Dailyhunt Logo
  • Light mode
    Follow system
    Dark mode
    • Play Story
    • App Story
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ 'ಆತ್ಮಕಥೆ' ಪ್ರಕಟಿಸುವುದಿಲ್ಲ : ಪ್ರಕಾಶನ ಸಂಸ್ಥೆ ಪೆಂಗ್ವಿನ್ ಸ್ಪಷ್ಟನೆ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ 'ಆತ್ಮಕಥೆ' ಪ್ರಕಟಿಸುವುದಿಲ್ಲ : ಪ್ರಕಾಶನ ಸಂಸ್ಥೆ ಪೆಂಗ್ವಿನ್ ಸ್ಪಷ್ಟನೆ

Vijay Karnataka 1 week ago

ಹೊಸದಿಲ್ಲಿ : ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಆತ್ಮಕಥೆಯನ್ನು ಖ್ಯಾತ ಪ್ರಕಾಶನ ಸಂಸ್ಥೆ ಪೆಂಗ್ವಿನ್ ರ‍್ಯಾಂಡಮ್ ಹೌಸ್, ಪ್ರಕಟಿಸಬೇಕಿತ್ತು. ಆದರೆ, ಸಂಪಾದಕೀಯದಲ್ಲಿ ಕೆಲವೊಂದು ಬದಲಾವಣೆಯನ್ನು ತರಲು ಸೋನಿಯಾ ಗಾಂಧಿ ನಿರಾಕರಿಸಿದ್ದಾರೆ. ಈ ಹಿನ್ನಲೆಯಲ್ಲಿ ಸೋನಿಯಾ - ಪೆಂಗ್ವಿನ್ ನಡುವಿನ ಮಾತುಕತೆ ಮುರಿದು ಬಿದ್ದಿದೆ.

ಭಾರತದಲ್ಲಿ ಸೋನಿಯಾ ಗಾಂಧಿಯವರ ಆತ್ಮಕತೆಯ ಪ್ರಕಾಶಕರು ನಾವಲ್ಲ ಎಂದು ಪೆಂಗ್ವಿನ್ ಹೌಸ್ ಸ್ಪಷ್ಟನೆಯನ್ನು ನೀಡಿದೆ. ಇದರ ಬೆನ್ನಲ್ಲೇ, ಇನ್ನೊಂದು ಪ್ರಕಾಶನ ಸಂಸ್ಥೆಯಾದ ಹಾರ್ಪರ್ ಕಾಲಿನ್ಸ್ ಜೊತೆಗಿನ ಮಾತುಕತೆ ಅಂತಿಮ ಹಂತದಲ್ಲಿದೆ. ಈ ಸಂಸ್ಥೆಯೇ, ಸೋನಿಯಾ ಅವರ ಪುಸ್ತಕದ ಪ್ರಕಟಣೆಯ ಜವಾಬ್ದಾರಿಯನ್ನು ಬಹುತೇಕ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಸೋನಿಯಾ ಗಾಂಧಿ ಆತ್ಮಕಥೆಯ ಪ್ರಕಾಶಕರು ನಾವಲ್ಲ - ಪೆಂಗ್ವಿನ್

ಸೋನಿಯಾ ಗಾಂಧಿಯವರಿಗೆ ಸಂಪಾದಕೀಯದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲು ಪೆಂಗ್ವಿನ್ ಸಂಸ್ಥೆ ಸೂಚಿಸಿತ್ತು. ಆದರೆ, ಈ ಬದಲಾವಣೆಗೆ ಸೋನಿಯಾ ನಿರಾಕರಿಸಿದ ಹಿನ್ನಲೆಯಲ್ಲಿ, ಪೆಂಗ್ವಿನ್ ಈ ಜವಾಬ್ದಾರಿಯಿಂದ ಹಿಂದಕ್ಕೆ ಸರಿದಿದೆ ಎಂದು ವರದಿಯಾಗಿದೆ. "ಭಾರತದಲ್ಲಿ ಸೋನಿಯಾ ಗಾಂಧಿಯವರ ಮುಂಬರುವ ಆತ್ಮಕಥೆ 'ಬಿಲಾಂಗಿಂಗ್ : ಎ ಜರ್ನಿ ಆಫ್ ಲವ್' (Belonging : A Journey Of Love) ನ ಪ್ರಕಾಶಕರು ನಾವಲ್ಲ" ಎಂದು ಸ್ಪಷ್ಟನೆಯನ್ನು ನೀಡಿದೆ.

ಸಂಪಾದಕರ ಹಿನ್ನಲೆಯನ್ನು ಪರಿಶೀಲಿಸುವುದು ನಮ್ಮ ಕರ್ತವ್ಯ

ಸಂಪಾದಕೀಯದಲ್ಲಿನ ಬದಲಾವಣೆಗೆ ಪ್ರಕಾಶನ ಸಂಸ್ಥೆ ಸೂಚಿಸಿತ್ತು, ಅದಕ್ಕೆ ಸಂಪಾದಕರು ನಿರಾಕರಿಸಿದ್ದಾರೆ ಎನ್ನುವ ಮಾಹಿತಿಯು, ನಿಖರವಾದದ್ದಲ್ಲ ಎಂದು ಪೆಂಗ್ವಿನ್ ಹೇಳಿದೆ. ಆದರೂ, ಈ ಪುಸ್ತಕವನ್ನು ಪ್ರಕಟಿಸಲು ನಾವು ಉತ್ಸುಕರಾಗಿದ್ದೆವು. ಲೇಖಕರ ಮಾಹಿತಿಯನ್ನು ಪರಿಶೀಲಿಸುವುದು (Fact Check) ಮತ್ತು ಶಿಫಾರಸುಗಳನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ, ಅದನ್ನು ನಾವು ಮಾಡಿದ್ದೇವೆ. ಸೋನಿಯಾ ನಡುವಿನ ಚರ್ಚೆಯ ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಪೆಂಗ್ವಿನ್ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

ಸೋನಿಯಾ ಗಾಂಧಿಯವರ ಮಾನವೀಯತೆಗೆ ಸಲ್ಲಿಸುವ ಗೌರವವಾಗಿದೆ ಎಂದ ಪ್ರಕಾಶನ ಸಂಸ್ಥೆ

ಅಮೆರಿಕದ ಪ್ರಮುಖ ಪ್ರಕಾಶನ ಸಂಸ್ಥೆಯಾದ ಆಲ್ಫ್ರೆಡ್ ಎ ಕ್ನಾಪ್ (Alfred A Knopf), ಸೋನಿಯಾ ಗಾಂಧಿಯವರ ಆತ್ಮಕಥೆಯು ನವೆಂಬರ್ ಹತ್ತರಂದು ಬಿಡುಗಡೆಯಾಗಲಿದೆ ಎಂದು ಹೇಳಿದೆ. ಹಲವು ರೀತಿಯಲ್ಲಿ ಈ ಪುಸ್ತಕವು, ಅವರ ಮಾನವೀಯತೆಗೆ ಸಲ್ಲಿಸುವ ಗೌರವವಾಗಿದೆ. ನನ್ನ ಈ ಕಥೆಯು, ನಾನು ಪ್ರೀತಿಸುವ ಈ ಸುಂದರ ದೇಶದಲ್ಲಿ (ಭಾರತ) ಆರು ದಶಕಗಳಿಂದ ಕಂಡ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳ ವಿಶಿಷ್ಟ ದೃಷ್ಟಿಕೋನವನ್ನು ಓದುಗರಿಗೆ ನೀಡುತ್ತದೆ ಎಂದು ಸೋನಿಯಾ ಗಾಂಧಿ, ಪುಸ್ತಕದ ಸಂಪಾದಕೀಯದಲ್ಲಿ ಬರೆದಿದ್ದಾರೆ ಎಂದು ಪ್ರಕಾಶನ ಸಂಸ್ಥೆ ಹೇಳಿದೆ.

ತಮ್ಮ ಜೀವನ ಬದಲಾದ ರೀತಿಯ ಬಗ್ಗೆ ಪುಸ್ತಕದಲ್ಲಿ ಸೋನಿಯಾ ಗಾಂಧಿ ಸಂಪಾದಕೀಯ

1984ರಲ್ಲಿ ಅತ್ತೆ (ಇಂದಿರಾ ಗಾಂಧಿ) ಹತ್ಯೆಯಾದಾಗ ಮತ್ತು ನಂತರ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ಏಳು ವರ್ಷಗಳ ನಂತರ ಹತ್ಯೆಯಾದಾಗ, ತಮ್ಮ ಜೀವನ ಹೇಗೆ ಬದಲಾಯಿತು ಎನ್ನುವುದನ್ನು ಸೋನಿಯಾ ಗಾಂಧಿ ತಮ್ಮ, 'ಬಿಲಾಂಗಿಂಗ್ : ಎ ಜರ್ನಿ ಆಫ್ ಲವ್' ಆತ್ಮಕಥೆಯಲ್ಲಿ ಬರೆದಿದ್ದಾರೆ. ಈ ಪುಸ್ತಕದ ಬಗ್ಗೆ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಕೂಡಾ ಎಕ್ಸ್ (ಟ್ವೀಟ್) ಮಾಡಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka