ಸುಧಾ ಮೂರ್ತಿ ಪ್ರೇರಣಾದಾಯಕ ಉಲ್ಲೇಖಗಳು: ಸುಧಾ ಮೂರ್ತಿ ಒಬ್ಬ ಭಾರತೀಯ ಶಿಕ್ಷಣತಜ್ಞೆ, ಲೇಖಕಿ ಮತ್ತು ಇನ್ಫೋಸಿಸ್ ಫೌಂಡೇಶನ್ನ ಮಾಜಿ ಅಧ್ಯಕ್ಷೆ. ಅವರು ಪ್ರೇರಣಾದಾಯಕ ಭಾಷಣಕಾರರೂ ಹೌದು. ಅವರ ಜೀವನದ ಅನುಭವದ ಕೆಲವು ಪ್ರಮುಖ ಉಲ್ಲೇಖಗಳು ಇಲ್ಲಿವೆ
ಭಾರತದ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯಾದ ಇನ್ಫೋಸಿಸ್ನ ಸಹ-ಸಂಸ್ಥಾಪಕರಾದ ಎನ್.ಆರ್.ಇವರ ಅಮೂಲ್ಯವಾದ ಆಲೋಚನೆಗಳು ಮಕ್ಕಳ ಮೇಲೆ ಆಳವಾದ ಮತ್ತು ಶಾಶ್ವತವಾದ ಪ್ರಭಾವವನ್ನು ಬೀರುತ್ತವೆ. ಮಕ್ಕಳು ಮಾತ್ರವಲ್ಲ,ಯುವಕರು ಸಹ ಸುಧಾ ಮೂರ್ತಿ ಅವರ ಅಮೂಲ್ಯವಾದ ಆಲೋಚನೆಗಳಿಂದ ಆಳವಾಗಿ ಪ್ರಭಾವಿತರಾಗಿದ್ದಾರೆ.
ಅದರಲ್ಲೂ ಸುಧಾ ಮೂರ್ತಿಯವರ ಸ್ಪೂರ್ತಿದಾಯಕ ಮಾತುಗಳು ಸಣ್ಣವರಿಂದ ಹಿಡಿದು, ಹಿರಿಯರವರೆಗೂ ಕೂಡ ಹೊಸ ಚೈತನ್ಯ ಮತ್ತು ಪ್ರೇರಣೆಯನ್ನು ನೀಡುತ್ತವೆ ಅಲ್ಲದೆ ಜೀವನದಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ. ಪ್ರಸ್ತುತ ಇಂದಿನ ಲೇಖನದಲ್ಲಿ ಸುಧಾ ಮೂರ್ತಿಯವರ ಸ್ಪೂರ್ತಿದಾಯಕ ಆಲೋಚನೆಗಳ ಬಗ್ಗೆ ನೋಡೋಣ ಬನ್ನಿ…ಕೆಲಸದಲ್ಲಿ ಉತ್ಸಾಹವು ಆಕಾಂಕ್ಷೆ ಮತ್ತು ಕಠಿಣ ಪರಿಶ್ರಮ

ಕೆಲಸದಲ್ಲಿ ಉತ್ಸಾಹವು ಆಕಾಂಕ್ಷೆ ಮತ್ತು ಕಠಿಣ ಪರಿಶ್ರಮಗಳು ಒಗ್ಗೂಡಿದರೆ, ಜಗತ್ತನ್ನೇ ಬದಲಾಯಿಸಬಹುದು. ಹೌದು, ಇಲ್ಲಿ ಉತ್ಸಾಹವು ಜೀವನದಲ್ಲಿ ಮುನ್ನ ಡೆಸಿದರೆ, ಆಕಾಂಕ್ಷೆಯು ಜೀವನದ ಸ್ಪಷ್ಟ ಗುರಿಯನ್ನು ತೋರಿಸುತ್ತದೆ ಮತ್ತು ಕಠಿಣ ಪರಿಶ್ರಮವು ಆ ಗುರಿಯನ್ನು ಸಾಧಿಸಲು ಬೇಕಾದ ಅಡಿಪಾಯವನ್ನು ಹಾಕುತ್ತದೆ
ಯಶಸ್ವಿನ ಮೆಟ್ಟಿಲು ಏರಲು

ಜೀವನದಲ್ಲಿ ಯಶಸ್ವಿಯಾಗಲು, 'ನಾವು ಮಾಡುವ ಕೆಲಸವನ್ನು ಇಷ್ಟಪಡುವು ದಕ್ಕೂ ಮತ್ತು ನಮಗೆ ಇಷ್ಟವಾದ ಕೆಲಸವನ್ನು ಮಾಡುವುದಕ್ಕೂ' ಇರುವ ವ್ಯತ್ಯಾ ಸವನ್ನು ತಿಳಿದುಕೊಳ್ಳುವುದು ಮುಖ್ಯ.
ಎಲ್ಲರನ್ನೂ ಮೆಚ್ಚಿಸಲು ಹೋಗುವುದು ಸರಿಯಲ್ಲ

ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸುತ್ತಲೇ ಇದ್ದರೆ, ಕೊನೆಗೆ ನೀವು ಯಾರನ್ನೂ ಮೆಚ್ಚಿಸಲು ಸಾಧ್ಯವಾಗುವುದಿಲ್ಲ. ಇತರರ ಸಂತೋಷಕ್ಕಾಗಿ ಮಾತ್ರ ನಿಮ್ಮ ಜೀವನವನ್ನು ನಡೆಸುವುದು ಅಸಾಧ್ಯ!
ಅಂದರೆ ಇಲ್ಲಿ ಇತರರನ್ನು ಮೆಚ್ಚಿಸುವ ಭರದಲ್ಲಿ ನಮ್ಮದೇ ಆದ ವ್ಯಕ್ತಿತ್ವವನ್ನು ಕಳೆದುಕೊಂಡು, ನಿರಂತರ ಒತ್ತಡಕ್ಕೆ ಒಳಗಾಗುತ್ತೇವೆ ಅಷ್ಟೇ.
ಸಂಕಷ್ಟದ ಸಮಯದಲ್ಲಿ ತಾಳ್ಮೆಯಿಂದಿರಬೇಕು

ಬೆಂಕಿಯಿಂದ ಬೆಂಕಿಯನ್ನು ಎಂದಿಗೂ ನಂದಿಸಲು ಸಾಧ್ಯವಿಲ್ಲ, ಅಂತಹ ಸಂದರ್ಭಗಳಲ್ಲಿ ನೀರು ಮಾತ್ರ ಪರಿಣಾಮಕಾರಿಯಾಗಿರುತ್ತದೆ. ಆದ್ದರಿಂದ, ಸಂಕಷ್ಟದ ಸಮಯದಲ್ಲಿ ಯಾವಾಗಲೂ ತಾಳ್ಮೆಯಿಂದಿರಬೇಕು.
ಪತಿ ಮತ್ತು ಪತ್ನಿ ಮೊದಲು ಸ್ನೇಹಿತರಾಗಬೇಕು

ಒಬ್ಬ ಹುಡುಗ ಮತ್ತು ಹುಡುಗಿಯ ನಡುವಿನ ನಿಜವಾದ ಸ್ನೇಹವನ್ನು ನೀವು ಕಾಣಬೇಕೆಂದರೆ, ಪತಿ ಮತ್ತು ಪತ್ನಿ ಮೊದಲು ಸ್ನೇಹಿತರಾಗಬೇಕು ಮತ್ತು ನಂತರ ದಂಪತಿಗಳಾಗಬೇಕು.ಯಶಸ್ವಿ ಮತ್ತು ಸಂತೋಷದ ದಾಂಪತ್ಯದ ಮೂಲಮಂತ್ರ ವಾಗಿದೆ. ಇಲ್ಲಿ ಸ್ನೇಹ ಎನ್ನುವುದುನಂಬಿಕೆ, ಗೌರವ ಮತ್ತು ಮುಕ್ತ ಸಂವಹನಕ್ಕೆ ಅಡಿಪಾಯವಾಗಬಲ್ಲದು.
ವಿವಾಹದ ನಂತರದ ಜೀವನ

ವಿವಾಹದ ನಂತರದ ಜೀವನ ಒಂದು ಹೋರಾಟ, ಈ ಹೋರಾಟದಲ್ಲಿ ಗೆಲ್ಲುವ ಯೋಧರು ಅದೃಷ್ಟವಂತರು! ಯಾಕೆಂದ್ರೆ ಇಲ್ಲಿ ಗಂಡ ಹೆಂಡತಿ ಇಬ್ಬರ ಆಲೋಚ ನೆಗಳು, ಆಚಾರ ವಿಚಾರಗಳು, ನಡೆದುಕೊಂಡು ಬಂದ ಸಂಸ್ಕೃತಿ ಬೇರೆ ಬೇರೆಯಾಗಿ
ಇರುವುದರಿಂದ ಒಟ್ಟಾಗಿ ಹೊಂದಾಣಿಕೆ ಮಾಡಿಕೊಂಡು ಸಾಗುವ ಒಂದು ಸುಂದರ ವಾದ ಪಯಣ, ಇಲ್ಲಿ ಏಳುಬೀಳು ಸಹಜ, ಹಾಗಾಗಿ ಸಂಸಾರದ ಹೋರಾಟದಲ್ಲಿ ಗೆಲ್ಲುವವರೇ ನಿಜವಾದ ಅದೃಷ್ಟವಂತರು
ಏಕಾಂಗಿತನ ಮತ್ತು ಏಕಾಂತದ ನಡುವಿನ ವ್ಯತ್ಯಾಸ

ಏಕಾಂಗಿತನವು ಬೇಸರವನ್ನು ಉಂಟುಮಾಡುತ್ತದೆ, ಆದರೆ ಏಕಾಂತವು ನಿಮಗಾಗಿ ಇರುವ ಸಮಯ, ಅದನ್ನು ಆನಂದಿಸಲು ಕಲಿಯಿರಿ ಮತ್ತು ನಿಮ್ಮ ಬಗ್ಗೆ ನೀವು ತಿಳಿದುಕೊಳ್ಳಿ. ನಿಮಗೆ ಗೊತ್ತಿರಲಿ ಏಕಾಂತವನ್ನು ಸರಿಯಾಗಿ ಬಳಸಿಕೊಂಡರೆ, ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳಬಹುದು.

