಾಸದಲ್ಲೇ ಕನಿಷ್ಠ ಮೊತ್ತಕ್ಕೆ ಔಟಾಗುವ ಆತಂಕ ಎದುರಿಸಿತ್ತು. ​ಆದರೆ ಅಭಿಷೆಕ್‌ ಪೊರೆಲ್‌ ಅವರ ಸಮಯೋಚಿತ ಆಟದಿಂದ ಪಾರಾಯಿತು. ಪಂಜಾಬ್‌ ಕಿಂಗ್ಸ್‌ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ್ದ, ರಾಹುಲ್‌, ಡೇವಿಡ್‌ ಮಿಲ್ಲರ್‌, ಟ್ರಿಸ್ಟನ್‌ ಸ್ಟಬ್ಸ್‌ ಮತ್ತು ಸಮೀರ್‌ ರಿಜ್ವಿ ಸಂಘಟಿತ ಪ್ರದರ್ಶನ ನೀಡಲು ಎಡವುತ್ತಿರುವುದು ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದೆ.



​​ಸದ್ಯ ಡೆಲ್ಲಿಗೆ ಶುಭ ಸುದ್ದಿ ಎಂದರೆ ಆಸ್ಪ್ರೇಲಿಯಾದ ವೇಗಿ ಮಿಚೆಲ್‌ ಸ್ಟಾರ್ಕ್ ತಂಡಕ್ಕೆ ಮರಳಲು ಸಜ್ಜಾಗಿರುವುದು. ಸ್ಟಾರ್ಕ್ ಕಣಕ್ಕಿಳಿದರೆ, ತಂಡದ ಬೌಲಿಂಗ್‌ ಶಕ್ತಿ ಇಮ್ಮಡಿಯಾಗಲಿದೆ. ಗಾಯಗೊಂಡಿರುವ ಲುಂಗಿ ಎನ್‌ಗಿಡಿ ಶುಕ್ರವಾರದ ಪಂದ್ಯಕ್ಕೆ ಲಭ್ಯರಾಗುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಈ ಮಧ್ಯೆ ಸ್ಟಾರ್ಕ್ ವಾಪಾಸ್ಸಾತಿ ತಂಡದಲ್ಲಿ ಹೊಸ ಹುರುಪು ತಂದಿದೆ. ಸ್ಟಾರ್ಕ್ ಆಗಮನದ ಹಿನ್ನೆಲೆಯಲ್ಲಿ ಕೈಲ್‌ ಜೇಮಿಸನ್‌ ಅಥವಾ ದುಷ್ಮಂತ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.


​​ಅತ್ತ ನಿರ್ಭಯ ಬ್ಯಾಟಿಂಗ್‌ ಮೂಲಕ ಬುಮ್ರಾ ಸೇರಿದಂತೆ ಎಲ್ಲಾ ಬೌಲರ್‌ಗಳ ನಿದ್ದೆಗೆಡಿಸಿರುವ 15 ಹರೆಯದ ವೈಭವ್‌ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್‌ ಮತ್ತು ಧ್ರುವ್‌ ಜುರೆಲ್‌, ರಾಯಲ್ಸ್‌ ಯಶಸ್ಸಿನ ಪ್ರಮುಖ ಪಾಲುದಾರರಾಗಿದ್ದಾರೆ. ಈ ತ್ರಿವಳಿಗಳ ಬಲ ಹೊಂದಿರುವ ರಾಜಸ್ಥಾನ ಗೆಲುವಿನ ಲಯ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಆಡಿದ 9 ಪಂದ್ಯಗಳಲ್ಲಿ ಆರು ಜಯ ಮತ್ತು ಮೂರು ಸೋಲು ಕಂಡಿರುವ ರಾಯಲ್ಸ್‌, ಪ್ಲೇ ಆಫ್‌ ಹಾದಿಯನ್ನು ಸುಗಮ ಮಾಡಿಕೊಳ್ಳುವತ್ತ ಎದುರು ನೋಡುತ್ತಿದೆ. ಹಿಂದಿನ ಪಂದ್ಯದಲ್ಲಿ ಪಂಜಾಬ್‌ ಒಡ್ಡಿದ 223 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿರುವ ಕಾರಣ ರಾಯಲ್ಸ್‌ ಆತ್ಮವಿಶ್ವಾಸದ ಗನಿಯಾಗಿದೆ.

​​ಉಭಯ ತಂಡಗಳು ಹಾಲಿ ಟೂರ್ನಿಯಲ್ಲಿ ಮೊದಲ ಬಾರಿಗೆ ಎದುರಾಗುತ್ತಿರುವ ಕಾರಣ ಮುನ್ನಡೆಗಾಗಿ ಎದುರು ನೋಡುತ್ತಿವೆ. ಇತ್ತಂಡಗಳು 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ತಲಾ 15ರಲ್ಲಿ ಗೆದ್ದು ಸಮಬಲ ಸಾಧಿಸಿವೆ. ಹೀಗಾಗಿ ಯಾವುದೇ ತಂಡ ಗೆದ್ದರೂ ಜಯಾಪಜಯ ದಾಖಲೆಯನ್ನು ಮುನ್ನಡೆ ಸಾಧಿಸಿದಂತಾಗುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka