Dailyhunt Logo
  • Light mode
    Follow system
    Dark mode
    • Play Story
    • App Story
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಿಂದ ಸಂಜು ಸ್ಯಾಮ್ಸನ್ ಔಟ್ ಯಾಕೆ?ಅಜಿತ್ ಅಗರ್ಕರ್ ಸಮಿತಿಯ ಅಸಲಿ ಲೆಕ್ಕಾಚಾರವೇನು?

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಿಂದ ಸಂಜು ಸ್ಯಾಮ್ಸನ್ ಔಟ್ ಯಾಕೆ?ಅಜಿತ್ ಅಗರ್ಕರ್ ಸಮಿತಿಯ ಅಸಲಿ ಲೆಕ್ಕಾಚಾರವೇನು?

Vijay Karnataka 1 week ago

2026ರ ಟಿ20 ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕರಾಗಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಹೊರಹಾಕಲ್ಪಟ್ಟ ಬಳಿಕ ಇದೀಗ ಟೂರ್ನಿಯಲ್ಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ 'ಸರಣಿ ಶ್ರೇಷ್ಠ ಆಟಗಾರ' (Player Of the tournment) ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸಂಜು ಸ್ಯಾಮ್ಸನ್ ಅವರನ್ನು ಸಹ ತಂಡದಿಂದ ಕೈಬಿಟ್ಟಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಜಿಂಬಾಬ್ವೆ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಟಿ20 ಸರಣಿಗಾಗಿ ಭಾರತ ತಂಡದಿಂದ ಏಕೆ ಹೊರಗಿಡಲಾಗಿದೆ ಎಂಬ ಬಗ್ಗೆ ಆಯ್ಕೆ ಮಂಡಳಿಯೂ ಸ್ಪಷ್ಟಪಡಿಸಿಲ್ಲ. ಹಾಗಿದ್ದರೆ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಡಲಾಗಿದೆಯೇ, ವಿಶ್ರಾಂತಿ ನೀಡಲಾಗಿದೆಯೇ ಅಥವಾ ಅವರು ಗಾಯಗೊಂಡಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳು ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ. ಆದರೆ ಯಾವುದೇ ರೀತಿಯ ಸ್ಪಷ್ಟತೆ ಇಲ್ಲ.

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಸಂಜು ಸ್ಯಾಮ್ಸನ್ ಅವರ ಹೆಸರನ್ನು ಪರಿಗಣಿಸದಿರಲು ಅಸಲಿ ಕಾರಣ ಏನೆಂಬುದನ್ನು ಕ್ರಿಕ್‌ಇನ್ಫೋ ವರದಿ ಮಾಡಿದೆ. ಸಂಜು ಸ್ಯಾಮ್ಸನ್ ಅವರು ಏಷ್ಯನ್ ಗೇಮ್ಸ್ ಗಾಗಿ ಆಯ್ಕೆಯಾಗಿರುವ ಭಾರತ ತಂಡದಲ್ಲಿದ್ದಾರೆ. ಆದರೆ ಜಿಂಬಾಬ್ವೆ ಪ್ರವಾಸವು ಕೇವಲ ದ್ವಿತೀಯ ದರ್ಜೆಯ ಸರಣಿಯಾಗಿರುವುದರಿಂದ ಭಾರತ ತಂಡದಲ್ಲಿ ಕೆಲ ಪ್ರಯೋಗಗಳನ್ನು ಮಾಡಲು ನಿರ್ಧರಿಸಿದ್ದಾರೆ. ಕಳೆದ ಎರಡು ಐಪಿಎಲ್ ಸೀಸನ್ ಗಳಿಂದ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಮತ್ತೊಬ್ಬ ಯುವ ವಿಕೆಟ್‌ಕೀಪರ್ ಬ್ಯಾಟರ್ ಪ್ರಭ್‌ಸಿಮ್ರಾನ್ ಸಿಂಗ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಅವಕಾಶ ನೀಡಲು ಬಯಸಿದ್ದಾರೆ.

ಜೂನ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಇಂಡಿಯಾ 'ಎ' ತಂಡದ ಪರ ಮೂರು ಪಂದ್ಯಗಳನ್ನು ಆಡಿದ್ದ ಪ್ರಭ್‌ಸಿಮ್ರಾನ್ ಸಿಂಗ್, ಪ್ರಸ್ತುತ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಇಶಾನ್ ಕಿಶನ್ ನಂತರದ ಎರಡನೇ ವಿಕೆಟ್‌ಕೀಪರ್-ಬ್ಯಾಟರ್ ಆಗಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಅವರು ಅಲಭ್ಯರಾದಲ್ಲಿ ಅಥವಾ ತಂಡ ಹೆಚ್ಚುವರಿ ಬ್ಯಾಟರ್ ಅನ್ನು ಬಯಸಿದಲ್ಲಿ ಪ್ರಭ್ ಸಿಮ್ರಾನ್ ಸಿಂಗ್ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಗಬಹುದು.

ಐರ್ಲೆಂಡ್ ಪ್ರವಾಸದಲ್ಲಿ ಸಂಜು ವಿಫಲ

ಸಂಜು ಸ್ಯಾಮ್ಸನ್ ಅವರ ಇತ್ತೀಚಿನ ಅತ್ಯುತ್ತಮ ಫಾರ್ಮ್ ಅನ್ನು ಗಮನಿಸಿದರೆ, ಅವರನ್ನು ತಂಡದಿಂದ ಹೊರಗಿಟ್ಟಿರುವುದು ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಅವರಂತೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸ್ಯಾಮ್ಸನ್, ತದನಂತರ ನಡೆದ ಐಪಿಎಲ್ 2026 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಎರಡು ಭರ್ಜರಿ ಶತಕಗಳನ್ನು ಬಾರಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು.

ಆದಾಗ್ಯೂ, ಇತ್ತೀಚಿನ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಸ್ಯಾಮ್ಸನ್ ಸರಣಿ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದರು. ಅವರು ಆಡಿದ ಕೊನೆಯ ಇನಿಂಗ್ಸ್‌ಗಳಲ್ಲಿ ಕೇವಲ 5, 0 ಮತ್ತು 1 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದೇ ಕಾರಣಕ್ಕಾಗಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಿಂದ ಅವರನ್ನು ಕೈಬಿಡಲಾಗಿತ್ತು. ಇದು 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಬಹುನಿರೀಕ್ಷಿತ ಅಂತರರಾಷ್ಟಯ ಪದಾರ್ಪಣೆಗೆ ಹಾದಿ ಮಾಡಿಕೊಟ್ಟಿತ್ತು. ಆದರೆ, ಸ್ಯಾಮ್ಸನ್ ಅವರ ಈ ಇತ್ತೀಚಿನ ಕಳಪೆ ಫಾರ್ಮ್ ಜಿಂಬಾಬ್ವೆ ಪ್ರವಾಸದಿಂದ ಅವರನ್ನು ಹೊರಗಿಡಲು ಕಾರಣವಲ್ಲ ಎಂದು ತಿಳಿಯ ಬಂದಿದೆ.

2 ಸರಣಿಗೆ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್

ಭಾರತದ ಇಂಗ್ಲೆಂಡ್ ಪ್ರವಾಸ ಮುಗಿದ ಕೇವಲ ನಾಲ್ಕು ದಿನಗಳ ನಂತರ ಜಿಂಬಾಬ್ವೆ ಸರಣಿ ಆರಂಭವಾಗಲಿದ್ದು, ಜುಲೈ 23, 25 ಮತ್ತು 26 ರಂದು ಹರಾರೆಯಲ್ಲಿ ಪಂದ್ಯಗಳು ನಡೆಯಲಿವೆ. ಈ ಜಿಂಬಾಬ್ವೆ ಪ್ರವಾಸ ಹಾಗೂ ಮುಂಬರುವ ಏಷ್ಯನ್ ಗೇಮ್ಸ್ ಎರಡಕ್ಕೂ ವಿವಿಎಸ್ ಲಕ್ಷ್ಮಣ್ ಅವರೇ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಭಾರತ ತಂಡದ ನಿಯಮಿತ ಕೋಚಿಂಗ್ ಸಿಬ್ಬಂದಿಯು ಆಗಸ್ಟ್‌ನಲ್ಲಿ ನಡೆಯಲಿರುವ ಶ್ರೀಲಂಕಾ ಟೆಸ್ಟ್ ಪ್ರವಾಸ ಮತ್ತು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯತ್ತ ಗಮನ ಹರಿಸಲಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka