Dailyhunt
IPL ಆಡುವ ಸಲುವಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳ್ತಾರಾ RCB ವೇಗಿ ನುವಾನ್ ತುಷಾರ!

IPL ಆಡುವ ಸಲುವಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳ್ತಾರಾ RCB ವೇಗಿ ನುವಾನ್ ತುಷಾರ!

Vijay Karnataka 2 weeks ago

ಪಿಎಲ್ ಸೇರಿದಂತೆ ವಿವಿಧ ಕ್ರಿಕೆಟ್ ಲೀಗ್ ಗಳಲ್ಲಿ ಆಡುವ ಸಲುವಾಗಿ ವೆಸ್ಟ್ ಇಂಡೀಸ್ ನ ಕೆಲವು ಕ್ರಿಕೆಟಿಗರು ತಮ್ಮ ರಾಷ್ಟ್ರೀಯ ತಂಡವನ್ನೇ ನಿರ್ಲಕ್ಷ್ಯ ಮಾಡಿದ ಉದಾಹರಣೆಗಳಿವೆ. ಇದೀಗ ಶ್ರೀಲಂಕಾದ ಟಿ20 ಸ್ಪೆಷಲಿಸ್ಟ್ ನುವಾನ್ ತುಷಾರ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಲು ಸಿದ್ಧವಾಗಿದ್ದಾರೆಂದು ವರದಿಯಾಗಿದೆ.

ಐಪಿಎಲ್ 2026 ರಲ್ಲಿ ಆಡಲು ನಿರಾಕ್ಷೇಪಣಾ ಪ್ರಮಾಣಪತ್ರ (NOC) ನೀಡದ ಕಾರಣ ಶ್ರೀಲಂಕಾ ಕ್ರಿಕೆಟ್‌(SLC)ನ ಉನ್ನತ ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಅವರು ಮಂಡಳಿ ಬಳಿ ತಮ್ಮ ಕೇಂದ್ರ ಒಪ್ಪಂದವನ್ನು ನವೀಕರಿಸದಿರಲು ತಿಳಿಸಿದ್ದಾರೆ ಎಂದು ವರದಿಯಾಗಿದ.


ನುವಾನ್ ತುಷಾರ ಅವರಿಗೆ ಶ್ರೀಲಂಕಾ ಕ್ರಿಕೆಟ್ ನಿಂದ ನಿರಾಕ್ಷೇಪಣ ಪತ್ರ ಸಿಗದ ಹಿನ್ನೆಲೆಯಲ್ಲಿ ಅವರು ಐಪಿಎಲ್ 2026 ರಲ್ಲಿ ಭಾಗವಹಿಸುತ್ತಿಲ್ಲ. ನಿಗದಿತ ಫಿಟ್‌ನೆಸ್ ಮಾನದಂಡಗಳನ್ನು ಪೂರೈಸಲು ವಿಫಲವಾದ ಕಾರಣ ತುಷಾರ ಅವರಿಗೆ ಎನ್‌ಒಸಿ ನೀಡಲಾಗಿಲ್ಲ. ಆದರೆ ಈಗ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡುವಂತೆ ಎಸ್‌ಎಲ್‌ಸಿಗೆ ನಿರ್ದೇಶನ ನೀಡುವಂತೆ ಕೋರಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಶ್ರೀಲಂಕಾ ಮೂಲದ ಮಾಧ್ಯಮ ಸಂಸ್ಥೆ ನ್ಯೂಸ್‌ವೈರ್ ವರದಿ ಮಾಡಿದೆ.

ಏಪ್ರಿಲ್ 9ರಂದು ವಿಚಾರಣೆ

ತುಷಾರ ಅವರು ತಮ್ಮ ದೂರಿನಲ್ಲಿ ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ, ಕಾರ್ಯದರ್ಶಿ ಬಂಡುಲ ದಿಸನಾಯಕೆ, ಖಜಾಂಚಿ ಸುಜೀವ ಗೋದಲಿಯಡ್ಡ ಮತ್ತು ಸಿಇಒ ಆಶ್ಲೇ ಡಿ ಸಿಲ್ವಾ ಅವರನ್ನು ತಮ್ಮ ದೂರಿನಲ್ಲಿ ಪ್ರತಿವಾದಿಗಳೆಂದು ಹೆಸರಿಸಿದ್ದಾರೆ. NOC ಪಡೆಯಲು ವಿಫಲವಾದರೆ ಅವರಿಗೆ ಗಣನೀಯ ಆರ್ಥಿಕ ಮತ್ತು ಅವಕಾಶ ನಷ್ಟವಾಗುತ್ತದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಗುರುವಾರ ಕೊಲಂಬೊದ ಜಿಲ್ಲಾ ನ್ಯಾಯಾಲಯವು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಏಪ್ರಿಲ್ 9 ರಂದು ವಿಚಾರಣೆಯನ್ನು ನಿಗದಿಪಡಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಗುತ್ತಿಗೆ ನವೀಕರಿಸದಿರಲು ಮನವಿ

ನುವಾನ್ ತುಷಾರ ಎಸ್‌ಎಲ್‌ಸಿ ಜೊತೆಗಿನ ತಮ್ಮ ಗುತ್ತಿಗೆ ಒಪ್ಪಂದವು ಮಾರ್ಚ್ 31 ರಂದು ಮುಕ್ತಾಯಗೊಳ್ಳಬೇಕಿತ್ತು ಮತ್ತು ಒಪ್ಪಂದವನ್ನು ನವೀಕರಿಸದಿರಲು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುವ ತಮ್ಮ ಇಚ್ಛೆಯನ್ನು ಮಂಡಳಿಗೆ ತಿಳಿಸಿದ್ದರು ಎಂದು ತುಷಾರ ಹೇಳಿಕೊಂಡಿದ್ದಾರೆ. 31 ವರ್ಷದ ಶ್ರೀಲಂಕಾದ ಟಿ20 ಸ್ಪೆಶಲಿಸ್ಟ್ ಬೌಲರ್. 2016ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿರುವ ಅವರು ಕೇವಲ 30 ಅಂತಾರಾಷ್ಟ್ರೀಯ ಪಂದ್ಯಗಳನ್ನು ಅಷ್ಟೇ ಆಡಿದ್ದಾರೆ. ಆದರೆ ಲೀಗ್ ಕ್ರಿಕೆಟ್ ನಲ್ಲಿ ಅವರು ಅತ್ಯಂತ ಬೇಡಿಕೆಯ ಬೌಲರ್ ಆಗಿದ್ದಾರೆ.

2024ರ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿ 7 ಪಂದ್ಯದಲ್ಲಿ ಆಡಿದ್ದ ನುವಾನ್ ಅವರನ್ನು ಆರ್‌ಸಿಬಿಯು ಐಪಿಎಲ್ 2025ರ ಹರಾಜಿನಲ್ಲಿ 1.6 ಕೋಟಿ ರೂ.ಗೆ ಖರೀದಿಸಿತು. ತಂಡ ಚಾಂಪಿಯನ್ ಆದ ಸೀಸನ್ ನಲ್ಲಿ ಅವರು ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದರು. ಮಾರ್ಚ್ 28ರಂದು ನಡೆದ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ತಂಡವು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು 6 ವಿಕೆಟ್ ಗಳಿಂದ ಪರಾಭವಗೊಳಿಸಿತ್ತು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka