Dailyhunt Logo
  • Light mode
    Follow system
    Dark mode
    • Play Story
    • App Story
ಜುಲೈ 16 ರಿಂದ ತುಲಾ ಸೇರಿ ಈ 4 ರಾಶಿಯವರ ಪಾಲಿಗೆ ರಾಜರ ಜೀವನ, ಶುಕ್ರ ದೆಸೆ..!

ಜುಲೈ 16 ರಿಂದ ತುಲಾ ಸೇರಿ ಈ 4 ರಾಶಿಯವರ ಪಾಲಿಗೆ ರಾಜರ ಜೀವನ, ಶುಕ್ರ ದೆಸೆ..!

Vijay Karnataka 4 days ago

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಣ, ವೈಭವ, ರೋಮ್ಯಾನ್ಸ್ ಮತ್ತು ಸುಖ, ಸಮೃದ್ಧಿಯನ್ನು ಕರುಣಿಸುವ ಶುಕ್ರ ದೇವನು 2026ರ ಜುಲೈ 16ರಂದು ಸಿಂಹ ರಾಶಿಯಲ್ಲಿ ಚಲಿಸುತ್ತಲೇ ಮಘಾ ನಕ್ಷತ್ರದಿಂದ ಹೊರಬಂದು ಪೂರ್ವಫಾಲ್ಗುಣಿ ನಕ್ಷತ್ರವನ್ನು ಪ್ರವೇಶಿಸಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪೂರ್ವಫಾಲ್ಗುಣಿ ನಕ್ಷತ್ರದ ಅಧಿಪತಿಯು ಸ್ವತಃ ಶುಕ್ರ ದೇವ ಎಂದು ಹೇಳಲಾಗುತ್ತದೆ.

ಯಾವಾಗ ಯಾವುದಾದರು ಗ್ರಹವು ತನ್ನ ನಕ್ಷತ್ರವನ್ನು ಬದಲಾಯಿಸುವುದೋ, ಇದರ ಶಕ್ತಿಯು ದ್ವಿಗುಣಗೊಳ್ಳುವುದು ಎಂದು ಹೇಳಲಾಗುತ್ತದೆ ಮತ್ತು ಇದು ಅತ್ಯಂತ ಶುಭ ಫಲಗಳನ್ನು ಕರುಣಿಸಲಿದೆ.

ಹಾಗಾಗಿ ಶೀಘ್ರದಲ್ಲಿ ಶುಕ್ರನು ತನ್ನ ನಕ್ಷತ್ರವನ್ನು ಬದಲಾಯಿಸುವ ಮೂಲಕ ಪೂರ್ವಫಾಲ್ಗುಣಿ ನಕ್ಷತ್ರವನ್ನು ಪ್ರವೇಶಿಸಲಿದ್ದು, ಇದರಿಂದಾಗಿ ಕೆಲವು ರಾಶಿಗೆ ಸೇರಿದ ಜನರ ಅದೃಷ್ಟದ ಬಾಗಿಲು ತೆರೆಯಲಿದೆ. ಹಾಗಾಗಿ ಶುಕ್ರನಿಂದ ಯಾವ ನಾಲ್ಕು ರಾಶಿಗೆ ಸೇರಿದ ಜನರಿಗೆ ಅತ್ಯಂತ ಹೆಚ್ಚಿನ ಲಾಭ ದೊರಕುವ ಯೋಗ ನಿರ್ಮಾಣಗೊಳ್ಳುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ಓದಿ.

ಮೇಷ ರಾಶಿ

ಮೇಷ ರಾಶಿಗೆ ಸೇರಿದ ಜನರಿಗೆ ಶುಕ್ರ ಗ್ರಹವು ತನ್ನ ನಕ್ಷತ್ರವನ್ನು ಬದಲಾಯಿಸುವ ಮೂಲಕ ಸಾಕಷ್ಟು ಅನುಕೂಲಗಳನ್ನು ಕರುಣಿಸಲಿದೆ. ವಿಶೇಷವಾಗಿ ಪ್ರೀತಿ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಮೇಷ ರಾಶಿಗೆ ಸೇರಿದ ಜನರಿಗೆ ಸಾಕಷ್ಟು ಶುಭಫಲ ದೊರಕಬಹುದು, ಹಾಗೆ ಈ ಅವಧಿಯಲ್ಲಿ ಮೇಷ ರಾಶಿಗೆ ಸೇರಿದ ಜನರು ತಮ್ಮ ಬಹಳ ಸಮಯದಿಂದ ಕಳೆದು ಹೋದಂತಹ ಹಣವನ್ನು ಈ ಅವಧಿಯಲ್ಲಿ ವಾಪಸ್ಸು ಪಡೆಯುವ ಯೋಗ ನಿರ್ಮಾಣಗೊಳ್ಳುವುದು.

ಶುಕ್ರ ಗ್ರಹದ ವಿಶೇಷ ಅನುಗ್ರಹದಿಂದಾಗಿ ಮೇಷ ರಾಶಿಗೆ ಸೇರಿದ ಜನರ ಆದಾಯವನ್ನು ಹೆಚ್ಚಿಸಲು ಸಾಕಷ್ಟು ಹೊಸ ಹೊಸ ಮಾರ್ಗಗಳು ಗೋಚರಿಸುವುದು. ಹಾಗೆ ಕೆಲಸವನ್ನು ಮಾಡುವ ಈ ರಾಶಿಗೆ ಸೇರಿದ ಜನರು ತಮ್ಮ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳನ್ನು ಅಥವಾ ಬಡ್ತಿಯನ್ನು ಗಳಿಸಲು ಸಾಧ್ಯವಾಗುವುದು. ಇದರೊಂದಿಗೆ ವ್ಯಾಪಾರ, ವ್ಯವಹಾರವನ್ನು ಮಾಡುವ ಮೇಷ ರಾಶಿಗೆ ಸೇರಿದ ಜನರಿಗೆ ಭಾರಿ ಲಾಭ ದೊರಕುವ ಸಂಭವವಿದೆ. ಹಾಗೆ ಅವಿವಾಹಿತ ಈ ರಾಶಿಗೆ ಸೇರಿದ ಜನರು ಶುಕ್ರನ ಕೃಪೆಯಿಂದ ಪ್ರೀತಿಯ ಜೀವನದಲ್ಲಿ ಹೊಸ ವ್ಯಕ್ತಿ ಆಗಮನವನ್ನು ಹೊಂದುವರು. ಜೊತೆಗೆ ಈ ಅವಧಿಯಲ್ಲಿ ನಿಮ್ಮ ಪ್ರೇಮ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗಲಿದೆ.

ಸಿಂಹ ರಾಶಿ

ಶುಕ್ರ ಗ್ರಹದ ಈ ನಕ್ಷತ್ರ ಬದಲಾವಣೆಯು ಸಿಂಹ ರಾಶಿಗೆ ಸೇರಿದ ಜನರ ವ್ಯಕ್ತಿತ್ವ ಮತ್ತು ಆಕರ್ಷಣೆಯನ್ನು ಈ ಸಂದರ್ಭದಲ್ಲಿ ಮತ್ತಷ್ಟು ಹೆಚ್ಚಿಸುವ ಸಂಭವವಿದೆ. ಹಾಗೆ ಈ ಅವಧಿಯಲ್ಲಿ ಸಿಂಹ ರಾಶಿಗೆ ಸೇರಿದ ಜನರು ಸಮಾಜ ಮತ್ತು ಕೆಲಸದ ಸ್ಥಳದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಹೊಂದುವ ಸಾಧ್ಯತೆಯೂ ಕೂಡ ಹೆಚ್ಚಾಗಿರುವುದು. ಜೊತೆಗೆ ಸಿಂಹ ರಾಶಿಗೆ ಸೇರಿದ ಜನರು ಶುಕ್ರನ ಆಶೀರ್ವಾದದಿಂದಾಗಿ ಈ ಅವಧಿಯಲ್ಲಿ ಹೆಚ್ಚಿನ ಶುಭಫಲಗಳನ್ನು ಗಳಿಸಲಿದ್ದಾರೆ.

ಇದರೊಂದಿಗೆ ಜನರು ನಿಮ್ಮ ಮಾತು ಮತ್ತು ನಿರ್ಧಾರಗಳಿಂದ ಈ ಸಂದರ್ಭದಲ್ಲಿ ಆಕರ್ಷಣೆಗೆ ಒಳಗಾಗುವರು. ಹಾಗೆ ಈ ಅವಧಿಯಲ್ಲಿ ಸಿಂಹ ರಾಶಿಗೆ ಸೇರಿದ ಜನರ ಸುಖ, ಸಮೃದ್ಧಿಯನ್ನು ಹೆಚ್ಚಿಸುವಂತಹ ವಸ್ತುಗಳಾದಂತಹ ಹೊಸ ವಾಹನ, ಆಭರಣ, ಇತ್ಯಾದಿಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುವರು. ಹಾಗೆ ಶುಕ್ರನ ನಕ್ಷತ್ರ ಬದಲಾವಣೆಯ ಅವಧಿಯಲ್ಲಿ ಪಾಲುದಾರಿಕೆಯಲ್ಲಿ ಸಿಂಹ ರಾಶಿಗೆ ಸೇರಿದ ಜನರು ಯಾವುದಾದರೂ ವ್ಯಾಪಾರ, ವ್ಯವಹಾರವನ್ನು ಮಾಡುತ್ತಿದ್ದರೆ, ಈ ಸಂದರ್ಭದಲ್ಲಿ ನಿಮಗೆ ದೊಡ್ಡ ಆರ್ಥಿಕ ಲಾಭ ದೊರಕುವ ಸಂಭವ ಹೆಚ್ಚಾಗಲಿದೆ.

ತುಲಾ ರಾಶಿ

ಶುಕ್ರ ಗ್ರಹದ ನಕ್ಷತ್ರ ಬದಲಾವಣೆಯಿಂದಾಗಿ ತುಲಾ ರಾಶಿಗೆ ಸೇರಿದೆ ಜನರಿಗೆ ಈ ಅವಧಿಯು ಬಹಳ ಉತ್ತಮವಾಗಿರಲಿದೆ. ಹಾಗೆ ಈ ಸಂದರ್ಭದಲ್ಲಿ ಹೂಡಿಕೆಯನ್ನು ಮಾಡುವುದರಿಂದ ಅತ್ಯಂತ ಹೆಚ್ಚಿನ ಲಾಭವನ್ನು ತುಲಾ ರಾಶಿಗೆ ಸೇರಿದ ಜನರು ಪಡೆಯುವ ಯೋಗ ನಿರ್ಮಾಣಗೊಳ್ಳುವುದು. ಇದರೊಂದಿಗೆ ಪಿತ್ರಾರ್ಜಿತ ಸಂಪತ್ತಿಗೆ ಸಂಬಂಧಿಸಿದಂತೆ ನೀವು ಅತ್ಯಂತ ಹೆಚ್ಚಿನ ಪ್ರಯೋಜನಗಳನ್ನು ಗಳಿಸಲು ಸಾಧ್ಯವಾಗುವುದು.

ಹಾಗೆ ಪೂರ್ವ ಫಾಲ್ಗುಣಿ ನಕ್ಷತ್ರವನ್ನು ಪ್ರವೇಶಿಸಲಿರುವ ಶುಕ್ರನಿಂದಾಗಿ ಕಲೆ, ಮಾಧ್ಯಮ, ಡಿಸೈನಿಂಗ್ ಅಥವಾ ಸೌಂದರ್ಯ ವರ್ಧಕಗಳಿಗೆ ಸಂಬಂಧಿಸಿದಂತಹ ವ್ಯಾಪಾರ, ವ್ಯವಹಾರವನ್ನು ಮಾಡುವ ತುಲಾ ರಾಶಿಗೆ ಸೇರಿದ ಜನರಿಗೆ ಈ ಅವಧಿಯು ಬಹಳ ಉತ್ತಮವಾಗಿರುವುದು. ಜೊತೆಗೆ ಈ ಸಂದರ್ಭದಲ್ಲಿ ತುಲಾ ರಾಶಿಗೆ ಸೇರಿದ ಜನರು ಹಿರಿಯ ಮತ್ತು ಪ್ರಭಾವಶಾಲಿ ವ್ಯಕ್ತಿಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಲು ಸಾಧ್ಯವಾಗುವುದು. ಇದರಿಂದಾಗಿ ಭವಿಷ್ಯ ದಲ್ಲಿ ನೀವು ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಹೊಸ ಎತ್ತರವನ್ನು ತಲುಪಲು ಸಾಧ್ಯವಾಗುವುದು.

ಧನು ರಾಶಿ

ಧನು ರಾಶಿಗೆ ಸೇರಿದ ಜನರಿಗೆ ಶುಭ ಗ್ರಹವಾದ ಶುಕ್ರನು ನಿಮ್ಮ ಅದೃಷ್ಟದ ನಕ್ಷತ್ರದಲ್ಲಿ ಚಲಿಸುವ ಮೂಲಕ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪ್ರತಿಯೊಂದು ಹೆಜ್ಜೆಯಲ್ಲಿಯೂ ಗಳಿಸುವಂತೆ ಮಾಡಲಿದೆ. ಈ ಅವಧಿಯಲ್ಲಿ ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಅಥವಾ ಧಾರ್ಮಿಕ ಯಾತ್ರಗಳಿಗೆ ಸಂಬಂಧಿಸಿದಂತೆ ಧನು ರಾಶಿಗೆ ಸೇರಿದ ಜನರು ಸಾಕಷ್ಟು ಯಶಸ್ಸು ಮತ್ತು ಲಾಭಗಳನ್ನು ಗಳಿಸಲಿದ್ದಾರೆ.

ಜೊತೆಗೆ ಶುಕ್ರ ಗ್ರಹದ ವಿಶೇಷ ಅನುಗ್ರಹದಿಂದಾಗಿ ನಿಮ್ಮ ಯಾವುದಾದರೂ ಕೆಲಸ ಬಹಳ ಸಮಯದಿಂದ ಅಪೂರ್ಣಗೊಂಡಿದ್ದರೆ, ಈ ಅವಧಿಯಲ್ಲಿ ಅವುಗಳೆಲ್ಲವೂ ಪೂರ್ಣಗೊಳ್ಳುವ ಯೋಗ ನಿರ್ಮಾಣಗೊಳ್ಳುವುದು. ಇದರೊಂದಿಗೆ ನಿಮ್ಮ ಕೆಲಸಗಳಲ್ಲಿನ ಎಲ್ಲಾ ರೀತಿ ಅಡೆತಡೆಗಳು ದೂರವಾಗಲಿದೆ. ಹಾಗೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ತೆರಳಬೇಕೆಂಬ ಕನಸನ್ನು ಕಾಣುತ್ತಿರುವ ಧನು ರಾಶಿಗೆ ಸೇರಿದ ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ಶುಭ ಸುದ್ಧಿ ಲಭಿಸುವ ಯೋಗ ನಿರ್ಮಾಣಗೊಳ್ಳುವುದು.

ಮೇಲೆ ಹೇಳಿರುವ ನಾಲ್ಕು ರಾಶಿಗಳಾದ ಮೇಷ, ಸಿಂಹ, ತುಲಾ ಮತ್ತು ಧನು ರಾಶಿಗೆ ಸೇರಿದ ಜನರಲ್ಲಿ ನಿಮ್ಮ ರಾಶಿಯು ಒಂದಾಗಿದ್ದರೆ, ಇದೇ ಜುಲೈ 16ರಂದು ಶುಕ್ರನು ತನ್ನ ನಕ್ಷತ್ರವನ್ನು ಬದಲಾಯಿಸುವ ಮೂಲಕ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುವಿರಿ. ಹಾಗೆ ಈ ಅವಧಿಯಲ್ಲಿ ಶುಕ್ರನನ್ನು ಇನ್ನಷ್ಟು ಬಲಪಡಿಸಲು ನೀವು ಪ್ರತಿ ಶುಕ್ರವಾರದಂದು ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿ ಅಥವಾ ನಿಮ್ಮ ಬಳಿ ಬಿಳಿ ಕರವಸ್ತ್ರವನ್ನು ಇಟ್ಟುಕೊಳ್ಳಿ. ಹಾಗೆ ಚಿಕ್ಕ ಹೆಣ್ಣು ಮಕ್ಕಳಿಗೆ ಖೀರ್ ಅಥವಾ ಬಿಳಿ ಬಣ್ಣದ ಸಿಹಿ ಪದಾರ್ಥವನ್ನು ತಿನ್ನಲು ನೀಡಿ. ಹಾಗೆ ಅವಧಿಯಲ್ಲಿ ನೀವು ನಿಯಮಿತವಾಗಿ ಲಕ್ಷ್ಮಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಮತ್ತು ಓಂ ಶುಂ ಶುಕ್ರಾಯ ನಮಃ ಮಂತ್ರವನ್ನು ಪಠಿಸುವುದರಿಂದ ಸಾಕಷ್ಟು ಶುಭ ಫಲಗಳ ಪ್ರಾಪ್ತಿಯಾಗುವ ಯೋಗ ನಿರ್ಮಾಣಗೊಳ್ಳುವುದು.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka