ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕಾ-ಇರಾನ್ ನಡುವಿನ ಯುದ್ಧ ಉಲ್ಭಣಗೊಳ್ಳುತ್ತಿದೆ. ಇದೀಗ ಒಂದು ಹಂತ ಮೇಲಕ್ಕೆ ಹೋಗಿದ್ದು ನಾಗರಿಕರ ಮೇಲೆ ದಾಳಿಗಳು ನಡೆಯುತ್ತಿದ್ದು, ಇದೀಗ ಇರಾನ್‌ನ ಹೊರ್ಮುಜ್ ಜಲಸಂಧಿಯ ಕರಾವಳಿ ಪ್ರದೇಶವಾದ ಸಿರಿಕ್‌ನ ಕುಹಸ್ತಾಕ್ ನಗರದಲ್ಲಿ ನಡೆಯುತ್ತಿದ್ದ ವಿವಾಹ ಸಂಭ್ರಮಾಚರಣೆಯ ಮೇಲೆ ಅಮೆರಿಕಾ ದಾಳಿ ನಡೆಸಿದ್ದು, ಈ ದಾಳಿಗೆ 4 ವರ್ಷದ ಮಗು ಸೇರಿದಂತೆ 5 ಮಂದಿ ಬಲಿಯಾಗಿದ್ದು, 50ಕ್ಕೂ ಅಧಿಕ ಜನರು ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಕುಹಸ್ತಾಕ್‌ನಲ್ಲಿ ವಿವಾಹ ನಡೆಯುತ್ತಿದ್ದ ಮನೆ ಮೇಲೆ ಅಮೆರಿಕಾ ದಾಳಿ
ಯುದ್ಧದ ನಡುವೆಯೂ ಜೀವನ ಎಂದಿನಂತೆ ಸಾಗಲಿದೆ ಎಂಬ ನಿರೀಕ್ಷೆಯಲ್ಲಿ ಆತಂಕದ ನಡುವೆಯೂ ಮದುವೆ ಸಂಭ್ರಮಚರಣೆಗೆ ಬಂಧು-ಮಿತ್ರರು ಒಂದೆಡೆ ಸೇರಿದಾಗಲೇ ಮಂಗಳವಾರ(ಸೆ.1ರಂದು ಸ್ಥಳೀಯ ಕಾಲಮಾನದ ಪ್ರಕಾರ) ಅಮೆರಿಕಾದ ಕ್ಷಿಪಣಿಗಳು ಕುಹಸ್ತೆಕ್ ನಗರದಲ್ಲಿನ ಮದುವೆ ಸಂಭ್ರಮದ ವಸತಿ ಗೃಹದ ಕಟ್ಟಡಕ್ಕೆ ಅಪ್ಪಳಿಸಿದೆ. ಈ ಕ್ಷಿಪಣಿ ದಾಳಿಯ ಹೊಡೆತಕ್ಕೆ ಕ್ಷಣಾರ್ಧದಲ್ಲೇ ಕಟ್ಟಡ ಧ್ವಂಸವಾಗಿದ್ದು, 4 ವರ್ಷದ ಪುಟ್ಟ ಮಗು ಸೇರಿದಂತೆ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಮದುವೆಗೆಂದು ನೆರೆದಿದ್ದ 50ಕ್ಕೂ ಅಧಿಕ ಮಂದಿ ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಇರಾನಿನ ರೆಡ್ ಕ್ರೆಸೆಂಟ್ ಸಂಸ್ಥೆ ತಮ್ಮ ಅಧಿಕೃತ X ಖಾತೆ ಮೂಲಕ ಮಾಹಿತಿ ನೀಡಿದೆ. ಕೇವಲ ಸಿರಿಕ್ ಮಾತ್ರವಲ್ಲದೆ, ಹೊರ್ಮುಜ್ ಆಯಕಟ್ಟಿನ ಸುತ್ತಲಿನ ಚಬಹಾರ್ ಮತ್ತು ಕೊನಾರಕ್ ಕೌಂಟಿ ಸೇರಿದಂತೆ 4 ಪ್ರದೇಶಗಳಲ್ಲೂ ಅಮೆರಿಕಾ ಕ್ಷಿಪಣಿ ದಾಳಿಗಳು ನಡೆದಿದ್ದು, ದಕ್ಷಿಣ ಪ್ರಾಂತ್ಯದ ಕೆರ್ಮನ್‌ನಲ್ಲಿರುವ ವಿಮಾನ ನಿಲ್ದಾಣ ಸೇರಿದಂತೆ ಹಲವು ನಾಗರಿಕ ಮೂಲಸೌರ್ಕಯಗಳನ್ನು ಅಮೆರಿಕಾ ದಾಳಿಯಾಗಿಸಿಕೊಂಡಿದೆ ಎಂದು ಇರಾನಿನ ಸುದ್ದಿಸಂಸ್ಥೆಗಳು ವರದಿ ಮಾಡುತ್ತಿದೆ.
ಕುಹಸ್ತಾಕ್‌ನಲ್ಲಿ ವಿವಾಹ ಮಹೋತ್ಸವದ ಕಟ್ಟಡದ ಮೇಲೆ US ದಾಳಿಗಳನ್ನು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ಎಸ್ಮಾಯಿಲ್ ಬಘೈ ತಮ್ಮ ಅಧಿಕೃತ X ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿ ಖಂಡಿಸಿದ್ದಾರೆ. ಈ ಕುರಿತು "ಕುಹೆಸ್ತಕ್‌ನಲ್ಲಿರುವ ವಸತಿ ಮನೆಯಲ್ಲಿ ಇಂದು ರಾತ್ರಿ ಕುಟುಂಬಗಳು ಮದುವೆಯನ್ನು ಆಚರಿಸುತ್ತಿದ್ದಾಗ, ಅಮೆರಿಕಾ ಅವರ ಮೇಲೆ ಕ್ರೂರವಾಗಿ ದಾಳಿ ಮಾಡಿದೆ. ಇದರಿಂದಾಗಿ 50 ಕ್ಕೂ ಹೆಚ್ಚು ಮುಗ್ಧ ಪುರುಷರು, ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದಾರೆ ಹಾಗೂ ಹುತಾತ್ಮರಾಗಿದ್ದಾರೆ. ಈ ಮೂಲಕ ಇರಾನ್ ಮೇಲಿನ ಅಮೆರಿಕಾದ ದೌರ್ಜನ್ಯ ಪಟ್ಟಿಯಲ್ಲಿನ ಎಲ್ಲಾ ಅಂಶಗಳು ಪೂರ್ಣವಾಗಿದೆ. ಈ ಕ್ರೌರ್ಯವನ್ನು ಈ ಹಿಂದೆ ಮಿನಾಬ್ ಶಾಲೆಯಲ್ಲಿನ ಮಕ್ಕಳ ಮೇಲಿನ ದಾಳಿ ಸೇರಿದಂತೆ ಕೆಶ್ಮ್, ಲ್ಯಾರ್ಮಡ್ ಸೇರಿದಂತೆ ಇರಾನ್‌ನ ಮಿಲಿಟರಿ ಸ್ಥಾವರಗಳನ್ನು ಒಳಗೊಂಡಂತೆ ಮೋಸದ ಸಮರ್ಥನೆಗಳನ್ನು ಮಾಡಿಕೊಂಡು ಅಮೆರಿಕಾ ನಡೆಸಿದ ಕ್ರೂರ ದಾಳಿಗಳಿಂದ ಬೇರ್ಪಡಿಸಲು/ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.
ಕುಹಸ್ತಾಕ್‌ನಲ್ಲಿ ವಿವಾಹ ಮಹೋತ್ಸವದ ಕಟ್ಟಡದ ಮೇಲೆ US ದಾಳಿಗಳನ್ನು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ಎಸ್ಮಾಯಿಲ್ ಬಘೈ ತಮ್ಮ ಅಧಿಕೃತ X ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿ ಖಂಡಿಸಿದ್ದಾರೆ. ಈ ಕುರಿತು "ಕುಹೆಸ್ತಕ್‌ನಲ್ಲಿರುವ ವಸತಿ ಮನೆಯಲ್ಲಿ ಇಂದು ರಾತ್ರಿ ಕುಟುಂಬಗಳು ಮದುವೆಯನ್ನು ಆಚರಿಸುತ್ತಿದ್ದಾಗ, ಅಮೆರಿಕಾ ಅವರ ಮೇಲೆ ಕ್ರೂರವಾಗಿ ದಾಳಿ ಮಾಡಿದೆ. ಇದರಿಂದಾಗಿ 50 ಕ್ಕೂ ಹೆಚ್ಚು ಮುಗ್ಧ ಪುರುಷರು, ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದಾರೆ ಹಾಗೂ ಹುತಾತ್ಮರಾಗಿದ್ದಾರೆ. ಈ ಮೂಲಕ ಇರಾನ್ ಮೇಲಿನ ಅಮೆರಿಕಾದ ದೌರ್ಜನ್ಯ ಪಟ್ಟಿಯಲ್ಲಿನ ಎಲ್ಲಾ ಅಂಶಗಳು ಪೂರ್ಣವಾಗಿದೆ. ಈ ಕ್ರೌರ್ಯವನ್ನು ಈ ಹಿಂದೆ ಮಿನಾಬ್ ಶಾಲೆಯಲ್ಲಿನ ಮಕ್ಕಳ ಮೇಲಿನ ದಾಳಿ ಸೇರಿದಂತೆ ಕೆಶ್ಮ್, ಲ್ಯಾರ್ಮಡ್ ಸೇರಿದಂತೆ ಇರಾನ್‌ನ ಮಿಲಿಟರಿ ಸ್ಥಾವರಗಳನ್ನು ಒಳಗೊಂಡಂತೆ ಮೋಸದ ಸಮರ್ಥನೆಗಳನ್ನು ಮಾಡಿಕೊಂಡು ಅಮೆರಿಕಾ ನಡೆಸಿದ ಕ್ರೂರ ದಾಳಿಗಳಿಂದ ಬೇರ್ಪಡಿಸಲು/ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.
ನಾಗರಿಕರ ಮೇಲಿನ ದಾಳಿ ನೋಡಿಯೂ ತಟಸ್ಥವಾಗಿರುವ ದೇಶಗಳ ವಿರುದ್ದ ಇರಾನ್ ಕಿಡಿ
ಅಲ್ಲದೆ, ಇರಾನ್‌ನ ನಾಗರಿಕರ ಮೇಲೆ ಅಮೆರಿಕಾ ಕ್ರೂರ ದಾಳಿಗಳನ್ನು ನೋಡಿಯೂ ದೇಶಗಳ ವಿರುದ್ದ ಎಸ್ಮಾಯಿಲ್ ಬಘೈ ಕಿಡಿಕಾರಿದ್ದು, " ಇರಾನ್ ಈ ಘೋರ ಅಪರಾಧಗಳಿಗೆ ದೃಢತೆಯಿಂದ ಪ್ರತಿಕ್ರಿಯಿಸುತ್ತದೆ. ಆದಾಗ್ಯೂ, ಬಾಂಬ್ ದಾಳಿಗಿಂತ ಹೆಚ್ಚು ಅಪಾಯಕಾರಿ ಎಂದರೆ ಇಂತಹ ಬಾಂಬ್ ದಾಳಿಯನ್ನು ಸಾಮಾನ್ಯೀಕರಣಗೊಳಿಸುವುದು. ಮೌನಕ್ಕಿಂತ ಹೆಚ್ಚು ಅಪಾಯಕಾರಿ ಎಂದರೆ ಮೌನವನ್ನು ನ್ಯಾಯಸಮ್ಮತವನ್ನಾಗಿ ಪರಿವರ್ತಿಸುವುದು. ಅಂತಹ ಅನಾಗರಿಕತೆಯನ್ನು ನೋಡಿಯೂ ಮೌನವಾಗಿರುವ ಅಥವಾ ಅಂತಹ ಕೃತ್ಯಗಳನ್ನು ಸಮರ್ಥಿಸಲು ಪ್ರಯತ್ನಿಸುವ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ತಮ್ಮ ಈ ಮೌನ ತಟಸ್ಥತೆಯಲ್ಲ ಎಂದು ಅರ್ಥಮಾಡಿಕೊಳ್ಳಬೇಕು.ಕಾನೂನುಬಾಹಿರ ದಾಳಿಗಳು ಮತ್ತು ಕ್ರೂರ ಅಪರಾಧಗಳನ್ನು ರಾಜಕೀಯ ಅನುಕೂಲಕ್ಕಾಗಿ ಬಿಳಿಚಿಕೊಂಡಾಗ, ಅಪರಾಧವನ್ನು ಖಂಡಿಸುವುದು ಮತ್ತು ಅದನ್ನು ಸಾಮಾನ್ಯೀಕರಿಸುವ ನಡುವಿನ ರೇಖೆಯು ಕಣ್ಮರೆಯಾಗುತ್ತದೆ. ಇಂದು ಮೌನವಾಗಿರುವವರು ನಾಳೆ ಅದರ ಪರಿಣಾಮಗಳಿಂದ ಮುಕ್ತರಾಗಿರುವುದಿಲ್ಲ. ಅನ್ಯಾಯದ ಕಡೆಗೆ ಕಣ್ಣು ಮುಚ್ಚುವುದು ಸರಿಯಲ್ಲ ಬದಲಾಗಿ ಇದು ಅಪರಾಧಿಗಳಿಗೆ ಇನ್ನಷ್ಟು ಧೈರ್ಯ ನೀಡಿದಂತಾಗುತ್ತದೆ" ಎಂದು ಕಠಿಣ ಸಂದೇಶ ನೀಡಿದ್ದಾರೆ.
ಅಮೆರಿಕಾ ದಾಳಿಗೆ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಕೆಂಗಣ್ಣು
ಈ ಬೆನ್ನಲ್ಲೇ, ಅಮೆರಿಕಾದ ದಾಳಿಗೆ ಪ್ರತೀಕಾರವಾಗಿ ಇರಾನ್ ತನ್ನ ನೆರೆಯ ಗಲ್ಫ್ ರಾಷ್ಟ್ರಗಳ ಮೇಲೆ ತನ್ನ ಕೋಪಾಗ್ನಿ ವೃಷ್ಟಿಗೆ ಮುಂದಾಗಿದ್ದು, ಜೋರ್ಡಾನ್, ಕುವೈತ್ ಮತ್ತು ಬಹ್ರೇನ್‌ನಲ್ಲಿರುವ US ಮಿಲಿಟರಿ ಬೇಸ್‌ಗಳನ್ನು ಗುರಿಯಾಗಿಸಿ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದೆ. ಈ ದಾಳಿಗಳನ್ನು ಪ್ರತೀಕಾರದ ದಾಳಿಗಳು ಎಂದು ಕರೆದಿರುವ ಇರಾನ್ ಈ ಕಾರ್ಯಾಚರಣೆಯನ್ನು ಆಪರೇಷನ್ ಥಂಡರ್‌ನ 29 ನೇ ಹಂತ ಎಂದು ಬಣ್ಣಿಸಿದೆ. ಅಲ್ಲದೆ, ಮುಂಬರುವ ದಾಳಿಗಳಿಗೆ ಘೋರ ಮತ್ತು ವ್ಯಾಪಕ ಪ್ರತಿಕ್ರಿಯೆಗೆ ಟೆಹ್ರಾನ್ ಸಿದ್ಧವಾಗಿದೆ ಎಂದು ತಿಳಿಸಿರುವುದಾಗಿ ಇರಾನ್‌ನ ತಸ್ನೀಮ್ ಸುದ್ದಿಸಂಸ್ಥೆ ವರದಿಮಾಡಿದೆ.ಈ ದಾಳಿ ಜೋರ್ಡಾನ್‌ನಲ್ಲಿರುವ ಅಕಾಬಾ ಕೊಲ್ಲಿಯ ಬಳಿ ಇರುವ ಕ್ಯಾಂಪ್ ಟಿಟಿನ್‌ನ US ಮೆರೈನ್ ಕಾರ್ಪ್ಸ್ ನೆಲೆಯ ಮೇಲೆ ಭಾರೀ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇಸ್ಲಾಮಿಕ್ ರೆವೆಲ್ಯೂಷನರಿ ಗಾರ್ಡ್ ಕಾರ್ಪ್ಸ್ ತಿಳಿಸಿದೆ. ಇದರ ಜೊತೆಗೆ USನ 7 ಪಡೆಗಳು ಬೀಡುಬಿಟಿರುವ ಬಹ್ರೇನ್‌ನಲ್ಲಿ ಇರಾನ್ ಸೇನೆಯು ಅಮೆರಿಕಾಗೆ ಸೇರಿದ ರಾಡಾರ್ ಸ್ಥಾಪನೆಗಳು ಮತ್ತು ಶೇಖ್ ಇಸಾ ವಾಯುನೆಲೆಯ ಪ್ರದೇಶಗಳ ಮೇಲೆ ಡ್ರೋನ್ ದಾಳಿಯ ಅಲೆಯನ್ನು ಪ್ರಾರಂಭಿಸಿದೆ. ಇದರ ಜೊತೆಗೆ ಕುವೈತ್‌ನ ಹಲವೆಡೆ ದಾಳಿ ನಡೆಸಿದೆ.
ಇರಾನ್‌ಗೆ ಟ್ರಂಪ್ ಎಚ್ಚರಿಕೆ
ಇತ್ತ, ಅಮೆರಿಕಾ ಸಹ ತನ್ನ ದಾಳಿಗಳನ್ನು ಹೆಚ್ಚಳ ಮಾಡಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ತಮ್ಮ ಪಟ್ಟನ್ನು ಇನ್ನಷ್ಟು ಹೆಚ್ಚಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತು ತಮ್ಮ ಅಧಿಕೃತ X ಖಾತೆಯ ಮೂಲಕ ಡೊನಾಲ್ಡ್ ಟ್ರಂಪ್ "ಅಮೆರಿಕಾದ ಈ ಸಮರ್ಥನೀಯ ದಾಳಿಗೆ ವಿಫಲವಾದ ಇರಾನ್ ರಾಷ್ಟ್ರವು ಪ್ರತೀಕಾರ ತೀರಿಸಿಕೊಂಡರೆ, ಅವರ ಮೇಲೆ ಮತ್ತೆ ಹೆಚ್ಚು ಕಠಿಣ ಮತ್ತು ಉನ್ನತ ಮಟ್ಟದಲ್ಲಿ ಹೊಡೆತ ಬೀಳುತ್ತದೆ. ಆದಾಗ್ಯೂ, ಇದು ಭೀಕರ ದಾಳಿಯಲ್ಲ, ಏಕೆಂದರೆ ಇದಕ್ಕಿಂತ ಭೀಕರವಾದ ದಾಳಿ ನಿಮಗಾಗಿ ಕಾಯುತ್ತಿದೆ, ಒಂದು ವೇಳೆ ಈ ದಾಳಿ ನಡೆದರೆ ಇದರ ಬಳಿಕ ಇಸ್ಲಾಮಿಕ್ ಗಣರಾಜ್ಯ ಇರಾನ್‌ನಲ್ಲಿ ಬಹಳ ಕಡಿಮೆ ಜನ ಉಳಿಯುತ್ತಾರೆ"ಎಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.
