Dailyhunt Logo
  • Light mode
    Follow system
    Dark mode
    • Play Story
    • App Story
ಇಟ್ಸ್‌ ಓವರ್‌: ಇರಾನ್‌ ಜೊತೆ ಶಾಂತಿ ಒಪ್ಪಂದದ ಕಥೆ ಮುಗಿಸಿದ ಡೊನಾಲ್ಡ್‌ ಟ್ರಂಪ್!‌ ʻಯುದ್ಧಪ್ರಾಚ್ಯʼ ಮತ್ತೆ ಆಯಕ್ಟೀವ್‌

ಇಟ್ಸ್‌ ಓವರ್‌: ಇರಾನ್‌ ಜೊತೆ ಶಾಂತಿ ಒಪ್ಪಂದದ ಕಥೆ ಮುಗಿಸಿದ ಡೊನಾಲ್ಡ್‌ ಟ್ರಂಪ್!‌ ʻಯುದ್ಧಪ್ರಾಚ್ಯʼ ಮತ್ತೆ ಆಯಕ್ಟೀವ್‌

Vijay Karnataka 5 days ago

ಅಂಕಾರಾ: ಅಮೆರಿಕ-ಇರಾನ್ ಮಧ್ಯಂತರ ತಿಳಿವಳಿಕೆ ಒಪ್ಪಂದ (MoU) ಜಾರಿಯಾಗುವುದು ಅನುಮಾನ ಎಂದಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಶಾಂತಿ ಒಪ್ಪಂದ ಮಾತುಕತೆಗಳ ಸಾಧ್ಯತೆ ಕ್ಷೀಣಿಸುತ್ತಿದೆ ಎಂದು ಹೇಳಿದ್ದಾರೆ. ಅಂದರೆ ಇರಾನ್‌ ಜೊತೆ ಮತ್ತೆ ಯುದ್ಧ ಆರಂಭಿಸುವ ಬಯಕೆಯನ್ನು ಡೊನಾಲ್ಡ್‌ ಟ್ರಂಪ್‌ ಹೊರಹಾಕಿದ್ದಾರೆ.

"ನಾನು ಇರಾನ್‌ ಜೊತೆ ಶಾಂತಿ ಒಪ್ಪಂದದ ಕುರಿತಾಗಿ ಇನ್ನು ಮುಂದೆ ಮಾತುಕತೆ ನಡೆಸುವುದಿಲ್ಲ. ಅನ್ಯ ವಿಷಯಗಳ ಮೇಲೆ ಮಾತುಕತೆಗಳು ಮುಂದುವರೆಯುತ್ತವೆಯಾದರೂ, ಸದ್ಯದ ಮಧ್ಯಂತರ ತಿಳುವಳಿಕೆ ಒಪ್ಪಂದದ ಕುರಿತು ಇರಾನ್‌ ನಾಯಕತ್ವದ ಜೊತೆ ಮಾತನಾಡಲು ನಾನು ಸಿದ್ಧನಿಲ್ಲ. ಶಾಂತಿ ಒಪ್ಪಂದದ ಕಥೆ ಮುಗಿದಿದೆ" ಎಂದು ಡೊನಾಲ್ಡ್‌ ಟ್ರಂಪ್‌ ನೇರವಾಗಿ ಹೇಳಿದರು.

ಹಾರ್ಮುಜ್ ಜಲಸಂಧಿಯಲ್ಲಿ ತೈಲ ಹಡಗುಗಳ ಮೇಲಿನ ಇರಾನ್‌ ದಾಳಿಗೆ ಪ್ರತೀಕಾರವಾಗಿ, ಬಂದರ್ ಅಬ್ಬಾಸ್ ಮತ್ತು ಸಿರಿಕ್ ಬಂದರು ನಗರಗಳಲ್ಲಿ ಮತ್ತು ಕೆಶ್ಮ್ ದ್ವೀಪದಲ್ಲಿ ಅಮೆರಿಕ ಬೃಹತ್ ದಾಳಿ ನಡೆಸಿದೆ. ಈ ದಾಳಿಗಳನ್ನು ಸಮರ್ಥಿಸಿಕೊಂಡಿರುವ ಡೊನಾಲ್ಡ್‌ ಟ್ರಂಪ್‌, "ಟೆಹ್ರಾನ್‌ ಜೊತೆ ಮಾತುಕತೆ ನಡೆಸಿ ಯಾವುದೇ ಪ್ರಯೋಜವಿಲ್ಲ" ಎಂದಿಉ ಗುಡುಗಿದ್ದಾರೆ.


ಟ್ರಂಪ್ ಹೇಳಿದ್ದೇನು?

"ಇರಾನ್‌ ಜೊತೆಗಿನ ಮಾತುಕತೆ ಸಾಧ್ಯತೆ ಮುಗಿದಿದೆ ಎಂದು ನಾನು ಭಾವಿಸುತ್ತೇನೆ. ನಾನು ಅವರೊಂದಿಗೆ ಇನ್ನು ಮುಂದೆ ವ್ಯವಹರಿಸಲು ಬಯಸುವುದಿಲ್ಲ. ಏಕೆಂದರೆ ಅವರೊಂದಿಗೆ ಮಾತನಾಡುವುದು ವ್ಯರ್ಥ. ಇರಾನ್‌ ಕ್ರೂರ ಮತ್ತು ಹಿಂಸಾತ್ಮಕ ಜನರಿಂದ ನಡೆಸಲ್ಪಡುತ್ತಿದೆ. ಅವರಿಗೆ ಕೇವಲ ಬಂದೂಕಿನ ಭಾಷೆ ಮಾತ್ರ ಗೊತ್ತಿದೆ. ಇರಾನ್ ಸರ್ಕಾರ ಆರಂಭದಲ್ಲೇ ಕತ್ತರಿಸಿ ತೆಗೆಯಬೇಕಾದ ಕ್ಯಾನ್ಸರ್‌ನಂತಿದೆ" ಎಂದು ಎಂದು ಡೊನಾಲ್ಡ್‌ ಟ್ರಂಪ್‌ ಹರಿಹಾಯ್ದಿದ್ದಾರೆ.

ಟರ್ಕಿ ರಾಜಧಾನಿ ಅಂಕಾರಾದಲ್ಲಿ ನಡೆದ ಎರಡು ದಿನಗಳ NATO ಶೃಂಗಸಭೆಯಲ್ಲಿ ಭಾಗವಹಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌,
ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್‌ಗಳ ಮೇಲಿನ ಇರಾನ್‌ ದಾಳಿ ಖಂಡನೀಯ ಎಂದು ಹೇಳಿದ್ದಾರೆ. "ಅಮೆರಿಕದ ಪ್ರತಿನಿಧಿಗಳು ಇರನ್‌ ಜೊತೆ ಮಾತುಕತೆ ಮುಂದುವರೆಸಲಿ, ಆದರೆ ನಾನು ಮಾತ್ರ ಯಾವುದೇ ಕಾರಣಕ್ಕೂ ಈ ಮಾತುಕತೆ ಭಾಗವಾಗುವುದಿಲ್ಲ. ಏಕೆಂದರೆ ಈ ಮಾತುಕತೆಗಳಿಂದ ಸಕಾರಾತ್ಮಕ ಫಲಿತಾಂಶ ಬರುತ್ತದೆ ಎಂದು ನಾನು ನಂಬುವುದಿಲ್ಲ" ಎಂದು ರಿಪಬ್ಲಿಕನ್‌ ನಾಯಕ ಆಕ್ರೋಶ ಹೊರಹಾಕಿದ್ದಾರೆ.

ಇರಾನ್ ಮೇಲೆ ಅಮೆರಿಕ ದಾಳಿ:

ಹಾರ್ಮುಜ್ ಜಲಸಂಧಿಯ ಪ್ರದೇಶದಲ್ಲಿ ಇರಾನ್‌ ಮಿಲಿಟರಿ ಗುರಿಗಳ ವಿರುದ್ಧ, ನಿನ್ನೆ ()ಜುಲೈ 7-ಮಂಗಳವಾರ) ಅಮೆರಿಕ ತೀವ್ರ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಏಪ್ರಿಲ್ ಕದನ ವಿರಾಮದ ನಂತರ, ಇರಾನ್ ಮೇಲೆ ಅಮೆರಿಕ ನಡೆಸಿದ ಅತ್ಯಂತ ತೀವ್ರವಾದ ದಾಳಿ ಇದಾಗಿದೆ. ಈ ದಾಳಿಗಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿಯೂ ಇರಾನ್‌ ಎಚ್ಚರಿಕೆ ನೀಡಿದೆ.


ಇರಾನ್‌ನಲ್ಲಿ ಸದ್ಯ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂಂತ್ಯಕ್ರಿಯೆ ಪ್ರಕ್ರಿಯೆ ನಡೆಯುತ್ತಿದೆ. ನಾಳೆ (ಜುಲೈ 9-ಗುರುವಾರ) ಇದು ಪೂರ್ಣಗೊಳ್ಳಲಿದ್ದು, ಖಮೇನಿ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಅಮೆರಿಕ ವಿರೋಧಿ ಘೋಷಣೆ ಮೊಳಗಿಸಲಾಗಿದೆ. ಖಮೇನಿ ಅಂತ್ಯಕ್ರಿಯೆ ಬಳಿಕ ಅಮೆರಿಕ-ಇರಾನ್‌ ಶಾಂತಿ ಒಪ್ಪಂದ ಮಾತುಕತೆಗಳು ಮುಂದುವರೆಯಲಿವೆ ಎಂದು ನಿರೀಕ್ಷಿಸಲಾಗಿತ್ತಾದರೂ, ಡೊನಾಲ್ಡ್‌ ಟ್ರಂಪ್‌ ಅವರ "ನೋ ಟಾಕ್ಸ್"‌ ಹೇಳಿಕೆ ಈ ನಿರೀಕ್ಷೆಯನ್ನು ಹುಸಿಗೊಳಿಸಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka