Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್‌ ದಾಳಿ ಭೀತಿ; ಟರ್ಕಿ ವಿಮಾನ ನಿಲ್ದಾಣದಲ್ಲಿ ಕಿಚನ್‌ ಟ್ರಕ್‌ನಲ್ಲಿ ಡೊನಾಲ್ಡ್‌ ಟ್ರಂಪ್ 'ಜೇಮ್ಸ್ ಬಾಂಡ್' ಶೈಲಿಯ ಪಲಾಯನ!‌

ಇರಾನ್‌ ದಾಳಿ ಭೀತಿ; ಟರ್ಕಿ ವಿಮಾನ ನಿಲ್ದಾಣದಲ್ಲಿ ಕಿಚನ್‌ ಟ್ರಕ್‌ನಲ್ಲಿ ಡೊನಾಲ್ಡ್‌ ಟ್ರಂಪ್ 'ಜೇಮ್ಸ್ ಬಾಂಡ್' ಶೈಲಿಯ ಪಲಾಯನ!‌

Vijay Karnataka 3 months ago

ವಾಷಿಂಗ್ಟನ್‌ ಡಿಸಿ: ಇರಾನ್‌ ವಿರುದ್ಧ ಯುದ್ಧ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಆ ರಾಷ್ಟ್ರದಿಂದ ದಾಳಿಯ ಭೀತಿಯನ್ನು ಎದುರಿಸುತ್ತಿದ್ದಾರೆ. ಟ್ರಂಪ್‌ ಹತ್ಯೆಗೆ ಇರಾನ್‌ ಸಂಚು ರೂಪಿಸುತ್ತಿದೆ ಎಂಬ ಗುಪ್ತಚರ ವರದಿ ಹಿನ್ನೆಲೆಯಲ್ಲಿ, ಅಧ್ಯಕ್ಷರ ರಕ್ಷಣೆಯ ಕುರಿತು ಶ್ವೇತಭವನ ಹೆಚ್ಚಿನ ಒತ್ತು ನೀಡುತ್ತಿದೆ.

ಡೊನಾಲ್ಡ್‌ ಟ್ರಂಪ್‌ ಕಳೆದ ತಿಂಗಳು ಟರ್ಕಿ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಅವರನ್ನು ಹತ್ಯೆಗೈಯಲು ಇರಾನ್‌ ಯೋಜನೆ ರೂಪಿಸಿತ್ತು ಎಂಬ ಬೆಚ್ಚಿಬೀಳುವ ಮಾಹಿತಿ ಬಹಿರಂಗವಾಗಿದೆ.

ಆದರೆ ಇರಾನ್‌ ದಾಳಿಯಿಂದ ತಪ್ಪಿಸಿಕೊಳ್ಳಲು, ಡೊನಾಲ್ಡ್‌ ಟ್ರಂಪ್‌ ಅವರು ಟರ್ಕಿಯಿಂದ ಅಮೆರಿಕಕ್ಕೆ ಮರಳಿ ಪ್ರವಾಸ ಮಾಡಿದ ರೀತಿ ಇನ್ನೂ ರೋಚಕವಾಗಿದೆ. ಟರ್ಕಿಯಿಂದ ಹೊರಹೋಗಲು ಮೊದಲು ಟ್ರಂಪ್‌ ಅವರು ವಿಮಾನ ನಿಲ್ದಾಣದ ಕಿಚನ್‌ ಟ್ರಕ್‌ನಲ್ಲಿ ಪ್ರಯಾಣಿಸಿ ಆ ಬಳಿಕ ಏರ್ ಫೋರ್ಸ್ ಸಿ -32 ಎ ವಿಮಾನದಲ್ಲಿ ರಹಸ್ಯವಾಗಿ ಪ್ರಯಾಣ ಮಾಡಿರುವ ಸಂಗತಿ ಇದೀಗ ಬಯಲಾಗಿದೆ.

ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಟರ್ಕಿ ಪ್ರವಾಸಕ್ಕೆ ಕತಾರ್‌ ಉಡುಗೊರೆಯಾಗಿ ನೀಡಿದ ಹೊಸ ಜೆಟ್‌ನ್ನು ಬಳಸಿದ್ದರು. ಆದರೆ ಇರಾನ್‌ ದಾಳಿಯ ಭೀತಿ ಮತ್ತು ಈ ಹೊಸ ಜೆಟ್‌ನ ಸುರಕ್ಷತಾ ಅಭಾವಗಳನ್ನು ಗಮನದಲ್ಲಿರಿಸಿ, ಭದ್ರತಾ ಅಧಿಕಾರಿಗಳು ಅವರನ್ನುಹಳೆಯ ಏರ್‌ಫೋರ್ಸ್‌ ಒನ್‌ ವಿಮಾನ ಹತ್ತಿಸಿದ್ದರು. ಆದರೀಗ ಬಂದ ಮಾಹಿತಿಯ ಪ್ರಕಾರ, ಅಮೆರಿಕ ಅಧ್ಯಕ್ಷರು ಏರ್ ಫೋರ್ಸ್ ಸಿ -32 ಎ ವಿಮಾನದಲ್ಲಿ ರಹಸ್ಯವಾಗಿ ಪ್ರಯಾಣಿಸಿದ್ದಾರೆ.

ಎಸ್ಕೇಪ್‌ ಪ್ಲ್ಯಾನ್‌:

ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಹಳೆಯ ಏರ್‌ಫೋರ್ಸ್‌ ಒನ್‌ ವಿಮಾನ ಹತ್ತಿಸಿದ ಭದ್ರತಾ ಸಿಬ್ಬಂದಿ, ಆ ಬಳಿಕ ಅದೇ ವಿಮಾನದ ಕಿಚನ್‌ ಟ್ರಕ್‌ನಲ್ಲಿ ಅಡಗಿಸಿ ಏರ್ ಫೋರ್ಸ್ ಸಿ -32 ಎ ವಿಮಾನಕ್ಕೆ ರಹಸ್ಯವಾಗಿ ಸ್ಥಳಾಂತರಿಸಲಾಗಿದೆ. ಎಲ್ಲರಿಗೂ ಟ್ರಂಪ್‌ ಏರ್‌ಫೋರ್ಸ್‌ ಒನ್‌ ವಿಮಾನದಲ್ಲೇ ಪ್ರಯಾಣ ಮಾಡುತ್ತಿರುವುದಾಗಿ ಹೇಳಿದ್ದ ಟ್ರಂಪ್‌, ಟ್ರಕ್‌ ನೆರವಿನಿಂದ ಬೇರೊಂದು ವಿಮಾನಕ್ಕೆ ಯಾರಿಗೂ ಗೊತ್ತಾಗದಂತೆ ಶಿಫ್ಟ್‌ ಆಗಿದ್ದಾರೆ.

ಟರ್ಕಿಯಿಂದ ಅಮೆರಿಕಕ್ಕೆ ಡೊನಾಲ್ಡ್‌ ಟ್ರಂಪ್‌ ಮರುಪ್ರಯಾಣ ಯಾವುದೇ ಜೇಮ್ಸ್‌ ಬಾಂಡ್‌ ಚಿತ್ರದ ರೋಚಕತೆಗಿಂತ ಕಡಿಮೆ ಇಲ್ಲ. "ಟ್ರಂಪ್ ಅಂಕಾರಾದಲ್ಲಿ ಕ್ಯಾಮೆರಾಗಳ ಮುಂದೆ ಹಳೆಯ ಏರ್‌ಫೋರ್ಸ್ ಒನ್ ಹತ್ತಿದ್ದರೂ, ವಿಮಾನ ನಿಲ್ದಾಣದ ಅಡುಗೆ ಟ್ರಕ್ ಮೂಲಕ ಮತ್ತೊಂದು ಸಣ್ಣ ವಿಮಾನಕ್ಕೆ ರಹಸ್ಯವಾಗಿ ಶಿಫ್ಟ್‌ ಆಗಿದ್ದರು" ಎಂದು ಕಾರ್ಯಾಚರಣೆಯ ಬಗ್ಗೆ ಪರಿಚಿತವಾಗಿರುವ ಯುಎಸ್ ಅಧಿಕಾರಿಯೊಬ್ಬರು ಹೇಳಿದ್ದಾಗಿ "ದಿ ಪೋಸ್ಟ್‌" ವರದಿ ಮಾಡಿದೆ.

ಕತಾರ್ ದೇಣಿಗೆಯಾಗಿ ನೀಡಿದ ಹೊಸ ಜೆಟ್ ವಿಮಾನದಲ್ಲಿ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, ಇದು ಅಧ್ಯಕ್ಷರು ಮತ್ತು ಅವರ ಸಿಬ್ಬಂದಿಯ ಸುರಕ್ಷತೆಯನ್ನು ಖಾತರಿಪಡಿಸುತ್ತದೆ. ಆದಾಗ್ಯೂ, ಭದ್ರತಾ ದೃಷ್ಟಿಯಿಂದ ಅವರನ್ನು ಸಣ್ಣ ವಿಮಾನದಲ್ಲಿ ಯುಎಸ್‌ಗೆ ಮರಳಿ ಕರೆತರಲಾಗಿದೆ.

"ಅಮೆರಿಕದ ಅನೇಕ ಶತ್ರುಗಳು ಅವರ ಮೇಲೆ ಕಣ್ಣಿಟ್ಟಿದ್ದಾರೆ ಮತ್ತು ಅಂತಹ ಬೆದರಿಕೆಗಳನ್ನು ಎದುರಿಸಲು ನಾವು ನಮ್ಮ ಬಳಿ ಇರುವ ಪ್ರತಿಯೊಂದು ಸಾಧನವನ್ನೂ ಬಳಸುತ್ತೇವೆ" ಎಂದು ಪೆಂಟಗನ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟ್ರಂಪ್‌ ಅಧಿಕಾರದಲ್ಲಿ ಇರುವುವರೆಗೂ‌ ನೋ ಡೀಲ್ ಎಂದು ಇರಾನ್‌ ಈಗಷ್ಟೇ ತನ್ನ ನಿರ್ಧಾರ ಪ್ರಕಟಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka