Dailyhunt Logo
  • Light mode
    Follow system
    Dark mode
    • Play Story
    • App Story
ʼಇರಾನ್ ಹಿಟ್‌ಲಿಸ್ಟ್‌ನಲ್ಲಿ ನಾನೇ ನಂ.1 ಟಾರ್ಗೆಟ್‌ʼ: ದಾಳಿ ಭೀತಿಯಿಂದ ಕತಾರ್ ಗಿಫ್ಟ್ ಕೊಟ್ಟಿದ್ದ ವಿಮಾನ ಬಿಟ್ಟು ಕೊನೆ ಕ್ಷಣದಲ್ಲಿ ಬೇರೆ ಫ್ಲೈಟ್‌ ಹತ್ತಿದ ಟ್ರಂಪ್!

ʼಇರಾನ್ ಹಿಟ್‌ಲಿಸ್ಟ್‌ನಲ್ಲಿ ನಾನೇ ನಂ.1 ಟಾರ್ಗೆಟ್‌ʼ: ದಾಳಿ ಭೀತಿಯಿಂದ ಕತಾರ್ ಗಿಫ್ಟ್ ಕೊಟ್ಟಿದ್ದ ವಿಮಾನ ಬಿಟ್ಟು ಕೊನೆ ಕ್ಷಣದಲ್ಲಿ ಬೇರೆ ಫ್ಲೈಟ್‌ ಹತ್ತಿದ ಟ್ರಂಪ್!

Vijay Karnataka 4 months ago

ಅಂಕಾರ: ಮಧ್ಯಪ್ರಾಚ್ಯದಲ್ಲಿ ಡೊನಾಲ್ಡ್‌ ಟ್ರಂಪ್‌ ಮಾತಿನಿಂದ ಈಗಾಗಲೇ ಯುದ್ಧ ಆರಂಭವಾಗಿದ್ದು, ಸ್ವಲ್ಪ ತಣ್ಣಗಾಗಿದ್ದ ವಾರ್‌ ಇದೀಗ ಮತ್ತೆ ಜೋರು ಪಡೆದುಕೊಂಡು ತಾರಕಕ್ಕೇರಿದೆ. ಅದರಲ್ಲೂ ಪ್ರಮುಖವಾಗಿ ತಮ್ಮ ನಾಯಕರು ಹಾಗೂ ನೆಲೆಗಳ ಮೇಲಿನ ಅಮೆರಿಕಾ ದಾಳಿಯಿಂದ ಇರಾನ್‌ ರೊಚ್ಚಿಗೆದಿರುವ ನಡುವೆ ಇರಾನ್‌ ತನ್ನ ಹತ್ಯೆಗೆ ಪ್ಲಾನ್‌ ಮಾಡುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ.

ಅಷ್ಟೇ ಅಲ್ಲದೆ, ಇದಕ್ಕೆ ಪೂರಕವೆಂಬಂತೆ ಇರಾನ್‌ ದಾಳಿಯ ಆತಂಕದಲ್ಲಿ ಕತಾರ್‌ ಉಡುಗೊರೆಯಾಗಿ ನೀಡಿದ್ದ ಏರ್ ಫೋರ್ಸ್ ಒನ್ ವಿಮಾನವನ್ನು ಏರುವುದನ್ನು ದಿಢೀರ್‌ ಆಗಿ ಬದಲಾವಣೆ ಮಾಡಿ, ಬೇರೆ ವಿಮಾನ ಹತ್ತಿದ್ದಾರೆ.


ಇರಾನ್‌ ದಾಳಿ ಭೀತಿಯಿಂದ ಕತಾರ್‌ ಗಿಫ್ಟ್‌ ಆಗಿ ಕೊಟ್ಟ ವಿಮಾನ ಹತ್ತದ ಟ್ರಂಪ್

ಮಧ್ಯಪ್ರಾಚ್ಯದಲ್ಲಿ ಅಮೆರಿಕಾ-ಇರಾನ್‌ ಉದ್ವಿಗ್ನತೆ ನಡುವೆ ಇರಾನ್‌ ತನ್ನ ಹತ್ಯೆಗೆ ಸಂಚು ಮಾಡುತ್ತಿದ್ದು, ನನಗಿರುವ ಲಕ್‌ ಜಾಸ್ತಿ ಹೊತ್ತು ಇರುವುದಿಲ್ಲ ಎಂದು ಆತಂಕ ಹೊರಹಾಕಿದ ಬೆನ್ನಲ್ಲೇ, ಅಚ್ಚರಿಯ ಬೆಳವಣಿಗೆ ನಡೆದಿದೆ. ಅದೇನಪ್ಪಾ ಎಂದರೆ, ಟ್ರಂಪ್‌ ಟರ್ಕಿಯ ನ್ಯಾಟೋ ಶೃಂಗಸಭೆಗೆ ಬಂದಿದ್ದು, ಕತಾರ್ ಉಡುಗೊರೆಯಾಗಿ ನೀಡಿದ ಬೋಯಿಂಗ್ 747 ಏರ್‌ಫೋರ್ಸ್‌ ಒನ್‌ನಲ್ಲಿ.. ಆದರೆ, ಇರಾನ್‌ ದಾಳಿ ಕಳವಳದ ನಡುವೆ ವಾಷಿಂಗ್ಟನ್‌ಗೆ ತೆರಳುವಾಗ ಟ್ರಂಪ್ ಏಕಾಏಕಿ ಕತಾರ್‌ ಗಿಫ್ಟ್‌ ಎಂದು ನೀಡಿದ್ದ ಆ ಏರ್‌ಫೋರ್ಸ್‌ ವಿಮಾನವನ್ನೇ ಹತ್ತದೆ,‌ UKಯಲ್ಲಿರುವ RAF ಮಿಲ್ಡೆನ್‌ಹಾಲ್‌ನಲ್ಲಿ ಹಳೆಯ ಲೆಗಸಿ ಬೇಬಿ ಬ್ಲೂ ಏರ್ ಫೋರ್ಸ್ ಒನ್‌ನಲ್ಲಿ ಹಾರಲು ಕೊನೆ ಕ್ಷಣದಲ್ಲಿ ನಿರ್ಧರಿಸಿದ್ದಾರೆ. ಹೀಗೆ ಲಾಸ್ಟ್‌ ಮಿನಿಟ್‌ನಲ್ಲಿ ಪ್ಲಾನ್‌ ಚೇಂಜ್‌ ಮಾಡಿ ಬೇರೆ ವಿಮಾನವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಕುರಿತು ಟ್ರಂಪ್‌ ಏರ್‌ಫೋರ್ಸ್‌ ಒನ್‌ನಲ್ಲಿನ ಪತ್ರಕರ್ತರೊಂದಿಗೆ ಮಾತನಾಡಿ ಯಾವುದೇ ಸೆಕ್ಯೂರಿಟಿ ಆತಂಕಗಳಿಲ್ಲ ಎನ್ನುತ್ತಲೇ, ಪತ್ರಕರ್ತರಿಗೆ "ನೀವು ಬಹುಶಃ ಅಪಾಯಕಾರಿ ವಿಮಾನದಲ್ಲಿದ್ದೀರಿ... ಇವರು (ಇರಾನಿಯನ್ನರು) ಭ್ರಷ್ಟರು. ನನಗೆ ಯಾವಾಗಲೂ ಬೆದರಿಕೆ ಇರುತ್ತದೆ. ನಾನು ಅವರ ಪಟ್ಟಿಯಲ್ಲಿ ನಂಬರ್ ಒನ್... ಹಾಗಾಗಿ ನಾನು ಹೋದರೆ, ನೀವು ಹೋಗುತ್ತೀರಿ. ಬಹುಶಃ, ಒಂದು ದಿನ ನೀವು ವೃತ್ತಿಯನ್ನೇ ಬದಲಾಯಿಸಲು ಬಯಸಬಹುದು" ಎಂದು ಹೇಳಿಕೆ ನೀಡಿದ್ದಾರೆ.

ಇರಾನ್‌ ಹತ್ಯೆಯ ಸಂಚಿನ ಲಿಸ್ಟ್‌ನಲ್ಲಿ ನಾನೇ ನಂ.1 ವ್ಯಕ್ತಿ ಎಂದ ಟ್ರಂಪ್!

ಇದಕ್ಕೂ ಮೊದಲು, ಟರ್ಕಿಯ ರಾಜಧಾನಿ ಅಂಕಾರದಲ್ಲಿ ನಡೆದ ನ್ಯಾಟೋ ಶೃಂಗಸಭೆಯ ಭಾಗವಹಿಸಿದ ಟ್ರಂಪ್‌ ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು ನಾನು ಇರಾನ್‌ ಹಿಟ್‌ಲಿಸ್ಟ್‌ನಲ್ಲಿರುವ ನಂಬರ್‌ 1 ವ್ಯಕ್ತಿ ಎಂದು ತಿಳಿಸಿದ್ದಾರೆ.


ಈ ಕುರಿತು "ಈಗಾಗಲೇ ಇರಾನ್‌ ನಾಯಕರೂ ಇಲ್ಲವಾಗಿದ್ದಾರೆ, ಈಗಿರುವ ನಾಯಕರೂ ಸಹ ಇಲ್ಲವಾಗುತ್ತಾರೆ, ಆ ಮುಂದೆ ಬರುವವರೂ ಸಹ ಆದಷ್ಟು ಬೇಗನೆ ಹೋಗಬಹುದು. ಅಷ್ಟೇ ಯಾಕೆ ನಾನು(ಟ್ರಂಪ್) ಸಹ ಇಲ್ಲವಾಗಬಹುದು. ಏಕೆಂದರೆ ನಾನು ಅವರ ನಂಬರ್‌ 1 ಟಾರ್ಗೆಟ್‌ ಆಗಿದ್ದೇನೆ. ಅಷ್ಟೇ ಅಲ್ಲ ಅವರ ಎಲ್ಲಾ ಹಿಟ್‌ಲಿಸ್ಟ್‌ನಲ್ಲೂ ನಾನೇ ನಂಬರ್‌ ಟಾರ್ಗೆಟ್‌. ಏಕೆಂದರೆ ಅವರು ಕೆಟ್ಟವರು ಅದೇ ರೀತಿಯಾಗಿಯೇ ಅವರು ಕಳೆದ 47 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.

ಮುಂದುವರೆದು, ಈ ಹಿಂದೆಯೂ ಹತ್ಯೆಯ ಸಂಚಿನಿಂದ ತಪ್ಪಿಸಿಕೊಂಡ ಕುರಿತು ಮಾತನಾಡಿದ ಟ್ರಂಪ್‌ "ಇರಾನ್‌ ಅಮೆರಿಕಾದ ನಾಯಕನನ್ನು ತೆಗೆದುಹಾಕಲು ಬಯಸುತ್ತಾರೆ. ನಾನು ಅವರ ಪ್ರತಿಯೊಬ್ಬರ ಪಟ್ಟಿಯಲ್ಲೂ ಇದ್ದೇನೆ. ಇಲ್ಲಿಯವರೆಗೆ, ನನಗೆ ಸ್ವಲ್ಪ ಲಕ್‌ ಜೊತೆಗಿತ್ತು, ಸಿಕ್ಕಿದೆ, ಆದರೆ ಬಹುಶಃ ಆ ಲಕ್‌ ಹೆಚ್ಚು ಕಾಲ ಉಳಿಯುವುದಿಲ್ಲ ಎನಿಸುತ್ತೆ. ಆದರೆ, ನಾನು ಈವರೆಗೂ ನಮ್ಮ ದೇಶ ಹಾಗೂ ಜಗತ್ತಿಗೆ ಉತ್ತಮ ಕೆಲಸಗಳನ್ನೇ ಮಾಡುತ್ತಾ ಬಂದಿದ್ದೇನೆ" ಎಂದಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka