Dailyhunt Logo
  • Light mode
    Follow system
    Dark mode
    • Play Story
    • App Story
IPL 2026- ಮೈದಾನದಲ್ಲೇ ಸಿಗಾರ್ ಸೇದಿದರೇ RCBಯ ಟಿಂ ಡೇವಿಡ್? ಸಂಚಲನಕ್ಕೆ ಕಾರಣವಾಗಿದೆ ವೈರಲ್ ವಿಡಿಯೋ

IPL 2026- ಮೈದಾನದಲ್ಲೇ ಸಿಗಾರ್ ಸೇದಿದರೇ RCBಯ ಟಿಂ ಡೇವಿಡ್? ಸಂಚಲನಕ್ಕೆ ಕಾರಣವಾಗಿದೆ ವೈರಲ್ ವಿಡಿಯೋ

Vijay Karnataka 3 days ago

ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾದಿನಿಂದಲೇ ಒಂದಲ್ಲ ಒಂದು ವಿವಾದ ಅದರ ಬೆನ್ನು ಬೀಳುತ್ತಲೇ ಇದೆ. ಆದರೆ 2026ರ ಸೀಸನ್ ನಷ್ಟು ವಿವಾದಕ್ಕೀಡಾದ ಮತ್ತೊಂದು ಸೀಸನ್ ಇರಲಿಕ್ಕಿಲ್ಲ. ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್ ಅವರು ಡ್ರೆಸ್ಸಿಂಗ್ ರೂಂನಲ್ಲಿ ನಿಷೇಧಿತ ಇ ಸಿಗರೇಟ್ ಸೇದಿದ್ದು ವಿವಾದವಾಗಿತ್ತು.

ಆ ಬಳಿಕ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಒಂದು ಹೆಜ್ಜೆ ಮೇಲೆ ಹತ್ತಿ ವಿಮಾನದಲ್ಲೂ ಇ ಸಿಗರೇಟ್ ಸೇದಿದ ವಿಡಿಯೋ ವೈರಲ್ ಆಗಿದ್ದಾಯ್ತು. ಇದೀಗ ಅಹಮದಾಬಾದ್ ನಲ್ಲಿ ನಡೆದ ಐಪಿಎಲ್ 2026ರ ಪಂದ್ಯದ ಬಳಿಕ ಆರ್ ಸಿಬಿ ಆಟಗಾರ ಟಿಂ ಡೇವಿಡ್ ಅವರು ಮೈದಾನದಲ್ಲೇ ಸಿಗಾರ್ ಸೇದಿದ್ದಾರೆ ಎಂದು ಹೇಳಲಾಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಅಸಲಿಯೋ ಅಥವಾ ಕೃತಕ ಬದ್ಧಿಮತ್ತೆ(AI) ನಿಂದ ತಯಾರಿಸಿದ್ದೋ ಎಂಬುದು ಇನ್ನೂ ದೃಢಪಟ್ಟಿಲ್ಲ.

ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31ರ ಭಾನುವಾರದಂದು ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ ಜಯಭೇರಿ ಬಾರಿಸಿದ ನಂತರದ ವಿಡಿಯೋ ಇದಾಗಿದೆ ಎಂದು ನೆಟ್ಟಿಗರ ವಾದವಾಗಿದೆ. ಮತ್ತೊಂದು ವರ್ಗದ ನೆಟ್ಟಿಗರು ಇದು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ವಿಡಿಯೋ ಮತ್ತು ಇದನ್ನು ತಿರುಚಲಾಗಿದೆ ಎಂದು ಹೇಳುತ್ತಿದ್ದಾರೆ.

ಫಿಲ್ ಸಾಲ್ಟ್ ಪೋಸ್ಟ್ ಮುನ್ನಲೆಗೆ

ಇದಕ್ಕೆ ಮತ್ತೊಂದು ಟ್ವಿಸ್ಟ್ ನೀಡುವಂತೆ, ಡೇವಿಡ್ ಅವರ ಆರ್‌ಸಿಬಿ ಸಹ ಆಟಗಾರ ಫಿಲ್ ಸಾಲ್ಟ್ ಎರಡು ದಿನಗಳ ಹಿಂದೆ ಪೋಸ್ಟ್ ಮಾಡಿದ ಫೋಟೋವೊಂದು ಮುನ್ನೆಲೆಗೆ ಬಂದಿದೆ. ಈ ಫೋಟೋದಲ್ಲಿ, ಸಾಲ್ಟ್ ಮತ್ತು ಡೇವಿಡ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತಿದ್ದು, ಡೇವಿಡ್ ಕೈಯಲ್ಲಿ ಸಿಗಾರ್‌ನಂತಹ ವಸ್ತುವನ್ನು ಹಿಡಿದಿರುವುದು ಕಾಣಿಸುತ್ತದೆ. ಈ ವೈರಲ್ ವಿಡಿಯೋ ಬಗ್ಗೆ ಟಿಮ್ ಡೇವಿಡ್ ಆಗಲಿ ಅಥವಾ ಆರ್‌ಸಿಬಿ ತಂಡವಾಗಲಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಐಪಿಎಲ್ ಆಟಗಾರನೊಬ್ಬ ಮೈದಾನದಲ್ಲಿ ಧೂಮಪಾನ ಮಾಡುವುದು ತೀರಾ ಅಪರೂಪದ ಘಟನೆಯಾಗಿದೆ. ಆದರೆ ಇದೇ ಸೀಸನ್‌ನ ಆರಂಭದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್ ಒಳಗೆ ವೇಪಿಂಗ್ ಮಾಡುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು.

ಟಿಂ ಡೇವಿಡ್ 3 ಎಡವಟ್ಟುಗಳು

ಇದೇ ವೇಳೆ, ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕಾಗಿ 30 ವರ್ಷದ ಡೇವಿಡ್ ಅವರಿಗೆ ಪಂದ್ಯದ ಸಂಭಾವನೆಯ ಶೇ. 50 ರಷ್ಟು ದಂಡ ವಿಧಿಸಲಾಗಿದ್ದು, ಮುಂದಿನ ಸೀಸನ್‌ನ ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಈ ತಪ್ಪಿಗಾಗಿ ಡೇವಿಡ್ ಎರಡು ಡಿಮೆರಿಟ್ ಅಂಕಗಳನ್ನು ಪಡೆದಿದ್ದು, ಈಗ ಅವರ ಒಟ್ಟು ಡಿಮೆರಿಟ್ ಅಂಕಗಳು ಐದಕ್ಕೆ ಏರಿಕೆಯಾಗಿದೆ. ಇದು ಒಂದು ಪಂದ್ಯದ ಅಮಾನತಿಗೆ ಸಮನಾಗಿರುತ್ತದೆ ಎಂದು ಐಪಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


ಆಸ್ಟ್ರೇಲಿಯಾದ ಕ್ರಿಕೆಟಿಗ ಈ ಸೀಸನ್‌ನಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಅವರ ದಿಕ್ಕಿನಲ್ಲಿ ಆಕ್ರಮಣಕಾರಿಯಾಗಿ ಐಸ್ ಬ್ಯಾಗ್ ಎಸೆದಿದ್ದಕ್ಕಾಗಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ವಿ ಡೇವಿಡ್ ಗೆ ದಂಡ ವಿಧಿಸಿದ್ದರು. ಮೊದಲ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ವಿಕೆಟ್ ಪತನದ ಸಮಯದಲ್ಲಿ ಈ ಘಟನೆ ನಡೆದಿತ್ತು.

ಇದಕ್ಕೂ ಮುನ್ನ ಮೇ 11 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ನಂತರ, "ಅಶ್ಲೀಲ, ಆಕ್ಷೇಪಾರ್ಹ ಅಥವಾ ಅವಮಾನಕರ ಸನ್ನೆಯನ್ನು ಮಾಡುವುದಕ್ಕೆ" ಸಂಬಂಧಿಸಿದ ಆರ್ಟಿಕಲ್ 2.6 ಅನ್ನು ಉಲ್ಲಂಘಿಸಿದ್ದಕ್ಕಾಗಿ ಡೇವಿಡ್ ದೋಷಿ ಎಂದು ಕಂಡುಬಂದಿತ್ತು. ಆ ಘಟನೆಯಲ್ಲಿ ಅವರಿಗೆ ಎರಡು ಡಿಮೆರಿಟ್ ಅಂಕಗಳೊಂದಿಗೆ ಪಂದ್ಯದ ಸಂಭಾವನೆಯ ಶೇ. 30 ರಷ್ಟು ದಂಡ ವಿಧಿಸಲಾಗಿತ್ತು. ಅದಕ್ಕೂ ಮುನ್ನ ಏಪ್ರಿಲ್ 13 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ, "ಪಂದ್ಯದ ವೇಳೆ ಅಂಪೈರ್ ಸೂಚನೆಯನ್ನು ಪಾಲಿಸದ" ಆರ್ಟಿಕಲ್ 2.4 ರ ಉಲ್ಲಂಘನೆಗಾಗಿ ಡೇವಿಡ್ ಅವರಿಗೆ ಪಂದ್ಯದ ಸಂಭಾವನೆಯ ಶೇ. 25 ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಅಂಕವನ್ನು ನೀಡಲಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka