Dailyhunt
IPL 2026- RCBಗೆ ಮೇ.7ರಂದು ಏಕನಾ ಕ್ರೀಡಾಂಗಣದಲ್ಲಿ LSG ಸವಾಲು: ಬೆಂಗಳೂರು v/s ಲಖನೌ ತಂಡಗಳ ಬಲಾಬಲ ಹೇಗಿದೆ?

IPL 2026- RCBಗೆ ಮೇ.7ರಂದು ಏಕನಾ ಕ್ರೀಡಾಂಗಣದಲ್ಲಿ LSG ಸವಾಲು: ಬೆಂಗಳೂರು v/s ಲಖನೌ ತಂಡಗಳ ಬಲಾಬಲ ಹೇಗಿದೆ?

Vijay Karnataka 5 days ago

ಖನೌ: ಕಳೆದ ಪಂದ್ಯದಲ್ಲಿ ದಿಢೀರ್‌ ಬ್ಯಾಟಿಂಗ್‌ ಕುಸಿತ ಕಂಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಗುರುವಾರ(ಮೇ.7) ನಡೆಯಲಿರುವ ಐಪಿಎಲ್‌ ರಿವರ್ಸ್‌ ಲೆಗ್‌ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ತಳಮಟ್ಟದಲ್ಲಿರುವ ಲಖನೌ ಸೂಪರ್‌ ಜಯಂಟ್ಸ್‌(LSG) ವಿರುದ್ಧ ಗೆದ್ದು ಲಯಕ್ಕೆ ಮರಳುವ ಗುರಿ ಹೊಂದಿದೆ.

ಇತ್ತ ಈ ಪಂದ್ಯದ ಮೂಲಕ ಪ್ಲೇ ಆಫ್‌ ಹಾದಿಯನ್ನು ಭದ್ರಪಡಿಸಿಕೊಳ್ಳಲು ಆರ್‌ಸಿಬಿ ಎದುರು ನೋಡುತ್ತಿದೆ.

ಸದ್ಯ ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲಿದ್ದರೂ, ಇತರ ಎರಡು ತಂಡಗಳೊಂದಿಗೆ 12 ಅಂಕಗಳನ್ನು ಹಂಚಿಕೊಂಡಿದೆ. ಅಹಮದಾಬಾದ್‌ನಲ್ಲಿ ಗುಜರಾತ್‌ ಟೈಟಸ್ಸ್‌ ವಿರುದ್ಧ 4 ವಿಕೆಟ್‌ಗಳ ಸೋಲು ಅನುಭವಿಸಿದ ನಂತರ ತಂಡವು ಈಗ ಪುಟಿದೇಳಬೇಕಿದೆ.

RCB ಬ್ಯಾಟಿಂಗ್‌ ಪಡೆಗೆ ವಿರಾಟ್‌ ಬಲ

ಕಳೆದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ನಾಟಕೀಯವಾಗಿ ಕುಸಿದಿತ್ತು. ಒಂದು ಹಂತದಲ್ಲಿ 2 ವಿಕೆಟ್‌ಗೆ 79 ರನ್‌ ಗಳಿಸಿದ್ದ ತಂಡ, ಕೇವಲ ಮೂರು ಓವರ್‌ಗಳ ಅಂತರದಲ್ಲಿ 96 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಅಂತಿಮವಾಗಿ 155 ರನ್‌ಗಳಿಗೆ ಆಲೌಟ್‌ ಆಗಿತ್ತು. ವಿರಾಟ್‌ ಕೊಹ್ಲಿ 379 ರನ್‌ ಗಳಿಸಿ ಅಮೋಘ ಫಾರ್ಮ್ ನಲ್ಲಿರುವುದು ‌ ತಂಡಕ್ಕೆ ಪ್ಲಸ್‌ ಪಾಯಿಂಟ್‌ ಆಗಿದೆ. ದೇವದತ್‌ ಪಡಿಕ್ಕಲ್‌ ಮತ್ತು ನಾಯಕ ರಜತ್‌ ಪಾಟಿದಾರ್‌ ತಂಡದ ಬ್ಯಾಟಿಂಗ್‌ಗೆ ಬಲ ತುಂಬಿದ್ದಾರೆ. ‌


ಫಿಲ್‌ ಸಾಲ್ಟ್ ಬೆರಳು ನೋವಿನಿಂದ ಹೊರಗುಳಿದಿರುವುದರಿಂದ, ಕೊಹ್ಲಿ‌ ಜತೆ ಸ್ಫೋಟಕ ಆರಂಭ ನೀಡುವ ಜವಾಬ್ದಾರಿ ಜೇಕಬ್‌ ಬೆಥೆಲ್ ಮೇಲೆ ಬಿದ್ದಿದೆ. ಆರ್‌ಸಿಬಿ ಬೌಲಿಂಗ್‌ ವಿಭಾಗವು ಅನುಭವಿ ಭುವನೇಶ್ವರ್‌ ಕುಮಾರ್‌ ಮತ್ತು ಆಸ್ಪ್ರೇಲಿಯಾದ ವೇಗಿ ಜೋಶ್‌ ಹೇಜಲ್ವುಡ್‌ ನೇತೃತ್ವದಲ್ಲಿ ಬಲಿಷ್ಠವಾಗಿದೆ. ಕೃಣಾಲ್‌ ಪಾಂಡ್ಯ 9 ವಿಕೆಟ್‌ ಪಡೆಯುವ ಮೂಲಕ ಬ್ಯಾಟರ್‌ಗಳನ್ನು ಕಾಡುವಲ್ಲಿ ಸಫಲರಾಗಿದ್ದಾರೆ.

ರಿಷಬ್‌ ಮೇಲೆ ಹೆಚ್ಚಿದ ಒತ್ತಡ

ಸತತ ಆರು ಪಂದ್ಯಗಳನ್ನು ಸೋತಿರುವ ಎಲ್‌ಎಸ್‌ಜಿ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಕೋಲ್ಕೊತಾ ನೈಟ್‌ರೈಡರ್ಸ್‌ (KKR) ವಿರುದ್ಧ ರೋಚಕ ಸೂಪರ್‌ ಓವರ್‌ನಲ್ಲಿ‌ ಸೋಲು ಮತ್ತು ಮುಂಬಯಿ ಇಂಡಿಯಸ್ಸ್‌ (MI) ವಿರುದ್ಧದ ಭಾರಿ ಸೋಲು ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸಿದೆ. ಮಿಚೆಲ್‌ ಮಾರ್ಷ್, ನಾಯಕ ರಿಷಬ್‌ ಪಂತ್‌, ಏಡನ್‌ ಮಾರ್ಕ್ರಮ್‌ ಮತ್ತು ನಿಕೋಲಸ್‌ ಪೂರನ್‌ ಅವರಂತಹ ಪ್ರಮುಖ ಆಟಗಾರರು ಫಾರ್ಮ್‌ ಕಂಡುಕೊಳ್ಳಲು ಹೆಣಗಾಡುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಅದರಲ್ಲೂ ರಿಷಬ್‌ ಪಂತ್‌ ಚಿಂತಾತ್ಮಕ ಫಾರ್ಮ್‌ ಚರ್ಚೆಗೆ ಗ್ರಾಸವಾಗಿದೆ.


ಎಲ್‌ಎಸ್‌ಜಿ ಪರ ಪ್ರಿಸ್ಸ್‌ ಯಾದವ್‌ (13 ವಿಕೆಟ್‌) ಮತ್ತು ಮೊಹ್ಸಿನ್‌ ಖಾನ್‌ (10 ವಿಕೆಟ್‌) ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಮೊಹಮ್ಮದ್‌ ಶಮಿ ಹೆಚ್ಚು ರನ್‌ಗಳನ್ನು ಬಿಟ್ಟುಕೊಡುವ ಮೂಲಕ ದುಬಾರಿ ಬೌಲರ್‌ ಎನ್ನುವ ಅಪಖ್ಯಾತಿಗೆ ಪಾತ್ರರಾಗಿರುವುದು ತಂಡಕ್ಕೆ ಆತಂಕ ತಂದಿದೆ.

ಪಂದ್ಯದ ವಿವರ

ತಂಡಗಳು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) v/s ಲಖನೌ ಸೂಪರ್‌ ಜಯಂಟ್ಸ್‌ (LSG)
ಪಂದ್ಯ ನಡೆಯುವ ಸ್ಥಳ: ಏಕನಾ ಕ್ರೀಡಾಂಗಣ, ಲಖನೌ
ಪಂದ್ಯದ ಸಮಯ: ರಾತ್ರಿ 7.30
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
Dailyhunt
Disclaimer: This content has not been generated, created or edited by Dailyhunt. Publisher: Vijay Karnataka